+92,+90,+09 ನಂಬರ್ ಗಳಿಂದ ಬರುವ ಕರೆಗಳನ್ನು ಸ್ವೀಕರಿಸಲೇ ಬಾರದು…ಏಕೆಂದು ಗೊತ್ತೆ ?

ಪ್ರಪಂಚದಾದ್ಯಂತಾ ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಕ್ರಾಂತಿಕಾರಿ ಬದಲಾವಣೆಗಳು ಬರುತ್ತಿವೆ.ವಿದ್ಯೆ,ಉದ್ಯೋಗ,ವ್ಯಾಪಾರ,ವೈದ್ಯಕೀಯ….. ಹೀಗೆ ಯಾವ ಕ್ಷೇತ್ರದಲ್ಲಿ ನೋಡಿದರೂ ತಾಂತ್ರಿಕತೆ ಮಾಡುತ್ತಿರುವ ಅದ್ಬುತಗಳು ‘ನಭೂತೋ ನಭವಿಷ್ಯತ್’ ಎಂಬುವಂತಿವೆ.ಪ್ರಧಾನವಾಗಿ ಬ್ಯಾಂಕಿಂಗ್ ಕ್ಷೇತ್ರವಂತೂ ಹಿಂದಿನಂತಿಲ್ಲ.ಸ್ಮಾರ್ಟ್ ಫೋನ್ ಗಳು ಬಂದಮೇಲಂತೂ ಜನರು ಕೇವಲ ಬೆರಳುಗಳಿಂದ ಒತ್ತಿ ಅನೇಕ ಬ್ಯಾಂಕಿಂಗ್ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ.ಹಣ ಜಮೆ ಮಾಡುವುದು,ವರ್ಗಾವಣೆ,ಚೆಕ್ಗಳಿಗೆ ಸಂಬಂಧಿಸಿದ ವಿಚಾರಣೆ.ಅಕೌಂಟ್ ವಿವರಗಳು,.. ಹೀಗೆ ಬಹಳಷ್ಟು ಕೆಲಸಗಳನ್ನು ಕೇವಲ ಮೊಬೈಲ್ ಫೋನ್ಗಳ ಮೂಲಕ ನಡೆಯುತ್ತಿವೆ. ಇತ್ತೀಚೆಗಂತೂ ಸ್ಮಾರ್ಟ್ ಫೋನ್ ಗಳನ್ನು ಹೊಂದಿರುವವರೆಲ್ಲರೂ ಮೊಬೈಲ್ ಬ್ಯಾಂಕಿಂಗ್ ಮೊರೆತ್ತಿದ್ದಾರೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ,ಮುಂದುವರಿದ ತಾಂತ್ರಿಕತೆಯಿಂದ ಲಾಭವಿರುವಂತೆ ನಷ್ಟ ಗಳೂ ಇರುವುದರಲ್ಲಿ ಸಂಶಯವಿಲ್ಲ.ಮುಖ್ಯವಾಗಿ ಹ್ಯಾಕರ್ ಗಳಂತಹ ಸೈಬರ್ ಅಪರಾಧಿಗಳು ಯಾವುದೋ ಒಂದು ಮಾರ್ಗದಲ್ಲಿ ಹೊಸ ತಾಂತ್ರಿಕತೆಯನ್ನನುಸರಿಸಿ,ನಮ್ಮ ಹಣವನ್ನು ಆನ್ ಲೈನ್ ನಲ್ಲಿಕದಿಯುತ್ತಿರುತ್ತಾರೆ.ಇದರ ಬಗ್ಗೆ ತಿಳುವಳಿಕೆ ಉಳ್ಳವರಾದರೆ ಜಾಗ್ರತೆ ವಹಿಸುತ್ತಾರೆ. ಆದರೂ ಸೈಬರ್ ಅಪರಾಧಿಗಳ ಹೊಸ ತಂತ್ರಗಳಿಂದ ಯಾರಾದರೊಬ್ಬರು,ಎಲ್ಲಾದರೂ ಮೋಸಹೋಗುತ್ತಲೇ ಇರುತ್ತಾರೆ.ಇದಕ್ಕೆ ಪೂರಕವಾದ ಘಟನೆಯೊಂದು ಮುಂಬೈಯಲ್ಲಿ ಇತ್ತೀಚೆಗೆ ನಡೆದಿದೆ.ವೃದ್ಧೆಯೊಬ್ಬರ ಹಣವನ್ನು ಅಪರಾಧಿಗಳು ಕದ್ದಿರುವ ವಿಧಾನವನ್ನು ಕೇಳಿದರೆ ನೀವೂ ಸಹ ಆಘಾತಗೊಳ್ಳುತ್ತೀರ.

ಮುಂಬೈಯಲ್ಲಿ ವಾಸಿಸುತ್ತಿರುವ 72 ವರ್ಷದ ವೃದ್ಧೆಯೊಬ್ಬರ ಮೊಬೈಲ್ ಫೋನ್ ಗೆ ಬಂದ ಎಸ್.ಎಂ.ಎಸ್ ನೋಡಿ ಒಮ್ಮೆಗೇ ಆಘಾತಗೊಂಡರು.ಅವರ ಬ್ಯಾಂಕ್ ಖಾತೆಯಿಂದ 11 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಲಾಗಿತ್ತು.ಆದರೆ ಅವರು ಆ ರೀತಿ ಹಣವನ್ನು ಡ್ರಾ ಮಾಡಿರಲೇಯಿಲ್ಲ.ಇತರರಿಗೆ ಚೆಕ್ಕನ್ನೂ ಕೊಟ್ಟಿರಲಿಲ್ಲ.ಅಸಲಿಗೆ ಅಷ್ಟು ಹಣ ಹೇಗೆ ಡ್ರಾ ಮಾಡಲಾಗಿದೆಯೆಂಬುದೇ ತಲೆನೋವಾಗಿ ಪರಿಣಮಿಸಿತ್ತು. ಈ ಘಟನೆಯಿಂದ ಎಚ್ಚೆತ್ತುಕೊಂಡ ವೃದ್ಧೆ ಹಣ ಹೇಗೆ ಡ್ರಾ ಆಗಿದೆಯೆಂದು ತಿಳಿದುಕೊಳ್ಳಲು ಬ್ಯಾಂಕಿಗೆ ತೆರಳಿದರು.ವಿಷಯ ತಿಳಿದು ಆಘಾತಗೊಂಡರು. ಬ್ಯಾಂಕಿನಲ್ಲಿ ರಿಜಿಷ್ಟರ್ ಮಾಡಿದ್ದ ತನ್ನ ಮೊಬೈಲ್ ನಂಬರಿನ ಮೂಲಕ ಯಾರೋ ವಿಮಾನದ ಟಿಕೆಟ್ಟನ್ನು ಬುಕ್ ಮಾಡಿದ್ದರು.


ಮೇಲಿನ ಘಟನೆ ಕುರಿತು ಪರಿಶೀಲನೆ ನಡೆಸಿದ ಕೆಲವು ತಜ್ಞರು ಆ ಮೋಸ ಹೇಗೆ ನಡೆಯಿತೆಂದು ಎಲ್ಲರಿಗೂ ವಿವರಿಸಿದರು. ಅಪರಾಧಿಗಳು ಈ ಹಿಂದೆಯೇ ಆ ಮಹಿಳೆಗೆ ಕರೆಗಳು,ಎಸ್.ಎಂ.ಎಸ್ ಗಳ ಮೂಲಕ ಪ್ರತ್ಯೇಕವಾದ ಉಪಕರಣದ ಮೂಲಕ ಸಾಫ್ಟ್ವೇರ್ ಸಹಾಯದಿಂದ ಸಿಮ್ ನ ವಿವರಗಳನ್ನು ಕದ್ದಿದ್ದರು.ನಂತರ ಕ್ಲೋನಿಂಗ್ ಮೂಲಕ ಹೊಸ ಸಿಮ್ ಕಾರ್ಡಿಗೆ ಎಲ್ಲ ಮಾಹಿತಿಯನ್ನು ರವಾನಿಸಿದರು.ಇದರಿಂದ ಆ ಸಿಮ್ ಕಾರ್ಡ್ ಕೂಡಾ ಮಹಿಳೆ ಉಪಯೋಗಿಸುವ ಫೋನ್ ನಂಬರ್ ಹೊಂದಿರುವ ಹಾಗೆ ತಯಾರಾಯಿತು.ಇದರಿಂದ ಆ ಮಹಿಳೆಯ ಬ್ಯಾಂಕಿನ ವಿವರಗಳನನ್ನೂ ಪಡೆದುಕೊಂಡರು. ತದ ನಂತರ ಮೊಬೈಲ್ ಬ್ಯಾಂಕಿಗ್ ಮೂಲಕ ವ್ಯವಹಾರ ನಡೆಸಿ 11 ಲಕ್ಷ ರೂಪಾಯಿಗಳನ್ನು ದೋಚಿದ್ದರು. ,ಅಪರಾಧಿ ಗಳು ತಾಂತ್ರಿಕತೆಯ ದುರ್ಲಾಭ ಪಡೆದು ಮೋಸ ಮಾಡುವ ವಿಧಾನ ಹೇಗೆಂದು ನಿಮೆ ತಿಳಿಯಿತಲ್ಲಾ ? ನೀವೂ ಸಹ ಎಚ್ಚರದಿಂದಿದ್ದು ಅನಾಮಿಕರಿಂದ ಬರುವ ಕರೆಗಳು,ಎಸ್.ಎಂ.ಎಸ್ ಗಳಿಗೆ ಸ್ಪಂಧಿಸದೆ, ಕೂಡಲೇನಿಮ್ಮ ಬ್ಯಾಂಕಿನ ಅಧಿಕಾರಿಗಳಿಗೆ ಅಥವಾ ಹತ್ತಿರದ ಪೊಲೀಸ್ ಸ್ಟೇಷನ್ ಗೆ ವಿಷಯ ತಿಳಿಸಿ. ಒಡನೆಯೇ ಬ್ಯಾಂಕಿನಲ್ಲಿ ರಿಜಿಷ್ಟರ್ ಮಾಡಿಸಿರುವ ಫೋನ್ ನಂಬರ್,ಎ.ಟಿ.ಎಂ ಪಿನ್ ಗಳನ್ನು ಬದಲಾಯಿಸಿ.ಒಂದು ವೇಳೆ ನಿಮ್ಮ ಫೋನನ್ನು ರಿಪೇರಿಗಾಗಿ ನೀಡಬೇಕಾದ ಸಂದರ್ಭಗಳಲ್ಲಿ ಅಧಿಕೃತ ಸೇವ ಕೇಂದ್ರಗಳಲ್ಲೇ ಕೊಡಿ.ಸಿಮ್ ಕಾರ್ಡನ್ನು ತೆಗೆಡಿದಲು ಮರೆಯಬೇಡಿ.ಇತರೆಡೆ ರಿಪೇರಿಗಾಗಿ ನೀಡುವಾಗಲೂ ಸಿಮ್ ಕಾರ್ಡ್ ತೆಗೆದಿಡಿ ಇಲ್ಲವಾದಲ್ಲಿ ನಿಮ್ಮ ಸಿಮ್ ಕಾರ್ಡ್ ಕ್ಲೋನ್ ಮಾಡಲ್ಪಟ್ಟು ಮೇಲಿನ ಘಟನೆಯಲ್ಲಿ ನಡೆದಂತೆ ನಿಮ್ಮ ಹಣವನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ.ಕೊನೆಯದಾಗಿ ಇನ್ನೊಂದು ಮಾಹಿತಿ ನಿಮಗಾಗಿ. ಪೊಲೀಸರು ಮತ್ತೊಂದು ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.ಅದೇನಂದರೇ,+92,+90,+09 ನಂಬರುಗಳಿಂದ ಬರುವ ಕರೆಗಳೆಲ್ಲವೂ ಮೋಸದ ಕರೆಗಳಾಗಿದ್ದು, ಯಾವುದೇ ಕಾರಣಕ್ಕೂ ಕರೆಗಳನ್ನು ಸ್ವೀಕರಿಸದಿರಲು ಎಚ್ಚರಿಸಿದ್ದಾರೆ.ಏನೇ ಆಗಲಿ ನಮ್ಮ ಜಾಗ್ರತೆಯಲ್ಲಿ ನಾವಿರುವುದು ಉತ್ತಮ.


Click Here To Download Kannada AP2TG App From PlayStore!

Share this post

scroll to top