ನಿಮ್ಮ ಫೋನ್‌ನಲ್ಲಿರುವ ಈ ಫೀಚರ್ ಆನ್ ಮಾಡಿದರೆ ಸಾಕು. ನಿಮ್ಮ ಫೋನನ್ನು ಇತರರು ತೆಗೆದುಕೊಂಡರೂ ಏನೂ ಮಾಡಲ್ಲ ಗೊತ್ತಾ..?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಇಂದು ಕಾಮನ್ ಆಗಿಹೋಗಿದೆ. ಯಾರ ಕೈಯಲ್ಲಿ ನೋಡಿದರೂ ಅವು ದರ್ಶನ ನೀಡುತ್ತಿವೆ. ಇದರಿಂದ ಅವರು ಅನೇಕ ಕೆಲಸಗಳನ್ನು ಮಾಡಿಕೊಳ್ಳುವಂತಾಗಿದೆ. ಅದು ಬೇರೆ ವಿಷಯ. ಆದರೆ ಸ್ಮಾರ್ಟ್‌ಫೋನ್ ಎಂದ ಮೇಲೆ ಕೇವಲ ನಾವಷ್ಟೇ ಬಳಸುತ್ತೇವಾ..? ಎಂದರೆ…ನಾಲ್ಕು ಮಂದಿ ಜತೆ ಇದ್ದಾಗ, ನಾಲ್ಕು ಮಂದಿಯನ್ನು ಬೆರೆತಾಗ ನಮ್ಮ ಫೋನ್ ಒಮ್ಮೊಮ್ಮೆ ಬೇರೆಯವರ ಕೈಗೂ ನೀಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಕೆಲವರು ಫೋನ್ ಕೊಡಲು ಹಿಂದೇಟಾಕುತ್ತಾರೆ. ತಮ್ಮ ಫೋನ್‌ನಲ್ಲಿರುವ ಮಾಹಿತಿಯನ್ನು ಹೊರಗಿನ ವ್ಯಕ್ತಿ ನೋಡುತ್ತಾನೇನೋ, ಇನ್ನೇನಾದರೂ ನಡೆಯುತ್ತದೇನೋ ಎಂಬ ಸಂದೇಹ ಬರುತ್ತದೆ. ಅದಕ್ಕಾಗಿ ಕೆಲವರು ಅನುಮಾನಪಡುತ್ತಾ ತಮ್ಮ ಫೋನನ್ನು ಇತರರ ಕೈಗೆ ನೀಡುತ್ತಾರೆ. ನಿಜ ಹೇಳಬೇಕೆಂದರೆ ಆ ರೀತಿ ಅನುಮಾನಪಡುತ್ತಾ ನೀವು ಬೇರೆಯವರಿಗೆ ಫೋನ್ ಕೊಡಬೇಕಾಗಿಲ್ಲ. ಯಾಕೆಂದರೆ ಆಂಡ್ರಾಯ್ಡ್ ಫೋನಲ್ಲಿ ಒಂದು ಫೀಚರ್ ಇದೆ. ಅದನ್ನು ಆನ್ ಮಾಡಿಕೊಂಡರೆ ಸಾಕು, ನೀವು ಫೋನನ್ನು ಹೊರಗಿನ ವ್ಯಕ್ತಿಗೆ ಕೊಟ್ಟರೂ ಅವರು ನಿಮ್ಮ ಮಾಹಿತಿಯನ್ನು ನೋಡಲು ಸಾಧ್ಯವಾಗಲ್ಲ. ಹಾಗಿದ್ದರೆ ಆ ಫೀಚರ್ ಯಾವುದು..? ಅದನ್ನು ಹೇಗೆ ಆಕ್ಟಿವೇಟ್ ಮಾಡಬೇಕೆಂದರೆ..!

ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೆಸ್ಟ್ ಮೋಡ್ ಎಂಬ ಫೀಚರ್ ಒಂದಿದೆ. ಅದನ್ನು ಆನ್ ಮಾಡಬೇಕೆಂದರೆ… ಫೋನ್ ಮೇಲಿನ ನೋಟಿಫಿಕೇಷನ್ ಬಾರನ್ನು ಕೆಳಗೆ ಎಳೆಯಬೇಕು. ಅಲ್ಲಿ ನಿಮಗೆ ಬ್ಯಾಟರಿ ಪರ್ಸಂಟೇಜ್, ಸೆಟ್ಟಿಂಗ್ಸ್ ಐಕಾನ್ ಪಕ್ಕದಲ್ಲಿ ಯೂಸನ್ ಐಕಾನ್ ಇರುತ್ತದೆ. ಅದನ್ನು ಓಪನ್ ಮಾಡಬೇಕು. ಕೆಳಗಿನ ಆಯ್ಕೆಗಳು ಕಾಣಿಸುತ್ತವೆ. ಅವುಗಳಲ್ಲಿ ಸದ್ಯಕ್ಕೆ ಫೋನ್ ಬಳಸುತ್ತಿರುವ ಯೂಸರ್ ಹೆಸರು (ನಿಮ್ಮ ಹೆಸರು) ಇರುತ್ತದೆ. ಅದರ ಪಕ್ಕದಲ್ಲೇ ಗೆಸ್ಟ್ ಎಂದಿರುತ್ತದೆ. ಅದರ ಪಕ್ಕದಲ್ಲೇ ಆಡ್ ಯೂಸರ್ ಎಂಬ ಆಯ್ಕೆ ಇರುತ್ತದೆ. ಇವುಗಳಲ್ಲಿ ಗೆಸ್ಟ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಫೋನ್ ಆಟೋಮೆಟಿಕ್ ಆಗಿ ಗೆಸ್ಟ್ ಮೋಡ್‌ಗೆ ಹೋಗುತ್ತದೆ. ಇನ್ನು ಆ ಬಳಿಕ ನಿಮ್ಮ ಫೋನನ್ನು ಬೇರೆಯವರಿಗೆ ಕೊಟ್ಟರೂ ಅವರು ನಿಮ್ಮ ಫೋನ್‌ನಲ್ಲಿರುವ ಫೋಟೋಗಳು, ಕರೆಗಳು, ಎಸ್‍ಎಂಎಸ್‌ನಂತಹ ಮಾಹಿತಿ ನೋಡಲು ಸಾಧ್ಯವಾಗಲ್ಲ. ಅವೆಲ್ಲಾ ಖಾಲಿಯಾಗಿ ಕಾಣಿಸುತ್ತವೆ. ಆದರೆ ಎಸ್‌ಡಿ ಕಾರ್ಡ್‌ನಲ್ಲಿರುವ ಫೋಟೋಗಳು, ವಿಡಿಯೋಗಳನ್ನು, ಇತರೆ ವಿವರಗಳು ಮಾತ್ರ ಕಾಣಿಸುತ್ತವೆ.

ಮೇಲೆ ತಿಳಿಸಿದ ಗೆಸ್ಟ್ ಮೋಡನ್ನು ಸೆಟ್ಟಿಂಗ್ಸ್‌ಗೆ ಹೋಗಿ ಪ್ರೈವಸಿ ವಿಭಾಗದಲ್ಲಿ ಯೂಸರ್ಸ್ ಎಂಬ ಸೆಕ್ಷನ್‌ನಲ್ಲಿ ಸಹ ಆಕ್ಸೆಸ್ ಮಾಡಬಹುದು. ಆದರೆ ಫೋನನ್ನು ಅವಲಂಭಿಸಿ ಗೆಸ್ಟ್ ಮೋಡ್ ಫೀಚರ್ ಲೋಕೇಷನ್ ಬದಲಾಗುತ್ತಿರುತ್ತದೆ. ಕೆಲವು ಫೋನ್‌ಗಳಲ್ಲಿ ಈ ಫೀಚರ್ ಇಲ್ಲದಿರಬಹುದು. ಇನ್ನು ಗೆಸ್ಟ್ ಮೋಡ್‌ನಲ್ಲಿರುವವರು ಅದನ್ನು ಡೀಆಕ್ಟಿವೇಟ್ ಮಾಡಿಕೊಂಡು ನಾರ್ಮಲ್ ಯೂಸರ್ ತರಹ ಬದಲಾಯಿಸಿಕೊಳ್ಳಬಹುದಲ್ಲವೇ…ಅಂತ ನಿಮಗೆ ಒಂದು ಸಣ್ಣ ಡೌಟ್ ಬಂದೇ ಇರುತ್ತದೆ. ಆದರೆ ಅದು ಸಾಧ್ಯವಾಗಲ್ಲ. ಯಾಕೆಂದರೆ ಆ ರೀತಿ ಮಾಡಬೇಕಾದರೆ ನೀವು ಅದಕ್ಕೂ ಮುನ್ನ ಫೋನ್‌ಗೆ ಇಟ್ಟುಕೊಂಡ ಪ್ಯಾಟ್ರನ್ ಅಥವಾ ಪಿನ್, ಪಾಸ್‌ವರ್ಡ್ ಲಾಕ್ ಕೇಳುತ್ತದೆ. ಅದು ನಿಮಗಷ್ಟೇ ಗೊತ್ತು, ಬೇರೆಯವರಿಗೆ ಗೊತ್ತಿರಲ್ಲ. ಆದಕಾರಣ ಗೆಸ್ಟ್ ಮೋಡನ್ನು ಡೀಆಕ್ಟಿವೇಟ್ ಮಾಡಲು ಸಾಧ್ಯವಾಗಲ್ಲ. ಇನ್ನು ಅವರಿಂದ ಫೋನ್ ತೆಗೆದುಕೊಂಡು ಮತ್ತೆ ಮೇಲೆ ತಿಳಿಸಿದಂತೆ ಆಪ್ಷನ್ಸ್ ಒಳಗೆ ಹೋಗಿ ಗೆಸ್ಟ್ ಮೇಲೆ ಟಚ್ ಮಾಡಿ ರಿಮೂವ್ ಗೆಸ್ಟ್ ಎಂದು ಕಾಣಿಸುವ ಆಪ್ಷನನ್ನು ಆಯ್ಕೆ ಮಾಡಿಕೊಂಡರೆ ಸಾಕು, ಗೆಸ್ಟ್ ಮೋಡ್ ಆಫ್ ಆಗುತ್ತದೆ. ಆಗ ನೀವು ಪಾಸ್‌ವರ್ಡ್, ಪಿನ್, ಪ್ಯಾಟ್ರನ್ ಎಂಟರ್ ಮಾಡಬೇಕಾಗುತ್ತದೆ. ಇದರಿಂದ ಗೆಸ್ಟ್ ಮೋಡ್‌ನಿಂದ ಹೊರಬೀಳಬಹುದು. ..! ಗೊತ್ತಾಯಿತಲ್ಲವೇ… ಆಂಡ್ರಾಯ್ಡ್ ಫೋನ್‌ಗಳಲ್ಲಿರುವ ಗೆಸ್ಟ್ ಮೋಡ್ ಬಗ್ಗೆ. ಆದಕಾರಣ ಇನ್ನು ಮುಂದೆ ನೀವು ಫೋನ್ ಯಾರಿಗಾದರೂ ಕೊಡಬೇಕೆಂದುಕೊಂಡರೆ ಗೆಸ್ಟ್ ಮೋಡ್ ಆನ್ ಮಾಡಿ ಯಾವುದೇ ಭಯವಿಲ್ಲದಂತೆ ಅವರಿಗೆ ಫೋನ್ ಕೊಡಬಹುದು..!