ನೀವು ನಿಮ್ಮ ಪರ್ಸನ್ನು ಹಿಂದಿನ ಜೇಬಲ್ಲಿ ಇಟ್ಕೊಳ್ತೀರಾ.! ಆದರೆ ಇದು ನಿಮಗಾಗಿ.

ನಮ್ಮಲ್ಲಿ ಬಹಳಷ್ಟು ಮಂದಿ ಚಿಕ್ಕ ವಯಸ್ಸಿಗೆ ಸೊಂಟನೋವು/ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣ ಏನು? ಎಂದು ಹುಡುಕಿದರೆ ನಾವು ಹಾಕಿಕೊಳ್ಳುವ ಪ್ಯಾಂಟ್ ಹಿಂದಿನ ಜೇಬಿನಲ್ಲಿ ಇಟ್ಟುಕೊಳ್ಳುವ ಮನಿ ಪರ್ಸ್ ಮತ್ತು ಇತರೆ ವಸ್ತುಗಳು ಕಾರಣ ಎಂದು ಗೊತ್ತಾಗಿದೆ. ಆಫೀಸು, ದೂರದ ಪ್ರದೇಶಗಳಿಗೆ ಹೋಗುಬೇಕಾದರೆ, ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕೂತುಕೊಂಡಿದ್ದಾಗ ಈ ಸಮಸ್ಯೆ ಹೆಚ್ಚಾಗಿ ಬರುತ್ತದೆ.

Wallet in Pocket

ನಮ್ಮ ಪರ್ಸನ್ನು ಹಿಂದಿನ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ:
ತುಂಬಾ ಜನ ಮನಿ ಪರ್ಸ್ ಮತ್ತು ಚಿಕ್ಕಚಿಕ್ಕ ವಸ್ತುಗಳನ್ನು ಹಿಂದಿನ ಜೇಬಿನಲ್ಲಿ ಇಟ್ಟುಕೊಂಡು ಅದೇ ರೀತಿ ಗಂಟೆಗಟ್ಟಲೆ ಕೂರುವುದರಿಂದ, ಸ್ಥಾನ ಭ್ರಂಶದಿಂದ ಕದಲದೆ ಇರುವ ಕಾರಣ ಕಿಬ್ಬೊಟ್ಟೆ, ಬೆನ್ನುಮೂಳೆ ಮತ್ತು ಸೊಂಟ ನೋವು ಸಮಸ್ಯೆಗಳಿಂದ ನರಳಬೇಕಾಗುತ್ತದೆ. ಒಂದು ಕಡೆ ನಮ್ಮ ಪರ್ಸ್ ಅಥವಾ ಬೇರೆ ವಸ್ತುಗಳನ್ನು ಇಟ್ಟುಕೊಂಡು ಕೂರುವುದರಿಂದ ಸರಿಯಾಗಿ ಕೂರಲು ಸಾಧ್ಯವಾಗಲ್ಲ. ನಮ್ಮ ಪೃಷ್ಠಭಾಗ ಎರಡೂ ಸಮಾನವಾಗಿ ಇರದೆ ವಾಲೆಟ್ ದೊಡ್ಡದಾಗಿರುವ ಕಾರಣ ಒಂದು ಕಡೆ ಎತ್ತರ, ಇನ್ನೊಂದು ಕಡೆ ತಗ್ಗು ಉಂಟಾಗುತ್ತದೆ. ಇದರಿಂದ ಬೆನ್ನುಮೂಳೆ ಮೇಲೆ ಭಾರ ಬೀಳುತ್ತದೆ. ಸೊಂಟನೋವು, ತೊಡೆ ಸ್ನಾಯುಗಳು, ನರಗಳು ಎಳೆದಂತಾಗಿ ಅವುಗಳ ಮೇಲೆ ಒತ್ತಡ ಬಿದ್ದು ನೋವು ಉಂಟಾಗುತ್ತದೆ.

435955358

ಇತರೆ ವಸ್ತುವುಗಳೂ ಸಹ:
ಇದುವರೆಗೂ ಕೇವಲ ಮನಿಪರ್ಸನ್ನು ಮಾತ್ರ ತಮ್ಮ ಹಿಂದಿನ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಮೊಬೈಲ್ಸ್, ಸ್ಮಾರ್ಟ್‍ಫೋನ್ ಬಂದ ಮೇಲೆ ಅವನ್ನೂ ಸ್ಟೈಲ್ ಆಗಿ ಹಿಂದಿನ ಜೇಬಲ್ಲಿ ಇಟ್ಟುಕೊಂಡು, ಒಂದೇ ಕಡೆ ಕೂರುವುದರಿಂದ ಹೊಸ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಕೊನೆಯದಾಗಿ ಹೇಳುವುದೇನೆಂದರೆ..ಇನ್ನು ಮುಂದೆ ನಿಮ್ಮ ಹಿಂದಿನ ಪಾಕೆಟ್‌ನಲ್ಲಿ ಮನಿ ಪರ್ಸ್, ಸೆಲ್‍ಫೋನ್ ಮತ್ತು ಚಿಕ್ಕಚಿಕ್ಕ ವಸ್ತುಗಳನ್ನು ಇಟ್ಟುಕೊಳ್ಳದೆ ಖಾಲಿಯಾಗಿ ಇಟ್ಟುಕೊಳ್ಳಿ. ಈ ಚಿಕ್ಕ ಸಲಹೆಯನ್ನು ನೀವು ಪಾಲಿಸಿದರೆ ಇನ್ನು ಯಾವುದೇ ರೀತಿಯ ನೋವು ಇಲ್ಲದಂತೆ ಸಂತೋಷವಾಗಿ ಇರಬಹುದು.

stop-sitting-on-wallet


Click Here To Download Kannada AP2TG App From PlayStore!

Share this post

scroll to top