ವಾಷ್ ಬೇಸಿನ್ ಕೆಳಗೆ U ಶೇಪ್‌ನಲ್ಲಿ ಪೈಪ್ ಇರುತ್ತದೆಂದು ನೀವು ಎಂದಾದರೂ ಗಮನಿಸಿದ್ದೀರಾ..? ಯಾಕಿರುತ್ತದೆ ಗೊತ್ತಾ..?

ನಿತ್ಯ ಜೀವನದಲ್ಲಿ ನಾವು ಅದೆಷ್ಟೋ ವಸ್ತುಗಳನ್ನು ನೋಡುತ್ತಿರುತ್ತೇವೆ. ಅವುಗಳನ್ನು ಬಳಸುತ್ತಿರುತ್ತೇವೆ. ಆದರೆ ಅವುಗಳನ್ನು ಹೇಗೆ ತಯಾರಿಸುತ್ತಾರೆ, ಅವು ಹಾಗೆಯೇ ಯಾಕಿರುತ್ತವೆ, ಬೇರೆ ರೀತಿ ಯಾಕಿರಲ್ಲ..? ಎಂಬ ಅಂಶಗಳನ್ನು ಗಮನಿಸಲ್ಲ. ಆದರೆ ಸರಿಯಾಗಿ ಗಮನಿಸಿದರೆ ಅನೇಕ ವಸ್ತುಗಳ ಬಗ್ಗೆ ಅನೇಕ ಸಂಗತಿಗಳು ತಿಳಿಯುತ್ತವೆ. ಆ ರೀತಿಯ ವಸ್ತುಗಳಲ್ಲಿ ವಾಶ್ ಬೇಸಿನ್ ಸಿಂಕ್ ಕೆಳಗೆ ಇರುವ ಪೈಪ್ ಸಹ ಒಂದು. ವಾಷ್ ಬೇಸಿನ್‌ನಲ್ಲಿರುವ ನೀರನ್ನು ಅದು ಕೆಳಕ್ಕೆ ಕಳುಹಿಸುತ್ತದೆ. ಅಷ್ಟೇ ಅಲ್ಲವೇ ಅದು ಮಾಡುವ ಕೆಲಸ. ಇದಕ್ಕೂ ಮೀರಿದ ಕೆಲಸ ಇನ್ನೇನಿರುತ್ತದೆ ಅದಕ್ಕೆ..? ಅದರ ಬಗ್ಗೆ ತಿಳಿದುಕೊಳ್ಳುವಂತಹದ್ದೇನಿದೆ..? ಅಂದುಕೊಳ್ಳುತ್ತಿದ್ದೀರಾ? ಹೌದು ನಿಜವಾಗಿ ಅದರ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಯೊಂದಿದೆ. ಅದೇನೆಂದರೆ…

ನೀವು ಎಂದಾದರೂ ಗಮನಿಸಿದ್ದೀರಾ..? ವಾಷ್ ಬೇಸಿನ್ ಕೆಳಗೆ ಇರುವ ಪೈಪನ್ನು. ಸ್ವಲ್ಪ ಅಂಡುಡೊಂಕಾಗಿರುತ್ತದೆ..ಅಂದರೆ ಆಂಗ್ಲ ಅಕ್ಷರ U ಶೇಪ್‌ನಲ್ಲಿ ಇರುತ್ತದೆ. ಹೌದು, ಅದೇ. ಆದರೆ ಆ ಪೈಪು ಆ ರೀತಿ ಯಾಕೆ ಇರುತ್ತದೆ ಎಂದು ಗೊತ್ತಾ..? ಅದನ್ನು U ಶೇಪ್‌ನಲ್ಲೇ ಯಾಕೆ ತಯಾರಿಸಿದ್ದಾರೆ ಗೊತ್ತಾ..? ಅದನ್ನೇ ಈಗ ತಿಳಿದುಕೊಳ್ಳೋಣ. ಚಿತ್ರದಲ್ಲಿ ನೋಡಿದಿರಲ್ಲವೆ… ಅದು U ಶೇಪ್‌ನಲ್ಲಿ ಇರುವ ಕಾರಣ ಅದರಲ್ಲಿ ಯಾವಾಗಲೂ ನೀರು ಇರುತ್ತದೆ. ಆ ನೀರು ಏನು ಮಾಡುತ್ತವೆಂದರೆ…ಪೈಪ್ ಕೆಳಗೆ ಕನೆಕ್ಟ್ ಆಗಿರುವ ಡ್ರೈನೇಜ್‌ನಿಂದ ಬರುವ ದುರ್ವಾಸನೆಯನ್ನು ತಡೆಯುತ್ತವೆ. ಕೆಳಗೆ ಡ್ರೈನೇಜ್‌ನಿಂದ ಬರುವ ಗ್ಯಾಸ್ ನೇರವಾಗಿ ಆ ಪೈಪ್ ಮೂಲಕ ಮೇಲೆ ಬರದಂತೆ ಇರಲು ನಡುವೆ ಆ ಪೈಪಿಗೆ ತಡೆ ಹಾಕಬೇಕಾಗುತ್ತದೆ. ಹಾಗಾಗಿ ಅದಕ್ಕೆ U ಶೇಪ್ ಬರುವಂತೆ ತಯಾರಿಸಿದ್ದಾರೆ. ಇದರಿಂದ ಅದರಲ್ಲಿ ಯಾವಾಗಲೂ ಸ್ವಲ್ಪ ನೀರು ನಿಂತಿರುತ್ತದೆ. ಆದಕಾರಣ ಕೆಳಗಿನ ಡ್ರೈನೇಜನಿಂದ ಬರುವ ದುರ್ವಾಸನೆ ನೀರಿನ ಬಳಿ ನಿಂತುಹೋಗುತ್ತದೆ. ಗ್ಯಾಸ್ ಮೇಲೆ ಬರಲು ಸಾಧ್ಯವಾಗಲ್ಲ.

ಈ ರೀತಿ U ಶೇಪ್ ಇರುವ ಭಾಗವನ್ನು ಪಿ ಟ್ರಾಪ್ (P-trap) ಎಂದು ಕರೆಯುತ್ತಾರೆ. ಈ ಟ್ರಾಪ್ ಏನಾದರೂ ಡ್ಯಾಮೇಜ್ ಆದರೆ ಆಗ ನೀರು ಇಲ್ಲದ ಕಾರಣ ದುರ್ವಾಸನೆ ಮೇಲೆ ಬರುತ್ತದೆ. ಅದು ಮನೆಯಲ್ಲೆಲ್ಲಾ ಹರಡುತ್ತದೆ. ಆದಕಾರಣ ನಿಮ್ಮ ಮನೆಯ ಕಿಚನ್ ವಾಷ್ ಬೇಸಿನ್‌ನಿಂದ ದುರ್ವಾಸನೆ ಬರುತ್ತಿದೆ ಅನ್ನಿಸಿದರೆ ಒಮ್ಮೆ ಈ ಟ್ರಾಪ್ ಚೆಕ್ ಮಾಡಿಕೊಳ್ಳಿ. ಡ್ಯಾಮೇಜ್ ಇದ್ದರೆ ರಿಪೇರಿ ಮಾಡಿಸಿಕೊಳ್ಳಿ. ಈ ರೀತಿಯ ಟ್ರಾಪ್‌ಗಳು ಟಾಯ್ಲೆಟ್‌ನ ಟಾಯ್ಲೆಟ್ ಬೇಸಿನ್‌ ಕೆಳಗೂ ಇರುತ್ತವೆ. ಅದರಿಂದ ಸಹ ನಮ್ಮ ಟಾಯ್ಲೆಟ್‌ನೊಳಕ್ಕೆ ಡ್ರೈನೇಜ್‌ನಿಂದ ದುರ್ವಾಸನೆ ಬರದಂತೆ ಇರುತ್ತದೆ.