ದೋಸೆ,ಚಾಕ್ಲೆಟ್,ನೂಡಲ್ಸ್ ಗಳನ್ನು ಪ್ರಸಾದವನ್ನಾಗಿ ಕೊಡುವ ದೇವಾಲಯಗಳು ನಮ್ಮ ದೇಶದಲ್ಲಿವೆಯೆಂದು ನಿಮಗೆ ಗೊತ್ತೇ?

ದೇವರ ದರ್ಶನ ಪಡೆದು ನಮ್ಮ ಕೋರಿಕೆಗಳನ್ನು,ಸಮಸ್ಯೆಗಳನ್ನು,ಕಷ್ಟಗಳನ್ನು ನಿವಾರಿಸೆಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ.ದೇವರ ದರ್ಶನದ ನಂತರ ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲೂ ಒಡೆದ ತೆಂಗಿನ ಕಾಯಿ,ಕಲ್ಲು ಸಕ್ಕರೆ, ಕಡಲೆ ಉಸುಲಿ,ಸಿಹಿ ಪದಾರ್ಥಗಳನ್ನು ಪ್ರಸಾದ ರೂಪದಲ್ಲಿ ನೀಡುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಆದರೆ,ಕೆಲವು ದೇವಾಲಯಗಳಲ್ಲಿ ಮಾತ್ರ ಇವುಗಳಲ್ಲದೆ ಇತರೆ ಪದಾರ್ಥಗಳನ್ನು ಪ್ರಸಾದ ರೂಪದಲ್ಲಿ ಕೊಡುವುದನ್ನು ನೋಡಿದರೆ ನೀವು ಅಚ್ಚರಿಗೊಳ್ಳುತ್ತೀರಿ.

1.ಅಳಗಾರ್ ಕೋಯಿಲ್ :
ತಮಿಳುನಾಡಿನಲ್ಲಿರುವ ಅಳಗಾರ್ ಕೋಯಿಲ್ ನಲ್ಲಿ ಮಹಾವಿಷ್ಣುವನ್ನು ಪೂಜಿಸುತ್ತಾರೆ. ದೇವರ ದರ್ಶನದ ನಂತರ ಇಲ್ಲಿ ದೋಸೆಗಳನ್ನು ಪ್ರಸಾದವನ್ನಾಗಿ ನೀಡುತ್ತಾರೆ.

7_1454574540

2.ಕರ್ಣಿಮಾತ ದೇವಾಲಯ :
ರಾಜಸ್ಥಾನದಲ್ಲಿರುವ ಕರ್ಣಿಮಾತ ದೇವಾಲಯದಲ್ಲಿ ಸದಾ ಇಲಿಗಳು ಸಂಚರಿಸುತ್ತಿರುತ್ತವೆ.ಇಲ್ಲಿಗೆ ಬರುವ ಭಕ್ತರಿಗೆ ಇಲಿಗಳು ಎಂಜಲು ಮಾಡಿ ಉಳಿದ ಪದಾರ್ಥಗಳನ್ನು ಪ್ರಸಾದವಾಗಿ ನೀಡುತ್ತಾರೆ.

1_1454574539

3.ಕಾಮಾಖ್ಯಾ ದೇವಾಲಯ :
51 ಶಕ್ತಿ ಪೀಠಗಳಲ್ಲಿಒಂದಾಗಿರುವ ಗುವಾಹತಿ ಯಲ್ಲಿರುವ ಕಾಮಾಖ್ಯಾ ದೇವಾಲಯದಲ್ಲಿ, ಅಮ್ಮನವರಿಗೆ ಉಡಿಸಿರುವ ಒದ್ದೆ ಬಟ್ಟೆಯನ್ನು ಇಲ್ಲಿಗೆ ಬಂದ ಭಕ್ತರಿಗೆ ಪ್ರಸಾದವಾಗಿ ನೀಡುತ್ತಾರೆ.

2_1454574539

4.ತ್ರಿಶೂರ್ ಮಹಾದೇವಾಲಯ :
ಕೇರಳದ ತ್ರಿಶೂರ್ ಮಹಾದೇವ ಆಲಯದ ಭಿತ್ತಿಗಳ ಮೇಲೆ ಮಹಾಭಾರತಕ್ಕೆ ಸಂಬಂಧಿಸಿದ ಘಟನೆಗಳನ್ನು ಬರೆಯಲಾಗಿದೆ.ಇಲ್ಲಿ ಪ್ರಸಾದ ರೂಪವಾಗಿ, ಹಿಂದೂ ಮತ ಹಾಗೂ ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದ ಸೀಡಿ,ಡಿವಿಡಿ ಹಾಗು ಪುಸ್ತಕಗಳನ್ನು ನೀಡುತ್ತಾರೆ.

3_1454574539

5.ಬಾಲಸುಬ್ರಹ್ಮಣ್ಯ ದೇವಾಲಯ :
ಕೇರಳದಲ್ಲಿರುವ ಬಾಲ ಸುಬ್ರಹ್ಮಣ್ಯ ದೇವಾಲಯದಲ್ಲಿ,ದೇವರನ್ನು ‘ಚಾಕ್ಲೇಟ್’ ಗಳಿಂದ ಪೂಜಿಸುತ್ತಾರೆ.ಪೂಜಾನಂತರ ಪ್ರಸಾದ ರೂಪದಲ್ಲಿ ‘ಚಾಕ್ಲೇಟ್’ ಗಳನ್ನು ಕೊಡುತ್ತಾರೆ.

4_1454574539

6.ಚೈನೀಸ್ ಕಾಳೀ ದೇವಾಲಯ :
ಕಲಕತ್ತಾ ದಲ್ಲಿರುವ ಚೈನೀಸ್ ಕಾಳೀ ದೇವಾಲಯವನ್ನು ಚೀನೀಯರು ನಿರ್ಮಿಸಿದರು.ಈ ದೇವಾಲಯದಲ್ಲಿ ಅಮ್ಮನವರ ಪೂಜೆಯ ನಂತರ ಪ್ರಸಾದವಾಗಿ ನೂಡಲ್ಸ್,ಫ್ರೈಡ್ ರೈಸ್ ಹಾಗೂ ಇನ್ನಿತರೇ ಚೈನೀಸ್ ಫಾಸ್ಟ್ ಫುಡ್ ನೀಡುತ್ತಾರೆ.

5_1454574540

7.ಕಾಲ ಭೈರವ ದೇವಾಲಯ :
ಮಧ್ಯ ಪ್ರದೇಶದಲ್ಲಿರುವ ಕಾಲ ಭೈರವ ಆಲಯದಲ್ಲಿ ಭೈರವನಿಗೆ ಮಾತ್ರ ‘ಮದ್ಯ'(ಮಾದಕ ಪಾನೀಯ)ದಿಂದ ಪೂಜೆ ಮಾಡಿ,ಮದ್ಯವನ್ನೇ ಪ್ರಸಾದವನ್ನಾಗಿ ನೀಡುತ್ತಾರೆ.

6_1454574540


Click Here To Download Kannada AP2TG App From PlayStore!

Share this post

scroll to top