ನಿಮಗೆ ತಲೆನೋವು… ತಲೆಯ ಯಾವ ಭಾಗದಲ್ಲಿ ಬರುತ್ತದೆ ಎಂಬುದನ್ನು ತಿಳಿದು ಅದರ ಬಗ್ಗೆ ಎಚ್ಚರವಹಿಸಿ… ಇಲ್ಲವಾದಲ್ಲಿ ಅಪಾಯ ತಪ್ಪದ್ದಲ್ಲ…!

ಪ್ರಪಂಚದಾದ್ಯಂತ ಪ್ರತಿವರ್ಷ ಸುಮಾರು 1.20 ಕೋಟಿ ಜನರು ಅವರಿಗೆ ಬರುವ ಕಾಯಿಲೆಗಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಮುಖ್ಯವಾಗಿ ತಲೆನೋವಿನಿಂದ ನರಳುತ್ತಿದ್ದವರ ಸಂಖ್ಯೆ ಈ ಅಂಕಿ ಅಂಶದಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಆದರೆ ನಮಗೆ ಬರುವ ತಲೆನೋವುಗಳು ಹೆಚ್ಚಾಗಿ ಸಾಮಾನ್ಯವಾದವುಗಳೇ ಆಗಿರುತ್ತವೆ. ಆದರೂ ಕೆಲವು ಪರಿಸ್ಥಿತಿ ಗಳಲ್ಲಿ ಬರುವಂತಹ ನೋವುಗಳು ಮಾತ್ರ ಮೈಗ್ರೇನ್, ಬ್ರೆಯಿನ್ ‍ಟ್ಯೂಮರ್‍ಗಳಂತಹ ಅನಾರೋಗ್ಯಕ್ಕೆ ಪ್ರಮುಖ ಸೂಚಕಗಳಂತೆ ಕಂಡುಬರುತ್ತವೆ. ಇಂತಹ ತಲೆನೋವುಗಳಲ್ಲಿ ಯಾವು ಅಪಾಯಕಾರಿ ಯಾಗಿರುತ್ತವೆ, ಯಾವು ಸಾಧಾರಣವಾಗಿರುತ್ತವೆ ಎಂಬುದು ನಾವು ಅನುಭವಿಸುವ ಕೆಲವು ಲಕ್ಷಣಗಳ ಎಚ್ಚರಿಕೆಯಿಂದ ಗಮನಿಸುವುದರಿಂದ ಸುಲಭವಾಗಿ ತಿಳಿದುಕೊಳ್ಳಬಹುದು. ಆ ಲಕ್ಷಣಗಳಾವುವು ಎಂಬುದನ್ನು ತಿಳಿಯೋಣ…

1. ಕಣ್ಣಿನ ಉಬ್ಬಿನ ನಡುವೆ ಅಥವಾ ಹಣೆಯ ಮೇಲೆ ಕಾಣಿಸಿಕೊಳ್ಳುವ ತಲೆನೋವು-ಟೆನ್ಷನ್ ಅಥವಾ ಸೈನಸ್ ಗೆ ಸಂಭಂದಿಸಿದ ತಲೆನೋವಾಗಿರುತ್ತದೆ.
2. ತಲೆಯ ಬಲ ಅಥವಾ ಎಡಭಾಗದಲ್ಲಿ ಏನಾದರೂ ನೋವು ಬಂದರೆ ಅದು ಮೈಗ್ರೇನ್ ಎಂದು ಭಾವಿಸಬೇಕು.
3. ಕಣ್ಣಿನ್ನು ಗುಡ್ಡೆಯ ಸುತ್ತಲೂ ನೋವು ಕಂಡರೆ ಅದನ್ನು ಕ್ಲಸ್ಟರ್ ತಲೆನೋವು ಎಂದು
ಭಾವಿಸುತ್ತಾರೆ. ಇಂತಹ ಸಂಧರ್ಭಗಳಲ್ಲಿ ಅತಿಯಾಗಿ ವಾಂತಿ ಬರುವ ಹಾಗೆ ಆಗುತ್ತದೆ.
4. ಮೆದುಳಿನಲ್ಲಿ ಏನಾದರೂ ಟ್ಯೂಮರ್‍ಗಳಿದ್ದರೂ, ರಕ್ತಸ್ರಾವವು ಆಗುತ್ತಿದ್ದರೂ ತಲೆ ನೋವು ಬರುತ್ತದೆ ಈ ತಲೆ ನೋವು ಒಮ್ಮೆಲೆ ಅಧಿಕ ಪ್ರಮಾಣದಲ್ಲಿ ಬರುತ್ತದೆ. ಇದು ಸುಮಾರು 60 ನಿಮಿಷ ಇರುವುದು ಇದನ್ನು ಬರಿಸಲು ಅಸಾಧ್ಯವಾಗದಂತೆ ಕಂಡುಬರುತ್ತದೆ.


5. ಕೆಲವು ಜನರಿಗೆ ವ್ಯಾಯಮ ಮಾಡಿದರು ..? ಸೆಕ್ಸ್‌ನಲ್ಲಿ ಪಾಲ್ಗೊಂಡರೂ ತಲೆನೋವು ಬರುತ್ತದೆ. ಇದು ಸಾಧಾರಣವಾಗಿ ಬ್ರೈಯಿನ್ ಟ್ಯೂಮರ್‍ಗೆ ಸೇರಿರುವ ಕಾಯಿಲೆ ಆಗಿರುತ್ತದೆ.
6. ಮಂದವಾದ ಅಸ್ಪಷ್ಠವಾದ ನೋಟದಿಂದ ಬರುವ ತಲೆನೋವು ಬ್ರೈಯಿನ್ ಸ್ಟ್ರೋಕ್ ಕಾರಣದಿಂದ ಬರುತ್ತದೆ. ಈ ಸಂಧರ್ಭದಲ್ಲಿ ಒಂದೊಂದು ಸಾರಿ ಮಾತುಗಳು ತೊದಲುವುದು, ಮನಸ್ಸು ಸ್ವಾಧೀನದಲ್ಲಿ ಇರದೇ ಇರುವ ಲಕ್ಷಣಗಳು ಕಾಣಸುತ್ತವೆ.
7. ಮೇಲಿನವುಗಳನ್ನು ಬಿಟ್ಟು ಪದೇ ಪದೇ ತಲೆನೋವು ಬರುತ್ತಿದ್ದರು ಅನುಮಾನಿಸಬೇಕಾಗಿದ್ದೇ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು.
8. 50 ವರ್ಷ ವಯಸ್ಸು ದಾಟಿದವರಲ್ಲಿ ತಲೆನೋವು ಪದೇ ಪದೇ ಬರುತ್ತಿದ್ದರೆ ಅವರ ಮೆದುಳಿನಲ್ಲಿನ ಧಮನಿಗಳ ಕೆಲಸ ಕಡಿಮೆಯಾಗಿದೆ ಎಂದರ್ಥ .
9. ಕತ್ತು ಹಿಡಿದು ಕೊಳ್ಳುವುದು, ಜ್ವರ, ತಲೆನೋವುಗಳಂತಹವುಗಳು ಮೆನಿಂಜೈಟಿಸ್’ಳಂತಹ ದೋಷಗಳೂ ಸಹಜವಾಗಿ ಕಾಣುವ ಲಕ್ಷಣಗಳಾಗಿವೆ.
10. ತಲೆಗೆ ಏನಾದರೂ ಗಾಯವಾದರೂ ಒಂದೊಂದು ಸಾರಿ ತಲೆನೋವು ಬರುತ್ತಿರುತ್ತದೆ. ಇಂತಹ ಸಂಧರ್ಭಗಳಲ್ಲಿ ಮಾನಸಿಕ ಏಕಾಗ್ರತೆ ಸಹ ಸರಿಯಾಗಿ ಇರುವುದಿಲ್ಲ.
11. ಒಮ್ಮೊಮ್ಮೆ ತಲೆನೋವು ಬಂದು 24 ಘಂಟೆಗಳಕಾಲ ಕಡಿಮೆಯಾಗದೆ ಇದ್ದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು.
12. ಕ್ಯಾನ್ಸರ್‍ ಇದ್ದವರಲ್ಲಿ ತಲೆನೋವು ಬರುತ್ತಿದ್ದರೆ ಅದು ಬ್ರೆಯಿನ್ ಟ್ಯೂಮರ್ ಆಗಿ ಪರಿಣಮಿಸುತ್ತದೆ ಎಂದು ಗಮನಿಸಬೇಕು.


Click Here To Download Kannada AP2TG App From PlayStore!

Share this post

scroll to top