ಚಿಕ್ಕಂದಿನಲ್ಲಿ ಎರಡೂ ಕಾಲು ಕಳೆದುಕೊಂಡ ಲಾರಿ ಡ್ರೈವರ್ ಮಗ.. ಗೂಗಲ್ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿದ..!

ಪ್ರಮುಖ ಸಾಫ್ಟ್‌ವೇರ್ ದಿಗ್ಗಜ ಕಂಪೆನಿ ಗೂಗಲ್ ಬಗ್ಗೆ ಗೊತ್ತಿಲ್ಲದವರಿಲ್ಲ. ನಿರುದ್ಯೋಗ ಅಭ್ಯರ್ಥಿಗಳಾದರೆ ಆ ಕಂಪೆನಿಯಲ್ಲಿ ಕೆಲಸ ಮಾಡಬೇಕೆಂದು ಅದೆಷ್ಟೋ ಕನಸುಗಳನ್ನು ಕಾಣುತ್ತಿರುತ್ತಾರೆ. ಆದರೆ ಅದು ಅವರು ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಶಿಕ್ಷಣ ಪಡೆಯಬೇಕು. ಎಲ್ಲಾ ಸಾಫ್ಟ್‌ವೇರ್ ಕೋರ್ಸ್‌ಗಳಲ್ಲೂ ಪಕ್ಕಾ ತಯಾರಾಗಿಬೇಕು. ಸಂದರ್ಶನದಲ್ಲಿ ಕಷ್ಟಕರವಾದ ಪ್ರಶ್ನೆಗಳಿಗೆ ಉತ್ತರ ನೀಡಿ ಸಂದರ್ಶನ ಕ್ಲಿಯರ್ ಮಾಡಬೇಕಾಗುತ್ತದೆ. ಆದರೆ ಇಷ್ಟೆಲ್ಲಾ ಕಷ್ಟವೂ ಆ ವಿದ್ಯಾರ್ಥಿಗೆ ಸುಲಭವೇ ಆಯಿತು. ಯಾಕೆಂದರೆ ಆತನ ಪ್ರತಿಭೆ ಆ ರೀತಿಯದ್ದು. ಬಡ ಕುಟುಂಬದಲ್ಲಿ ಜನಿಸಿದರೂ, ದುರದೃಷ್ಟವಶಾತ್ ಕಾಲು ಕಳೆದುಕೊಂಡರೂ ಟಾಪ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ ಎಲ್ಲರನ್ನೂ ಚಕಿತಗೊಳಿಸುತ್ತಿದ್ದಾನೆ. ಆತನೇ ನಾಗ ನರೇಶ್.

naresh

ನಾಗ ನರೇಶ್‍ದು ಆಂಧ್ರಪ್ರದೇಶದ ಗೋದಾವರಿ ನದಿ ತೀರದಲ್ಲಿರುವ ಒಂದು ಕುಗ್ರಾಮ. ತಂದೆ ಲಾರಿ ಡ್ರೈವರ್. ತಾಯಿ ಗೃಹಿಣಿ. ಆದರೂ ಅವರು ನರೇಶ್‌ನನ್ನು ಚೆನ್ನಾಗಿ ಓದಿಸಿದರು. ಈ ಹಿನ್ನೆಲೆಯಲ್ಲಿ ನರೇಶ್ ಸಹ ತಂದೆತಾಯಿ ನಂಬಿಕೆಯನ್ನು ಹುಸಿ ಮಾಡದೆ ಓದಿನಲ್ಲಿ ಅತ್ಯಂತ ಪ್ರತಿಭಾವಂತನಾಗಿದ್ದ. ಆದರೆ ಒಂದು ಸಲ ದುರದೃಷ್ಟವಶಾತ್ ಲಾರಿ ಮೇಲಿನಿಂದ ಕೆಳಗೆ ಬಿದ್ದ ಕಾರಣ ಆತ ಎರಡು ಕೈ ಹಾಗೂ ಎರಡು ಕಾಲುಗಳನ್ನು ಕಳೆದುಕೊಂಡ. ಆದರೂ ನರೇಶ್ ಕೊರಗುತ್ತಾ ಕೂರಲಿಲ. ಓದಿಕೊಳ್ಳಬೇಕೆಂದು ನಿರ್ಧರಿಸಿದ. ಈ ಹಿನ್ನೆಲೆಯಲ್ಲಿ ಐಐಟಿ ಜೆಇಇ ಪರೀಕ್ಷೆಯಲ್ಲಿ ಆಲಿಂಡಿಯಾದಲ್ಲಿ 992 ರ‍್ಯಾಂಕ್, ಪಿಎಚ್‌ಸಿ ವಿಭಾಗದಲ್ಲಿ 4ನೇ ರ‍್ಯಾಂಕ್ ಸಾಧಿಸಿ ತನ್ನ ಸಾಮರ್ಥ್ಯ ತೋರಿದ್ದ. ಆದರೆ ನರೇಶ್ ತನ್ನ ಓದನ್ನು ಸರಕಾರಿ ಶಾಲೆ, ಕಾಲೇಜುಗಳಲ್ಲೇ ಪೂರೈಸಿದ್ದು ವಿಶೇಷ.

ಆ ರೀತಿ ನರೇಶ್ ರ‍್ಯಾಂಕ್ ತಂದು ಕೊಂಡು ಮದ್ರಾಸ್ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ ಇಂಜಿನಿಯರಿಂಗ್ ವಿಭಾಗದಲ್ಲಿ ಸೀಟು ಸಂಪಾದಿಸಿದ. ಈ ಹಿನ್ನೆಲೆಯಲ್ಲಿ ಆತನಿಗೆ ಆಗುವ ಖರ್ವನ್ನು ಭರಿಸಲು ಆಸ್ಪತ್ರೆಯೊಂದು ಮುಂದೆ ಬಂತು. ಅವರ ಸಹಾಯದಿಂದ ಶಿಕ್ಷಣವನ್ನು ಮುಂದುವರೆಸಿದ. ಕಾಲೇಜಿನಲ್ಲಿ ಸಹ ವಿದ್ಯಾರ್ಥಿಗಳು ಆತನಿಗೆ ಎಲಕ್ಟ್ರಾನಿಕ್ ಚೇರನ್ನು ತೆಗೆದುಕೊಟ್ಟರು. ಇದರಿಂದಾಗಿ ಆತ ಎಲ್ಲ ಕಡೆ ಸುಲಭವಾಗಿ ಓಡಾಡುವಂತಾಯಿತು. ಕಾಲೇಜಿನ ಅಧಿಕಾರಿಗಲು ಆತ ಮೆಟ್ಟಿಲು ಹತ್ತಲು, ಇಳಿಯಲು ಹಲ್ವು ವ್ಯವಸ್ಥೆಗಳನ್ನು ಸಹ ಆತನಿಗಾಗಿ ಮಾಡಿದ್ದು ವಿಶೇಷ. ಇದರಿಂದ ಎಲ್ಲರ ಸಹಕಾರದಿಂದ ನರೇಶ್ ಐಐಟಿ ಶಿಕ್ಷಣವನ್ನು ಪೂರೈಸಿದ. ಆ ಬಳಿಕ ಆತನಿಗೆ ಗೂಗಲ್, ಮಾರ್ಗಾನ್ ಸ್ಟ್ಯಾನ್ಲಿಯಂತಹ ಕಂಪೆನಿಗಳಿಂದ ಆಫರ್‌ಗಳು ಹುಡುಕಿಕೊಂಡು ಬಂದವು. ತನಗೆ ಕಂಪ್ಯೂಟರ್ ಸೈನ್ಸ್ ಇಷ್ಟವಾಗಿದ್ದ ಕಾರಣ ಗೂಗಲ್‌ನಲ್ಲಿ ಆತ ಕೆಲಸಕ್ಕೆ ಸೇರಿದ. ಇದು ನರೇಶ್ ಎಂಬ ರಿಯಲ್ ಸ್ಟಾರ್ ಬಗೆಗಿನ ಕಥೆ..!


Click Here To Download Kannada AP2TG App From PlayStore!