ತಂದೆ ತಾಯಿಯರಿಗಾಗಿ ಐದು ವರ್ಷ ಬಾಧೆಯನ್ನು ಸಹಿಸಿಕೊಂಡಳು.!

ತಮ್ಮ ಜೀವನದಲ್ಲಿ ಏನನ್ನಾದರು ಸಾಧಿಸಬೇಕೆಂಬ ಕೋರಿಕೆ ಪ್ರತಿಯೊಬ್ಬರದ್ದೂ ಆಗಿರುತ್ತದೆ. ಅದನ್ನು ನೆರವೆರಿಸಿಕೊಳ್ಳಲು ಎಷ್ಟೇ ಪ್ರಯತ್ನಗಳನ್ನು ಮಾಡಲು ಹಿಂಜರಿಯುವುದಿಲ್ಲ. ಆದರೆ,ಇದು ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲವೆಂದೇ ಹೇಳಬಹುದು. ಏಕೆಂದರೆ…ಒಬ್ಬ ವಿದ್ಯಾರ್ಥಿ ತಾನು ದೊಡ್ಡವನಾದಮೇಲೆ ಡಾಕ್ಟರ್, ಇಂಜಿನಿಯರ್ ಆಗಬೇಕೆಂದುಕೊಂಡರೆ, ತಂದೆ ತಾಯಿಯರು ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಾ ಬೇರೆ ಯಾವುದಾದರು ಇತರೆ ಕೋರ್ಸ್ ಗಳಲ್ಲಿ ಸೇರಿಸುತ್ತಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿ ತಾವು ಅಂದುಕೊಂಡದ್ದನ್ನು ಸಾಧಿಸಲಾಗದೆ ನಿರಾಶೆಯಿಂದ ಯಾವುದೋ ಒಂದು ಕೋರ್ಸ್ ಓದಿ ಉದ್ಯೊಗ ಮಾಡುತ್ತಾ ಜೀವನ ನಡೆಸುತ್ತಾರೆ. ಆದರೆ, ಹೀಗೆ ತನ್ನ ಮನಸಿಗೆ ವಿರುದ್ಧವಾಗಿರಲು ಒಪ್ಪದೆ, ತನಗಿಷ್ಟವಾದ ಕೋರ್ಸ್ ಓದಿ ತನ್ನ ಗುರಿ ತಲುಪಿದಳು. ತಂದೆ ತಾಯಿಯರ ಇಚ್ಛೆಯಂತೆ ಪೋಸ್ಟ್ ಗ್ರಾಜುಯೇಷನ್ ವರೆಗೂ ಓದಿ, ನಂತರ ತನಗಿಷ್ಟವಾದ ಕೋರ್ಸ್ ಓದಲು ಮತ್ತೆ ಗ್ರಾಜುಯೇಷನ್ ನಿಂದ ಪ್ರಾರಂಭಿಸಿ ತನ್ನ ಮನಸ್ಸಿಲ್ಲಿ ಅಂದುಕೊಂಡದ್ದನ್ನು ಸಾಧಿಸಿದಳು.  ಅದಿತಿ ಭಂಡಾರಿ.

ಮಧ್ಯಪ್ರದೇಶ ರಾಜ್ಯದ ನಿವಾಸಿ ಅದಿತಿ ಭಂಡಾರಿಗೆ ಚಿಕ್ಕಂದಿನಿಂದಲೂ ಡಾಕ್ಟರ್ ಆಗಬೇಕೆಂಬ ಆಸೆ. ಈ ನಿಟ್ಟಿನಲ್ಲಿ ಆಕೆ ಪಿಯು ನಂತರ MBSB ಮಾಡಬೇಕೆಂದು ನಿರ್ಣಯಿಸಿದಳು. ಅದಕ್ಕನುಗುಣವಾಗಿಯೆ ದಂತ ವೈದ್ಯ(BDS) ಮಾಡಬೇಕೆಂದು ಅರ್ಜಿ ಹಾಕಿದಳು. ಇದಕ್ಕೆ ಅವಳ ತಂದೆ ತಾಯಿಯರು ಒಪ್ಪಲಿಲ್ಲ. ಅದಕ್ಕೆ ಬದಲಾಗಿ ಮ್ಯಾನೇಜ್ ,ಮೆಂಟ್ ಕೋರ್ಸ್ ಮಾಡೆಂದರು. ಗತ್ಯಂತರವಿಲ್ಲದೆ ಭಂಡಾರಿ ಮೂರು ವರ್ಷ BBM ನಂತರ 2 ವರ್ಷ MBA ಕೂಡಾ ಮಾಡಿದಳು.

ಆ ಐದು ವರ್ಷಗಳೂ ತನ್ನ ಮನಸ್ಸಿಗೆ ತೊಂದರೆಯಾಗಿದ್ದರೂ ತಂದೆ ತಾಯಿಯರ ಪ್ರಕಾರ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿದಳು. MBA ಮಾಡಿದ ನಂತರವೂ ತನ್ನ ಆಸೆಯನ್ನು ಬಿಡಲಿಲ್ಲ. ಹೇಗಾದರೂ ಮಾಡಿ BDS ಪೂರ್ತಿ ಮಾಡಬೇಕೆಂದು ನಿರ್ಣಯಿಸಿದಳು. ಈ ನಿಟ್ಟಿನಲ್ಲಿ ಮತ್ತೊಮ್ಮೆ ತನ್ನ ತಂದೆ ತಾಯಿಯರ ಮನವೊಲಿಸಿ ಅಡ್ಡಿ ಆತಂಕಗಳನ್ನು ಎದುರಿಸಿ BDS ಪೂರ್ಣಗೊಳಿಸಿದಳು. Rank ಗಳೆಂಬ ಭೂತದ ಬೆನ್ನೇರಿರುವ ಇಂದಿನ ಕಾಲದಲ್ಲಿ. ತನ್ನ ಆಶಯವನ್ನು ನೆರವೇರಿಸಿಕೊಂಡ ಅದಿತಿ ಆದರ್ಶಪ್ರಾಯಳಾಗಿ ನಿಲ್ಲುತ್ತಾಳಲ್ಲವೇ?

 


Click Here To Download Kannada AP2TG App From PlayStore!