ಹೊರಗೆ ಹೊರಡುವ 5 ನಿಮಿಷಕ್ಕೆ ಮೊದಲು ಹೀಗೆ ಮಾಡಿದರೆ ಸುಂದರವಾಗಿ ಕಾಣುವಿರಿ..!!!

ಸಾಮಾನ್ಯವಾಗಿ ಹುಡುಗಿಯರು ಹೊರಗೆ ಹೋಗುವಾಗ ಸುಂದರವಾಗಿ ಕಾಣಿಸಲು ಒಳ್ಳೆಯ ಉಡುಪು ಧರಿಸಿ, ಅಲಂಕರಿಸಿಕೊಂಡು ಹೋಗುತ್ತಾರೆ. ಆದರೆ ಇದು ಹೆಚ್ಚು ಸಮಯ ಇರುವುದಿಲ್ಲ ಅಲ್ಲವೇ?…ಮೇಕಪ್ ಅಳಿಸಿಹೋದಲ್ಲಿ ಅಂದಹೀನವಾಗಿ ಕಾಣಿಸಿಕೊಂಡ ಘಟನೆಗಳೂ ಇವೆ. ಪುನಃ ಮೇಕಪ್ ಹಾಕಿಕೊಳ್ಳುತ್ತಾರೆ…ಹೀಗೆ ಮಾಡುವುದರಿಂದ ತತ್ಕಾಲಕ್ಕೆ ಸರಿಹೋಗುತ್ತದೆ ಆದರೂ…..ವಯಸ್ಸಾದ ನಂತರ ಮುಖದ ಮೇಲೆ ಆ ಚಿನ್ಹೆಗಳು ಹಾಗೆಯೇ ಕಾಣಿಸಿಕೊಳ್ಳುತ್ತವೆ. ಈಗ ನಾವು ಹೇಳುವ ಉಪಾಯಗಳನ್ನು ಅನುಸರಿಸಿದರೆ ನಿಮ್ಮ ವಯಸ್ಸಿಗೆ ಸಂಬಂಧ ಇಲ್ಲದಂತೆ ನೀವು ಸುಂದರವಾಗಿ ಕಾಣುವುದಲ್ಲದೆ ನಿಮ್ಮ ಸೌಂದರ್ಯವನ್ನು ಶಾಶ್ವತವಾಗಿರುವಂತೆ ರಕ್ಷಿಸಿಕೊಳ್ಳಬಹುದು.

ಮೊದಲು ಮುಖವನ್ನು ತೊಳೆದು ಟವೆಲ್ ನಿಂದ ಒರೆಸಿಕೊಳ್ಳಬೇಕು. ನಂತರ ಒಂದು ಬಟ್ಟಲಿನಲ್ಲಿ ಹಸಿ ಹಾಲನ್ನು ತೆಗೆದುಕೊಂಡು ಹಾಲಿನಲ್ಲಿ ಮುಳುಗಿಸಿದ ಹತ್ತಿಯಿಂದ ಮುಖಕ್ಕೆ ಲೇಪಿಸಬೇಕು. ಹೀಗೆ ಮಾಡುವುದರಿಂದ ಚರ್ಮದ ಮೇಲಿರುವ ರಂಧ್ರಗಳು ತೆರೆದುಕೊಂಡು ಮಲಿನವನ್ನು ತೊಲಗಿಸುತ್ತದೆ.

Image result for Skin whitening

ಹಾಲಿನಲ್ಲಿರುವ ಲಾಕ್ಟಿಕ್ ಆಮ್ಲ, ಪೋಷಕಗಳು ಚರ್ಮದ ಮೇಲಿನ ಕಪ್ಪು ಕಲೆಯನ್ನು ತೊಲಗಿಸಿ ಮುಖವನ್ನು ಕಾಂತಿಯುತವಾಗಿಸುತ್ತವೆ. ಮುಖಕ್ಕೆ ಹಾಲನ್ನು ಹಚ್ಚಿದ 5 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಬೇಕು. ನಂತರ ಬಟ್ಟಲಿನಲ್ಲಿ 2 ಚಮಚ ಬಾಂಬೆ ರವೆಯನ್ನು ಹಾಕಿ ಅದಕ್ಕೆ ಸರಿಹೊಂದುವಷ್ಟು ಹಾಲನ್ನು ಬೆರಸಿ ಪೇಸ್ಟ್ ತಯಾರಿಸಿಕೊಳ್ಳಬೇಕು.

Related image

ಈ ಪೇಸ್ಟನ್ನು ಮುಖಕ್ಕೆ ಲೇಪಿಸಿ ಮೃದುವಾಗಿ ಸ್ಕ್ರಬ್ಬಿಂಗ್ ಮಾಡಬೇಕು.ಸ್ಕ್ರಬ್ಬಿಂಗ್ ನ ನಂತರ 2 ಚಮಚ ಅಕ್ಕಿಹಿಟ್ಟು, 1 ಚಮಚ ಮೈದಾ ಹಿಟ್ಟು, 1 ಚಮಚ ಟೊಮ್ಯಾಟೊ ರಸ ಹಾಗೂ ಸರಿಹೊಂದುವಷ್ಟು ಹಸಿ ಹಾಲಿನಿಂದ ತಯಾರಿಸಿದ ಮಿಶ್ರಣದಿಂದ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕು.

Related image

ಹೀಗೆ ಮಾಡುವುದರಿಂದ ಕಪ್ಪು ಕಲೆಗಳು, ಮೃತ ಕಣಗಳು ನಶಿಸಿ ಚರ್ಮವು ಬಿಳುಪಾಗುತ್ತದೆ. ಮುಖವು ಕಾಂತಿಯುತವಾಗಿ ಬದಲಾಗುತ್ತದೆ. ಮುಖವು ಹೆಚ್ಚು ಸಮಯ ತಾಜಾ ಆಗಿರಲು ಐಸ್ ಕ್ಯೂಬ್ ನಿಂದ ಮುಖವನ್ನು ಉಜ್ಜುವುದರಿಂದ ಚೆನ್ನಾಗಿ ರಕ್ತ ಪ್ರಸರಣೆ ಆಗಿ ಮುಖದಲ್ಲಿ ಮತ್ತಷ್ಟು ಹೊಳಪು ಮೂಡುತ್ತದೆ ಹಾಗೂ ಹೆಚ್ಚು ಸಮಯ ತಾಜಾ ಆಗಿರುತ್ತದೆ…..ಇನ್ನು ಮೇಲೆ ಹೊರಗೆ ಅಥವಾ ಸಮಾರಂಭಗಳಿಗೆ ಹೋಗುವಾಗ ತಪ್ಪದೇ ಈ ವಿಧಾನವನ್ನು ಅನುಸರಿಸಿ. ಹುಡುಗಿಯರೇ ಅಲ್ಲ….ಹುಡುಗರು ಸಹಾ ಹೀಗೆ ಮಾಡಬಹುದು.

Image result for Skin whitening


Click Here To Download Kannada AP2TG App From PlayStore!