ಸ್ತ್ರೀಯರಿಗೆ ಬಲವಂತವಾಗಿ ಮುತ್ತಿಟ್ಟರೆ…ಅಪರಾಧಿಯನ್ನು ಸುಲಭವಾಗಿ ಗುರುತಿಸಬಹುದು. ಹೇಗೆಂದು ಗೊತ್ತಾ..?

ಮಹಿಳೆಯರಿಗೆ ಕಿರುಕುಳ ಕೊಟ್ಟರೂ, ಅವರ ಮೇಲೆ ಅತ್ಯಾಚಾರ ನಡೆಸಿದರೂ, ಅಪರಾಧಿಗಳು ನಾವೇನೂ ಮಾಡಿಲ್ಲವೆಂದು ತಪ್ಪಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಅವರನ್ನು ದೋಷಿ ಎಂದು ನಿರೂಪಿಸುವುದೂ ಒಮ್ಮೊಮ್ಮೆ ಕಷ್ಟವಾಗುತ್ತದೆ. ಇದರಿಂದಾಗಿ ಸಂತ್ರಸ್ತರಿಗೆ ನ್ಯಾಯ ದೊರೆಯದೆ ಹಿಂಸೆಯನ್ನು ಅನುಭವಿಸುತ್ತಾರೆ. ಆದರೆ, ಇಂತಹ ಸಂದರ್ಭಗಳಲ್ಲಿ ಅಪರಾಧಿಯು ತಪ್ಪಿಸಿಕೊಳ್ಳದಂತೆ ಮಾಡಿ ಶಿಕ್ಷೆ ಬೀಳುವಂತೆ ಮಾಡಬಹುದು. ಹೀಗೆ ಅಪರಾಧಿಗೆ ಶಿಕ್ಷೆ ಬೀಳಲು ,ಅವರು ಅಪರಾಧ ವೆಸಗಿದ್ದಾರೆ ಎನ್ನುವುದನ್ನು ಶೇ.100 ಸಾಬೀತು ಪಡಿಸಬೇಕು.

ಹಿಂದಿನ ದಿನಗಳಲ್ಲಿ ಈ ವ್ಯವಸ್ಥೆ ಇರಲಿಲ್ಲ ಅದು ಈಗ ಬಂದಿರುವುದರಿಂದ ಅಪರಾಧಿಯ ಕೃತ್ಯವನ್ನು ಸಾಬೀತು ಪಡಿಸುವುದು ಬಹಳ ಸುಲಭ. ಇದಕ್ಕಾಗಿಯೇ ವಿಜ್ಞಾನಿಗಳು ಒಂದು ಹೊಸ ಟೆಕ್ನಾಲಜಿಯನ್ನು ಕಂಡುಹಿಡಿದಿದ್ದಾರೆ. ಅದೇನೆಂದರೆ…

ಸ್ಲೋವೇಕಿಯಾದ ಬ್ರಾಟಿಸ್ ಲಾವದ ಕಾಮೇನಿಯಸ್ ಯೂನಿವರ್ಸಿಟಿ ಸಂಶೋಧಕರು ಈ ನಡುವೆ ಒಂದು ಹೊಸ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಸಹಾಯದಿಂದ ಲೈಂಗಿಕ ಅಪರಾಧಗಳಲ್ಲಿ, ಅಪರಾಧಿಯನ್ನು ದೋಷಿಯಾಗಿ ಸಾಬೀತು ಮಾಡಬಹುದು. ಸದರಿ ಟೆಕ್ನಾಲಜಿಯನ್ನು ಸಂಶೋಧಕರು ಹೇಗೆ ರೂಪಿಸಿದರೆಂದರೆ…ಕೆಲವು ಜೋಡಿಗಳಿಗೆ ತುಟಿಯಿಂದ ತುಟಿಗೆ ಎರಡು ನಿಮಿಷಗಳ ಕಾಲ ಮುತ್ತಿಡುವಂತೆ ಹೇಳಿದರು. ತದನಂತರ ಮಹಿಳೆಯರ ಬಾಯಿಂದ ಎಂಜಲನ್ನು ಸಂಗ್ರಹಿಸಿದರು. ಹೀಗೆ ಮುತ್ತಿಟ್ಟ ನಂತರ 5,10,30,60 ನಿಮಿಷಗಳ ಅವಧಿಯಲ್ಲಿ ಎಂಜಲನ್ನು ಸಂಗ್ರಹಿಸಿದರು. ನಂತರ ಅದನ್ನು ಪರೀಕ್ಷೆಗೆ ಒಳಪಡಿಸಿದರು.

ಈ ರೀತಿ ಸಂಗ್ರಹಿಸಿದ ಮಹಿಳೆಯರ ಎಂಜಲಲ್ಲಿ ಡಿಎನ್ ಎ ಯಲ್ಲಿ ವೈ ಕ್ರೊಮೊಸೋಮ್ ಗಳು ಇರುವುದಾಗಿ ಕಂಡುಬಂದಿತು. ಈ ವೈ ಕ್ರೋಮೋಸೋಮ್ ಗಳು ಕೇವಲ ಪುರುಷರ ಎಂಜಲಲ್ಲಿ ಇರುತ್ತವೆ. ಮುತ್ತಿಡುವಾಗ ಪುರುಷರ ಎಂಜಲು ಸ್ವಲ್ಪ ಸ್ತ್ರೀಯರ ಬಾಯೊಳಗೆ ಹೊಗಿರುತ್ತಲ್ಲವೇ, ಅದರಲ್ಲಿರುವ ವೈ ಕ್ರೊಮೊಸೋಮ್ ಗಳು ಬಹಳ ಸಮಯ ಹಾಗೆ ಉಳಿದಿರುತ್ತವೆ. ಆದುದರಿಂದ ವೈ ಕ್ರೊಮೊಸೋಮ್ ಗಳ ಇರುವಿಕೆಯನ್ನು ಪರೀಕ್ಷಿಸಿದರೆ ಸಾಕು , ಪುರುಷ ಸ್ತ್ರೀಗೆ ಮುತ್ತಿಟ್ಟನೋ ಇಲ್ಲವೋ ಎನ್ನುವುದು ತಿಳಿದು ಬರುತ್ತದೆ. ಹಾಗಾಗಿ ಅಪರಾಧಿಗೆ ಸುಲಭವಾಗಿ ಶಿಕೆ ನೀಡಬಹುದು. ಆದರೆ, ಈ ಟೆಕ್ನಾಲಜಿ ಪರಿಕ್ಷಾ ಹಂತದಲ್ಲಿದೆ. ಇಷ್ಟರಲ್ಲೇ ಪ್ರಜೆಗಳಿಗೆ ದೊರೆಯುವ ಸಾಧ್ಯತೆಯಿದೆ.

 


Click Here To Download Kannada AP2TG App From PlayStore!