ಎರಡೇ ದಿನಗಳಲ್ಲಿ ಆಕೆಯ ಮದುವೆ, ಆದರೆ…ನಾಯಿಯಿಂದ ಮದುವೆ ನಿಂತುಹೋಯಿತು. ಕಾರಣವೇನೆಂದು ಗೊತ್ತಾ.?

ಬೆಂಗಳೂರಿನ ಕರಿಷ್ಮಾ ವಾಲಿಯಾ ರಿಷ್ಟಾ ಳಿಗೆ ಮದುವೆ ನಿಶ್ಚಯವಾಯಿತು. ಆಕೆಗೆ ಬಾಲ್ಯದಿಂದಲೂ ಸಾಕು ಪ್ರಾಣಿಗಳೆಂದರೆ ಬಹಳ ಇಷ್ಟ. ಆಕೆ ಮುದ್ದಿನಿಂದ ಸಾಕಿಕೊಂಡಿದ್ದ ನಾಯಿಯೆಂದರೆ ಆಕೆಗೆ ಪಂಚಪ್ರಾಣ. ಈ ವಿಷಯವನ್ನು ಆಕೆ ವಾಟ್ಸಾಪ್ ಮೂಲಕ ತನ್ನ ಭಾವೀ ಪತಿಗೆ ತಿಳಿಸಿದಳು. ಆದರೆ… ಅದಕ್ಕೆ ಆತ, ‘ನಾಯಿಗಳೆಂದರೆ ನನಗೆ ಅಸಹ್ಯ. ನನ್ನ ತಾಯಿಯೂ ಸಹ ನಾಯಿಗಳನ್ನು ಕಂಡರೆ ಆಗುವುದಿಲ್ಲ ‘ವೆಂದು ತಿಳಿಸಿದ. ಹಾಗಾದರೆ… ನಮ್ಮ ಮದುವೆ ನಡೆಯುವುದಿಲ್ಲವೆಂದು ಕಡ್ಡಿತುಂಡು ಮಾಡಿದಂತೆ ಹೇಳಿದಳು.

ನಮ್ಮಿಬ್ಬರ ನಡುವೆ ಆ ನಾಯಿ ಏಕೆ? ಎಂದು ಪ್ರಶ್ನಿಸಿದ. ನಿಜವಾಗಲೂ ಸೀರಿಯಸ್ ಆಗಿ ಹೇಳುತ್ತಿದ್ದೀಯಾ? ಎಂದು ಚಾಟ್ ನಲ್ಲೇ ಕೇಳಿದ. ನಮ್ಮಿಬ್ಬರ ಜೀವನ ಶಾಶ್ವತ. ನಾಯಿಯೊಂದಿಗಿನ ಅನುಬಂಧ ತಾತ್ಕಾಲಿಕ ಎಂದು ಗುರುತಿಸಿದ.

‘ಮದುವೆ ಮಾಡಿಕೊಳ್ಳುವ ಸಲುವಾಗಿ ನನ್ನ ಪ್ರೀತಿಯ ನಾಯಿಯನ್ನು ದೂರ ಮಾಡಲಾಗುವುದಿಲ್ಲ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಮನಸ್ತಾಪ ಬರಬಾರದೆಂಬ ಉದ್ದೇಶದಿಂದ ನಿಮ್ಮನ್ನು ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ವಾಟ್ಸಾಪ್ ನಲ್ಲಿಯೇ ಉತ್ತರಿಸಿದಳು. ಈರೀತಿ ನಾಯಿಯ ಮೇಲಿನ ಮಮಕಾರದಿಂದಾಗಿ ಎರಡೇ ದಿನಗಳಲ್ಲಿ ನಡೆಯಬೇಕಾದ ಮದುವೆ ರದ್ದಾಯಿತು.


Click Here To Download Kannada AP2TG App From PlayStore!