ನೀರಿನ ಮೇಲೆ ತೇಲುವ ಕಲ್ಲುಗಳು, ದ್ವೀಪಗಳು, ಗಾಳಿಯಲ್ಲಿರುವ ಸ್ತಂಭಗಳು ಇವೆಲ್ಲಾ ಇರುವುದು ಎಲ್ಲಿ ಎಂದು ಗೊತ್ತಾ..?

ಆಪಲ್ ಅನ್ನು ಮೇಲಕ್ಕೆಸೆದಾಗ ಅದು ಮೇಲೆ ಹೋಗದೆ ಕೆಳಗೆ ಬೀಳುವುದು ಯಾಕೆ ಎಂಬ ವಿಷಯದ ಬಗ್ಗೆ ನ್ಯೂಟನ್ ಎಂಬ ವಿಜ್ಞಾನಿ ಪರಿಶೋಧನೆ ನಡೆಸಿ, ಗುರುತ್ವಾಕರ್ಷಣೆ ಸಿದ್ಧಾಂತವನ್ನು ಕಂಡುಹಿಡಿದ ಬಗ್ಗೆ ಎಲ್ಲರಿಗೂ ತಿಳಿದಿರುವುದೇ. ಶಾಲೆಯಲ್ಲೂ ಇದರ ಬಗ್ಗೆ ಓದಿ ತಿಳಿದುಕೊಂಡಿದ್ದೇವೆ. ಆದರೆ ಕೆಲವು ಪ್ರದೇಶಗಳಲ್ಲಿ ವಿಚಿತ್ರವಾಗಿ ಗುರುತ್ವಾಕರ್ಷಣೆ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.

ರಾಮಸೇತು….

ramasethu

ತಮಿಳುನಾಡಿನ ರಾಮೇಶ್ವರಂ ಹತ್ತಿರವಿರುವ ರಾಮಸೇತು ಸಮುದ್ರದ ಮೇಲೆ ಕಲ್ಲು ಹಾಕಿದರೆ ಅದು ತೇಲುತ್ತದೆ. ಈ ಹಿಂದೆ ಮುಳುಗುತ್ತಿದ್ದವಂತೆ. ಲಂಕೆಯನ್ನು ತಲುಪಲು ರಾಮನು ವಾನರ ಸೈನ್ಯದೊಂದಿಗೆ ಸಮುದ್ರದ ಮೇಲೆ ರಾಮಸೇತು ನಿರ್ಮಾಣ ಮಾಡುವ ಸಮಯದಲ್ಲಿ ವಾನರರು ಕಲ್ಲುಗಳ ಮೇಲೆ ಶ್ರೀರಾಮ ಎಂದು ಬರೆದಿರುವುದರಿಂದಲೇ ಆ ಕಲ್ಲುಗಳು ತೇಲಿಕೊಂಡಿವೆಯಂತೆ. ಆದರೆ ವಿಜ್ಞಾನಿಗಳ ಪ್ರಕಾರ ಅಲ್ಲಿರುವ ಕಲ್ಲುಗಳು ಪ್ಯೂಮಿಸ್ ಜಾತಿಗೆ ಸೇರಿದ್ದು, ಅವುಗಳಲ್ಲಿ ಗಾಳಿಯಿಂದ ತುಂಬಿದ ಗುಳ್ಳೆಗಳಿರುವುದರಿಂದ ಆ ಕಲ್ಲುಗಳು ತೇಲುತ್ತವೆ ಎಂದು ಹೇಳುತ್ತಾರೆ ಹೊರತು ಅದನ್ನು ನಿರೂಪಿಸಲಾಗಲಿಲ್ಲ.

ಲೇಪಾಕ್ಷಿ ದೇವಾಲಯ….

lepakshi-temple

ಆಂಧ್ರಪ್ರದೇಶದ ಲೇಪಾಕ್ಷಿ ದೇವಾಲಯದಲ್ಲಿ ಒಟ್ಟು 70 ಸ್ತಂಭಗಳಿದ್ದು, ಅವುಗಳಲ್ಲಿ ಒಂದು ಸ್ತಂಭವು ಆಧಾರವಿಲ್ಲದೆ ಗಾಳಿಯಲ್ಲಿ ನಿಂತಿದೆ. ಯಾವುದಾದರೂ ವಸ್ತುವನ್ನು ಸ್ತಂಭದ ಕೆಳಗೆ ತೂರಿಸಿ ತೆಗೆದಲ್ಲಿ ಒಳಿತಾಗುವುದೆಂದು ಭಕ್ತರು ನಂಬುತ್ತಾರೆ. ಕೇವಲ ಆ ಒಂದು ಸ್ತಂಭದ ಮೇಲೆಯೇ ದೇವಾಲಯದ ನಿರ್ಮಾಣವೂ ಆಗಿದೆ ಎಂದು ಹೇಳುತ್ತಾರೆ.

ಹಜ್ರತ್ ಕಮರ್ ಅಲೀ ದರ್ವೇಷ್ ದರ್ಗಾ….

Hazrat-Qamar-Ali-Darvesh

ಪುಣೆಯಲ್ಲಿರುವ ಹಜ್ರತ್ ಕಮರ್ ಅಲೀ ದರ್ವೇಷ್ ದರ್ಗಾದಲ್ಲಿರುವ 70 ಕೆ.ಜಿ. ತೂಕದ ಕಲ್ಲನ್ನು ಯಾರೂ ಮೇಲಕ್ಕೆತ್ತಲಾಗುವುದಿಲ್ಲ. ಆದರೆ 11 ಜನ ಭಕ್ತರು ಸೇರಿ ತೋರುಬೆರಳನ್ನು ಕಲ್ಲಿಗೆ ತಾಗಿಸಿ ಒಬ್ಬ ಋಷಿಯ ಹೆಸರನ್ನು ಜಪಿಸಿದರೆ ಆ ಕಲ್ಲು ಮೇಲೇಳುತ್ತದೆಯಂತೆ. ಸುಮಾರು 800 ವರ್ಷಗಳ ಹಿಂದೆ ಕಮರ್ ಅಲೀ ಎಂಬ ಸನ್ಯಾಸಿ ಆ ಕಲ್ಲಿಗೆ ಕೊಟ್ಟ ಶಾಪದಿಂದಾಗಿ ಕಲ್ಲನ್ನು ಎತ್ತುವಾಗ ಸನ್ಯಾಸಿಯ ಹೆಸರು ಹೇಳಲೇಬೇಕೆನ್ನುತ್ತಾರೆ ಅಲ್ಲಿನ ಜನರು.

ಲದಾಕ್ ಮಾಗ್ನೆಟಿಕ್ ಹಿಲ್ಸ್……

Magnetic-hills-Ladakh

ಲದಾಕ್ ನಲ್ಲಿರುವ ಮಾಗ್ನಟೆಕ್ ಹಿಲ್ಸ್ ಗುರುತ್ವಾಕರ್ಷಣೆ ಶಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತವೆ. ಅಲ್ಲಿನ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿದಲ್ಲಿ ತಾವಾಗಿಯೇ ರಸ್ತೆಗನುಗುಣವಾಗಿ ಮುಂದೆ ಸಾಗುತ್ತವೆ. ಅಲ್ಲಿ ಪರ್ವತಗಳು, ಕಣಿವೆಗಳಿರುವುದರಿಂದ ವಾಹನದಲ್ಲಿ ಪ್ರಯಾಣಿಸುವವರಿಗೆ ಮೇಲೆ ಹೋಗುತ್ತಿದ್ದೇವೋ ಅಥವಾ ಕೆಳಗೆ ಹೋಗುತ್ತಿದ್ದೇ ವೊ ಎಂಬುದರ ಅರಿವಾಗುವುದಿಲ್ಲವಂತೆ.

ಲಕ್ನೋ ಬಡಾ ಇಮಾಮ್ ಬರಾ….

Bada-Imambara

ಲಕ್ನೋದಲ್ಲಿ 18ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಬಡಾ ಇಮಾಮ್ ಬರಾ
ದಲ್ಲಿರುವ ಸೆಂಟ್ರಲ್ ಆರ್ಚ್ 50 ಮೀ. ಉದ್ದವಿದ್ದು ಇದು ಗುಣಮಟ್ಟದ ಇಟ್ಟಿಗೆ ಹಾಗೂ ಇತರೇ ಪದಾರ್ಥಗಳಿಂದ ನಿರ್ಮಸಲ್ಪಟ್ಟಿದೆ. ಆರ್ಚ್ ಗೆ ಯಾವುದೇ ಬೀಂ, ಪಿಲ್ಲರ್ ಅಥವಾ ಇತರೇ ಆಧಾರಗಳಿಲ್ಲದೆ ಗಾಳಿಯಲ್ಲೇ ನಿಂತಿರುತ್ತದೆಯಂತೆ.

ಮಹಾಬಲಿಪುರಂ ಕಲ್ಲು….

Vaan-Irai-Kal

ಗುರುತ್ವಾಕರ್ಷಣಾ ಶಕ್ತಿಗೆ ವಿರುದ್ಧವಾಗಿದ್ದು, ಕೆಳಗೆ ಬೀಳುವಂತೆ ಕಾಣುವ ವಿಚಿತ್ರ ಕಲ್ಲು ಚೆನ್ನೈಗೆ 60 ಕಿ.ಮೀ. ದೂರದಲ್ಲಿರುವ ಮಹಾಬಲಿಪುರಂನಲ್ಲಿದೆ. ಹಲಗೆಯಾಕೃತಿಯ ಕಲ್ಲಿನ ಮೇಲೆ 45 ಡಿಗ್ರಿ ಕೋನದಲ್ಲಿ ಓರೆಯಾಗಿ ಬಾಗಿಕೊಂಡಿರುಯೀ ಗುಂಡು 5 ಮೀ. ವ್ಯಾಸ, 250 ಟನ್ ಗಳ ತೂಕವಿರುತ್ತದೆ. 1908 ರಲ್ಲಿ ಅಂದಿನ ಮದ್ರಾಸ್ ಗವರ್ನರ್ ಆರ್ಥರ್ ಲಾವ್ಲೀ 7 ಆನೆಗಳ ಮೂಲಕ ಆ ಕಲ್ಲನ್ನು ತೊಲಗಿಸಬೇಕೆಂದಿದ್ದ. ಆದರೆ ಆ ಕಲ್ಲು 1 ಇಂಚೂ ಕದಲಲಿಲ್ಲ. ಸ್ಥಳೀಯರು ಇದರ ಬಗ್ಗೆ ಕತೆಯೊಂದನ್ನು ಹೇಳುತ್ತಾರೆೆ. ಶ್ರೀಕೃಷ್ಣನು ಬೆಣ್ಣೆಯನ್ನು ಕದ್ದುಕೊಂಡು ಹೋಗುತ್ತಾನೆಂಬ ಹೆದರಿಕೆಯಿಂದ ಕೆಲವರು ಬೆಣ್ಣೆಯನ್ನು ದೃಢವಾಗಿರುವ ಈ ಕಲ್ಲಿನಲ್ಲಿ ಬಚ್ಚಿಟ್ಟಿದ್ದರಂತೆ. ಅಂದಿನಿಂದ ಕಲ್ಲು ಅಲ್ಲಿಯೇ ಇದೆ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಆ ಕಲ್ಲು ಸ್ವರ್ಗದಿಂದ ಬಂದಿರುವುದರಿಂದ ಅದನ್ನು ಜರುಗಿಸಲು ದೇವರುಗಳಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ಈ ಕಲ್ಲನ್ನು ಸ್ಥಳಿಯರು ವಾನ್ ಇರಾಯ್ ಕಲ್ (ಕೃಷ್ಣಾಸ್ ಬಟರ್ ಬಾಲ್) ಎಂದು ಕರೆಯುತ್ತಾರೆ.

 


Click Here To Download Kannada AP2TG App From PlayStore!