ಹುಣಿಸೆ ಬೀಜಗಳನ್ನು ಬಿಸಾಡುತ್ತಿದ್ದೀರಾ…? ಹಾಗಾದರೆ ಇದನ್ನು ಓದಿ …!!!

ಹುಣಿಸೆ ಹಣ್ಣು ಉಪಯೋಗಿಸುವಾಗ, ಅದರಲ್ಲಿರುವ ಬೀಜಗಳನ್ನುತೆಗೆದು ಬಿಸಾಡುತ್ತೇವೆ. ಆದರೆ, ಇದನ್ನು ಓದಿದ ಮೇಲೆ ನೀವು ಖಂಡಿತವಾಗಿಯೂ ಹುಣಿಸೆ ಬೀಜಗಳನ್ನು ಬಿಸಾಡುವುದಿಲ್ಲ. ಅವುಗಳಲ್ಲಿ ಅಡಗಿರುವ ಆರೋಗ್ಯಕ್ಕೆ ಉಪಯುಕ್ತವಾದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.ಇಂದು ಬಹಳ ಜನರನ್ನು ಪೀಡಿಸುತ್ತಿರುವ ಸಮಸ್ಯೆಗಳಲ್ಲಿ ಮೊಣಕಾಲಿನ ಸಮಸ್ಯೆ ಪ್ರಮುಖವಾದುದು. ಇನ್ನು ನೀವು ಚಿಂತಿಸ ಬೇಕಾಗಿಲ್ಲ ಮೊಣಕಾಲು ನೋವನ್ನು ಮನೆಯಲ್ಲಿಯೇತಯಾರಿಸಿದ ಔಷದಿಯಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಉಪಾಯನ್ನು ನೋಡೋಣ ಬನ್ನಿ.

Image result for chintha ginjalu

ಹುಣಿಸೆ ಬೀಜಗಳ ಪುಡಿಯನ್ನು ತಯಾರಿಸುವ ವಿಧಾನ :

ಬೇಕಾದಷ್ಟು ಹುಣಿಸೆ ಬೀಜಗಳನ್ನು ಚೆನ್ನಾಗಿ ಹುರಿಯಬೇಕು. ನಂತರ ಎರಡು ದಿನಗಳ ಕಾಲ ನೀರಿನಲಿ ನೆನೆಸಿಡಬೇಕು. ದಿನಕ್ಕೆ ಎರಡು ಸಲ ನೀರನ್ನು ಬದಲಾಯಿಸಬೇಕು. ಎರಡು ದಿನಗಳ ನಂತರ ಹುಣಿಸೆ ಬೀಜಗಳ ಸಿಪ್ಪೆಯನ್ನು ಬೇರ್ಪಡಿಸಬೇಕು. ನಂತರ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮಿಕ್ಸಿಯಲ್ಲಿ ಪುಡಿಮಾಡಿ, ಗಾಜಿನ ಸೀಸೆಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು.

ಉಪಯೋಗಿಸುವ ವಿಧಾನ:

ಈ ಪುಡಿಯನ್ನು ಪ್ರತೀ ದಿನ ಎರಡು ಸಲ ಅರ್ಧ ಚಮಚದಂತೆ ನೀರಿಗೆ ಅಥವಾ ಹಾಲಿಗೆ ಸಕ್ಕರೆ ಬೆರೆಸಿ ತೆಗೆದುಕೊಳ್ಳಬೇಕು.ಹೀಗೆ ಮಾಡುವುದರಿಂದ, ಹುಣಿಸೆ ಬೀಜಗಳಲ್ಲಿರುವ ಔಷಧೀಯ ಗುಣಗಳಿಂದಾಗಿ ಎರಡು ಮೂರು ವಾರಗಳಲ್ಲಿ ಮೊಣಕಾಲುಗಳ ನೋವು ಕಡಿಮೆಯಾಗುತ್ತದೆ. ಅದೇ ರೀತಿ ಕೀಲುಗಳಲ್ಲಿ ಸವೆದಿರುವ ಭಾಗವನ್ನು ಪುನರ್ ನಿರ್ಮಿಸುತ್ತದೆ. ಇದರಿಂದ ಕೀಲು ನೋವುಗಳಿಂದ ಶಾಶ್ವತ ಮುಕ್ತಿ ದೊರೆಯುತ್ತದೆ.

2

ಉಪಯೋಗಗಳು :

ಇಷ್ಟೇ ಅಲ್ಲದೆ ಮೇಲೆ ತಿಳಿಸಿದ ರೀತಿಯಲ್ಲಿ ಉಪಯೋಗಿಸಿದರೆ…ಅತಿಸಾರ, ಚರ್ಮ ವ್ಯಾಧಿಗಳು, ಅಜೀರ್ಣ,ತುರಿಕೆ. ದಂತ ಸಮಸ್ಯೆಗಳು ಕೆಮ್ಮು, ಗಂಟಲ ಸೋಂಕು, ಸಕ್ಕರೆ ಖಾಯಿಲೆ, ಹೃದಯ ಸಂಬಂಧೀ ಖಾಯಿಲೆಗಳಿಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ.

ಮೂಳೆಗಳು ಮುರಿದಾಗ…ಆ ಭಾಗದಲ್ಲಿ ಪ್ರತೀ ದಿನ ಹುಣಿಸೆ ಬೀಜಗಳ ಪುಡಿಯನ್ನು ಪೇಸ್ಟ್ ಮಾಡಿ ಹಚ್ಚಿದರೆ, ಮೂಳೆಗಳು ಬೇಗನೆ ಕೂಡಿಕೊಳ್ಳುತ್ತವೆ.

ನೋಡಿದಿರಲ್ಲ ಹುಣಿಸೆ ಬೀಜಗಳ ಹಲವು ಉಪಯೋಗಗಳು. ಇನ್ನೇಕೆ ತಡ. ನೀವೂ ಈ ಪುಡಿಯನ್ನು ಉಪಯೋಗಿಸಿ.


Click Here To Download Kannada AP2TG App From PlayStore!