ಡೇರಾ ಬಾಬಾ ವೈಯುಕ್ತಿಕ ಕೊಠಡಿಯಲ್ಲಿ ಏನಿದೆ ಎಂದು ಗೊತ್ತೇ? ಬೀರುವಿನ ಮೂಲಕ ಹೋದರೆ…ಹುಡುಗಿಯರ ಕೊಠಡಿಯೊಳಗೆ ಹೋಗುವ ರಹಸ್ಯ ಮಾರ್ಗಗಳು!

ಧರ್ಮ ಅಸಹಿಷ್ಣುತೆ  ಹೆಚ್ಚಾಗಿರುವ ಪಂಜಾಬ್, ಹರ್ಯಾಣ ದಲ್ಲಿನ ದಲಿತರು, ಹಿಂದುಳಿದ ವರ್ಗದವರನ್ನು ಒಂದುಗೂಡಿಸಿದ ಸಾಮಾಜಿಕ, ಆಧ್ಯಾತ್ಮಿಕ ಜೀವನ ವಿಧಾನವೇ ಡೇರಾ ಸಚ್ಚಾ ಸೌಧಾ 1950ರ ದಶಕದ ಕೊನೆಯಲ್ಲಿ ಮೊದಲಾದ ಈ ಮತದಲ್ಲಿ ಸಾಮಾಜಿಕ, ಕುಲಗಳ ಅಂತರಗಳನ್ನು ಸಹಿಸಲಾಗದ ಗಿರಿಜನರು, ದಲಿತರು, ಹಿಂದುಳಿದವರು ಲಕ್ಷಗಟ್ಟಲೆ ಸೇರಿಕೊಂಡಿದ್ದಾರೆ. ಇದು ಅವರಿಗೆ ಒಂದು ರೀತಿಯ ಜೀವನಸ್ಥೈರ್ಯವನ್ನು ನೀಡಿದೆ. ಡೇರಾ ಸೌದಾ ಒಂದು ಆದರ್ಶಪ್ರಾಯವಾದ ಸಮಾಜ ಪ್ರವಚನವನ್ನು ಹೇಳುತ್ತದೆ. ಇದರಲ್ಲಿ ಅಂತಸ್ತು , ಕುಲ ಎಂಬ ಬೇಧಗಳಿರುವುದಿಲ್ಲ ಅನೇಕ ಆಹಾರ ಸೌಲಭ್ಯಗಳನ್ನು ಆಸ್ಪತ್ರೆಗಳನ್ನು, ವಿದ್ಯಾಲಯಗಳನ್ನು, ಗುಡಿಸಲು ಪರಿಶ್ರಮಗಳನ್ನು ನಿರ್ಮಿಸಿ ಸದಸ್ಯರಿಗೆ ಸೇವೆ ಮಾಡುತ್ತದೆ. ಇದನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ ಗುರ್ಮಿತ್ ಡೇರಾ. ಡೇರಾಬಾಬಾ ಅಲಿಯಾಸ್ ಗುರ್ಮಿತ್ ರಾಮ್ ರಹೀಮ್ ಸಿಂಗ್ ಆಧ್ಯಾತ್ಮಿಕ ಗುರುಗಳನ್ನು ಅತ್ಯಾಚಾರ ಕೇಸಿನಲ್ಲಿ ಸಿಬಿಐ ಕೋರ್ಟು ದೋಷಿಯಾಗಿ ನಿರ್ಧರಿಸಿದೆ.


ಡೇರಾ ಸಚ್ಚಾ ಸೌಧಾ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿರುವಂತೆ 15 ವರ್ಷಗಳ ಹಿಂದೆ ಒಬ್ಬ ಅಪರಿಚಿತ ಸಾಧ್ವಿ ಬರೆದ ಪತ್ರ  ಗುರ್ಮಿತ್ ಸಿಂಗ್ ಗೆ ಶಿಕ್ಷೆ ಬೀಳುವುದರಲ್ಲಿ ಮುಖ್ಯ ಪಾತ್ರ ವಹಿಸಿದೆ. ಆತನ ಸಾಮ್ರಾಜ್ಯವನ್ನು ನಡುಗಿಸಿದ ಆ ಪತ್ರದಲ್ಲಿ ಅಜ್ಞಾತ ಸಾದ್ವಿ ಡೇರಾ ಸ್ವಚ್ಚ ಸೌಧದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ಹೊರಗಿಟ್ಟಿದೆ. ಡೇರಾ ಬಾಬಾ ಈಗ ಜೈಲಿನಲ್ಲಿ ಕಂಬಿಗಳನ್ನು ಎಣಿಸುತ್ತಿರುವ  ವಿಷಯ ತಿಳಿದಿರುವದೇ.
ಆದರೆ ಆಶ್ರಮದಲ್ಲಿ  ದೊರೆಯಬಹುದಾದ ಸಾಕ್ಷಿ, ಪುರಾವೆಗಳನ್ನು ಸಂಗ್ರಹಿಸುವ  ಪ್ರಯತ್ನದಲ್ಲಿರುವ ಪೋಲೀಸರಿಗೆ ಹೊಸ ಹೊಸದಾದ ವಿಷಯಗಳು ತಿಳಿದುಬಂದಿವೆ. ಆಶ್ರಮದಲ್ಲಿ ಒಂದು ಅಲ್ಮೆರಾದಿಂದ ರಹಸ್ಯ ಮಾರ್ಗದ ಮೂಲಕ ರಾಮ್ ರಹೀಂ ಹುಡುಗಿಯರು ಇರುವ ಕೊಠಡಿಗೆ ಹೋಗಲು ದಾರಿಯನ್ನು ನಿರ್ಮಿಸಿಕೊಂಡಿದ್ದಾನೆಂದು ಕಂಡುಹಿಡಿದಿದ್ದಾರೆ.


ಚಿಕ್ಕ ಚಿಕ್ಕ ಮಕ್ಕಳನ್ನು ಬೇರೆ ಬೇರೆ ಕೊಠಡಿಗಳಲ್ಲಿರಿಸಿ ರಹಸ್ಯವಾಗಿ ಬಾಗಿಲುಗಳನ್ನು ಇಡಿಸಿದ್ದಾನೆ. ಅಲ್ಮೆರಾ ಮೂಲಕ ಹೋದರೆ ರಹಸ್ಯವಾಗಿ ಕೊಠಡಿಯೊಳಗೆ ಹೋಗಿಬರುಲು ಸಾಧ್ಯವಾಗುವಂತೆ ಈ ಮಾರ್ಗವನ್ನು ನಿರ್ಮಿಸಿಕೊಂಡಿದ್ದಾನೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೋಲೀಸರು ಆಶ್ರಮದಲ್ಲಿರುವ ಎಲ್ಲಾ ಹುಡುಗಿಯರನ್ನು ಅವರವರ  ಸ್ವಂತ ಸ್ಥಳಗಳಿಗೆ ಕಳುಹಿಸಿ ಆಶ್ರಮದಲ್ಲಿರುವ ಹಣ ಹಾಗೂ ಚಿನ್ನವನ್ನು ಹುಡುಕಿ ಹೊರತರುವ ಕೆಲಸದಲ್ಲಿದ್ದಾರೆ.


Click Here To Download Kannada AP2TG App From PlayStore!