ಜಲ್ಲಿಕಟ್ಟು ಎಂದರೇನು..? ಅದು ಹೇಗೆ ಪ್ರಾರಂಭವಾಯಿತು..? ಈಗ ಹೇಗೆ ಬದಲಾಗಿದೆ..?

ಜಲ್ಲಿಕಟ್ಟು ಎಂದರೇನು?

ಗೂಳಿ ಅಥವಾ ಎತ್ತುಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು, ಈಗ ಅದು ಎತ್ತುಗಳನ್ನು ಓಡಿಸಿ ಅದನ್ನು ಹಿಡಿಯುವುದಾಗಿದೆ. ಎತ್ತುಗಳ ಕುತ್ತಿಗೆಗೆ ಬೆಲೆಬಾಳುವ ವಸ್ತು, ಹಣ, ವಡವೆ ಕಟ್ಟಿ ನಂತರ ಆ ಹೋರಿ ಅಥವಾ ಎತ್ತುಗಳನ್ನ ಬಯಲಲ್ಲಿ ಬಿಡುತ್ತಾರೆ. ಅದು ಹುಚ್ಚೆದ್ದು ಓಡುತ್ತಿರುವಾಗ ಸ್ಪರ್ಧಾಳುಗಳು ಗೂಳಿಯನ್ನು ತಡೆದು ಅದರ ಕತ್ತಿಗೆ ಕಟ್ಟಿರುವ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಳ್ಳಬೇಕು. ಸ್ಪರ್ಧಾಳು ಇದರಲ್ಲಿ ಯಶಸ್ವಿಯಾದರೆ ಆ ವಸ್ತು ಅವನದಾಗುತ್ತದೆ ಇದನ್ನೆ ಜಲ್ಲಿಕಟ್ಟು ಕ್ರೀಡೆ ಎಂದು ಕರೆಯುವರು.

ಜಲ್ಲಿಕಟ್ಟು ಹೇಗೆ ಪ್ರಾರಂಭವಾಯಿತು?
ಜಲ್ಲಿಕಟ್ಟು ಒಂದು ರೀತಿಯಲ್ಲಿ ಸ್ವಯಂವರ ನಂತಹದು. ಪುರಾಣಗಳನ್ನು ಹೇಗೆ ರಾಣಿಯರ ಪೋಷಕರು ಸ್ವಯಂವರ ಏರ್ಪಡಿಸಿ ಅದರಲ್ಲಿ ಗೆದ್ದವರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡುವ ರೀತಿಯಲ್ಲಿ, ಅಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಗೂಳಿಯನ್ನು ಪಳಗಿಸುವ ವ್ಯಕ್ತಿಯನ್ನು ಯುವತಿಯರು ಮದುವೆಯಾಗುತ್ತಿದ್ದರು.

ಜಲ್ಲಿಕಟ್ಟು ಎಷ್ಟು ಪ್ರಾಚೀನವಾದುದು?
ನೀಲಗಿರಿ ಜಿಲ್ಲೆಗೆ ಸೇರಿದ ಕರಿಕ್ಕಿಯೂರ್ ಎಂಬ ಗ್ರಾಮದಲ್ಲಿ ಒಂದು ಶಿಲೆಯ ಮೇಲೆ ಮನುಷ್ಯರು ಎತ್ತುಗಳನ್ನು ಓಡಿಸುವ ದೃಶ್ಯಗಳನ್ನು ಕೆತ್ತಲಾಗಿದೆ. ಇದರಿಂದ ಇದು 3500 ವರ್ಷಗಳ ಹಿಂದಿನದು ಎಂದು ನಿರ್ಧರಿಸಿದ್ದಾರೆ. ಮಧುರೈಗೆ 35 ಕಿ.ಮೀ ದೂರದಲ್ಲಿರುವ ಕಳ್ಳುತ್ತು ಮೆಟ್ಟುಪಟ್ಟಿ ಎಂಬ ಪ್ರಾಂತ್ಯದ ಲಭ್ಯವಾಗಿರುವ ಒಂದು ಕಲ್ಲಿನ ಶಿಲೆಯ ಮೇಲೆ ಸಹ ಒಬ್ಬ ವ್ಯಕ್ತಿ ಗೂಳಿಯನ್ನು ನಿಯಂತ್ರಿಸುತ್ತಿರುವ ಚಿತ್ರ ಕೆತ್ತನೆ ಮಾಡಲಾಗಿದೆ. ಇದನ್ನು ಸಹ ಸು.1500 ವರ್ಷಗಳ ಹಿಂದೆ ಕೆತ್ತನೆ ಮಾಡಲಾಗಿದೆಯಂತೆ.

ಜಲ್ಲಿಕಟ್ಟು ಯಾವ ದಿನ ಆಡುತ್ತಾರೆ.? ಸಂಕ್ರಾಂತಿಯ ಕೊನೆಯ ದಿನ.

ಜಲ್ಲಿಕಟ್ಟು ಈಗ ಹೇಗೆ ಆಚರಣೆಯಲ್ಲಿದೆ?
ಎಲ್ಲಾ ದಾರಿಯನ್ನು ಮುಚ್ಚಿ ಒಂದು ಸಣ್ಣ ದಾರಿ ಬಿಟ್ಟು ಎತ್ತುಗಳ ಮೇಲೆ ಬಣ್ಣದ ನೀರು ಚೆಲ್ಲಿ, ಅವುಗಳನ್ನು ಒಂದೇ ಸರಿ ಓಡಿಸುತ್ತಾರೆ. ಅವು ಹಾಗೆ ಓಡುವಾಗ ದಾರಿಯುದ್ದಕ್ಕೂ ಯುವಕರು ಅವುಗಳ ಕೊಂಬುಗಳನ್ನು, ಗೋಪುರ (ದಿಣ್ಣೆ)ವನ್ನು ಹಿಡಿದು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ.

ಹಾಗಾದರೆ ಸಮಸ್ಯೆ ಏನು?
ಈ ಸಂದರ್ಭದಲ್ಲಿ ಮೂಕ ಪ್ರಾಣಿಗಳು ಅನೇಕ ತೊಂದರೆಗೆ ಒಳಗಾಗುತ್ತವೆ. ಹಾಗೆ ಓಡಿಸುವಾಗ ತುಂಬಾ ಎತ್ತುಗಳು ಗಾಬರಿಯಿಂದ ಯಾವ ಕಡೆ ಓಡುತ್ತಿದ್ದವೆ ಎಂದು ತಿಳಿಯದೇ ಬಾವಿಗಳಲ್ಲಿ ಬೀಳುವುದು, ರೈಲ್ವೇ ಟ್ರಾಕ್ ಮೇಲೆ ಹೋಗಿ ಸಾವು ಸಂಭವಿಸುವುದು ನಡೆಯುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಭಾಗವಹಿಸುವ ಅನೇಕ ಜನ ಯುವಕರಿಗೆ ಗಾಯಗಳಾಗುವುದು, ಕೆಲವರು ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳಿವೆ.

ಪ್ರಾಣಿ ದಯಾ ಮಂಡಳಿ ಮತ್ತು ಸುಪ್ರೀಂಕೋರ್ಟ್…
ಸಂಪ್ರದಾಯದ ಹೆಸರಿನಲ್ಲಿ ಗೂಳಿಗಳನ್ನು ಕ್ರೂರವಾಗಿ ಹಿಂಸಿಸಲಾಗುತ್ತಿದೆ ಎಂಬ ಕಾರಣದ ಮೇಲೆ ಜಲ್ಲಿಕಟ್ಟು ಆಟವನ್ನು ನಿಷೇಧಿಸುವಂತೆ ಕೋರಿ ಪ್ರಾಣಿ ದಯಾ ಮಂಡಳಿಯು ಸುಪ್ರೀಂಕೋರ್ಟ್’ನಲ್ಲಿ ಪಿಐಎಲ್ ದಾಖಲಿಸಿ ಕ್ರೀಡೆಯನ್ನು ನಿಷೇಧಿಸುವಂತೆ ಕೋರಿದ್ದರು. ಆದ್ದರಿಂದ ಜಲ್ಲಿಕಟ್ಟು ಕ್ರೀಡೆ ನಿಷೇಧಗೊಂಡಿದೆ.

ತಮಿಳು ಚಿತ್ರರಂಗದಲ್ಲಿ ಎರಡು ವರ್ಗ:
ಜಲ್ಲಿಕಟ್ಟನ್ನು ಸಮರ್ಥಿಸುತ್ತಿರುವವರು- ರಜನಿಕಾಂತ್, ವಿಶಾಲ್, ಶಿಂಭು. ಜಲ್ಲಿಕಟ್ಟನ್ನು ವಿರೋಧಿಸುತ್ತಿರುವವರು- ತ್ರಿಷಾ, ವಿಜಯ್


Click Here To Download Kannada AP2TG App From PlayStore!

Share this post

scroll to top