ಬಾಯ್‍ಫ್ರೆಂಡ್‌ನನ್ನು ರೇಪ್ ಕೇಸಿನಿಂದ ಪಾರುಮಾಡಲು ಆ 20 ವರ್ಷದ ಯುವತಿ ಎಂತಹ ಪ್ಲಾನ್ ಮಾಡಿದಳು ಗೊತ್ತಾ.? ಕೊನೆಗೆ ಏನಾಯಿತು.?

ಇಂದು ಅಪರಾಧಗಳನ್ನು ಮಾಡುತ್ತಿರುವ ಕೆಲವರು ತಾವು ಪಕ್ಕಾ ಪ್ಲಾನ್ ಪ್ರಕಾರ ಅದನ್ನು ಜಾರಿ ಮಾಡುತ್ತಿದ್ದೇವೆಂದು, ಆದಕಾರಣ ತಮ್ಮನ್ನು ಪೊಲೀಸರು ಹಿಡಿದುಕೊಳ್ಳಲ್ಲ ಎಂದುಕೊಳ್ಳುತ್ತಾರೆ. ಆದರೆ ಎಷ್ಟೇ ದೊಡ್ಡ ಅಪರಾಧಿಯಾದರೂ ಕೊನೆಗೆ ಕಾನೂನು ಕಣ್ಣಿನಿಂದ ತಪ್ಪಿಸಿಕೊಳ್ಳಲ್ಲ ಅಲ್ಲವೇ. ಕೊನೆಗೆ ಹೇಗಾದರೂ ಸಿಕ್ಕಿಬೀಳಲೇಬೇಕು. ಆ ಯುವತಿ ವಿಷಯದಲ್ಲೂ ಹಾಗೆಯೇ ಆಯಿತು. ಆಕೆ ತನ್ನ ಬಾಯ್‌ಫ್ರೆಂಡ್‍ನನ್ನು ರೇಪ್ ಕೇಸಿನಿಂದ ಪಾರುಮಾಡಲು ತನ್ನ ಮೇಲೆ ಆಸಿಡ್ ದಾಳಿ ನಡೆಯಿತೆಂದು ಒಂದು ಕಟ್ಟುಕಥೆ ಹೆಣೆದಳು. ಆದರೆ ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದಳು. ಮೊದಲೇ ಹೇಳಿದೆವಲ್ಲವೇ, ಯಾರೇ ಅಪರಾಧಿಯಾದರೂ ಕೊನೆಗೆ ಪೊಲೀಸರಿಗೆ ಸಿಗುತ್ತಾರೆಂದು, ಆ ಯುವತಿ ಸಹ ಪೊಲೀಸರಿಗೆ ಸಿಕ್ಕಿಬಿದ್ದಳು. ಇಷ್ಟಕ್ಕೂ ಆಗಿದ್ದೆನೆಂದರೆ…

ಅದು ಉತ್ತರ ಪ್ರದೇಶದಲ್ಲಿನ ಮೀರತ್. ಆಕೆ ಹೆಸರು ಶಾಲು. ವಯಸ್ಸು 20 ವರ್ಷಗಳು. ರೆಸ್ಲಿಂಗ್ ಕ್ರೀಡಾಕಾರಿಣಿ. ಆಕೆ ಬಾಯ್‌ಫ್ರೆಂಡ್ ಹೆಸರು ರಾಜೇಶ್ ಖಾರಿ. ಇಬ್ಬರೂ ಸ್ವಲ್ಪ ಸಮಯದಿಂದ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದಾರೆ. ಆದರೆ ರಾಜೇಶ್ ತನ್ನ ಸ್ನೇಹಿತರ ಜತೆಗೆ ಬೆರೆತು ತನ್ನನ್ನು ರೇಪ್ ಮಾಡಿದ ಎಂದು ಅದೇ ಪ್ರದೇಶದ 24 ವರ್ಷದ ಯುವತಿ ಸೋನಿ ಕುಮಾರಿ ಎಂಬ ಯುವತಿ ಪೊಲೀಸರಿಗೆ ದೂರು ನೀಡಿದರು. ಹಾಗಾಗಿ ರಾಜೇಶ್‍ರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದರು. ಈ ವಿಷಯ ತಿಳಿದುಕೊಂಡ ಶಾಲು ಹೇಗಾದರೂ ತನ್ನ ಬಾಯ್‌ಫ್ರೆಂಡ್‌ನನ್ನು ಈ ಕೇಸ್‌ನಿಂದ ಪಾರು ಮಾಡಬೇಕೆಂದುಕೊಂಡಳು. ಅದಕ್ಕೆ ಒಂದು ಮಾಸ್ಟರ್ ಪ್ಲಾನ್ ಹಾಕಿದಳು.

ಫೆಬ್ರವರಿ 28ರಂದು ಸ್ಥಳೀಯ ಪೈತ್ ಬಜಾರ್ ಸ್ಟೇಡಿಯಂ ಬಳಿ ಶಾಲು ತನ್ನ ಸ್ನೇಹಿತೆ, ಬಾಕ್ಸರ್ ಆದ ಗರಿಮಾ (21) ಎಂಬ ಯುವತಿಯ ಜತೆಗೆ ಪ್ರಾಕ್ಟೀಸ್‌ಗೆಂದು ಬಂದಳು. ಆದರೆ ಅದಾಗಲೆ ತನ್ನೊಂದಿಗೆ ತಂದುಕೊಂಡಿದ್ದ ಆಸಿಡನ್ನು ಸ್ವಲ್ಪ ಮೈದಾನದಲ್ಲಿ ಚೆಲ್ಲಿದಳು. ಸ್ವಲ್ಪ ಆಸಿಡನ್ನು ತನ್ನ ಕೈ ಮೇಲೆ ಚೆಲ್ಲಿಕೊಂಡಳು. ಬಳಿಕ ತನ್ನ ಮೇಲೆ ಸೋನಿ ಕುಮಾರಿ ಆಸಿಡ್ ದಾಳಿ ಮಾಡಿದಳೆಂದು ಪೊಲೀಸರಿಗೆ ದೂರು ನೀಡಿದಳು. ಆದರೆ ಪೊಲೀಸರು ವಿಚಾರಣೆ ನಡೆಸಿದರೆ ಅಸಲಿ ಸಂಗತಿ ಹೊರಬಿದ್ದಿದೆ. ಶಾಲು ಬಾಯ್‍ಫ್ರೆಂಡ್ ರಾಜೇಶ್ ಎಂದು ಗೊತ್ತಾಗಿ, ಆತನನ್ನು ಭೇಟಿಯಾಗುವ ಸಲುವಾಗಿ ಆಕೆ ಜೈಲಿಗೆ ನಿತ್ಯ ಬರುತ್ತ ಹೋಗುತ್ತಿದ್ದ ಕಾರಣ ಪೊಲೀಸರು ಆಕೆಯ ಮೇಲೆ ಅನುಮಾನಪಟ್ಟರು. ಇದರಿಂದ ಆಕೆಯನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದರು. ಆಗ ತನ್ನ ಮೇಲೆ ತಾನೇ ಆಸಿಡ್ ಚೆಲ್ಲಿಕೊಂಡೆ ಎಂದು ಶಾಲು ಹೇಳಿದರು. ಹಾಗಾಗಿ ಶಾಲುರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಆದರೆ ಇಲ್ಲಿ ಪೊಲೀಸರಿಗೆ ಗೊತ್ತಾದ ಮತ್ತೊಂದು ಟ್ವಿಸ್ಟ್ ಏನೆಂದರೆ… ಸೋನು ಕುಮಾರಿ ಸಹ ರಾಜೇಶ್ ಮೇಲೆ ಸುಳ್ಳು ಕೇಸ್ ಹಾಕಿದ್ದಾಳಂತೆ. ಹಾಗಾಗಿ ಆ ಕೇಸನ್ನೂ ಪೊಲೀಸರು ಶ್ರೀಘ್ರದಲ್ಲೇ ಕ್ಲೋಸ್ ಮಾಡುವ ಕೆಲಸದಲ್ಲಿದ್ದಾರೆ. ಅದೇನೇ ಇರಲಿ ಆ ಕೇಸ್‌ನಲ್ಲಿ ಟ್ವಿಸ್ಟ್‌ಗಳು ತುಂಬಾ ಆಸಕ್ತಿಕವಾಗಿ ಇವೆ ಅಲ್ಲವೆ..!


Click Here To Download Kannada AP2TG App From PlayStore!