ಆರ್ಮೀ,ನೇವೀ,ಏರ್ ಫೋರ್ಸ್ ಗಳಲ್ಲಿ ಮಾಡುವ ಸೆಲ್ಯೂಟ್ ಗಳು ವಿಭಿನ್ನವಾಗಿರುತ್ತವೆ! ಏಕೆಂದು ಗೊತ್ತೆ?

ಸೆಲ್ಯೂಟ್… ಧ್ವಜವನ್ನು,ಅಮರವೀರರನ್ನು ನೋಡುತ್ತಾ ಬಲಗೈ ಎತ್ತಿ ಹೆಮ್ಮೆಯಿಂದ ಮಾಡುವ ಗೌರವ ವಂದನೆ.  ಸೆಲ್ಯೂಟ್ ಮಾಡುವುದು ಎಲ್ಲಾ ಸೇವೆಗಳಲ್ಲೂ ಒಂದೇ ತೆರನಾಗಿ ಇರುತ್ತದೆಂದು ಬಹಳಷ್ಟು ಮಂದಿ ಭಾವಿಸುತ್ತಾರೆ. ಆದರೆ ನಮ್ಮ ದೇಶದ ತ್ರಿವಿಧ ದಳಗಳಾದ ಆರ್ಮೀ,ನೇವೀ,ಏರ್ ಫೋರ್ಸ್ ಗಳು ಮಾಡುವ ಸೆಲ್ಯೂಟ್ ಗಳು ಬೇರೆಬೇರೆಯಾಗಿರುತ್ತವಂತೆ!. ಸೆಲ್ಯೂಟ್ ಮಾಡುವುದರಿಂದ ನಾವೆಲ್ಲರೂ ಒಂದೇ ಎಂದು, ಸೈನಿಕರ ನಡುವೆ ಬೇಧ ಭಾವಗಳಿಲ್ಲವೆಂದು, ಸೈನಿಕರ ಧೀರತ್ವ,ಶೂರತ್ವಗಳ ಪ್ರತೀಕವಾಗಿ ಸೆಲ್ಯೂಟ್ ಮಾಡುತ್ತಾರಂತೆ.

ನಮ್ಮ ದೇಶದ ತ್ರಿವಿಧ ದಳಗಳು ಮಾಡುತ್ತಿರುವ ಸೆಲ್ಯೂಟ್ ಗಳ ಬಗ್ಗೆ ತಿಳಿದುಕೊಳ್ಳೋಣ.
1.ಭಾರತೀಯ ಸೇನೆ( ಇಂಡಿಯನ್ ಆರ್ಮಿ)
ನಮ್ಮ ದೇಶವನ್ನು ಕಾಯುತ್ತಿರುವ ನಮ್ಮ ಸೈನಿಕರು ತಮ್ಮ ಬಲಗೈ ಅಂಗೈಯಿಂದ ಎದುರಿಗಿರುವ ವ್ಯಕ್ತಿ,ಧ್ವಜದ ಮುಂದೆ ಸೆಲ್ಯೂಟ್ ಮಾಡುತ್ತಾರೆ. ಅಂಗೈ ಮುಂದೆ ಇರುವಹಾಗೆ, ಎಲ್ಲಾ ಬೆರಳುಗಳು ಹತ್ತಿರವಿರುವಂತೆ,ಬೆರಳುಗಳ ನಡುವೆ ಅಂತರ ಇರದ ಹಾಗೆ,ಮಧ್ಯಬೆರಳು ಕಣ್ಣು ರೆಪ್ಪೆಗೆ ಅಥವ ತಲೆಯ ಮೇಲಿರುವ ಟೋಪಿಯ ಮುಂದುಗಡೆಯ ಭಾಗವನ್ನು ಸ್ಪರ್ಶಿಸುವ ಹಾಗೆ ಸೆಲ್ಯೂಟ್ ಮಾಡುತ್ತಾರೆ.ಹೀಗೆ ಮಾಡುವುದರಿಂದ ಪರಸ್ಪರ ನಂಬಿಕೆ ಯಿದೆಯೆಂದು,ತಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಉದ್ದೇಶವಾಗಲಿ, ಎಲ್ಲಿಯೂ ಯಾವುದೇ ರೀತಿಯ ಆಯುಧವಾಗಲೀ ಇಲ್ಲವೆಂದು ಹೆಮ್ಮೆಯಿಂದ ಹೇಳುವುದಾಗಿರುತ್ತದೆ.

743484196

2.ಭಾರತೀಯ ನೌಕಾಪಡೆ( ಇಂಡಿಯನ್ ನೇವಿ):
ಇಂಡಿಯನ್ ನೇವಿ ಸೈನಿಕರು ಸೆಲ್ಯೂಟ್ ಮಾಡುವಾಗ,ತಮ್ಮ ಅಂಗೈಯನ್ನು ಭೂಮಿಗೆ 90 ಡಿಗ್ರೀ ಕೋನದಲ್ಲಿ ಕೆಳಗೆ ಬಾಗಿರುವ ಹಾಗೆ ಮಾಡುತ್ತಾರೆ.ನೇವಿ ಸೈನಿಕರು ಹಡಗಿನಲ್ಲಿ ಪ್ರಯಾಣಿಸುವಾಗ ಆಯಿಲ್,ಗ್ರೀಸ್ ಮುಂತಾದ ಪಧಾರ್ತಗಳು ಕೈಗಳಿಗೆ ಮೆತ್ತಿಕೊಳ್ಳುತ್ತಿರುತ್ತವೆ.ಹೀಗಾಗಿ ಗೌರವ ತೋರಲೆಂದು ತಾವು ಮಾಡುವ ಸೆಲ್ಯೂಟನ್ನು,ಅಂಗೈ ತಲೆಯಿಂದ ಭೂಮಿಗೆ 90 ಡಿಗ್ರಿ ಕೋನದಲ್ಲಿರುವಂತೆ ನೊಡಿಕೊಳ್ಳುತ್ತಾರೆ.

849837782

3.ಭಾರತೀಯ ವಾಯುಪಡೆ(ಇಂಡಿಯನ್ ಏರ್ ಫೋರ್ಸ್):
ಇಂಡಿಯನ್ ಏರ್ ಫೋರ್ಸ್ 2006 ರಿಂದ ತಮ್ಮ ನಿಬಂಧನೆಗನುಸಾರವಾಗಿ ಹೊಸ ಮಾದರಿಯ ಸೆಲ್ಯೂಟನ್ನು ಮಾಡುತ್ತಿದ್ದಾರೆ. ಈ ಸೆಲ್ಯೂಟಲ್ಲಿ ಅಂಗೈ ತಲೆಯಿಂದ ಭೂಮಿಗೆ45 ಡಿಗ್ರಿ ಕೋನದಲ್ಲಿ ಇರುವ ಹಾಗೆ,ತಮ್ಮ ಕೈಬಾಗದಂತೆ ನೆರವಾಗಿರುವಂತೆ ನೋಡಿಕೊಳ್ಳುತ್ತಾರೆ. ಈ ಸೆಲ್ಯೂಟ್ ಇಂಡಿಯನ್ ಆರ್ಮಿ ಹಾಗು ನೇವಿಗಳಿಗೆ ಮಧ್ಯೆ ಯಿರುತ್ತದೆ.ಅನುಕೂಲಕರವಾಗಿಯೂ ಇರುತ್ತದೆ. ಆದರೆ ಇದಕ್ಕೆ ಮೊದಲು ಇಂಡಿಯನ್ ಏರ್ ಫೋರ್ಸ್ ನವರು ಸಹ ಇಂಡಿಯನ್ ಆರ್ಮಿ ರೀತಿಯಲ್ಲೇ ಸೆಲ್ಯೂಟ್ ಮಾಡುತ್ತಿದ್ದರು.

641639798

ಸೆಲ್ಯೂಟ್ ಮಾಡುವಾಗ ಗೌರವಯುತವಾಗಿ ಎಲ್ಲರೂ ಒಂದೇರೀತಿ ಮಾಡುತ್ತಾರೆಂದು ಬಹಳಷ್ಟು ಮಂದಿ ಅಂದುಕೊಳ್ಳುತ್ತಾರೆ. ಆದರೆ, ನೀವೀಗ ತಿಳಿದುಕೊಂಡಿರಲ್ಲ ನಮ್ಮ ತ್ರಿವಿಧ ದಳಗಳು ಹೇಗೆ ವಿಭಿನ್ನವಾಗಿ ಸೆಲ್ಯೂಟ್ ಮಾಡುತ್ತಾರೆಂದು.


Click Here To Download Kannada AP2TG App From PlayStore!