ಹೆಂಡತಿ ಗಂಡನನ್ನು ಹೆಸರಿನಿಂದ ಕರೆಯಬಹುದೇ..? ನಮ್ಮ ಶಾಸ್ತ್ರಗಳು ಏನು ಹೇಳುತ್ತವೆ.

ಹಿಂದೆ ಗಂಡಂದಿರನ್ನು ಹೆಂಡತಿಯರು ಮಾವ, ಜೀ, ಹಾಜಿ ಎಂದು ಕರೆಯುತ್ತಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿಯ ಕಾರಣದಿಂದಾಗಿ ಇಂದು ಓಯ್, ಬಾರೋ, ಹೋಗೋ, ಎಂದು ಗಂಡನ ಹೆಸರಿನಿಂದ ಕರೆಯುತ್ತಾರೆ. ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಇದು ತಪ್ಪು ಅಂತೆ..! ಗಂಡನನ್ನು ಹೆಂಡತಿ ಹೆಸರಿಡಿದು ಕೂಗಬಾರದಂತೆ‌. ಹೀಗೆ ಮಾಡುವುದು ಅಗೌರವ ತೋರಿದಂತೆ ಎಂದೂ, ನಾಲ್ಕು ಜನರ ನಡುವೆ ಗಂಡನ ಬೆಲೆ ಕಡಿಮೆ ಮಾಡಿದಂತೆ ಎಂದು ಹೇಳಲಾಗಿದೆ.

ಹಾಗೆ ನೋಡಿದರೆ ತಮಗಿಂತ ದೊಡ್ಡವರನ್ನು ಹೆಸರಿನಿಂದ ಕರೆಯುವುದು ತಪ್ಪು, ಅಂತಹದರಲ್ಲಿ ಹೆಂಡತಿಗೆ ಎಲ್ಲಾ ವಿಧದಲ್ಲೂ ರಕ್ಷಣೆಯಾಗಿದ್ದು, ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದ ಗಂಡನನ್ನು ಹೆಸರಿನಿಂದ ಕರೆಯುವುದು ತಪ್ಪು ಎಂದು ನಮ್ಮ ಸಂಪ್ರದಾಯಗಳು ಹೇಳುತ್ತವೆ. ಏಕಾಂತ ಸಮಯದಲ್ಲಿ ಹೇಗೆ ಕರೆದರೂ ತಪ್ಪಿಲ್ಲ. ಆದರೆ ಮನೆಯವರ ಮುಂದೆ, ಮಕ್ಕಳ ಮುಂದೆ, ಜನರ ಮುಂದೆ ಮಾತ್ರ ಹೆಸರಿನಿಂದ ಕರೆಯಬಾರದಂತೆ. ಹೀಗೆ ಕರೆಯುವುದರಿಂದ.. ಇತರರಲ್ಲಿ ನಿಮ್ಮ ಗಂಡನ ಬಗೆಗಿನ ಗೌರವ ಕಡಿಮೆಯಾಗಿವುದಲ್ಲದೇ, ನಿಮ್ಮ ಗೌರವ ಸಹ ಕಡಿಮೆ ಯಾಗುತ್ತದೆಯಂತೆ..!

ಮತ್ತೆ ಹೇಗೆ ಕರೆಯಬೇಕು:
ಹಿಂದಿನ ಕಾಲದಲ್ಲಿ ತಾಯಿ ಹೆಸರನ್ನು ಸೇರಿಸಿ ಕರೆಯುತ್ತಿದ್ದರಂತೆ.. ಉದಾಹರಣೆಗೆ ಗೌತಮಿ ಪುತ್ರ, ಜಿಜಿಯಾ ಪುತ್ರ ಎಂದು ಕರೆಯುತ್ತಿದ್ದರಂತೆ ಈಗ ತಾಯಿಯ ಹೆಸರು ಸೇರಿಸಿ ಕರೆಯುವುದು ಸಾಧ್ಯವಿಲ್ಲ ಹಾಗಾಗಿ ರೀ, ಏನ್ರೀ ಎಂದು ಪ್ರೀತಿಯಿಂದ, ಮಾವ ಎಂಬ ಅತ್ಮಿಯತೆಯಿಂದ ಕರೆಯಬಹುದಂತೆ.

ಹೆಸರಿನಿಂದಲ್ಲೇ ಕರೆಯುತ್ತೆವೆ ಎಂದು ಪಿಕ್ಸ್ ಅದರೆ:
ಮೊದಲು ಗಂಡ ಹೆಂಡತಿ ಚರ್ಚಿಸಿ ನಂತರ ಕರೆಯಲಾರಂಭಿಸದರೆ ಒಳ್ಳೆಯದು. ಅತ್ತೆ ಮಾವ ನವರಿಗೆ ತಮ್ಮ ಮಗನನ್ನು ಹೆಸರಿನಿಂದ ಕರೆಯುವುದು ಇಷ್ಟಪಡುವುದಿಲ್ಲ. ಹಾಗಾಗಿ ಅವರ ಒಪ್ಪಿಗೆ ಪಡೆದು ಗಂಡನನ್ನು ಹೆಸರಿನಿಂದ ಕರೆಯಿರಿ.


Click Here To Download Kannada AP2TG App From PlayStore!

Share this post

scroll to top