ಪುರುಷರಿಗಿಂತಲೂ ಸ್ತ್ರೀಯರಿಗೆ 20 ನಿಮಿಷ ಹೆಚ್ಚಾಗಿ ನಿದ್ದೆ ಅಗತ್ಯವಿದೆಯಂತೆ…ಯಾಕಂತೆ…?

ನಿದ್ದೆ ಮನಸ್ಸಿಗೆ ಎಷ್ಟು ಅಗತ್ಯವೋ ಎಲ್ಲರಿಗೂ ಗೊತ್ತಿರುವುದೇ. ನಿದ್ರೆ ಮಾಡುವುದರಿಂದ ನಮ್ಮ ದೇಹ ರೀಚಾರ್ಜ್ ಆಗುತ್ತದೆ. ಮರುದಿನ ಬೇಕಾದ ಕ್ರಿಯಾಶೀಲತೆ, ಹೊಸ ಶಕ್ತಿ, ಹುಮ್ಮಸ್ಸು ದೊರೆಯುತ್ತದೆ. ದೇಹದಲ್ಲಿ ಕೆಲವೊಂದು ರಿಪೇರಿ ಕೆಲಸಗಳು ನಡೆಯುತ್ತವೆ. ಹೊಸ ಕಣಗಳು ನಿರ್ಮಾಣವಾಗುತ್ತವೆ. ಹಳೆ ಕಣಗಳು ಹೋಗುತ್ತವೆ. ಅನಾರೋಗ್ಯ ಗುಣವಾಗುತ್ತದೆ. ಇದರ ಭಾಗವಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಅವರು ನಿದ್ರಿಸುತ್ತಾರೆ. ಸಹಜವಾಗಿ ಚಿಕ್ಕಮಕ್ಕಳಿಗೆ, ವೃದ್ಧರಿಗಾದರೆ ಕನಿಷ್ಠ 10 ಗಂಟೆಗಳ ವರೆಗೆ, ದೊಡ್ಡವರಿಗೆ 8 ಗಂಟೆಗಳವರೆಗೆ ನಿದ್ದೆ ಅಗತ್ಯ. ಆದರೆ ಪುರುಷರು, ಮಹಿಳೆಯರು ಎಂಬ ವಿಷಯಕ್ಕೆ ಬಂದರೆ ಪುರುಷರಿಗಿಂತಲೂ ಮಹಿಳೆಯರಿಗೆ ದಿನಕ್ಕೆ 20 ನಿಮಿಷಗಳ ಹೆಚ್ಚಿನ ನಿದ್ದೆ ಅಗತ್ಯವಂತೆ. ಹೌದು, ನಾವು ಹೇಳುತ್ತಿರುವುದು ನಿಜ. ಇದನ್ನು ವಿಜ್ಞಾನಿಗಳು ಕಂಡುಕೊಂಡು ನಮಗೆ ಹೇಳುತ್ತಿದ್ದಾರೆ. ಇಷ್ಟಕ್ಕೂ ಅವರಿಗೆ ಪುರುಷರಿಗಿಂತ 20 ನಿಮಿಷ ಹೆಚ್ಚಿನ ನಿದ್ದೆ ಯಾಕೆ ಬೇಕೆಂದರೆ…

ಪುರುಷರ ಮಿದುಳಿಗಿಂತಲೂ ಸ್ತ್ರೀಯರ ಮಿದುಳು ತುಂಬಾ ಸಂಕೀರ್ಣವಾಗಿರುತ್ತದಂತೆ. ಪುರುಷರಿಗಿಂತ ಮಹಿಳೆಯರ ಮಿದುಳು ಹೆಚ್ಚಿನ ಕೆಲಸಗಳನ್ನು ನಿರ್ವಹಿಸುತ್ತದಂತೆ. ದೇಹದಲ್ಲಿನ ಬಹಳಷ್ಟು ಭಾಗಗಳು ಮಿದುಳಿನ ಸಹಾಯ ಪಡೆಯುತ್ತಿರುತ್ತವೆ. ಇದಕ್ಕೆ ಅನುಗುಣವಾಗಿ ಮಿದುಳು ಆಗಿಂದ್ದಾಗ್ಗೆ ಸ್ಪಂದಿಸಬೇಕು. ಇದರಿಂದ ಮಿದುಳು ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ. ಈ ಕ್ರಮದಲ್ಲಿ ಹೆಚ್ಚಿನ ಕೆಲಸ ಮಾಡುವ ಮಿದುಳಿಗೆ ವಿಶ್ರಾಂತಿ ಸಹ ಅಗತ್ಯ. ಹಾಗಾಗಿ ಅವರಿಗೆ ಪುರುಷರಿಗಿಂತಲೂ 20 ನಿಮಿಷ ಹೆಚ್ಚಿನ ನಿದ್ದೆ ಬೇಕು.

ಇನ್ನು ಮಹಿಳೆಯರಿಗೆ ಹೆಚ್ಚಿನ ನಿದ್ದೆ ಬೇಕು ಎಂದು ಹೇಳಲು ಇನ್ನೊಂದು ಕಾರಣ ಏನೆಂದರೆ….ಸಾಮಾನ್ಯವಾಗಿ ಪುರುಷರು ಒಮ್ಮೆ ಒಂದೇ ಕೆಲಸದ ಮೇಲೆ ದೃಷ್ಟಿ ಇಡುತ್ತಾರಂತೆ. ಒಮ್ಮೆಲೆ ಹಲವಾರು ಕೆಲಸಗಳ ಮೇಲ ಅವರು ದೃಷ್ಟಿ ಇಡಲ್ಲವಂತೆ. ಆದರೆ ಮಹಿಳೆಯರು ಅದಕ್ಕೆ ಭಿನ್ನ. ಅವರು ಏಕಕಾಲದಲ್ಲಿ ಅನೇಕ ಕೆಲಸಗಳ ಮೇಲೆ ದೃಷ್ಟಿ ಇಡಬಲ್ಲರು. ಹಾಗಾಗಿ ಅವರ ಮಿದುಳಿಗೆ ವಿಶ್ರಾಂತಿ ಅಗತ್ಯವಿದೆಯಂತೆ. ಆದಕಾರಣ ಅವರಿಗೆ ಹೆಚ್ಚಿನ ನಿದ್ದೆ ಅಗತ್ಯವಾಗುತ್ತದಂತೆ.

ಪುರುಷರ ಮಿದುಳಿಗಿಂತಲೂ ಸ್ತ್ರೀ ಮಿದುಳು 5 ಪಟ್ಟು ವೇಗವಾಗಿ ಕೆಲಸ ಮಾಡುತ್ತದಂತೆ. 5 ಪಟ್ಟು ಹೆಚ್ಚಿನ ವಿಷಯಗಳನ್ನು ಗ್ರಹಿಸುತ್ತದಂತೆ. ಹಾಗಾಗಿ ಸಹ ಅವರ ಮಿದುಳಿಗೆ ವಿಶ್ರಾಂತಿ ಅಗತ್ಯವಂತೆ. ಈ ಎಲ್ಲಾ ಕಾರಣಗಳಿಂದ ಪುರುಷರಿಗಿಂತಲೂ 20 ನಿಮಿಷ ಹೆಚ್ಚಾಗಿ ನಿದ್ರಿಸಬೇಕಂತೆ. ಹಾಗಾಗಿ ಮಹಿಳೆಯರೇ ನಿಮ್ಮನ್ನು ಯಾರಾದರೂ ಎಬ್ಬಿಸಿದರೆ ಇನ್ನೂ 20 ನಿಮಿಷ ಮಲಗುತ್ತೇನೆಂದು ಹೇಳಿ. ಕಾರಣಗಳನ್ನು ಮೇಲೆ ನಿಮಗೆ ತಿಳಿಸಿದ್ದೇವಲ್ಲವೇ. ಯಾಕೆಂದರೆ ಮಹಿಳೆಯರು ಹೆಚ್ಚಿನ ನಿದ್ದೆ ಮಾಡಿದರೆ ಅಲ್ಲವೇ, ಹೆಚ್ಚು ಕೆಲಸ ಮಾಡಲು ಸಾಧ್ಯವಾಗುವುದು, ಆಲೋಚಿಸುವಂತಾಗುವುದು..!


Click Here To Download Kannada AP2TG App From PlayStore!