ಸ್ವರ್ಗ..ನರಕಗಳ ನಡುವೆ ಇರುವ ವ್ಯತ್ಯಾಸವೇನೆಂದು ನಿಮಗೆ ಗೊತ್ತಾ..?

ಅದೊಂದು ಶಾಲೆ…ಅದರಲ್ಲಿ ಒಬ್ಬ ವಿದ್ಯಾರ್ಥಿಗೆ ಯಾವುದಾದರೂ ಹೊಸ ವಿಷಯವನ್ನು ತಿಳಿದುಕೊಳ್ಳುವು ದೆಂದರೆ ಬಹಳ ಇಷ್ಟ. ಈ ನಿಟ್ಟಿನಲ್ಲಿ ಒಂದು ದಿನ ಆ ಹುಡುಗ ತನ್ನ ಟೀಚರ್ ಬಳಿ ಸ್ವರ್ಗ ಹಾಗೂ ನರಕ ಎಂದರೇನು. ಇವೆರಡರ ನಡುವೆ ಇರುವ ವ್ಯತ್ಯಾಸವೇನು? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಟೀಚರ್…’ ಮಕ್ಕಳೆ ನಾಳೆ ಬೆಳಿಗ್ಗೆ ಶಾಲೆಗೆ ಬೇಗ ಬನ್ನಿ …ನಿಮಗೆ ಸ್ವರ್ಗ ಹಾಗೂ ನರಕಗಳನ್ನು ತೋರಿಸುತ್ತೇನೆ’ ಎಂದು ಹೇಳುತ್ತಾರೆ. ಅವುಗಳನ್ನು ನೋಡಿದ ಮೇಲೆ ಅವುಗಳ ವ್ಯತ್ಯಾಸ ನಿಮಗೇ ತಿಳಿಯುತ್ತದೆ. ಎನ್ನುತ್ತಾರೆ.

ಮಾರನೇ ದಿನ ಮಕ್ಕಳೆಲ್ಲರೂ ಬೇಗ ಶಾಲೆಗೆ ಬರುತ್ತಾರೆ.ಅವರಲ್ಲಿ ಸ್ವರ್ಗ ಹಾಗೂ ನರಕಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ.

ಭೋಜನ ವಿರಾಮದ ಸಮಯದಲ್ಲಿ … ನರಕದಲ್ಲಿ ಇರುವವರೆಲ್ಲರೂ ಊಟ ಮಾಡಲು ಕುಳಿತುಕೊಳ್ಳುತ್ತಾರೆ. ಅವರ ತಟ್ಟೆಗಳಲ್ಲಿ ಪಂಚ ಭಕ್ಷ್ಯ ಪರಮಾನ್ನಗಳಿರುತ್ತವೆ. ಆದರೆ, ಯಾರಿಂದಲೂ ತಿನ್ನಲು ಸಾಧ್ಯವಾಗುತ್ತಿಲ್ಲ. ಕಾರಣವೇನೆಂದರೆ… ಅವರೆಲ್ಲರ ಕೈಗಳಿಗೆ ಮುಳ್ಳುಗಳಿಂದ ಕೂಡಿರುವ ಬಳೆಗಳನ್ನು ಹಾಕಿರುತ್ತಾರೆ. ಪದಾರ್ಥಗಳನ್ನು ತಿನ್ನಲು ಮುಂದಾದಾಗ ,ಬಳೆಯ ಮುಳ್ಳುಗಳು ತುಟಿಗಳಿಗೆ ಚುಚ್ಚುತ್ತವೆ. ಹಾಗಾಗಿ ತಮ್ಮ ಎದುರು ಪಂಚ ಭಕ್ಷ್ಯ ಪರಮಾನ್ನಗಳಿದ್ದರೂ ಅವುಗಳನ್ನು ತಿನ್ನಲಾಗುವುದಿಲ್ಲ. ಅರ್ಧ ಹಸಿವೆಯಿಂದಲೇ ಕಾಲ ಕಳೆಯ ಬೇಕಾಗಿದೆ.

39835695-BUCHAREST-ROMANIA-MAY-10-2015-Heaven-Versus-Hell-Biblical-Scene-Painting-In-The-Orthodox-Church-Of-T-Stock-Photo

ಈಗ ಟೀಚರ್ ಮಕ್ಕಳನ್ನು… ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ. ಇಲ್ಲಿಯೂ ಸಹ ಅವರ ತಟ್ಟೆಗಳಲ್ಲಿ ಪಂಚಭಕ್ಷ್ಯ ಪರಮಾನ್ನಗಳಿರುತ್ತವೆ. ಎಲ್ಲರ ಕೈಗಳಿಗೂ ಮುಳ್ಳುಗಳಿಂದ ಕೂಡಿದ ಬಳೆಗಳಿರುತ್ತವೆ. ಆದರೆ, ಇವರು ಯಾವುದೇ ತೊಂದರೆ ಪಡದೆ ತಮ್ಮ ಮುಂದಿರುವ ಆಹಾರವನ್ನು ಹೊಟ್ಟೆ ತುಂಬಾ ತಿನ್ನುತ್ತಾರೆ.

ಈಗ ಟೀಚರ್ ಮಕ್ಕಳಲ್ಲಿ…ಮಕ್ಕಳೇ ನೀವೇ ನೋಡಿದಿರಲ್ಲಾ..?ಎಂದು ಕೇಳುತ್ತಾರೆ. ನರಕದಲ್ಲಿರುವವರ ಕೈಗಳಲ್ಲಿ ಮುಳ್ಳುಗಳಿಂದ ಕೂಡಿದ ಬಳೆಗಳಿವೆ , ಸ್ವರ್ಗದಲ್ಲಿರುವವರ ಕೈಯಲ್ಲೂ ಇವೆ. ಆದರೆ, ಅವರಿಂದ ತಿನ್ನಲಾಗಲಿಲ್ಲ. ಇವರು ಹೊಟ್ಟೆ ತುಂಬಾ ತಿಂದರು.

ಇದು ಹೇಗೆ ಸಾಧ್ಯವಾಯಿತೆಂದರೆ…ನರದಲ್ಲಿರುವವರು ತಮ್ಮ ಕೈಗಳಿಂದ ಅಹಾರವನ್ನು ತಿನ್ನಲು ಹೋದಾಗ ಬಳೆಗಳಲ್ಲಿದ್ದ ಮುಳ್ಳುಗಳು ಅವರ ಮೂತಿಗೆ ಚುಚ್ಚಿಕೊಳ್ಳುತ್ತಿದ್ದವು. ಆದರೆ, ಸ್ವರ್ಗದಲ್ಲಿರುವವರು… ಪ್ರತಿಯೊಬ್ಬರೂ ತಾವೇ ತಿನ್ನದೆ…ತಮ್ಮ ಎದುರಿಗೆ ಕುಳಿತವರಿಗೆ ತಿನ್ನಿಸುತ್ತಿದ್ದರು. ಹಾಗಾಗಿ ಮುಳ್ಳುಗಳು ಚುಚ್ಚಿಕೊಳ್ಳುವ ಪ್ರಶ್ನೆಯೇಯಿಲ್ಲ.

ಅಂದರೆ…ಮನುಷ್ಯ ಪರೋಪಕಾರದಿಂದ ಜೀವಿಸುವುದೇ ಸ್ವರ್ಗ. ಸ್ವಾರ್ಥದಿಂದ ಜೀವಿಸುವುದೇ ನರಕ. ಎಂದು ಟೀಚರ್ ಹೇಳಿದರು.

 


Click Here To Download Kannada AP2TG App From PlayStore!