ರೈಲಿನ ಕೊನೇ ಡಬ್ಬಿಯಲ್ಲಿ ಇಂಗ್ಲಿಷ್ ಅಕ್ಷರ X ಏಕೆ ಬರೆದಿರುತ್ತಾರೋ ಗೊತ್ತಾ…?

ನೀವೆಂದಾದರೂ ರೈಲಿನಲ್ಲಿ ಪ್ರಯಾಣಿಸಿದ್ದೀರಾ? ಇದೆಂತಹ ಪ್ರಶ್ನೆ. ರೈಲಿನಲ್ಲಿ ಪ್ರಯಾಣಿಸದವರು ಯಾರಾದರೂ ಇರುತ್ತಾರ? ಎಂದು ಪ್ರಶ್ನಿಸುತ್ತೀರಾ? ಆದರೆ ಅಸಲು ವಿಷಯ ಅದಲ್ಲ ಬಿಡಿ. ಈ ಪ್ರಶ್ನೆ ಹೀಗೇ ಮುಂದುವರಿಯುತ್ತದೆ. ಅದೇನಂದರೆ. . . . ರೈಲು ಹತ್ತಲು ರೈಲ್ವೇ ಸ್ಟೇಷನ್ ಗೆ ಹೋದಾಗ ರೈಲು ಭೋಗಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಮುಖ್ಯವಾಗಿ ರೈಲಿನ ಕೊನೇ ಭೋಗಿಯ ಹಿಂಭಾಗವನ್ನು ಗಮನಿಸಿದ್ದೀರಾ? ಅಲ್ಲಿ ಆಂಗ್ಲ ಭಾಷೆಯ X ಅಕ್ಷರವನ್ನು ದೊಡ್ಡದಾಗಿ ಬರೆದಿರುತ್ತಾರೆ. ಅದನ್ನು ಯಾವಾಗಲಾದರೂ ನೋಡಿದ್ದೀರಾ? ಹೌದು ನೋಡಿದ್ದೀವಿ ಆದರೇನಂತೆ ಎನ್ನುತ್ತೀರಾ? ಹೌದು ಅದರ ಬಗ್ಗೆಯೇ ನಾವೀಗ ಹೇಳಲು ಹೊರಟಿರುವುದು. ಅಸಲಿಗೆ ಆ ರೀತಿ X ಎಂದು ಏಕೆ ಬರೆದಿದ್ದಾರೆಂದು ನಿಮಗೆ ಗೊತ್ತಿದೆಯೇ? ಗೊತ್ತಿಲ್ಲವೇ?ಹಾಗಾದರೆ ಏಕೆಂಬುದನ್ನು ತಿಳಿದುಕೊಳ್ಳಿ.

ರೈಲಿನ ಕೊನೇ ಭೋಗಿಯಮೇಲೆ X ಎಂದು ಬರೆದಿದ್ದಾರೆಂದರೆ ಅದು ಕೊನೇ ಭೋಗಿ ಎಂದರ್ಥ. ಅಷ್ಟೇ ಅಲ್ಲ ಆ ಅಕ್ಷರದ ಕೆಳಗೆ ಕೆಂಪು ಲೈಟು, ಅದರ ಪಕ್ಕದಲ್ಲಿಯೇ LV ಎಂದು ಬರೆದಿರುವ ಫಲಕವನ್ನೂ ತೂಗುಹಾಕಿರುತ್ತಾರೆ. ಇವೆಲ್ಲವೂ X ನ ಹಾಗೆಯೇ ಉಪಯೋಗಕ್ಕೆ ಬರುತ್ತವೆ. ಇದರಿಂದ ರೈಲಿಗೆ ಇರುವ ಕೊನೇ ಭೋಗಿಯೆಂದು ಅದನ್ನು ಪರಿಗಣಿಸುತ್ತಾರೆ. X ಅಕ್ಷರ ಹಗಲು ವೇಳೆ ಉಪಯೋಗಕ್ಕೆ ಬಂದರೆ ಕೆಂಪು ಲೈಟು ರಾತಿ ವೇಳೆ ಉಪಯೋಗಕ್ಕೆ ಬರುತ್ತದೆ. ಇದರಿಂದ ಇವುಗಳನ್ನು ನೋಡಿದವರು ಆ ರೈಲು ಎಲ್ಲಾ ಭೋಗಿಗಳೊಂದಿಗೆ ಚಲಿಸುತ್ತಿದೆಯೆಂದು ಅರ್ಥ. ಒಂದು ವೇಳೆ ಕೊನೆಯ ಭೋಗಿಯಮೇಲೆ ಇವ್ಯಾವೂ ಇಲ್ಲದಿದ್ದರೆ, ಕೆಲವು ಭೋಗಿಗಳನ್ನು ಹೊರತು ಪಡಿಸಿ ಆ ರೈಲು ಚಲಿಸುತ್ತಿದೆಯೆಂದು ತಿಳಿದು ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತಾರೆ.ಇನ್ನು ಮುಂದೆ ನೀವು ಇವುಗಳನ್ನು ಜಾಗ್ರತೆಯಾಗಿ ಗಮನಿಸಿ. ಒಂದು ವೇಳೆ ಈ ಅಕ್ಷರಗಳು ಕಾಣಿಸದಿದ್ದರೆ ರೈಲ್ವೇ ಅಧಿಕಾರಿಗಳಿಗೆ ತಿಳಿಸುವುದನ್ನು ಮರೆಯಬೇಡಿ.


Click Here To Download Kannada AP2TG App From PlayStore!