ಡೆಂಗ್ಯೂ ಲಕ್ಷಣಗಳು… ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು.!

ಸೋಂಕು ರೋಗಗಳಲ್ಲಿ ಅತ್ಯಂತ ಅಪಾಯಕಾರಿಯಾದದ್ದು ಡೆಂಗ್ಯೂ. ಇದು ಸೊಳ್ಳೆಗಳ ಮೂಲಕ ಹರಡುವ ಭಯಂಕರವಾದ ಕಾಯಿಲೆ. ಏಡೀಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಈ ವೈರಸ್ ಹರಡುತ್ತದೆ. ಈ ಸೊಳ್ಳೆಯನ್ನು ಟೈಗರ್ ಸೊಳ್ಳೆ ಎಂದು ಕರೆಯುತ್ತಾರೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲೇ ಕಚ್ಚುತ್ತವೆ. ಈ ಸೊಳ್ಳೆ ಕಡಿದ ಐದರಿಂದ ಎಂಟು ದಿನಗಳ ಬಳಿಕ ರೋಗದ ಲಕ್ಷಣಗಳು ಕಾಣಿಸುತ್ತವೆ. ಅದೇ ರೀತಿ ಡೆಂಗ್ಯೂ ಇರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರನ್ನು ಕಚ್ಚಿದರೂ ಈ ವೈರಸ್ ವ್ಯಾಪಿಸುತ್ತದೆ. ಸದ್ಯಕ್ಕೆ ಮಳೆ ಬೀಳುತ್ತಿರುವ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಈ ಕಾಲದಲ್ಲೇ ಡೆಂಗ್ಯೂ ಸೋಂಕು ಹರಡುತ್ತದೆ. ಆದಕಾರಣ ಈ ರೋಗದ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಉತ್ತಮ.

ರೋಗದ ಲಕ್ಷಣಗಳು..
ತೀವ್ರವಾದ ತಲೆನೋವುಃ ಡೆಂಗ್ಯೂ ಲಕ್ಷಣಗಳಲ್ಲಿ ಮುಖ್ಯವಾದದ್ದು ತಲೆನೋವು. ಡೆಂಗ್ಯೂ ಸೋಕಿದವರಿಗೆ ವಿಪರೀತ ತಲೆನೋವು ಇರುತ್ತದೆ. ತಲೆ ಭಾರವಾಗಿ ಇರುತ್ತದೆ.

ಜ್ವರಃ ಡೆಂಗ್ಯೂ ಸೋಂಕು ಇರುವರಿಗೆ ಜ್ವರ ಬರುತ್ತಾ, ಬಿಡುತ್ತಾ ಇರುತ್ತದೆ. ಒಂದೊಂದು ಸಲ ಜ್ವರದ ತೀವ್ರತೆ 104 ಡಿಗ್ರಿ ಫಾರನ್‍ಹೀಟ್ ವರೆಗೂ ಹೆಚ್ಚಾಗಬಹುದು. ಈ ರೀತಿ ನಿತ್ಯ ಆಗುತ್ತಿದ್ದರೆ ಕೂಡಲೆ ವೈದ್ಯರನ್ನು ಭೇಟಿಯಾಗಬೇಕು. ಯಾಕೆಂದರೆ ಆ ಜ್ವರ ಡೆಂಗ್ಯೂಗೆ ದಾರಿಯಾಗಬಹುದು.

ಕೀಲು ನೋವುಃ ಡೆಂಗ್ಯೂ ಕಾಯಿಲೆ ಬಂದರೆ ಕೀಲು ನೋವು, ಸ್ನಾಯುಗಳ ನೋವು ಹೆಚ್ಚಾಗಿ ಇರುತ್ತದೆ.

ರಕ್ತಸ್ರಾವಃ ಡೆಂಗ್ಯೂ ಲಕ್ಷಣಗಳಲ್ಲಿ ಇದು ಮುಖ್ಯವಾದದ್ದು. ಡೆಂಗ್ಯೂ ಇದ್ದರೆ ಮೂಗಿನಿಂದ ರಕ್ತಸ್ರಾವ ಆಗುತ್ತಿರುತ್ತದೆ. ಕಾಯಿಲೆ ತೀವ್ರಗೊಂಡರೆ ಈ ರಕ್ತಸ್ರಾವ ಅಧಿಕವಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಸಾಯುವ ಸಾಧ್ಯತೆಗಳಿರುತ್ತವೆ.

ವಾಂತಿ ಮತ್ತು ಭೇದಿಃ ಡೆಂಗ್ಯೂ ಸೋಕಿದವರಿಗೆ ಬಾಯಿ ಒಣಗುತ್ತಿರುತ್ತದೆ. ಮಾತುಮಾತಿಗೂ ದಾಹವಾಗುತ್ತಿರುತ್ತದೆ. ಅದೇ ರೀತಿ ಹೊಟ್ಟೆಯಲ್ಲಿ ಸ್ವಲ್ಪ ನೋವು, ವಾಂತಿ ಬರುವಂತೆ, ವಾಂತಿ ಆಗುತ್ತಿರುವಂತೆ, ಭೇದಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ಒಂದು ವೇಳೆ ಮೇಲಿನ ಲಕ್ಷಣಗಳು ಕಾಣಿಸಿದರೆ ಕೂಡಲೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಕಾಯಿಲೆ ಇದೆಯೋ ಇಲ್ಲವೋ ನಿರ್ಧರಿಸಿಕೊಳ್ಳಬಹುದು. ಯಾಕೆಂದರೆ ಡೆಂಗ್ಯೂ ಪ್ಲೇಟ್‌ಲೇಟ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆ ರೀತಿ ಆದರೆ ಜೀವಕ್ಕೇ ಅಪಾಯ.

ಮುನ್ನೆಚ್ಚರಿಕೆಗಳು..

⦿ ಡೆಂಗ್ಯೂವನ್ನು ನಿಯಂತ್ರಿಸಲು ಯಾವುದೇ ಚುಚ್ಚುಮದ್ದಿಲ್ಲ. ಆದಕಾರಣ ಸೊಳ್ಳೆಗಳ ಕಡಿತದಿಂದ ದೂರ ಇರುವುದೇ ಇದಕ್ಕೆ ಉತ್ತಮ ಪರಿಷ್ಕಾರ. ಮನೆ ಸಮೀಪದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಟ್ಯಾಂಕಿಗೆ ಮುಚ್ಚಳ ಹಾಕಬೇಕು. ನೀರನ್ನು ಸಂಗ್ರಹಿಸುವ ಪಾಟ್‌ಗಳನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಿ ಒಣಗಿಸಬೇಕು

⦿ ಮನೆಯಲ್ಲಿ ಸೊಳ್ಳೆಗಳು ಓಡಾಡುತ್ತಿವೆ ಅನ್ನಿಸಿದರೆ ಕೂಡಲೆ ಸೊಳ್ಳೆ ಪರದೆಗಳನ್ನು ಹಾಕಿಕೊಳ್ಳಬೇಕು. ಅವುಗಳನ್ನು ಓಡಿಸುವ ಕೆಲವು ಔಷಧಿಗಳನ್ನು ಬಳಸಬೇಕು. ದೇಹದಲ್ಲಿನ ಎಲ್ಲಾ ಭಾಗಗಳಿಗೂ ರಕ್ಷಣ ಕಲ್ಪಿಸುವ ಬಟ್ಟೆಗಳನ್ನು ಧರಿಸಬೇಕು. ಮಕ್ಕಳಿಗೆ ದೇಹದ ಭಾಗಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಬಟ್ಟೆ ತೊಡಬೇಕು.

⦿ ಈ ಡೆಂಗ್ಯೂ ಸೊಳ್ಳೆಗಳು ಹೂವಿನ ಕುಂಡ, ನೀರಿನ ಟ್ಯಾಂಕ್, ಟೈರ್‌ಗಳಲ್ಲಿ ಮೊಟ್ಟೆ ಇಡುತ್ತವೆ. ಇನ್ನೊಂದು ಸಂಗತಿ ಎಂದರೆ ಈ ಸೊಳ್ಳೆ ಮೊಟ್ಟೆ ವರ್ಷಪೂರ ಒಣ ಪ್ರದೇಶದಲ್ಲೂ ಜೀವಿಸುತ್ತವೆ. ಆದಕಾರಣ ಮನೆಯಲ್ಲಿನ ಕುಂಡಗಳಲ್ಲಿ, ಉಪಯೋಗಿಸಿದ ಟೈರ್‌ನಂತಹವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.


Click Here To Download Kannada AP2TG App From PlayStore!