ಪುಷ್ಪಕ ವಿಮಾನ ಯಾರದು ಗೋತ್ತಾ…?

ಇಲ್ಲಿಯವರೆಗೂ ನಾವು ರಾಮಾಯಣವನ್ನು, ಅದರಲ್ಲಿ ನಡೆದ ಕೆಲವು ಘಟನೆಗಳನ್ನು, ಎಷ್ಟೋ ವಿಶೇಷಗಳ ಬಗ್ಗೆ ತಿಳಿದ್ದಿದ್ದೇವೆ. ಆದರೆ ಎಷ್ಟು ತಿಳಿದುಕೊಂಡರೂ ಅದರಲ್ಲಿ ಆಗಿಂದಾಗ್ಗೆ ಹೊಸ ಹೊಸ ವಿಷಯಗಳು ತಿಳಿಯುತ್ತಲೆ ಇರುತ್ತವೆ. ಈಗ ನಾವು ಹೇಳಲು ಹೊರಟಿರುವ ವಿಷಯವೂ ಅಂತಹುದೇ. ಆದರೆ ಇದು ಹೊಸ ವಿಷಯವೇನಲ್ಲದ್ದಿದ್ದರೂ, ಇದರ ಬಗ್ಗೆ ಬಹಳ ಜನರಿಗೆ ತಿಳಿದಿರುವುದಿಲ್ಲ. ಇಷ್ಟಕ್ಕೂ ಆ ವಿಷಯ  ಏನೆಂದರೆ… ರಾವಣನು ಲಂಕೆಗೆ ಅಧಿಪತಿ. ಹಾಗೆಯೇ ಆತನ ಬಳಿ ಪುಷ್ಪಕ ವಿಮಾನವೂ ಇರುತ್ತದೆ. ಅದರಲ್ಲಿಯೇ ಅಲ್ವಾ ಸೀತೆಯನ್ನು ಅಪಹರಣಮಾಡಿದ್ದು, ಆದರೆ ನಿಜಕ್ಕೂ ರಾವಣನು ಆಳ್ವಿಕೆ ಮಾಡುತ್ತಿದ್ದ ಲಂಕೆಯ ಜೊತೆಗೆ ಆತನ ಬಳಿ ಇದ್ದ ಪುಷ್ಪಕ ವಿಮಾನವೂ ಸಹ ಆತನ ವಸ್ತುಗಳಲ್ಲ,ಅವು ಬೇರೆ ವ್ಯಕ್ತಿಗೆ ಸೇರಿದಂತಹವುಗಳು. ಹಾಗಾದರೆ ಆ ವ್ಯಕ್ತಿ ಯಾರು….?

ನಿಮಗೆ ಕುಬೇರ ಗೊತ್ತು ಅಲ್ವಾ..! ಸಂಪತ್ತನ್ನು ಸೃಷ್ಟಿಸುವ ಲಕ್ಷ್ಮೀದೇವಿಯಿಂದ ಅದನ್ನು ಪಡೆದು ಎಲ್ಲರಿಗೂ ಸಂಪತ್ತನ್ನು ಹಂಚುವ ವ್ಯಕ್ತಿ ಈ ಕುಬೇರ.ಪುರಾಣಗಳ ಕುಬೇರನು ರಾವಣನಿಗೆ ಅಣ್ಣನಾಗುತ್ತಾನೆ. ಹೇಗೆಂದರೆ, ವಿಶ್ವಶ್ರವನೆಂಬುವವನಿಗೆ ಇಬ್ಬರು ಹೆಂಡತಿಯರು. ಮೊದಲನೆ ಹೆಂಡತಿ ವರವರ್ಣಿನಿ, ಎರಡನೇ ಹೆಂಡತಿ ಕೈಕಸಿ. ಮೊದಲನೇ ಹೆಂಡತಿಗೆ ಜನಿಸಿದವನೇ ಈ ಕುಬೇರ. ರಾವಣ, ಕುಂಭಕರ್ಣ, ಶೂರ್ಪನಖಿ, ವಿಭೀಷಣ ಎರಡನೇ ಹೆಂಡತಿಗೆ ಜನಿಸಿದವರು. ಆದರೆ ಕುಬೇರನು ಹುಟ್ಟಿನಿಂದಲೇ ಕುಬ್ಜನಾಗಿರುತ್ತಾನೆ. ದೊಡ್ಡ ಹೊಟ್ಟೆ, ಮೂರು ಕಾಲುಗಳು, ಶರೀರವೆಲ್ಲವೂ ವಕ್ರವಾಗಿರುತ್ತದೆ. ಆತನಿಗೆ ಹಲ್ಲುಗಳು ಹೊರಗೆ ಬಂದಿರುತ್ತವೆ. ಆದ್ರೂ,ಲೋಕದಲ್ಲಿನ ಸಂಪತ್ತನ್ನು ಹಂಚುವ ದೇವರಂತೆ, ಇರುವುದರಿಂದ ಆತನಿಗಾಗಿ ಒಂದು ನಗರ, ಒಂದು ವಾಹನ ಅವಶ್ಯಕವೆಂದು ಶ್ರೀ ಮಹಾವಿಷ್ಣು ಒಬ್ಬ ಪ್ರಖ್ಯಾತ ಶಿಲ್ಪಿ ವಿಶ್ವಕರ್ಮನಿಂದ ಲಂಕೆ ಎಂಬ ನಗರವನ್ನು, ಪುಷ್ಪಕ ವಿಮಾನವನ್ನು ತಯಾಸಲು ಹೇಳಿ, ಅದೇ ರೀತಿಯಾಗಿ ಮಾಡಿಸಿ, ಅದನ್ನು  ಕುಬೇರನಿಗೆ ನೀಡುತ್ತಾನೆ. ಆಗ ಕುಬೇರನು ಲಂಕೆಗೆ ರಾಜನಾಗಿ ಆಳುತ್ತಿರುತ್ತಾನೆ.

ಅದೇ ಸಂಧರ್ಭದಲ್ಲಿ ರಾವಣನು ಮತ್ತು ಕುಂಭಕರ್ಣ ಕಾಡಿಗೆ ಹೋಗಿ ತೀವ್ರವಾದ ತಪಸ್ಸನ್ನು ಮಾಡಿ, ಬ್ರಹ್ಮನನ್ನು ಮೆಚ್ಚಿಸಿ, ಆತನಿಂದ ಅದೆಷ್ಟೋ ವರಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಬ್ರಹ್ಮನು ನೀಡಿದ ವರಗಳನ್ನು ಪಡೆದುಕೊಂದಿದ್ದ, ರಾವಣ ಮತ್ತು ಕುಂಭಕರ್ಣರಿಂದ ದೇವತೆಗಳೆಲ್ಲರಿಗೂ ಅಪಾಯದ ಸ್ಥಿತಿ ಎದುರಾಗಿದೆ. ಎಲ್ಲಾ ಲೋಕಗಳನ್ನೂ ಆಕ್ರಮಿಸಿಕೊಳ್ಳುತ್ತಿದ್ದರು. ಆ ರೀತಿಯಾಗಿ, ರಾಜನಾಗಿರುವ ಕುಬೇರನ ಲಂಕೆಯನ್ನೂ ಸಹ ರಾವಣನು ತನ್ನ ಕೈ ವಶಮಾಡಿಕೊಂಡನು. ಅದರ ಜೊತೆಗೆ ಪುಷ್ಪಕ ವಿಮಾನವನ್ನೂ ಕಸಿದುಕೊಳ್ಳುತ್ತಾನೆ. ಆಗ ಕೆಲವು ವರ್ಷಗಳವರೆಗೂ ರಾವಣನು ಹಾಗೆಯೇ ಲಂಕೆಯನ್ನು ಆಳ್ವಿಕೆಮಾಡಿದ ನಂತರ,  ಶ್ರೀ ರಾಮನಿಂದ ಮೃತಪಟ್ಟನು. ಅದರಿಂದ ಶ್ರೀ ರಾಮನು ಆ ಪುಷ್ಪಕ ವಿಮಾನವನ್ನು ರಾವಣನ ತಮ್ಮನಾದ ವಿಭೀಷಣನಿಗೆ ನೀಡಿದ್ದನು. ಹಾಗೆ ಅದು ಕೊನೆಗೆ ವಿಭೀಷಣನ ಬಳಿ ಸೇರುತ್ತದೆ. ಆದರೆ ಯುದ್ದ ಮುಗಿದು ಬಳಿಕ ಶ್ರೀರಾಮನು ಮತ್ತೆ ಅಯೋಧ್ಯೆಗೆ ಹೋಗಲು ತನ್ನ ಜೊತೆಗಿರುವ ಎಲ್ಲಾ ಪರಿವಾರವನ್ನು ಅದೇ ಪುಷ್ಪಕ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಾನೆ. ಅನಂತರ ಪುಷ್ಪಕ ವಿಮಾನವು ಮತ್ತೆ ಲಂಕೆಯಲ್ಲಿನ ವಿಭೀಷಣನ ಬಳಿಗೆ ಸೇರುತ್ತದೆ.

ಒಂದು ದೊಡ್ಡ ನಗರದ ಪ್ರಜೆಗಳೆಲ್ಲರೂ ಪ್ರಯಾಣಿಸಲು ಅನುಕೂಲಕರವಾಗುವಂತಹ ಪುಷ್ಪಕ ವಿಮಾನವನ್ನು ಆ ವಿಶ್ವಕರ್ಮ ತಯಾರಿಸಿದ್ದನು. ಅದಕ್ಕೆ ಶ್ರೀ ರಾಮನು, ಆತನ ಪರಿವಾರದವರೆಲ್ಲರೂ ಅದರಲ್ಲಿ ಪ್ರಯಾಣಮಾಡಿ ಅಯೋಧ್ಯೆಗೆ ಸೇರುತ್ತಾರೆ…! ಆದರೆ ಲಂಕಾನಗರವು, ಪುಷ್ಪಕ ವಿಮಾನವೂ ಎರಡನ್ನೂ ಕಳೆದುಕೊಂಡ ಕುಬೇರನಿಗೆ, ಮಹೇಶ್ವರನು ಬೇರೇ ಜವಾಬ್ದಾರಿಗಳನ್ನು ಒಪ್ಪಿಸಿದನು. ಆತನನ್ನು ಉತ್ತರ ದಿಕ್ಕಿಗೆ  ಅಧಿಪತಿಯನ್ನಾಗಿ ಮಾಡಿದರಂತೆ. ಅದಕ್ಕೆ ಉತ್ತರ ದಿಕ್ಕು ಎಂದರೆ ಇಂದಿಗೂ ಧನ, ಸಂಪತ್ತಿಗೆ ನಿಲಯವೆಂದು ಹೇಳುತ್ತಾರೆ.


Click Here To Download Kannada AP2TG App From PlayStore!

Share this post

scroll to top