ಶಾಲಾ ಶುಲ್ಕ ಭರಿಸಲಾಗದೆ…ಕಾರ್ಪೆಂಟರ್ ಕೆಲಸ ಮಾಡಿದ್ದ ದಾಸರಿ ನಾರಾಯಣ ರಾವ್! ನಮಗೆ ಗೊತ್ತಿಲ್ಲದ ಇನ್ನೊಂದು ಮಗ್ಗುಲು!!

ತೆಲುಗು ಚಿತ್ರರಂಗದ ನಿರ್ದೇಶಕ, ನಟ, ನಿರ್ಮಾಪಕರ ದಾಸರಿ ನಾರಾಯಣ ರಾವ್ ಮಂಗಳವಾರ ನಿಧನರಾಗಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಂದ ’ಸ್ವಪ್ನ’ (1981) ಚಿತ್ರವನ್ನು ಅವರು ನಿರ್ದೇಶಿಸಿದ್ದಾರೆ. ಅತ್ಯಧಿಕ ಸಿನಿಮಾಗಳ ನಿರ್ದೇಶಕ ಎಂದು ಲಿಮ್ಕಾ ಬುಕ್ ದಾಖಲೆಗೂ ಪಾತ್ರರಾಗಿದ್ದಾರೆ. ಒಟ್ಟು 6 ಬಾರಿ ಫಿಲಂಫೇರ್ ಪ್ರಶಸ್ತಿ ಪಡೆದ್ದಾರೆ. ತಮ್ಮ ಸಿನಿಮಾಗಳಲ್ಲಿ ಸಾಮಾಜಿಕ ಜಾಡ್ಯಗಳನ್ನು ತೋರಿಸಿದ ಖ್ಯಾತಿ ಅವರಿಗೇ ಸಲ್ಲುತ್ತದೆ. ಆದರೆ ದಾಸರಿ ಬಗ್ಗೆ ನಮಗೆ ಗೊತ್ತಿಲ್ಲದ ಕೆಲವು ಸಂಗತಿಗಳಿವೆ..! ಮೂರು ರೂಪಾಯಿ ಸ್ಕೂಲ್ ಫೀ ಕಟ್ಟಲಿಕ್ಕಾಗದೆ ಬಡಗಿ ಕೆಲಸಕ್ಕೆ ಸೇರಿದ ದಾಸರಿ ನಿರ್ದೇಶಕರಾಗಿ ಬೆಳೆದ ಪರಿ ನಿಜಕ್ಕೂ ಅಚ್ಚರಿದಾಯಕ.

ದಾಸರಿ ಕುಟುಂಬಿಕರು ಹೊಗೆಸೊಪ್ಪು ವ್ಯಾಪಾರ ಮಾಡುತ್ತಿದ್ದರು. ಒಮ್ಮೆ ದೀಪಾವಳಿ ಸಮಯದಲ್ಲಿ ಹೊಗೆಸೊಪ್ಪು ಗೋಡೌನ್‌ ಅಗ್ನಿ ಅನಾಹುತಕ್ಕೆ ತುತ್ತಾಗಿ ಭಸ್ಮವಾಯಿತು. ಆಗಿನ ಕಾಲದಲ್ಲಿ ಇನ್ಸುರೆನ್ಸ್‌ಗಳು ಇರಲಿಲ್ಲ. ಅದರಿಂದ ಆರ್ಥಿಕವಾಗಿ ಬಹಳಷ್ಟು ಹೊಡೆತ ತಿಂದಿತ್ತು ದಾಸರಿ ಕುಟುಂಬ. ಆ ಕಷ್ಟ ಕಾಲದಲ್ಲೇ ಹೊಲಗಳನ್ನೂ ಮಾರಬೇಕಾದಂತ ಪರಿಸ್ಥಿತಿ ಬಂತು.

ಅವರ ತಂದೆಯ ತಲೆಮಾರಿನ ತನಕ ಅವರ ಕುಟುಂಬದಲ್ಲಿ ಯಾರೂ ಓದಿಕೊಂಡಿರಲಿಲ್ಲ. ಆದರೆ ದಾಸರಿಯನ್ನು ಓದಿಸಿದರು ಅವರ ತಂದೆ. ದಾಸರಿ ಆರನೇ ತರಗತಿಗೆ ಬರುವ ವೇಳೆಗೆ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬಾ ದೀನ ಸ್ಥಿತಿಯಲ್ಲಿತ್ತು. ಶಾಲಾ ಶುಲ್ಕ ಮೂರು ಕಾಲು ರೂಪಾಯಿ ಕಟ್ಟಕ್ಕೂ ದುಡ್ಡಿಲ್ಲದೆ ಶಾಲೆಯನ್ನು ಬಿಡಿಸಿ ಬಡಗಿ ಅಂಗಡಿಯಲ್ಲಿ ಕೆಲಸಕ್ಕೆ ಬಿಟ್ಟರು. ಅಲ್ಲಿ ಸಂಬಳ ತಿಂಗಳಿಗೆ ಒಂದು ರೂಪಾಯಿ.

ಆರನೇ ತರಗತಿಯಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಅವರಿಗೆ ಬಹುಮಾನ ಬಂದಿತ್ತು. ಆ ರೀತಿಯ ಶಿಕ್ಷಣ ಇದ್ದರೂ ಕೆಲಸಕ್ಕೆ ಹೋಗಬೇಕಾದ ದುಃಸ್ಥಿತಿ. ಆದರೆ ಮೇಷ್ಟ್ರೊಬ್ಬರ ಸಹಾಯದಿಂದ ಮತ್ತೆ ಓದು ಮುಂದುವರೆಸುವಂತಾಯಿತು.

 


Click Here To Download Kannada AP2TG App From PlayStore!