ಕೋಹ್ಲಿ,ಮೋದಿ,ಒಬಾಮಾ,ಬಿಲ್ಗೇಟ್ಸ್…ಇವರೆಲ್ಲರೂ ಬೆಳಿಗ್ಗೆ ನಿದ್ದೆಯಿಂದ ಎಷ್ಟು ಗಂಟೆಗೆ ಏಳುತ್ತಾರೋ ಗೊತ್ತಾ?

ಪ್ರತಿ ದಿನವೂ ಧಾವಂತದ ಅವಿಶ್ರಾಂತ ಜೀವನ…ಬೆಳಿಗ್ಗೆ ನಿದ್ದೆಯಿಂದ ಏಳುವುದರಿಂದ ಮೊದಲ್ಗೊಂಡು ರಾತ್ರಿ ಮಲಗುವವರೆಗೂ ಹಲವು ತೆರನಾದ ಒತ್ತಡಗಳು…. ಇದು ಸಾಲದೆಂಬಂತೆ ಪ್ರತಿ ದಿನವೂ ತಲೆದೋರುವ ವಿವಿಧ ಸಮಸ್ಯೆಗಳು…ಇವೆಲ್ಲದರ ಜೊತೆಗೆ ಕೈಯಲ್ಲಿ ಸ್ಮಾರ್ಟ್ ಫೋನುಗಳು…ಇವೆಲ್ಲವೂ ಇಂದು ಮಾನವನ ನಿದ್ರಾಹೀನತೆಗೆ ಕಾರಣವಾಗುತ್ತಿವೆ. ಇದರಿಂದಾಗಿ ರಾತ್ರಿ 1,2 ಗಂಟೆಗಳಾಗುವವರೆಗೂ ಅನೇಕರು ನಿದ್ರೆಮಾಡುತ್ತಿಲ್ಲ.ನಂತರ ಹಾಸಿಗೆ ಮೇಲೆ ಬಿದ್ದುಕೊಳ್ಳುತ್ತಾರೆ.ಹೀಗಾಗಿ ಬೆಳಿಗ್ಗೆ ತಡವಾಗಿ ಏಳುತ್ತಿದ್ದಾರೆ.ಬೆಳಿಗ್ಗೆ ತಡವಾಗಿ ಏಳುವುದರಿಂದ ಕೇವಲ ಆರೋಗ್ಯವನ್ನಲ್ಲದೆ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಲವು ವಿಜ್ಞಾನಿಗಳು ಮಾಡಿದ ಪರಿಶೋಧನೆಗಳಿಂದ ಇದು ತಿಳಿದು ಬಂದಿದೆ.ಮನುಷ್ಯ ಪ್ರತಿ ದಿನ ಕಷ್ಟಪಟ್ಟು ದುಡಿಯುವುದಲ್ಲದೆ,ಸರಿಯಾದ ಸಮಯಕ್ಕೆ ನಿದ್ದೆ ಮಾಡಿ,ಸರಿಯಾದ ಸಮಯಕ್ಕೆ ಏಳಬೇಕಂತೆ.ಅಂತಹವರಿಗೆ ಹಲವು ರೀತಿಯ ಲಾಭವುಂಟಾಗುತ್ತಂತೆ.ತಡವಾಗಿ ನಿದ್ದೆಯಿಂದ ಏಳುವುದರಿಂದ ನಾವು ಕೆಲಸ ಮಾಡಬೇಕಾದ ಹಲವು ಗಂಟೆಗಳು ನಷ್ಟವಾದಂತೆ ಎಂದು ವಿಜ್ಞಾನಿಗಳ ಅಭಿಪ್ರಾಯ.ಹೀಗಾಗಿ ವಿಶ್ವದೆಲ್ಲೆಡೆ ಗಣ್ಯರು ಬೆಳಿಗ್ಗೆ ಬೇಗನೆ ನಿದ್ದೆಯಿಂದ ಏಳುವುದರಿಂದಲೇ ಅಂತಹ ಉನ್ನತ ಮಟ್ಟಕ್ಕೇರಲು ಸಾಧ್ಯವಾಯಿತೆಂದು ವಿಜ್ಞಾನಿಗಳು ಹೇಳುತ್ತಾರೆ.

ಪ್ರಪಂಚದೆಲ್ಲಡೆ ಇರುವ ಸೆಲೆಬ್ರಿಟಿಗಳಲ್ಲಿಕೆಲವರು ಬೆಳಿಗ್ಗೆ ಎಷ್ಟು ಗಂಟೆಗೆ ನಿದ್ದೆಯಿಂದ ಎದ್ದು ಏನೇನು ಮಾಡುತ್ತಾರೆಂದು ತಿಳಿದುಕೊಳ್ಳೋಣ.

*ಸೆಲಬ್ರೆಟೀಸ್-1.

*ಜಾಕ್ಮಾ,ಆಲೀಬಾಬಾ ಗ್ರೂಪ್ ಸಂಸ್ಥಾಪಕ.
ಇವರು ಬೆಳಿಗ್ಗೆ 6-7ಗಂಟೆಗಳಿಗೆ ನಿದ್ದೆಯಿಂದ ಏಳುತ್ತಾರಂತೆ.ಅಲ್ಲದೆ ಆ ಒಡನೆಯೇ ಕೆಲಸದಲ್ಲಿ ತೊಡಗುತ್ತಾರಂತೆ.

*ಜೆಫ್ಬೆಜೋಸ್.ಅಮೇಜಾನ್ ಸಿ.ಇ.ಓ
ಇಡೀದಿನ ಕಚೇರಿಯಲ್ಲೇ ಕೆಲಸ ಮಾಡಲು ಆದ್ಯತೆ ನೀಡುತ್ತಾರಂತೆ.ರಾತ್ರಿ ವೇಳೆ ಎಷ್ಟೇ ಕೆಲಸವಿದ್ದರೂ ಬದಿಗಿರಿಸಿ ನಿದ್ದೆ ಮಾಡುತ್ತಾರಂತೆ.ನಸುಕಿನಲ್ಲಿ ಎದ್ದು ಕೆಲಸ ಪ್ರಾರಂಭಿಸುತ್ತಾರಂತೆ.

*ಟಿಮ್ಮುಕ್ಕ್, ಆಪಲ್ ಸಿ.ಇ.ಓ.
ನಸುಕಿನ ಜಾವ 4.30 ಗಂಟೆಗೆ ಎದ್ದ ಕೂಡಲೇ ಮೈಲ್ ಗಳನ್ನು ನೋಡುತ್ತಾರಂತೆ.ನಂತರ ವ್ಯಾಯಾಮ,ಅದರ ನಂತರವೇ ಉಪಹಾರ ಮುಗಿಸಿ ಎಲ್ಲರಿಗಿಂತಲೂ ಮೊದಲೇ ಆಫೀಸಿಗೆ ಬಂದು ಕೆಲಸಗಳನ್ನು ಮುಗಿಸಿ ಎಲ್ಲರೂ ಹೊರಟ ನಂತರವೇ ಮನೆಗೆ ಹೋಗುತ್ತಾರಂತೆ.

*ಬಿಲ್ಗೇಟ್ಸ್,ಮೈಕ್ರೋಸಾಫ್ಟ್ ಸಂಸ್ಥಾಪಕ.
ಇವರೂ ಸಹ ಬೆಳಿಗ್ಗೆ ಬೇಗನೆದ್ದು ಟ್ರೆಡ್ ಮಿಲ್ನಲ್ಲಿ ತಾಲೀಮು ಮಾಡಿ ನಂತರ ಆಫೀಸಿನ ಕೆಲಸ ಪ್ರಾರಂಭಿಸುತ್ತಾರಂತೆ.

*ಮಾರ್ಕ್ ಜುಕರ್ ಬರ್ಗ್,ಫೇಸ್ಬುಕ್ ಸಿ.ಇ.ಓ.
ಗುಡುಗು ಸಿಡಿಲುಗಳನ್ನು ಲೆಕ್ಕಿಸದೆ ಬೆಳಿಗ್ಗೆ 6 ಗಂಟೆಗೆ ಎದ್ದು ,ಕೆಲಸಗಳನ್ನುಮುಗಿಸಿ ಆಫೀಸಿಗೆ ಹೋಗುತ್ತಾರಂತೆ.ರಾತ್ರಿ ತಡವಾಗಿ ಮಲಗಿದರೂ ಬೆಳಿಗ್ಗೆಯೇ ಏಳುತ್ತಾರಂತೆ.

*ರಿಚರ್ಡ್ ಬ್ರಾನ್ಸನ್, ವರ್ಜಿನ್ ಗ್ರೂಪ್ ಸಂಸ್ಥಾಪಕ.
ಇವರು ಬೆಳಿಗ್ಗೆ ಎದ್ದ ಕೂಡಲೇ ಈಜು ಹೊಡೆಯುತ್ತಾರಂತೆ.ನಂತರ ಉಪಹಾರ ಸೇವಿಸಿ ಆಫೀಸಿಗೆ ಹೊರಡುತ್ತಾರಂತೆ.

*ವಾರೆನ್ ಬಫೆಟ್, ಬೆರ್ಕ್ಷೈರ್ಹಾತ್ವೇ ಸಿ.ಇ.ಓ.
ಬೆಳಿಗ್ಗೆ 6.45 ಕ್ಕೆ ನಿದ್ದೆಯಿಂದ ಏಳುತ್ತಾರೆ.ಕಾರ್ಯಕ್ರಮಗಳೇನೂ ಇಲ್ಲದಿದ್ದಲ್ಲಿ,6 ದಿನ ಪತ್ರಿಕೆಗಳನ್ನು ಓದುತ್ತಾರೆ.ದಿನದ ಶೇಕಡಾ 80 ಸಮಯವನ್ನು ಓದುವುದಕ್ಕಾಗಿಯೇ ಮೀಸಲಿಡುತ್ತಾರೆ.

*ರತನ್ ಟಾಟಾ,ಟಾಟಾ ಸನ್ಸ್ ಮಾಜಿ ಅಧ್ಯಕ್ಷ.
ರಾತ್ರಿ ಎಷ್ಟೇ ತಡವಾಗಿ ಮಲಗಿದರೂ ಬೆಳಿಗೆ 6 ಗಂಟೆಗೆ ನಿದ್ದೆಯಿಂದ ಏಳುತ್ತಾರಂತೆ.ಒಡನೆಯೇ ಆಫೀಸಿನ ಕೆಲಸ ಪ್ರಾರಂಭಿಸುತ್ತಾರಂತೆ. ವಾರಾಂತ್ಯ ಗಳಲ್ಲಿ ಕಾರು ಅಥವ ಜೆಟ್ ವಿಮಾನ ನಡೆಸುತ್ತಾರಂತೆ.

*ಮುಖೇಷ್ ಅಂಬಾನಿ,ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ.
ಬೆಳಿಗ್ಗೆ 5-5.30 ರ ಮಧ್ಯೆ ಏಳುತ್ತಾರೆ.ಜಿಮ್ ನಲ್ಲಿ ತಾಲೀಮು ಮಾಡಿ,ನಂತರ ಸ್ವಲ್ಪ ಸಮಯ ಈಜಾಡಿ,ದಿನ ಪತ್ರಿಕೆ ಓದಿ ಆಫೀಸಿಗೆ ಹೊರಡುತ್ತಾರಂತೆ.

**ಸೆಲಬ್ರೆಟೀಸ್-2


ಓ ಫ್ರಾವಿನ್ಫ್ರೇ,ಪ್ರಮುಖ ಟೀವಿ ಆಂಕರ್.
ಬೆಳಿಗ್ಗೆ 20 ನಿಮಿಷ ಧ್ಯಾನ ಮಾಡಿ,ನಂತರ ಜಿಮ್ ನಲ್ಲಿ ವ್ಯಾಯಾಮ ಮಾಡಿ ಆನಂತರವೇ ಮಿಕ್ಕೆಲ್ಲ ಕೆಲಸಗಳನ್ನು ಮಾಡುತ್ತಾರಂತೆ.
*ನರೇಂದ್ರ ಮೋದಿ, ಭಾರತದ ಪ್ರಧಾನಿ.
ಬೆಳಿಗ್ಗೆ 5 ಗಂಟೆಗೆ ನಿದ್ರೆಯಿಂದ ಏಳುತ್ತಾರೆ.ಪ್ರಾಣಾಯಾಮ,ಸೂರ್ಯ ನಮಸ್ಕಾರ,ಯೋಗ ಮಾಡಿನಂತರವೇ ದಿನಚರಿ ಪ್ರಾರಂಭವಾಗುತ್ತದಂತೆ.

*ವಿರಾಟ್ ಕೋಹ್ಲಿ. ಭಾರತದ ಕ್ರಿಕೆಟಿಗ.
ಬೆಳಿಗ್ಗೆ 6 ಗಂಟೆಗೆ ಏಳುತ್ತಾರೆ.ಅನೇಕ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ.ಮಾಂಸ ಖಂಡಗಳನ್ನು ಬೆಳೆಸಲು ವೈಟ್ ಲಿಫ್ಟಿಂಗ್ ಮಾಡುತ್ತಾರೆ.ನಂತರ ಕ್ರಿಕೆಟ್ ಅಭ್ಯಾಸದಲ್ಲಿ ತೊಡಗುತ್ತಾರೆ.
* ಬರಾಕ್ ಒಬಾಮಾ,ಅಮೆರಿಕಾ ಪ್ರೆಸಿಡೆಂಟ್.
ಬೆಳಿಗ್ಗೆ 6.30 ಕ್ಕೆ ಹಾಸಿಗೆಯಿಂದ ಎದ್ದ ಕೂಡಲೇ ಜಿಮ್ ಗೆ ಹೋಗುತ್ತಾರಂತೆ.ನಂತರ ಕುಟುಂಬದವರೊಡನೆ ಕೂಡಿ ಉಪಹಾರ ಸೇವಿಸಿ ದಿನ ಚರ್ಯೆ ಪ್ರಾರಂಬಿಸುತ್ತಾರಂತೆ.


Click Here To Download Kannada AP2TG App From PlayStore!

Share this post

scroll to top