ಪ್ರತಿದಿನ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ನಿಂಬೆ ರಸವನ್ನು ಸೇರಿಸಿ ಕುಡಿದರೆ ಸಿಗುವ 9 ತರಹದ ಲಾಭಗಳು…….

ನಿಂಬೆಹಣ್ಣನ್ನು ನಾವು ಅಡುಗೆಯಲ್ಲಿ ಬಳಸುತ್ತಿರುತ್ತೇವೆ.ಇದರಲ್ಲಿ ಉಪ್ಪಿನಕಾಯಿ ಮಾಡಿಕೊಂಡು ತಿನ್ನುವುದು ನಮಗೆ ಅಭ್ಯಾಸವಾಗಿದೆ. ಈ ರೀತಿಯಾಗಿ ಕೆಲವರು ನಿಂಬೆರಸವನ್ನು ತಲೆಯಲ್ಲಿನ ಹೊಟ್ಟು ನಿವಾರಣೆಗೆ ಬಳಸುತ್ತಾರೆ. ಆದರೆ ನಿಂಬೆಯಿಂದ ನಮಗೆ ತಿಳಿದ ಇನ್ನೂ ಉಪಯೋಗಗಳಿವೆ. ಪ್ರತಿನಿತ್ಯ ಬೆಳಿಗ್ಗೆ ಒಂದು ಲೋಟ ಉಗುರು ಬೆಚ್ಚಗಿರುವ ನೀರಿನಲ್ಲಿ ಒಂದು ನಿಂಬೆಹಣ್ಣನ್ನು ಪೂರ್ತಿ ಹಿಂಡಿ, ಆ ನೀರನ್ನು ಕುಡಿದರೆ ಅದರಿಂದ ನಮಗೆ ಆರೋಗ್ಯ ದೃಷ್ಠಿಯಿಂದ ಎಷ್ಟೋ ಪ್ರಯೊಜನಗಳು ದೊರೆಯುತ್ತವೆ. ಕೆಲವು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಶರೀರಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಲಭಿಸುತ್ತವೆ. ಹೀಗೆ ಪ್ರತಿನಿತ್ಯ ನಿಂಬೆರಸವನ್ನು ಕುಡಿಯುತ್ತಿದ್ದರೆ, ಯಾವುದೇ ಮೆಡಿಸಿನ್ ಅನ್ನು ಬಳಸಬೇಕಾದ ಅವಶ್ಯಕತೆ ಇರುವುದಿಲ್ಲವೆಂದು ವೈದ್ಯರು ಹೇಳುತ್ತಿದ್ದಾರೆ. ಈ ನಿಂಬೆರಸದಲ್ಲಿ ನಮಗೆ ಯಾವೆಲ್ಲ ಪ್ರಯೋಜನಗಳು ಲಭಿಸುತ್ತದೆ ಎಂಬುದನ್ನು ಈಗ ತಿಳಿಯೋಣ.

ರೋಗ ನಿರೋಧಕ ಶಕ್ತಿ ಹಾಗೂ ಇನ್ಫೆಕ್ಷನ್ ಗಳಿಗೆ……

ನಿಂಬೆರಸದಲ್ಲಿ ಯಾಂಟಿ ಆಕ್ಸಿಡೆಂಟ್’ಗಳು, ಸಿ ವಿಟಮಿನ್ ಹೆಚ್ಚಾಗಿರುತ್ತವೆ. ಇವು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಸಹಜವಾಗಿಯೇ ಯಾಂಟಿಬಯೋಟಿಕ್, ಯಾಂಟಿಫಂಗಲ್, ಯಾಂಟಿವೈರಲ್ ಗುಣಗಳಿರುವುದರಿಂದ ಕೆಲವು ತರಹದ ಇನ್ ಫೆಕ್ಷನ್ ಗಳು ದೂರವಾಗುತ್ತವೆ.

ಕಿಡ್ನಿ ಸ್ಟೋನ್ಸ್…..

ಒಂದು ಗ್ಲಾಸ್ ಬಿಸಿನೀರಿನಲ್ಲಿ ನಿಂಬೆರಸವನ್ನು ಬೆರೆಸಿ ದಿನವೂ ಕುಡಿಯುತ್ತಿದ್ದರೆ, ಅದರಿಂದ ಶರೀರದಲ್ಲಿ ಪೋಟಾಷಿಯಂ ಲೆವೆಲ್ ಹೆಚ್ಚಾಗುತ್ತದೆ. ಸಿಟ್ರಿಕ್ ಮಟ್ಟವು ಉತ್ತಮವಾಗುತ್ತದೆ. ಇದರಿಂದ ನಿಧಾನವಾಗಿ ಕಿಡ್ನಿ ಸ್ಟೋನ್’ಗಳು ಕರಗುತ್ತವೆ.

ಗಾಲ್ ಬ್ಲಾಡರ್ ಸ್ಟೋನ್ಸ್….

ದಿನಾಲೂ ನಿಂಬೆರಸವನ್ನು ಕುಡಿಯುತ್ತಿದ್ದರೆ, ಗಾಲ್ ಬ್ಲಾಡರ್ ಸ್ಟೋನ್ಸ್ ಸಹ ಹೋಗುತ್ತವೆ. ಇದರಿಂದ ಹೊಟ್ಟೆನೋವು ಬರುವುದಿಲ್ಲ. ತಪ್ಪದೇ ಈ ನೀರನ್ನು ಸೇವಿಸುತ್ತಿದ್ದರೆ ಗಾಲ್ ಬ್ಲಾಡರ್ ಸಮಸ್ಯೆಗಳು ಬರಲ್ಲ.

ವ್ಯರ್ಥ ಪದಾರ್ಥಗಳನ್ನು ಹೊರ ಹಾಕುತ್ತದೆ…..

ಪ್ರತಿನಿತ್ಯ ನಾವು ತಿನ್ನುವ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು ಇವುಗಳಿಂದ ನಮ್ಮ ಶರೀರದಲ್ಲಿ ವಿಷ ಪದಾರ್ಥಗಳು ಬಂದು ಸೇರುತ್ತವೆ. ಈ ರೀತಿಯಾಗಿ ನಿಂಬೆರಸವನ್ನು ಕುಡಿಯುತ್ತಿದ್ದರೆ, ಅದರಿಂದ ಆ ವ್ಯರ್ಥಪದಾರ್ಥಗಳು ಹೊರಗೆ ಹೋಗುತ್ತವೆ. ಇದರಿಂದ ಯಾವುದೇ ರೋಗಗಳು ಹತ್ತಿರ ಬರುವುದಿಲ್ಲ.

ಚರ್ಮಕ್ಕೆ…..

ಯಾಂಟಿ ಆಕ್ಸಿಡೆಂಟ್’ಗಳು ಹೆಚ್ಚಾಗುವುದರಿಂದ ನಿಂಬೆರಸವು ನಮ್ಮ ಚರ್ಮಕ್ಕೆ ಒಳಿತಾಗುತ್ತದೆ. ಚರ್ಮವು ಹೊಳೆಯುತ್ತದೆ ಹಾಗೂ ಚರ್ಮ ಮೃದುವಾಗಿ, ಚರ್ಮದ  ಮೇಲೆ ಸುಕ್ಕು, ಮಚ್ಚೆಗಳು ಬರುವುದಿಲ್ಲ.

ಜೀರ್ಣಾಂಗ ಸಮಸ್ಯೆಗಳು…….

ನಿತ್ಯವೂ ನಿಂಬೆರಸವನ್ನು ಕುಡಿಯುತ್ತಿದ್ದರೆ, ಜೀರ್ಣಾಶಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. ಪ್ರಮುಖವಾಗಿ ಆಸಿಡಿಟಿ, ಮಲಬದ್ದತೆ, ಅಜೀರ್ಣಗಳು ಬರುವುದಿಲ್ಲ.

ಅಧಿಕ ತೂಕಕ್ಕೆ……

ಶರೀರದಲ್ಲಿ ಸೇರಿಕೊಂಡಿರುವ ಕೊಬ್ಬನ್ನು ಕರಗಿಸುವ ಔಷಧೀಯ ಗುಣಗಳು ಈ ನಿಂಬೆರಸದಲ್ಲಿರುತ್ತವೆ. ಇದರಿಂದ ಅಧಿಕ ತೂಕವಿರುವವರು ಲಾಭ ಪಡೆಯಬಹುದು ಅಷ್ಟೆಅಲ್ಲ, ಹೀಗೆ ಕುಡಿಯುವುದರಿಂದ ರಕ್ತದ ಸರಬರಾಜು ಉತ್ತಮಗೊಳ್ಳುತ್ತದೆ. ಹೃದಯ ಸಂಬಂಧಿತ ಸಮಸ್ಯೆಗಳು ಸಹಾ ಬರುವುದಿಲ್ಲ.

ಬಾವುಗಳಿಗೆ ಪ್ಲೂ ಜ್ವರಕ್ಕೆ…..

ನೋವುಗಳು, ಬಾವುಗಳು ಇರುವವರು ನಿಂಬೆರಸವನ್ನು ಕುಡಿದರೆ ಉತ್ತಮ ವಾಗಿರುತ್ತದೆ. ಕೀಲು ನೋವುಗಳಿರುವವರಿಗೆ ಇದು ಉಪಯುಕ್ತಕರವಾಗಿರುತ್ತದೆ.  ಅದೇರೀತಿ ಈ  ಚಳಿಗಾಲದಲ್ಲಿ ಬರುವ ಪ್ಲೂ ಜ್ವರ, ಕೆಮ್ಮು, ನೆಗಡಿಗಳಂತಹ ಸಮಸ್ಯೆಗಳು ಹೋಗುತ್ತವೆ.

ಮಧುಮೇಹಕ್ಕೆ…..

ಮಧುಮೆಹವಿರುವವರು ನಿಂಬೆರಸವನ್ನು ಕುಡಿದರೆ ಅದರಿಂದ ಅವರ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.


Click Here To Download Kannada AP2TG App From PlayStore!

Share this post

scroll to top