ಶವವನ್ನು ತೆಗೆದುಕೊಂಡು ಹೋಗುವುದಕ್ಕೆ ಆಂಬುಲೆನ್ಸ್ ಕೊಡದ ವೈದ್ಯರು… ಭುಜದ ಮೇಲೆ ಪುಟ್ಟಕಂದಮ್ಮನೊಂದಿಗೆ ಬಾಮೈದನ ಶವವನ್ನು ಹೊತ್ತುಕೊಂಡು ಹೋದ ಅತ್ತಿಗೆ !!

ಒಡಿಸ್ಸಾದಲ್ಲಿ ಹೆಂಡತಿಯ ಶವವನ್ನು ಗಂಡ ತನ್ನ ಭುಜಗಳ ಮೇಲೆ ಹೊರುತ್ತಾ ಕಿಲೋಮೀಟರ್ ನಡೆದು ಬಂದ ಘಟನೆ ಮರೆಯುವ ಮುನ್ನವೇ ಅಸ್ಸಾಂನಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಕಾಣಿಸಿಕೊಂಡಿದೆ. ಒಂದು ಗಿರಿಜನ ವ್ಯಕ್ತಿ ತನ್ನ ತಮ್ಮನ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ಸೈಕಲ್’ನ ಮೇಲೆ ಕರೆದೊಯ್ಯುತ್ತಾನೆ. ಮತ್ತೊಂದು ಕಡೆ ಚಿಕ್ಕ ಮಗು ಆದರೂ ತನ್ನ ಸೊಸೆಯ ಮೃತದೇಹವನ್ನು ಕರೆದುಕೊಂಡು ಹೋಗುವುದಕ್ಕೆ ಆಸ್ಪತ್ರೆಯವರು ಆಂಬುಲೆನ್ಸ್ ಕೊಡದಿದ್ದಾಗ ತನ್ನ ಸೈಕಲ್ ಮೇಲೆ ಹಾಕಿಕೊಂಡು ಹೋದನು ಮಗುವಿನ ಮಾವ‌. ಪ್ರತಿಯೊಂದು ಈ ರೀತಿಯ ಘಟನೆಗಳು ಮನಸ್ಸನ್ನು ಗಾಯಗೊಳಿಸುವ ಘಟನೆಗಳೇ..!!


ತಾಜಾ ಸುದ್ದಿ ಎಂಬಂತೆ ಮತ್ತೊಂದು ಈ ರೀತಿ ಘಟನೆ ಕಾಣಿಸಿಕೊಂಡಿದೆ. ಹಾವು ಕಡಿತದಿಂದ ಬಾಮೈದ ಸತ್ತು ಹೋದನು, ವೈದ್ಯರ ನಿರ್ಲಕ್ಷ್ಯಣದಿಂದಲೇ ಈ ರೀತಿ ಎಂದು ಉರಿದು ಬಿದ್ದರು ಅವರ ಅತ್ತಿಗೆ. ಆದರೆ ವೈದ್ಯರು ಆಂಬುಲೆನ್ಸ್ ಕೊಡಲಿಲ್ಲ. ಇನ್ನೇನು ಮಾಡಲಾಗದೆ ಚಿಕ್ಕ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು, ಮತ್ತೊಂದು ಕಡೆ ಬಾಮೈದನ ಶವವನ್ನು ಗಂಡನ ಜೊತೆಗೆ ಹೊರುವುದಕ್ಕೆ ಅತ್ತಿಗೆ ಸಿದ್ಥಳಾದಳು. ಈ ಘಟನೆ ಜಾರ್ಖಂಡ್’ನಲ್ಲಿನ ಛತ್ರ ಜಿಲ್ಲೆಯಲ್ಲಿ ನಡೆದಿದೆ.

ಸಿಡ್ಪಾ ಗ್ರಾಮಕ್ಕೆ ಸೇರಿದ ರಾಜೇಂದ್ರ ಒರಾನ್ ಎನ್ನುವ ಯುವಕನಿಗೆ ಒಂದು ಹಾವು ಕಚ್ಚಿತು. ಬೇಗನೇ ಕುಟುಂಬ ಸದಸ್ಯರು ಆತನನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಚಿಕಿತ್ಸೆ ಪಡೆಯುತ್ತಾ ಆತ ಮರಣಿಸಿದನು. ಇದರ ಮೇಲೆ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿ, ಆಸ್ಪತ್ರೆಯ ಮುಂದೆ ಆಂದೋಲನಲವನ್ನು ಮಾಡಿದರು. ವೈದ್ಯರ ನಿರ್ಲಕ್ಷ್ಯದ ಕಾರಣದಿಂದಲೇ ರಾಜೇಂದ್ರ ಮರಣಿಸಿದನು ಎಂದು ಉರಿದುಬಿದ್ದರು‌. ತಮಗೆ ನ್ಯಾಯವನ್ನು ಒದಗಿಸಿಕೊಡುವಂತೆ ಡಿಮ್ಯಾಂಡ್ ಮಾಡಿದರು. ಆದರೆ ವೈದ್ಯರು ಶವವನ್ನು ಗ್ರಾಮಕ್ಕೆ ಕಳುಹಿಸುವುದಕ್ಕಾಗಿ ಆಂಬುಲೆನ್ಸ್ ಕೊಡಲಾಗುವುದಿಲ್ಲ ಎಂದರು‌. ಬೇಡಿಕೊಂಡರೂ ಪ್ರಯೋಜನವಾಗದೇ ಮೃತಪಟ್ಟವನ ಅಣ್ಣ, ಅತ್ತಿಗೆಯೂ ತಾವೇ ಶವವನ್ನು ಹೊರಲು ಸಿದ್ಧವಾದರು. ಸ್ಥಳೀಯರ ಸಹಾಯದಿಂದ ರಾಜೇಂದ್ರನ ಶವವನ್ನು ಗ್ರಾಮಕ್ಕೆ ತಂದರು. ಅಂತ್ಯಕ್ರಿಯೆಗಳು ಪೂರ್ಣಗೊಂಡಿತು. ಈ ಫೋಟೋಗಳು ವೈರಲ್ ಆಗುವುದರೊಂದಿಗೆ ಇಬ್ಬರು ಅಧಿಕಾರಿಗಳ ಮೇಲೆ ಹೊಡೆತ ಬಿದ್ದಿತು.


Click Here To Download Kannada AP2TG App From PlayStore!