ಬೀರ್ ಯೋಗ ಹೇಗೆ ಮಾಡುತ್ತಾರೆ ನಿಮಗೆ ಗೊತ್ತಾ..?

ಯೋಗಾದಿಂದ ನಮಗೆ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂದು ಎಲ್ಲರಿಗೂ ಗೊತ್ತು. ಇದರಿಂದ ದೈಹಿಕವಾಗಿ ಅಲ್ಲದೆ, ಮಾನಸಿಕವಾಗಿಯೂ ನಮಗೆ ಉಲ್ಲಾಸ ಸಿಗುತ್ತದೆ. ಒತ್ತಡ, ಆತಂಕ ದೂರವಾಗುವಾಗುತ್ತದೆ. ಅದೆಷ್ಟೊ ರೀತಿಯ ಅನಾರೋಗ್ಯ ಸಮಸ್ಯೆಗಳು ಸಹ ದೂರವಾಗುತ್ತವೆ. ಆದರೆ ಯೋಗಾ ಎಂದರೆ… ಅದರಲ್ಲಿ ಎಷ್ಟೋ ರೀತಿಯ ಆಸನಗಳು ಇವೆ. ಕೇವಲ ಗುರುಗಳು ಮಾತ್ರ ಎಲ್ಲಾ ರೀತಿಯ ಆಸನಗಳನ್ನು ಮಾಡುತ್ತಾರೆ. ಅಷ್ಟೂ ಆಸನಗಳನ್ನು ಮಾಡುವವರು ಕೇಲವ ಕೆಲವರು ಮಾತ್ರ ಇರುತ್ತಾರೆ. ಈಗ ಯೋಗಾದಲ್ಲಿ ಇರುವ ಎಲ್ಲಾ ಆಸನಗಳ ಜತೆಗೆ ಒಂದು ಹೊಸ ರೀತಿಯ ಆಸನ ಮಾಡುವ ವಿಧಾನ ಟ್ರೆಂಡಿಂಗ್‌ನಲ್ಲಿದೆ. ಅದೇ ಬೀರ್ ಯೋಗಾ..! ಮೊದಲು ವಿದೇಶಗಳಲ್ಲಿ ಆರಂಭವಾದ ಈ ಟ್ರೆಂಡ್ ಈಗ ನಮ್ಮ ದೇಶಕ್ಕೂ ಅಡಿಯಿಟ್ಟಿದೆ. ಇಷ್ಟಕ್ಕೂ ಬೀರ್ ಯೋಗಾ ಎಂದರೇನು…?

beer-yoga-1

ಬೀರ್ ಯೋಗಾ ಎಂದರೆ ಏನೂ ಇಲ್ಲ… ಸಾಮಾನ್ಯವಾಗಿ ಮಾಡುವ ಯೋಗಾಸನಗಳೇ..! ಹೊಸ ಆಸನ ಏನೂ ಅಲ್ಲ. ಆದರೆ ಬೀರ್ ಕುಡಿಯುತ್ತಾ, ಬೀರ್ ಬಾಟಲಿಯನ್ನು ಬ್ಯಾಲೆನ್ಸ್ ಮಾಡುತ್ತಾ ಯೋಗಾ ಮಾಡುತ್ತಾರೆ ಅಷ್ಟೆ..! ಹಾಗಾಗಿ ಅದಕ್ಕೆ ಬೀರ್ ಯೋಗಾ ಎಂಬ ಹೆಸರು ಬಂದಿದೆ. ಮೊದಲು ಇದನ್ನು ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ದೇಶಗಳಲ್ಲಿ ಆರಂಭಿಸಿದರು. ಅಲ್ಲಿ ಇದಕ್ಕಾಗಿ ವಿಶೇಷ ತರಗತಿಗಳನ್ನು ಸಹ ಮಾಡುತ್ತಿದ್ದರು. ಇದು ಮುಖ್ಯವಾಗಿ ಯುವಕರಿಗೆ ತುಂಬಾ ಇಷ್ಟವಾದ ಕಾರಣ ಈಗ ಕ್ರಮವಾಗಿ ಪಾಪ್ಯುಲರ್ ಆಗುತ್ತಿದೆ. ನಮ್ಮ ದೇಶದಲ್ಲೂ ಬೀರ್ ಯೋಗ ಈಗ ಟ್ರೆಂಡ್ ಆಗುತ್ತಿದೆ.

ಸಾಮಾನ್ಯವಾಗಿ ಬೀರ್ ಎಂದರೆ ತುಂಬಾ ಕ್ಯಾಲರಿಗಳ ಶಕ್ತಿ ಇರುತ್ತದೆ ಅದರಲ್ಲಿ. ಈ ಹಿನ್ನೆಲೆಯಲ್ಲಿ ಬೀರ್ ಕುಡಿದರೆ ಆ ಶಕ್ತಿ ನಮಗೆ ಸಿಗುತ್ತದೆ. ಆದರೆ ವ್ಯಾಯಾಮ ಮಾಡಿದರೆ ಮಾತ್ರ ಆ ಶಕ್ತಿ ಖರ್ಚಾಗುತ್ತದೆ. ಆ ರೀತಿ ಮಾಡಲಿಲ್ಲ ಎಂದರೆ ಅದೆಲ್ಲಾ ಕೊಬ್ಬಾಗಿ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಕಡೆ ಬೀರ್ ಕುಡಿಯುತ್ತಾ, ಇನ್ನೊಂದು ಕಡೆ ಯೋಗ ಮಾಡಿದರೆ ಬೀರ್ ಕಿಕ್ ಜತೆಗೆ ಯೋಗಾದಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಆದಕಾರಣ ಬಹಳಷ್ಟು ಮಂದಿ ಯೋಗಾದಲ್ಲಿ ಈ ಹೊಸ ವಿಧಾನವನ್ನು ಈಗೀಗ ಅನುಸರಿಸುತ್ತಿದ್ದಾರೆ. ಇದರ ಭಾಗವಾಗಿ..ಈಗ ನಮ್ಮಲ್ಲಿ ಬಹಳಷ್ಟು ಪಬ್‌ಗಳು, ಲಾಂಜ್‌ಗಳು ವಿಶೇಷವಾದ ಬೀರ್ ಯೋಗಾ ತರಗತಿಗಳನ್ನು ಹೇಳಿಕೊಡುತ್ತಿವೆ..! ಹೊಸದಾಗಿ ಏನೇ ಬಂದರೂ ಅದು ನಮಗೆ ವಿಚಿತ್ರ ಅಲ್ಲವೇ…! ಅದನ್ನು ಆಚರಿಸುವವರೆಗೂ ನಿದ್ದೆ ಮಾಡಲ್ಲ..!


Click Here To Download Kannada AP2TG App From PlayStore!