ಪೆಟ್ರೋಲ್, ಡೀಸೆಲ್…ಎರಡೂ ಇಂಧನಗಳೇ ಆದರೂ ಅವುಗಳಲ್ಲಿ ವ್ಯತ್ಯಾಸ ಇರುತ್ತವೆ. ಅವು ಏನೂಂತ ಗೊತ್ತಾ..?

ಪೆಟ್ರೋಲ್, ಡೀಸೆಲ್…ಎರಡೂ ಇಂಧನಗಳೇ. ಇವುಗಳನ್ನು ಪೆಟ್ರೋಲ್ ಬಂಕ್‌ಗಳಲ್ಲಿ ಕೊಳ್ಳುತ್ತಾರೆ. ವಾಹನಗಳಿಗೆ ಅಲ್ಲೇ ಇಂಧನ ತುಂಬುತ್ತಾರೆ. ಇವೆರಡ ಬೆಲೆಯೂ ಭಿನ್ನವಾಗಿರುತ್ತದೆ. ಆದರೆ ಪೆಟ್ರೋಲ್‌ನಿಂದ ಓಡುವ ವಾಹನಗಳು ಕೆಲವು ಇದ್ದರೆ, ಡೀಸೆಲ್‍ನಿಂದ ಓಡುವ ವಾಹನಗಳು ಕೆಲವು. ಇವೆರಡೂ ಇಂಧನಗಳೇ ಆಗಿದ್ದರೂ ಎರಡನ್ನೂ ಯಾವುದರಲ್ಲಿ ಬೇಕಾದರೂ ಬಳಸಬಹುದಲ್ಲವೇ? ಆದರೆ ಆ ರೀತಿ ಬಳಸಲ್ಲ. ಇದರ ಹಿಂದಿನ ಕಾರಣಗಳೇನು, ಇಷ್ಟಕ್ಕೂ ಪೆಟ್ರೋಲ್, ಡೀಸೆಲ್ ನಡುವೆ ಏನೇನು ವ್ಯತ್ಯಾಸ ಇರುತ್ತದೆ, ಅವುಗಳನ್ನು ಹೇಗೆ ತಯಾರಿಸುತ್ತಾರೋ ಈಗ ತಿಳಿದುಕೊಳ್ಳೋಣ.

ಪೆಟ್ರೋಲ್, ಡೀಸೆಲ್ ಎಂದರೆ ಅವು ಕಾರ್ಬನ್ ಸಂಯೋಜನೆಗಳು. ಎಂದರೆ ಒಂದು ರೀತಿಯಲ್ಲಿ ಹೇಳಬೇಕೆಂದರೆ ಇವನ್ನು ವಿಶೇಷವಾಗಿ ಕೆಮಿಕಲ್ಸ್ ಎಂದೂ ಹೇಳಬಹುದು. ಇವಕ್ಕೆ ಬೇರೆಬೇರೆ ರಾಸಾಯನಿಕ ಫಾರ್ಮುಲಾಗಳಿರುತ್ತವೆ. ಆದರೆ ಎರಡೂ ಇಂಧನಗಳೇ ಆದರೂ ಎರಡನ್ನೂ ಒಂದೇ ವಾಹನದಲ್ಲಿ ಬಳಸಲ್ಲ. ಅವುಗಳನ್ನು ಬೇರೆಬೇರೆಯಾಗಿಯೇ ಬಳಸಬೇಕು. ಅವುಗಳಿಗಾಗಿ ತಯಾರಿಸಿದ ಇಂಜಿನ್‌ಗಳಲ್ಲಿ ಈ ಇಂಧನಗಳನ್ನು ಬಳಸಬೇಕು. ಪೆಟ್ರೋಲ್, ಡೀಸೆಲ್ ಇಂಜಿನ್‌ಗಳು ಬೇರೆ ತರಹ ಇರುತ್ತವೆ. ಒಂದರಲ್ಲಿ ಮತ್ತೊಂದು ಇಂಧನ ಬಳಸಲು ಸಾಧ್ಯವಾಗಲ್ಲ. ಉದಾಹರಣೆಗೆ…ನಮಗೆ ಜ್ವರ ಬಂತು ಎಂದುಕೊಳ್ಳಿ. ಆಗ ಜ್ವರ ಕಡಿಮೆಯಾಗುವ (ಔಷಧಿ) ಕೆಮಿಕಲ್ಸ್ ಕೊಡಬೇಕು. ಆ ರೀತಿ ಅಲ್ಲದೆ ಗಾಯ ವಾಸಿಯಾಗುವ ಔಷಧಿ ಕೊಟ್ಟರೆ ಆಗುತ್ತದೆಯೇ..? ಕಡಿಮೆಯಾಗಲ್ಲ. ಅದೇ ರೀತಿ ಡೀಸೆಲ್‌ಗಾಗಿ ತಯಾರಿಸಿದ ಇಂಜಿನ್‌ನಲ್ಲಿ ಡೀಸೆಲನ್ನು ಮಾತ್ರ ಹಾಕಬೇಕು. ಬೇರೆ ಹಾಕಿದರೆ ಆ ಇಂಜಿನ್ ತೆಗೆದುಕೊಳ್ಳಲ್ಲ. ಫಲಿತವಾಗಿ ಇಂಜಿನ್ ಕೆಡುತ್ತದೆ.

ಇನ್ನು ಪೆಟ್ರೋಲ್, ಡೀಸೆಲ್ ಎರಡನ್ನೂ ಹೇಗೆ ತಯಾರಿಸುತ್ತಾರೆಂದರೆ…ಎರಡೂ ಪೆಟ್ರೋಲಿಯಂ ಅಥವಾ ಕಚ್ಚಾ ತೈಲದಿಂದ ತಯಾರಿಸುತ್ತಾರೆ. ಇವನ್ನು ಬೇರೆಬೇರೆ ಉಷ್ಣತೆಯಲಿ ಬಿಸಿ ಮಾಡುತ್ತಾರೆ. ಈ ಪ್ರಕ್ರಿಯೆಯನ್ನು ಡಿಸ್ಟಿಲೇಷನ್ ಅಂತಾರೆ. ಇದರ ಭಾಗವಾಗಿ ಬೇರೆಬೇರೆ ಉಷ್ಣತೆಗಳ ಬಳಿ ಪೆಟ್ರೋಲಿಯಂ ಬಿಸಿ ಮಾಡಿದರೆ ಆಗ ಪೆಟ್ರೋಲ್, ಡೀಸೆಲ್‌ಗಳು ಉಪ ಉತ್ಪನ್ನಗಳಾಗಿ ಬರುತ್ತವೆ. ಪೆಟ್ರೋಲ್ ಉತ್ಪನ್ನ ಬೇಕೆಂದರೆ ಕಚ್ಚಾತೈಲವನ್ನು 35 ರಿಂದ 200 ಡಿಗ್ರಿಗಳ ತನಕ ಬಿಸಿ ಮಾಡಿದರೆ ಸಾಕು. ಆದರೆ ಡೀಸೆಲ್ ಬೇಕೆಂದರೆ ಮಾತ್ರ ಕಚ್ಚಾ ತೈಲವನ್ನು 250ರಿಂದ 350 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಬಿಸಿ ಮಾಡಬೇಕು. ಆಗ ಡೀಸೆಲ್ ಬರುತ್ತದೆ.

ಡೀಸೆಲ್‌ಗಿಂತಲೂ ಪೆಟ್ರೋಲ್ ಶೀಘ್ರವಾಗಿ ಆವಿಯಾಗುತ್ತದೆ. ಆದರೆ ಡೀಸೆಲ್ ಅಷ್ಟು ಸುಲಭವಾಗಿ ಆವಿ ಆಗಲ್ಲ. ಡೀಸೆಲ್‌ನಿಂದ ಹೆಚ್ಚಿನ ಶಕ್ತಿ ಉತ್ಪಾದನೆಯಾಗುತ್ತದೆ. ಅದಕ್ಕಾಗಿ ಇದನ್ನು ಭಾರಿ ವಾಹನಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಪೆಟ್ರೋಲ್ ಕಡಿಮೆ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ಆ ಶಕ್ತಿ ಟೂ ವೀರಲ್‌ನಂತಹ ವಾಹನಗಳಿಗೆ ಸಾಕಾಗುತ್ತದೆ. ಆದಕಾರಣ ಅವುಗಳಿಗೆ ಪೆಟ್ರೋಲ್ ಇಂಜಿನ್ ಬಳಸುತ್ತಾರೆ. ಡೀಸೆಲ್‌ ವಾಹನಗಳು ಹೆಚ್ಚು ಮೈಲೇಜ್ ನೀಡುತ್ತವೆ. ಇಂಜಿನ್ ವೇಗವಾಗಿ ಕೆಲಸ ಮಾಡುತ್ತದೆ. ಪೆಟ್ರೋಲ್ ವಾಹನಗಳಿಗೆ ಅಷ್ಟಾಗಿ ಮೈಲೇಜ್ ಬರಲ್ಲ. ಇನ್ನು ಕಚ್ಚಾ ತೈಲವನ್ನು 190 ರಿಂದ 250 ಡಿಗ್ರಿಗಳ ನಡುವೆ ಇನ್ನೊಂದು ಉತ್ಪನ ಬರುತ್ತದೆ. ಅದನ್ನೇ ಪ್ಯಾರಾಪಿನ್ ಎನ್ನುತ್ತಾರೆ. ಈ ಇಂಧವನ್ನು ವಿಮಾನಗಳು, ಹೆಲಿಕಾಫ್ಟರ್‌ಗಳು, ರಾಕೆಟ್‌ಗಳಲ್ಲಿ ಬಳಸುತ್ತಾರೆ.

 


Click Here To Download Kannada AP2TG App From PlayStore!