ನಿತ್ಯ ಬೆಳಗ್ಗೆ ಎದ್ದಕೂಡಲೆ ನಾವು ಮಾಡುವ 8 ತಪ್ಪುಗಳು ಇವು..! 2ನೆಯದು ಗೊತ್ತಾದರೆ ಇನ್ನೊಮ್ಮೆ ಮಾಡಲ್ಲ..!

ನಿತ್ಯ ಬೆಳಗ್ಗೆ ನಿದ್ದೆಯಿಂದ ಎದ್ದಕೂಡಲೆ ಬಹಳಷ್ಟು ಮಂದಿ ತುಂಬಾ ಕೆಲಸ ಮಾಡುತ್ತಾರೆ. ಕೆಲವರು ಬೆಡ್ ಕಾಫಿ ಅಥವಾ ಟಿಯಿಂದ ದಿನ ಪ್ರಾರಂಭಿಸಿದರೆ ಕೆಲವರು ಎದ್ದ ಕೂಡಲೆ ಫೋನ್ ತೆಗೆದುಕೊಂಡು ತಮಗೆ ಬಂದಿರುವ ಮೇಲ್ಸ್ ಚೆಕ್ ಮಾಡಿಕೊಳ್ಳುತ್ತಾರೆ. ಸಾಮಾಜಿಕ ಆಪ್ಸ್‌ನಲ್ಲಿನ ಪೋಸ್ಟ್ ನೋಡುತ್ತಾರೆ. ತಮ್ಮ ಪೋಸ್ಟ್‌ಗಳಿಗೆ ಬಂದಿರುವ ಕಾಮೆಂಟ್ಸ್‌ಗಳು, ಲೈಕ್ಸ್ ಲೆಕ್ಕಾಹಾಕುತ್ತಾರೆ. ಇನ್ನೂ ಕೆಲವರಾದರೆ ಸ್ಮಾರ್ಟ್‍ಫೋನ್ ಜಗತ್ತಿನಲ್ಲಿ ಮುಳುಗುತ್ತಾರೆ. ಆದರೆ ನಿಜವಾಗಿ ಇದ್ಯಾವುದೂ ಸಹ ಒಳ್ಳೆಯ ಅಭ್ಯಾಸಗಳು ಅಲ್ಲ. ಆದರೆ ನಿತ್ಯ ಇವನ್ನು ಬಹಳಷ್ಟು ಮಂದಿ ಪಾಲಿಸುತ್ತಾರೆ. ಇದಿಷ್ಟೇ ಅಲ್ಲದೆ ಬೆಳಗ್ಗೆ ಬಹಳಷ್ಟು ಮಂದಿ ಪಾಲಿಸುವ ಕೆಲವು ಬ್ಯಾಡ್ ಹ್ಯಾಬಿಟ್ಸ್ ಇವೆ. ಅದರ ಬಗ್ಗೆ ಈಗ ತಿಳಿದುಕೊಳ್ಳೋಣ.

1. ಸ್ನಾನ
ಬಹಳಷ್ಟು ಮಂದಿ ಬೆಳಗ್ಗೆ ಸ್ನಾನ ಮಾಡುತ್ತಾರೆ ಆದರೆ ಕೆಲವರು ಮಾಡಲ್ಲ. ಸಂಜೆ ಮಾಡುತ್ತಾರೆ. ಆದರೆ ಆ ರೀತಿ ಮಾಡಬಾರದು. ಕಡ್ಡಾಯವಾಗಿ ಬೆಳಗ್ಗೆಯೇ ಸ್ನಾನ ಮಾಡಬೇಕು. ಸಂಜೆ ನಿಮ್ಮಿಷ್ಟ. ಆದರೆ ಬೆಳಗಿನ ಸ್ನಾನ ಮಾತ್ರ ಮರೆಯಬಾರದು. ಇದರಿಂದ ಮಿದುಳು ಚುರುಕಾಗಿ ಕೆಲಸ ಮಾಡುತ್ತದೆ. ಹೊಸ ಐಡಿಯಾಗಳು ಬರುತ್ತವೆ. ಕೆಲಸದಲ್ಲಿ ಆಕ್ಟೀವ್ ಆಗಿ ಇರುತ್ತಾರೆ. ನಿತ್ಯ ಉಲ್ಲಾಸವಾಗಿ ಇರುತ್ತಾರೆ.

2. ನೀರು
ಬಹಳಷ್ಟು ಮಂದಿ ಬೆಳಗ್ಗೆ ಬಿಸಿ ನೀರಿನ ಸ್ನಾನ ಮಾಡುತ್ತಾರೆ. ಆದರೆ ಆ ರೀತಿ ಮಾಡಬಾರದು. ಯಾಕೆಂದರೆ ಬಿಸಿ ನೀರು ದೇಹಕ್ಕೆ ರಿಲ್ಯಾಕ್ಸೇಷನ್ ನೀಡುತ್ತದೆ. ಇದರಿಂದ ಆಫೀಸಿನಲ್ಲಿ ಚುರುಕಾಗಿ ಇರಲು ಸಾಧ್ಯವಿಲ್ಲ. ನಿದ್ದೆ ಬರುತ್ತದೆ. ಆದಕಾರಣ ಬಿಸಿ ನೀರಿನ ಸ್ನಾನ ಮಾಡಬಾರದು. ತಣ್ಣೀರಿನಿಂದ ಮಾಡಿದರೆ ಒಳಿತು. ಇದರಿಂದ ಚರ್ಮ ತೇವದಿಂದ ಇರುತ್ತದೆ. ಮಿದುಳು ಆಕ್ಟೀವ್ ಆಗಿ ಇರುತ್ತದೆ. ಹಾಗಾಗಿ ಬೆಳಗ್ಗೆ ತಣ್ಣೀರಿನ ಸ್ನಾನ ಮಾಡಿದರೆ 4 ಕೆಜಿ ತೂಕ ಕಡಿಮೆಯಾಗುತ್ತಾರೆಂದು ಸಂಶೋಧನೆ ಹೇಳುತ್ತಿದೆ. ಆದಕಾರಣ ಬೆಳಗ್ಗೆ ಹೊತ್ತು ಯಾರೇ ಆಗಲಿ ತಣ್ಣೀರಿನ ಸ್ನಾನ ಮಾಡಬೇಕು. ಅಗತ್ಯ ಬಿದ್ದರೆ ಸಂಜೆ ಬಿಸಿ ನೀರಿನಿಂದ ಸ್ನಾನ ಮಾಡಬಹುದು. ಹೇಗಿದ್ದರೂ ಆಗ ಕೆಲಸ ಇರಲ್ಲ. ರಾತ್ರಿಯಾಗುತ್ತದೆ, ಮಲಗುತ್ತೇವೆ. ಆದಕಾರಣ ಆಗ ಬಿಸಿ ನೀರಿನ ಸ್ನಾನ ಮಾಡಿದರೂ ಏನೂ ಆಗಲ್ಲ.

3. ಸಾಮಾಜಿಕ ಮಾಧ್ಯಮ
ಇಂದು ಬಹಳಷ್ಟು ಮಂದಿಯ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ ಇದೆ. ಬೆಳಗ್ಗೆ ನಿದ್ದೆ ಎದ್ದ ಕೂಡಲೆ ಹಾಸಿಗೆ ಮೇಲೆ ಇದ್ದು ಫೋನ್ ಓಪನ್ ಮಾಡಿ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವಿಹರಿಸುತ್ತಾರೆ. ಯಾರ್ಯಾರು ಏನು ಪೋಸ್ಟ್ ಮಾಡಿದ್ದಾರೆ, ಕಾಮೆಂಟ್ ಏನು ಮಾಡಿದ್ದಾರೆ, ವೈರಲ್ ನ್ಯೂಸ್ ಏನು. ಇನ್ನಿತರೆ ಅಂಶಗಳನ್ನು ಫೊನ್‌ನಲ್ಲಿ ಚೆಕ್ ಮಾಡಿದರೆ ಹೊರತು ಅವರು ಬೆಡ್ ಮೇಲಿಂದ ಏಳಲ್ಲ. ಆದರೆ ಈ ರೀತಿ ಮಾಡಬಾರದು. ಅದರ ಬದಲಾಗಿ ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಉತ್ಸಾಹವನ್ನು ನೀಡುವ ಸಂಗೀತ ಕೇಳುವುದು, ಮನೆಯ ಸದಸ್ಯರ ಜತೆಗೆ ಕಳೆಯುವುದು, ನಿಮಗೆ ಇಷ್ಟವಾದ ಬ್ರೇಕ್‌ಫಾಸ್ಟ್ ಮಾಡಿಕೊಂಡು ತಿನ್ನುವಂತಹ ಕೆಲಸಗಳನ್ನು ಮಾಡಿದರೆ ಆಕ್ಟೀವ್ ಆಗಿ ಇರುತ್ತಾರೆ. ನಿತ್ಯ ಬೇಕಾದಷ್ಟು ಆಕ್ಟೀವ್‌ನೆಸ್ ಈ ರೀತಿ ಸಿಗುತ್ತದೆ.

4. ಬಟ್ಟೆಗಳು
ನಮಗೆ ಅನೇಕ ಬಣ್ಣಬಣ್ಣದ ಬಟ್ಟೆಗಳಿರುತ್ತವೆ. ಇದರಿಂದ ನಿತ್ಯ ಯಾವ ಡ್ರೆಸ್ ಹಾಕಿಕೊಳ್ಳಬೇಕು ಎಂದು ಅದಕ್ಕಾಗಿ ಟೈಮ್ ವೇಸ್ಟ್ ಮಾಡುತ್ತಿರುತ್ತೇವೆ. ಆದರೆ ಆ ರೀತಿ ಅಲ್ಲದೆ ಒಂದೇ ಬಣ್ಣದ ಬಟ್ಟೆಗಳನ್ನು ನಿತ್ಯ ಹಾಕಿಕೊಂಡರೆ ಒಳಿತು. ಇದರಿಂದ ಯಾವ ಡ್ರೆಸ್ ಹಾಕಿಕೊಳ್ಳಬೇಕು ಎಂದು ಟೈಮ್ ವೇಸ್ಟ್ ಮಾಡುವ ಅವಕಾಶ ಇರಲ್ಲ. ನಿತ್ಯ ಒಂದೇ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ ಆದಕಾರಣ ಅದಕ್ಕೆ ಹಣವೂ ಹೆಚ್ಚು ಖರ್ಚಾಗಲ್ಲ. ಇದರಿಂದ ಟೈಮ್, ಹಣ ಎರಡೂ ಉಳಿತಾಯ ಆಗುತ್ತವೆ. ಬಹಳಷ್ಟು ಮಂದಿ ಪ್ರಮುಖರು ನಮಗೆ ನಿತ್ಯ ಒಂದೇ ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವ ಹಿಂದಿರುವ ಕಾರಣ ಇದೆ.

5. ಬ್ರೇಕ್ ಫಾಸ್ಟ್
ಬೆಳಗ್ಗೆಯೇ ಫ್ಯಾಟ್ಸ್, ಪ್ರೋಟೀನ್ ಹೆಚ್ಚಾಗಿ ಇರುವ ಆಹಾರ ತೆಗೆದುಕೊಳ್ಳಬೇಕು. ಇದರಿಂದ ಶಕ್ತಿ ಚೆನ್ನಾಗಿ ಲಭಿಸುತ್ತದೆ. ದಿನವೆಲ್ಲಾ ಆಕ್ಟೀವ್ ಆಗಿ ಇರುತ್ತಾರೆ. ಆ ರೀತಿ ಅಲ್ಲದೆ ಹಿಟ್ಟಿನ ಪದಾರ್ಥಗಳು ಹೆಚ್ಚಾಗಿ ಇರುವ ಆಹಾರ ತಿಂದರೆ ಅದು ದೇಹದಲ್ಲಿ ಗ್ಲೂಕೋಸ್ ಅಂಶ ಹೆಚ್ಚಾಗಿ ಇನ್ಸುಲಿನ್ ಹೆಚ್ಚಿಸುತ್ತದೆ. ಅದು ಕಡಿಮೆಯಾಗುವ ಸಂದರ್ಭದಲ್ಲಿ ಹಸಿವು ಜಾಸ್ತಿ ಆಗುತ್ತದೆ. ಸುಸ್ತಾದಂತೆ ಬದಲಾಗುತ್ತೀರಿ. ಹಾಗಾಗಿ ಬೆಳಗ್ಗೆ ಫ್ಯಾಟ್ಸ್, ಪ್ರೋಟೀನ್‌ಗಳು ಹೆಚ್ಚಾಗಿ ಇರುವ ಆಹಾರ ತಿಂದರೆ ಒಳ್ಳೆಯದು. ಅವು ಅಷ್ಟು ಬೇಗ ಜೀರ್ಣವಾಗಲ್ಲ, ಹಾಗಾಗಿ ಬೇಗ ಹಸಿವಾಗಲ್ಲ. ಇದರ ಜತೆಗೆ ಅವುಗಳ ಮೂಲಕ ಸಿಗುವ ಶಕ್ತಿ ಸಹ ಹೆಚ್ಚಾಗಿ ಇರುತ್ತದೆ. ಇದು ದಿನವೆಲ್ಲಾ ಬೇಕಾದ ಆಕ್ಟಿವ್‌ನೆಸ್‌ ಕೊಡುತ್ತದೆ.

6. ದಂತಗಳು, ನೀರು
ದಿನದಲ್ಲಿ ಯಾವಾಗ ಆಹಾರ ತಿಂದರೂ ಒಂದು ಗ್ಲಾಸ್ ನೀರಿನಲ್ಲಿ ಬಾಯನ್ನು ಮುಕ್ಕಳಿಸಿ ತೊಳೆದುಕೊಳ್ಳಬೇಕು. ಇದರಿಂದ ಆಹಾರ ಪದಾರ್ಥಗಳಲ್ಲಿ ಇರುವ ಕೆಮಿಕಲ್ಸ್ ಪ್ರಭಾವ ದಂತಗಳು, ಬಾಯಿಯ ಮೇಲೆ ಇರಲ್ಲ. ಹಲ್ಲಗಳನ್ನು ರಕ್ಷಿಸಿದಂತಾಗುತ್ತದೆ. ಬಾಯಿ ದುರ್ವಾಸನೆ ಬಾರದಂತೆ ಇರುತ್ತದೆ. ಅದೇ ರೀತಿ ನಿತ್ಯ ಎರಡು ಸಲ ಬ್ರಷ್ ಮಾಡಬೇಕು. ರಾತ್ರಿ ಹೊತ್ತು ತಿಂದ 30 ನಿಮಿಷಗಳ ಬಳಿಕ ಬ್ರಷಿಂಗ್ ಮಾಡಬೇಕು.

7. ಕಾಫಿ
ಬಹಳಷ್ಟು ಮಂದಿ ಬೆಳಗ್ಗೆ ನಿದ್ದೆಯಿಂದ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುತ್ತಾರೆ. ಆದರೆ ಆ ರೀತಿ ಮಾಡಬಾರದು. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದರೆ ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಬರುತ್ತವೆ. ಆದಕಾರಣ ಬೆಳಗ್ಗೆ ನಿದ್ದೆಯಿಂದ ಎದ್ದ ಬಳಿಕ ಕಾಫಿ ಕುಡಿಯುವುದಕ್ಕೂ ಕನಿಷ್ಠ 4 ಗಂಟೆಗಳ ಕಾಲ ಕಾಯಬೇಕೆಂದು ವೈದ್ಯರು ಹೇಳುತ್ತಿದ್ದಾರೆ. ಆ ಬಳಿಕವಷ್ಟೇ ಕಾಫಿ ಕುಡಿಯಬೇಕಂತೆ.

8. ಹಾಸಿಗೆ
ಬಹಳಷ್ಟು ಮಂದಿ ನಿದ್ದೆಯಿಂದ ಎದ್ದ ಬಳಿಕ ಹಾಸಿಗೆಯನ್ನು ಸರಿಪಡಿಸಲ್ಲ. ಬೆಡ್ ಮೇಲೆ ದಿಂಬು, ಬೆಡ್ ಶೀಟ್ಸ್ ಹಾಗೆಯೇ ಚಲ್ಲಾಪಿಲ್ಲಿಯಾಗಿರುತ್ತವೆ. ಈ ರೀತಿ ಇರುವುದರಿಂದ ನಮ್ಮ ದೇಹದಲ್ಲಿ ಇರುವ ಬೆವರು ಬೆಡ್‌ಶೀಟ್ಸ್, ದಿಂಬುಗಳಿಂದ ಅಷ್ಟು ಬೇಗ ಒಣಗಲ್ಲ. ಇದರಿಂದ ಅವುಗಳ ಮೇಲೆ ಬ್ಯಾಕ್ಟೀರಿಯ ಸೇರುವ ಅವಕಾಶ ಇರುತ್ತದೆ. ಆದಕಾರಣ ನಿದ್ದೆಯಿಂದ ಎದ್ದ ಕೂಡಲೆ ಬೆಡ್ ನೀಟಾಗಿ ಇಟ್ಟುಕೊಳ್ಳಬೇಕು. ಬೆಡ್‌ಶೀಟ್ಸ್, ದಿಂಬುಗಳನ್ನು ಸರಿಪಡಿಸಬೇಕು. ಅವನ್ನು ಬೆಡ್ ಮೇಲೆ ಚೆಲ್ಲಾಪಿಲ್ಲಿಯಾಗಿ ಹಾಕಬಾರದು.

 


Click Here To Download Kannada AP2TG App From PlayStore!