ನಿಮ್ಮ ಹಲ್ಲುಗಳು’ಜುಂ’ ಎನ್ನುತ್ತಿವೆಯೇ? ಹಾಗಾದರೆ ಹೀಗೆ ಮಾಡಿದರೆ ಸರಿಹೋಗುತ್ತವೆ.

ಐಸ್ ಕ್ರೀಮ್ ತಿಂದಾಗ, ಕೂಲ್ ಡ್ರಿಂಕ್ಸ್, ಕಾಫೀ, ಟೀ, ಸೂಪ್ ಮೊದಲಾದವುಗಳನ್ನು ಕುಡಿದಾಗ ಕೆಲವರಿಗೆ ಹಲ್ಲುಗಳು ಜುಮುಗುಟ್ಟುತ್ತವೆ. ಹಲ್ಲುಗಳನ್ನು ಉಜ್ಜುತ್ತಿರುವಾಗಲು , ತಂಪಾದ ಅಥವಾ ಬಿಸಿ ಪದಾರ್ಥಗಳು ಹಲ್ಲುಗಳಿಗೆ ಸೋಕಿದಾಗಲೂ ಜುಂ ಎನ್ನುವುದನ್ನು ಸೆನ್ಸಿವಿಟಿ ಎನ್ನುತ್ತಾರೆ. ಪ್ರತಿ ನಾಲ್ವರಲ್ಲಿ ಒಬ್ಬರು ಈ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಹಲ್ಲುಗಳ ಮೇಲಿರುವ ಎನಾಮಿಲ್ ಸವೆದಿರುವುದೇ ಹೀಗಾಗಲು ಮುಖ್ಯ ಕಾರಣ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ, ವಸಡುಗಳ ಬಳಿ ಪಾಚಿಕಟ್ಟಿ ವಸಡುಗಳ ಆರೋಗ್ಯ ಹಾಳಾಗುತ್ತದೆ. ಗಟ್ಟಿಯಾದ ಟೂತ್ ಬ್ರಷ್ ನಿಂದ ಹಲ್ಲುಗಳನ್ನು ಉಜ್ಜುವುದರಿಂದಲೂ ಸೆನ್ಸಿವಿಟಿ ಸಮಸ್ಯೆ ತಲೆದೋರುತ್ತದೆ. ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ… ಕ್ರಮೇಣ ಹಲ್ಲುಗಳು ಬಲಹೀನಗೊಂಡು ಬಿದ್ದು ಹೋಗುವ ಅಪಾಯವಿದೆ. ಸೆನ್ಸಿಟಿವಿಟಿಯಿಂದ ಪಾರಾಗಬೇಕಾದರೆ…

ಹೀಗೆ ಮಾಡಿ:

  • ಮೃದುವಾದ ಬ್ರಷ್ ನಿಂದಲೇ ಹಲ್ಲುಜ್ಜಬೇಕು.
  • ಹಲ್ಲುಜ್ಜುವಾಗ ಹೆಚ್ಚು ಒತ್ತಡ ಹಾಕಿ ಉಜ್ಜಬಾರದು. ಹೀಗೆ ಮಾಡುವುದರಿಂದ ಹಲ್ಲುಗಳ ಮೇಲಿರುವ ಎನಾಮಿಲ್ ಸವೆದುಹೋಗುತ್ತದೆ.
  • ಯಾವಾಗಲೂ ಒಂದು ಕ್ರಮದಲ್ಲಿಯೇ ಹಲ್ಲುಗಳನ್ನು ಉಜ್ಜಿಕೊಳ್ಳಬೇಕು. ಕನಿಷ್ಟ ಮೂರು ನಿಮಿಷಗಳ ಕಾಲ ಹಲ್ಲುಗಳನ್ನು ಶುಭ್ರಪಡಿಸಿಕೊಳ್ಳಬೇಕು.
  • ಹೊರಗೆ ಕಾಣಿಸುವ ಮುಂಭಾಗದ ಹಲ್ಲುಗಳನ್ನಲ್ಲದೆ, ವಸಡು ಹಾಗೂ ಒಳಗಿನ ಹಲ್ಲುಗಳ ಶುಭ್ರತೆಯ ಕಡೆಗೂ ಗಮನ ಹರಿಸಬೇಕು.
  • ಪ್ರತೀ ಎರಡು ತಿಂಗಳಿಗೊಮ್ಮೆ ಟೂತ್ ಬ್ರಷ್ ತಪ್ಪದೇ ಬದಲಿಸಬೇಕು.
  • ವಸಡುಗಳಲ್ಲಿ ಸಣ್ಣ ಪುಟ್ಟ ಸಮಸ್ಯೆ ತಲೆದೋರಿದರೂ, ವೈದ್ಯರನ್ನು ಸಂಪರ್ಕಿಸಬೇಕು.
  • ಮಾಂಸಾಹಾರ ಪದಾರ್ಥಗಳನ್ನು ಸೇವಿಸಿದ ನಂತರ ತಪ್ಪದೇ ಹಲ್ಲುಗಳನ್ನು ಶುಭ್ರಮಾಡಬೇಕು. ಹಲ್ಲುಗಳ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಪದಾರ್ಥಗಳನ್ನು ತೊಲಗಿಸಬೇಕು.
  • ಸಿಹಿ ಪದಾರ್ಥಗಳು ಹಲ್ಲುಗಳಿಗೆ ತೀವ್ರವಾಗಿ ಹಾನಿಯನ್ನು ಉಂಟುಮಡುತ್ತವೆ. ಸಾಧ್ಯವದಷ್ಟು ಚಾಕ್ಲೇಟ್, ಸ್ವೀಟ್ಸ್, ಐಸ್ ಕ್ರೀಮ್ ಗಳನ್ನು ತಿನ್ನುವುದನ್ನು ಕಡಿಮೆಮಾಡಬೇಕು.
  • ಹಸಿ ತರಕಾರಿಗಳು, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಇವುಗಳಲಿರುವ ನಾರು ಪದಾರ್ಥಗಳು ಹಲ್ಲುಗಳನ್ನು ಶುಭ್ರಗೊಳಿಸುತ್ತವೆ.

ಎನಾಮಿಲ್ ಹಾಳಾಗಿದ್ದರೆ ಖರ್ಜೂರ ಪೇಸ್ಟ್ :
ಹಲ್ಲುಗಳ ಮೇಲಿರುವ ಎನಾಮಿಲ್ ಸಂರಕ್ಷಿಸುವುದರಲ್ಲಿ ಖರ್ಜೂರಗಳು ಉತ್ತಮವಾಗಿ ಕೆಲಸಮಾಡುತ್ತವೆ. ನಿಜ ಹೇಳಬೇಕೆಂದರೆ, ‘ಹೈಡ್ರಾಕ್ಸೀಫ್ಲೋರೋ ಎಪಟೈಟ್ ‘ ಎಂಬ ಪದಾರ್ಥದಿಂದ ರೂಪುಗೊಂಡಿರುವ ಹಲ್ಲುಗಳ ಎನಾಮಿಲ್ ಮೂಳೆಗಳಿಗಿಂತಲೂ ಗಟ್ಟಿಯಾಗಿರುತ್ತದೆ. ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಎನಾಮಿಲ್ ಕ್ರಮೇಣ ಸವೆದುಹೋಗುತ್ತದೆ. ಖರ್ಜೂರಗಳನ್ನು ದಿನಾಲೂ ಸೇವಿಸುವುದರಿಂದ ಅವುಗಳಲ್ಲಿರುವ ‘ಫ್ಲೋರಿನ್’ ದಂತಗಳ ಮೇಲೆ ಪಾಚಿ ಸೇರಿಕೊಳ್ಳದಂತೆ ಮಾಡಿ,ಎನಾಮಿಲ್ ನೊಂದಿಗೆ ಸೇರಿಕೊಂಡು’ ಹೈಡ್ರಾಕ್ಸೀ ಫ್ಲೋರೋ ಎಪಟೈಟ್’ ಆಗಿ ಪರಿವರ್ತನೆಗೊಂಡು ದಂತಗಳನ್ನು ರಕ್ಷಿಸುತ್ತದೆ.


Click Here To Download Kannada AP2TG App From PlayStore!