ನೀವು ಚೆನ್ನಾಗಿರಬೇಕಾದರೆ… ಈ 5 ಲಕ್ಷಣಗಳಿರುವ ವ್ಯಕ್ತಿಗಳನ್ನು ದೂರವಿಡಬೇಕಂತೆ.

ಬಂಧುಗಳು,ಮಿತ್ರರು,ಪರಿಚಯಸ್ಥರು…. ಹೀಗೆ ಸಮಾಜದಲ್ಲಿ ಎಲ್ಲರೂ ವಿಭಿನ್ನ ಮನಸ್ತತ್ವ ಉಳ್ಳವರಾಗಿರುತ್ತಾರೆ. ಕೆಲವರು ನಮ್ಮ ಸ್ನೇಹವನ್ನು ಮಾಡಿ ಮನಸ್ಸಿಗೆ ಹತ್ತಿರವಾದರೆ,ಕೆಲವರು ಶತ್ರುಗಳಾಗಿರುತ್ತಾರೆ. ಇನ್ನು ಕೆಲವರು ನಮ್ಮೊಂದಿಗೆ ಸ್ನೇಹದಿಂದಿದ್ದು,ಅಸೂಯೆಯಿಂದ ಷಡ್ಯಂತ್ರಗಳನ್ನು ರೂಪಿಸುತ್ತಿರುತ್ತಾರೆ. ಅಂತಹವರು ನಮ್ಮ ಗಮನಕ್ಕೆ ಬಂದರೆ ನಾವು ದೂರವಿಡುತ್ತೇವೆ. ಇಂತಹವರಲ್ಲದೆ ಇನ್ನೂ ಕೆಲವು ರೀತಿಯ ಜನರಿರುತ್ತಾರೆ. ಅಂತಹವರನ್ನೂ ಸಹ ನಾವು ದೂರವಿಡಬೇಕು.
ಈ ನಿಟ್ಟಿನಲ್ಲಿ ನಾವು ಎಂತಹ ವ್ಯಕ್ತಿಗಳನ್ನು ದೂರವಿಡಬೇಕೆಂಬುದನ್ನು ತಿಳಿಯೋಣ .

laughing-at-others

1. ನಿಮಗೆ ಕಷ್ಟಗಳು ಎದುರಾದರೆ,ನಿಮ್ಮ ಸುತ್ತಲಿನ ಜನರಲ್ಲಿ ಕೆಲವರು ಒಳಗೊಳಗೆ ಸಂತೋಷಪಡುತ್ತಾರೆ. ಇಂತಹವರು ನಮಗೆ ಹೆಚ್ಚಾಗಿ ಕಾಣಲು ಸಿಗುತ್ತಾರೆ. ಇಂತಹ ವ್ಯಕ್ತಿಗಳು ನಿಮ್ಮಲ್ಲಿದ್ದರೆ ಅವರನ್ನು ನೀವು ಹತ್ತಿರ ಸೇರಿಸಲೇಬೆಡಿ. ಯಾಕೆಂದರೆ,ನೀವು ಕಷ್ಟದಲ್ಲಿದ್ದರೆ,ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದರೆ, ಅವರು ಬಹಳಷ್ಟು ಸಂತೋಷ ಪಡುತ್ತಾರೆ. ನಿಮಗಿನ್ನೂ ಹಲವು ಕಷ್ಟಗಳು ಬರಲೆಂದು ಆಶಿಸಬಹುದು. ಆದುದರಿಂದ ಅಂತಹವರನ್ನು ನಿಮ್ಮ ಹತ್ತಿರ ಸುಳಿಯಲು ಬಿಡಬೇಡಿ.

2.ಪ್ರತಿಯೊಬ್ಬರಲ್ಲೂ ಕೆಲವು ವರ್ಗದ ಜನರ ಬಗ್ಗೆ ಆಧ್ಯಾತ್ಮಿಕ ಭಾವನೆಯಿರುತ್ತದೆ. ಹಾಗಾಲ್ಲದೆ ಅಂತಹ ಯಾವುದೇ ಭಾವನೆಗಳು ಇಲ್ಲದವರನ್ನು ,ದೇವರನ್ನು ನಂಬದವರಿಂದ ದೂರವಿರಬೇಕಂತೆ. ಯಾಕೆಂದರೆ ಅಂತಹ ವ್ಯಕ್ತಿಗಳು ನಿಮ್ಮಲ್ಲಿರುವ ಧನಾತ್ಮಕ(ಪಾಸಿಟೀವ್) ವ್ಯಕ್ತಿತ್ವವನ್ನು ನಾಶಪಡಿಸಿ,ಋಣಾತ್ಮಕ (ನೆಗೆಟೀವ್) ವ್ಯಕ್ತಿತ್ವವನ್ನು ಪ್ರಚುರಪಡಿಸುತ್ತಾರೆ. ಆದುದರಿಂದ ಇಂತಹವರಿಂದಲೂ ದೂರವಿರಬೇಕು.

fraud-people

3. ಮಹಿಳೆಯರೊಂದಿಗೆ ಅಕ್ರಮ ಸಂಬಂಧವನ್ನು ಇರಿಸಿಕೊಂಡವರನ್ನು ನಂಬಲೇಬಾರದು. ಅಂತಹವರನ್ನು ಹತ್ತಿರ ಸೇರಿಸಲೇ ಬಾರದು.ಅಂತಹವರಿಂದ ಯಾವತ್ತಿದ್ದರೂ ಅಪಾಯ ತಪ್ಪಿದ್ದಲ್ಲ.

4.ಕಳ್ಳತನ ,ದರೋಡೆ,ಸುಲಿಗೆ,ಮೋಸ,ಹತ್ಯೆ ಮುಂತಾದ ಅಪರಾಧಗಳನ್ನು ಎಸಗುವವರಿಂದ ದೂರವಾಗಿರಬೇಕಂತೆ. ಇಂತಹವರು ಯಾರೇ ಆಗಿದ್ದರೂ ಅವರನ್ನು ದೂರವಿಡಬೇಕಂತೆ ಇಲ್ಲದಿದ್ದರೆ ಒಂದಿಲ್ಲೊಂದು ದಿನ ತಕ್ಕ ಪ್ರತಿಫಲ ಅನುಭವಿಸ ಬೇಕಾಗುತ್ತದಂತೆ.

jealous

5.ನಿಮ್ಮ ಬಗ್ಗೆ ಈರ್ಷೆ,ಅಸೂಯೆ,ದ್ವೇಷ ಪಡುವವರಿಂದ ನೀವು ದೂರವಿರಬೇಕು.ಯಾಕೆಂದರೆ ಅಂತಹವರು ನಿಮಗೆ ಸಮಸ್ಯೆಗಳನ್ನು ತಂದೊಡ್ಡುತ್ತಾರೆ.


Click Here To Download Kannada AP2TG App From PlayStore!

Share this post

scroll to top