ಕೋಳಿಮೊಟ್ಟೆಯನ್ನು ಎಷ್ಟು ನಿಮಿಷ ಬೇಯಿಸಿದರೆ ಒಳ್ಳೆಯದು ಗೊತ್ತೇ?

ಕೋಳಿಮೊಟ್ಟೆಯನ್ನು ಇಷ್ಟಪಡದವರು ಯಾರಿರುತ್ತಾರೆ? ಎಲ್ಲರಿಗೂ ಇಷ್ಟವೇ. ಕೆಲವರು ಅದನ್ನು ಬೇಯಿಸಿ ತಿಂದರೆ ಕೆಲವರು ಆಮ್ಲೆಟ್ ಮಾಡಿಕೊಂಡು, ಇನ್ನೂ ಕೆಲವರು ಸಾರು ಮಾಡಿಕೊಂಡು ತಿನ್ನುತ್ತಾರೆ. ಆದರೆ ಯಾರು ಹೇಗೆ ತಿಂದರೂ ಬೇಯಿಸಿದ ಮೊಟ್ಟೆ ವಿಷಯದಲ್ಲಿ ಮಾತ್ರ ನಾವು ಒಂದು ವಿಷಯದ ಬಗ್ಗೆ ಖಂಡಿತ ತಿಳುದುಕೊಳ್ಳಲೇಬೇಕು. ಅದೇನೆಂದರೆ….ಒಂದು ಮೊಟ್ಟೆ ಬೇಯಲು ಎಷ್ಟು ಸಮಯ ಇಡಿಸುತ್ತದೆ…10 ಅಥವಾ 15 ನಿಮಿಷವಾಗುತ್ತದೆ….ಅದು ನಾವು ಇಡುವ ಉರಿಯ ಮೇಲೆ ಆಧಾರವಾಗಿರುತ್ತದೆ. ಆದರೂ ಮೊಟ್ಟೆಯನ್ನು ಎಷ್ಟು ನಿಮಿಷಗಳ ಕಾಲ ಬೇಯಿಸಿ ತಿಂದರೆ ಒಳ್ಳೆಯದು ಗೊತ್ತೇ…? ಈ ವಿಷಯದ ಬಗ್ಗೆ ಜೆ.ಕೆಂಜೀ ಲೋಪೆಜ್-ಆಲ್ಟ್ ಎಂಬ ಅಮೇರಿಕದ ಚೆಫ್ ಪ್ರಯೋಗ ಮಾಡಿದರು. ಅವರು ಹೇಳುತ್ತಿರುವುದೇನೆಂದರೆ…..

boiled-egg
ಕೋಳಿಮೊಟ್ಟೆಯ ಬಿಳಿ ಭಾಗ ಬೇಯಲು ಸುಮಾರು 82 ಡಿಗ್ರಿ ಸೆಂಟೀಗ್ರೇಡ್ ಉಷ್ಣೋಗ್ರತೆ ಅವಶ್ಯಕತೆ ಇದೆ. ಆದರೆ ಅದರೊಳಗೆ ಇರುವ ಹಳದಿ ಪದಾರ್ಥ ಬೇಯಲು ಅದಕ್ಕಿಂತ ಕಡಿಮೆ ಅಂದರೆ 76 ಡಿಗ್ರಿ ಸೆಂಟೀಗ್ರೇಡ್ ಇದ್ದರೆ ಸಾಕೆಂದು ಹೇಳಿದ್ದಾರೆ. ಈ ವಿಧಾನದಲ್ಲಿ ಮೊಟ್ಟೆಯನ್ನು ಬೇಯಿಸುವಾಗ ಒಂದೊಂದು ನಿಮಿಷಕ್ಕೂ ಆಗುವ ಬದಲಾವಣೆಯನ್ನು ಅವರು ರೆಕಾರ್ಡ್ ಮಾಡಿದರು.
1 ರಿಂದ 3 ನಿಮಿಷಗಳವರಗೆ ಮೊಟ್ಟೆಯನ್ನು ಬೇಯಿಸುವಾಗ ಅದು ಹಸಿಯಾಗಿಯೇ ಇರುತ್ತದೆ. ಹಳದಿ ಬಣ್ಣದ ಪದಾರ್ಥ ಬೇರ್ಪಟ್ಟು ದ್ರವವಾಗಿ ಬದಲಾವಣೆಯಾಗುತ್ತದೆ. ಬಿಳಿಯ ಬಣ್ಣದ ಪದಾರ್ಥ ಹಾಗೆಯೇ ಅಂಟಾಗಿರುತ್ತದೆ.
5 ರಿಂದ 7 ನಿಮಿಷಗಳಲ್ಲಿ ಮೊಟ್ಟಯ ಹಳದಿ ಪದಾರ್ಥ ಗಟ್ಟಿಯಾಗುತ್ತದೆ. ಆದರೆ ಬಿಳಿಯ ಪದಾರ್ಥವು ದ್ರವವಾಗಿಯೇ ಇರುತ್ತದೆ.
9 ರಿಂದ 11 ನಿಮಿಷಗಳಲ್ಲಿ ಹಳದಿ ಪದಾರ್ಥ ಚೆನ್ನಾಗಿರುತ್ತದೆ. ಬಿಳಿ ಪದಾರ್ಥ ಗಟ್ಟಿಯಾಗಿ ಬದಲಾಗುತ್ತದೆ. ಜಿಡ್ಡಾಗಿರುತ್ತದೆ.
13 ರಿಂದ 15 ನಿಮಿಷಗಳಲ್ಲಿ ಮೊಟ್ಟೆ ಚೆನ್ನಾಗಿ ಬೇಯುತ್ತದೆ. ಬಿಳಿ ಹಾಗೂ ಹಳದಿ ಪದಾರ್ಥಗಳೆರಡೂ ಹದವಾಗಿ ಬೇಯುತ್ತವೆ.

ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸದರಿ ಚೆಫ್ ಏನೆನ್ನುತ್ತಿದ್ದಾರೆ ಎಂದರೆ….ಒಂದು ಕೋಳಿಮೊಟ್ಟೆಯನ್ನು ಹದವಾಗಿ ಬೇಯಿಸಲು ಕನಿಷ್ಟ 13 ನಿಮಿಷಗಳ ಕಾಲ ಹಿಡಿಯುವುದು. ಹೆಚ್ಚು ಉರಿ ಇಟ್ಟರೆ 9 ನಿಮಿಷಗಳಲ್ಲಿಯೇ ಮೊಟ್ಟೆ ಬೇಯುತ್ತದೆ ಎನ್ನುತ್ತಿದ್ದಾರೆ. ಆದ್ದರಿಂದ ಹದವಾಗಿ ಬೆಂದ ಮೊಟ್ಟೆ ತಿನ್ನಬೇಕೆನ್ನುಕೊಳ್ಳುವವರು ಸುಮಾರು 13 ನಿಮಿಷಗಳವರೆಗೆ ಬೇಯಿಸಿದರೆ ಸಾಕಂತೆ.

 


Click Here To Download Kannada AP2TG App From PlayStore!