ಹದಿನಾರು ವರ್ಷದಲ್ಲಿ ಪ್ರೆಗ್ನೆಂಟ್.. ನನಗೆ ಹೊಸ ಬಾಳು ಕೊಟ್ಟ ಡಾಕ್ಟರ್.!

ನನ್ನ ಹೆಸರು ಸಂಧ್ಯಾ, 16 ವರ್ಷದ ವಯಸ್ಸಲ್ಲಿ.. ನಾನೊಬ್ಬ ಹುಡುಗನ ಕೈಲಿ ಮೋಸಹೋದೆ.! ಸೆಕ್ಸ್ ಫೀಲಿಂಗ್ಸ್ ಹೆಚ್ಚಾಗಿದ್ದ ಆ ಟೀನೇಜ್‌ನಲ್ಲಿ… ಏನೇನೋ ಹೇಳಿ ನನ್ನ ವಶಪಡಿಸಿಕೊಂಡ.! ಅದರ ಫಲವಾಗಿ ನಾನು ಗರ್ಭಿಣಿಯಾದೆ.. ಈ ವಿಷಯದ ಬಗ್ಗೆ ಹುಡುಗನನ್ನು ಕೇಳಿದರೆ.. ನನಗೇನು ಸಂಬಂಧ ಇಲ್ಲ.. ನಿನಗೆ ದಿಕ್ಕಿರುವ ಕಡೆ ಹೇಳಿಕೋ ಎಂದು.. ಫ್ಯಾಮಿಲಿ ಸಮೇತ ನಮ್ಮೂರು ಬಿಟ್ಟು ಓಡಿ ಹೋದ. ಈ ಸಂಗತಿ ಮನೆಯಲ್ಲಿ ಗೊತ್ತಾಗಿ.. ನನ್ನನ್ನು ಮನೆಯಿಂದ ಓಡಿಸಿದರು.! ಎತ್ತ ಹೋಗಬೇಕೋ ಗೊತ್ತಿಲ್ಲ, ಏನು ಮಾಡಬೇಕೋ ಗೊತ್ತಿಲ್ಲ..?

ನನ್ನ ಗೆಳತಿಯ ಮನೆಗೆ ಹೋದೆ.. ವಿಷಯ ಗೊತ್ತಾಗಿ ಅವರ ಪೇರೆಂಟ್ಸ್ ಇನ್ನೊಮ್ಮೆ ನಮ್ಮ ಮನೆಗೆ ಬರಬೇಡ ಎಂದು ಮುಖದ ಮೇಲೆ ಹೊಡೆದಂತೆ ಹೇಳಿದರು. ಆ ಹುಡುಗಿ ಜತೆ ನಿನಗೇನು ಫ್ರೆಂಡ್‌ಶಿಪ್ ಎಂದು ನನ್ನ ಗೆಳತಿಯನ್ನೂ ಬೈದರು. ಎರಡು ದಿನಗಳ ಕಾಲ ಊಟ ಮಾಡದೆ.. ಗುಡಿಗಳಲ್ಲಿ ತಲೆಮರೆಸಿಕೊಳ್ಳುತ್ತಾ ಕಳೆದ..! ಸಾವೊಂದೇ ದಾರಿ ಎಂದುಕೊಂಡು…ಕ್ರಿಮಿನಾಶಕ ಸೇವಿಸಿ ರಸ್ತೆ ಮೇಲೆ ಬಿದ್ದುಬಿಟ್ಟೆ..! ಕಣ್ಣು ತೆರೆದು ನೋಡಿದರೆ ಆಸ್ಪತ್ರೆ ಬೆಡ್ ಮೇಲೆ ಇದ್ದೆ.

ನರ್ಸ್… ನನಗೇನಾಗಿದೆ? ನನ್ನನ್ನು ಇಲ್ಲಿ ಯಾರು ಸೇರಿಸಿದರು? ಎಂದು ಕೇಳಿದೆ.. ಈ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಸತೀಶ್ ನಿಮ್ಮನ್ನು ಇಲ್ಲಿ ಜಾಯಿನ್ ಮಾಡಿದರು. ನೀವು ರಸ್ತೆ ಮೇಲೆ ತಲೆಸುತ್ತಿ ಬಿದ್ದುಹೋದರೆ.. ಅವರೇ ಸ್ವತಃ ತನ್ನ ಕಾರಿನಲ್ಲಿ ಕರೆತಂದು ಇಲ್ಲಿ ಜಾಯಿನ್ ಮಾಡಿದರು. ನಿಮಗೆ ಅರ್ಜೆಂಟ್ ಆಗಿ ಅಬಾರ್ಷನ್ ಮಾಡಬೇಕಾಯಿತು.. ಹಾಗಾಗಿ ಅವರು ಹತ್ತಿರದಲ್ಲೇ ಇದ್ದು ನೋಡಿಕೊಂಡು ನಿಮಗೆ ಅಬಾರ್ಷನ್ ಮಾಡಿಸಿದರು. ಇಲ್ಲದಿದ್ದರೆ ನಿಮ್ಮ ಪ್ರಾಣಕ್ಕೆ ಅಪಾಯ ಇತ್ತು.! ಎಂದು ಹೇಳಿದರು. ಅಷ್ಟರಲ್ಲಿ.. ಹೇಗಿದೆಯಮ್ಮಾ? ಎಂದು ಬಂದರು ಡಾ. ಸತೀಶ್ ನನ್ನ ಬಳಿಗೆ.!!

ಪರ್ವಾಗಿಲ್ಲ ಸಾರ್.. ಥ್ಯಾಂಕ್ಸ್ ಎಂದು ನಮಸ್ಕಾರ ಮಾಡಿದೆ… ನನ್ನ ಡೀಟೇಲ್ಸ್ ಕೇಳಿದರು, ನನ್ನ ಕಥೆ ಸಾರ್‌ಗೆ ಹೇಳಿಗೆ… ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರು ಅವರು.. ಅದೇ ಆಸ್ಪತ್ರೆಯಲ್ಲಿ ತನ್ನ ರೆಫರೆನ್ಸ್‌ನಿಂದ ಕೆಲಸ ಕೊಡಿಸಿದರು. ಬಳಿಕ ನಮ್ಮ ಮನೆಗೆ ಬಂದು ತಂದೆತಾಯಿ ಜತೆ ಮಾತನಾಡಿದರು. ನಾನೀಗ ನಮ್ಮ ತಂದೆತಾಯಿ ಮಾತು ಕೇಳುತ್ತಾ ನನ್ನ ಕೆಲಸ ಮಾಡಿಕೊಂಡು ಹಾಯಾಗಿ ಇದ್ದೇನೆ.!

ನಾನು ಹೇಳಬೇಕೆಂದಿದ್ದು:
ಟೀನೇಜ್‌ನಲ್ಲಿ ಮನಸ್ಸು ನಮ್ಮ ಮಾತು ಕೇಳಲ್ಲ. ಏನೇನೋ ಬಯಸುತ್ತದೆ. ಎಲ್ಲರೂ ಒಳ್ಳೆಯವರೇ ಎಂದು ಅನ್ನಿಸುತ್ತದೆ. ಆದರೆ ಸ್ವಲ್ಪ ಎಚ್ಚೆತ್ತುಕೊಳ್ಳಬೇಕಾದ ವಯಸ್ಸದು.! ಹೆಜ್ಜೆ ತಪ್ಪಿದರೆ…ಜೀವನವೇ ತಲೆಕೆಳಗಾಗುತ್ತದೆ. ಎಲ್ಲರಿಗೂ ಸತೀಶ್ ತರಹದವರು ಸಿಗಲ್ಲ.!


Click Here To Download Kannada AP2TG App From PlayStore!