ಇತರರಿಗೆ ಸೇರಿದ ಈ 5 ವಸ್ತುಗಳನ್ನು …ನಾವೆಂದಿಗೂ ಉಪಯೋಗಿಸಲೇಬಾರದಂತೆ! ಯಾಕೆಂದು ಗೊತ್ತಾ ?

ಪುರತಾನ ಕಾಲದಿಂದಲೂ ಭಾರತೀಯರಲ್ಲಿ ಹಲವು ವಿಷಯಗಳ ಬಗ್ಗೆ ಕೆಲವು ವಿಶ್ವಾಸಗಳಿವೆ. ಅದನ್ನು ಹಾಗೆ ಮಾಡಬಾರದು,ಇದನ್ನು ಹೀಗೆ ಮಾಡಬೇಕು, ಅಲ್ಲಿ ಹಾಗಿರಬಾರದು. ಇದನ್ನು ಆ ಸಮಯದಲ್ಲಿ ಸೇವಿಸಬಾರದು. ಹೀಗೆ ಮಾಡಬಾರದು… ಈ ರೀತಿಯಾಗಿ ಅನೇಕ ವಿಷಯಗಳ ಬಗ್ಗೆ ಆಯಾ ವರ್ಗ ಗಳ ಜನರು ತಮಗಿರುವ ವಿಶ್ವಾಸವನ್ನು ಮುಂದುವರೆಸುತ್ತಿದ್ದಾರೆ. ಆದರೆ ಅಂತಹ ವಿಶ್ವಾಸಗಳನ್ನು ಮೂಡನಂಬಿಕೆಯೆಂದು ಕೆಲವರು ತಳ್ಳಿಹಾಕುತ್ತಾರೆ. ಕೆಲವರು ಸಂಪೂರ್ಣವಾಗಿ ನಂಬುತ್ತಾರೆ. ಅದು ಬೇರೆ ವಿಷಯ, ಈಗ ನಾವು ಹೇಳಹೊರಟಿರುವುದು ಸಹ ಅಂತಹ ವಿಷಯನ್ನೇ.

ಒಬ್ಬರು ಉಪಯೋಗಿಸಿದ ವಸ್ತುಗಳನ್ನು ಇತರರು ಉಪಯೋಗಿಸಬಾರದೆಂದು ವಿಜ್ಞಾನವೂ ಸಹ ಹೇಳುತ್ತದೆ. ಈ ವಿಷಯ ಎಲ್ಲರಿಗೂ ತಿಳಿದಿರುವುದೇ. ಆದರೆ, ನಾವು
ಉಪಯೋಗಿಸುವ ಕೆಲವು ವಸ್ತುಗಳನ್ನು ಇತರರು ಎಂದಿಗೂ ಉಪಯೋಗಿಸಲೇ ಬಾರದಂತೆ. ಹೀಗೆ ಉಪಯೋಗಿಸುವುದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವಂತೆ. ಇಷ್ಟಕ್ಕೂ ನಾವು ಉಪಯೋಗಿಸಬಾರದಾದ ಇತರರಿಗೆ ಸೇರಿದ ವಸ್ತುಗಳು ಯಾವುವೆಂದು ತಿಳಿದುಕೊಳ್ಳೋಣ ಬನ್ನಿ.

ಮಂಚ.ಹೌದು. ಇತರರ ಮಂಚದ ಮೇಲೆ ನಾವು ಮಲಗಬಾರದಂತೆ,ಅದೇ ರೀತಿ ಇತರರ ಮಂಚದ ಮೇಲೆ ನಿದ್ರಿಸಬಾರದಂತೆ. ಹಾಗೆ ಮಾಡಿದರೆ, ಅವರಲ್ಲಿನ ಕಂಪನಗಳು (Vibrations) ನಮಗೆ ಬರುತ್ತವಂತೆ. ನಮ್ಮನ್ನು ಆರ್ಥಿಕ ಸಮಸ್ಯೆಗಳು ಕಾಡಲಾರಂಭಿಸಿ ಆರೋಗ್ಯವೂ ಕೆಡುತ್ತದಂತೆ.

ಉಡುಪುಗಳು.ಸಾಮಾನ್ಯವಾಗಿ ಮಿತ್ರರು,ಕುಟುಂಬ ಸದಸ್ಯರು,ಬಂಧುಗಳು, ತಮಗೆ ಸರಿಹೊಂದುವ ಇತರರ ಉಡುಪುಗಳನ್ನು ಧರಿಸುತ್ತಿರುತ್ತೇವೆ.
ಆದರೆ, ಹೀಗೆ ಇತರರ ಉಡುಪುಗಳನ್ನು ಧರಿಸುವುದರಿಂದ ನಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳೂ ಎದುರಾಗುತ್ತವಂತೆ.

ಹಣ. ಇತರರ ಹಣದಮೇಲೆ ಕಣ್ಣಿಟ್ಟರೆ ಅಂತಹವರನ್ನು ಯಾವಾಗಲೂ ದುರದೃಷ್ಟ ಕಾಡುತ್ತಂತೆ. ಆದುದರಿಂದ ನಾವು ಯಾವಾಗಲೂ ನಮಗಿರುವಷ್ಟರಲ್ಲೇ ತೃಪ್ತಿಯಾಗಬೇಕು. ಇತರರಲ್ಲಿರುವ ಹಣದ ಬಗ್ಗೆ ಆಲೋಚಿಸಬಾರದು. ಸಾಲ ಕೊಟ್ಟರೂ, ತೆಗೆದುಕೊಂಡರೂ ಬೇಗನೆ ಋಣಮುಕ್ತರಾಗಬೇಕು.

ಪೆನ್ನು.ಬಹಳಷ್ಟು ಮಂದಿ ಇತರರ ಪೆನ್ನನ್ನು ತೆಗೆದುಕೊಂಡು ಉಪಯೋಗಿಸುತ್ತಿರುತ್ತಾರೆ.
ಆದರೆ,ಹೀಗೆ ಬೇರೊಬ್ಬರಿಂದ ಪೆನ್ನನ್ನು ಪಡೆದುಕೊಂಡು ಉಪಯೋಗಿಸಿದರೆ, ಆರ್ಥಿಕ ಸಮಸ್ಯೆಗಳು ಉಂಟಾಗುತ್ತವಂತೆ.

ಕೈಗಡಿಯಾರ.ಇತರರ ಕೈಗಡಿಯಾರವನ್ನು ಉಪಯೋಗಿಸಲೇ ಬಾರದಂತೆ. ಹಾಗೆ ಧರಿಸಿದರೆ ಅವರಲ್ಲಿರುವ ನೆಗೆಟಿವ್ ಎನರ್ಜಿ ನಮಗೆ ಬರುತ್ತಂತೆ. ಇದರಿಂದಾಗಿ
ಆರ್ಥಿಕ ಸಮಸ್ಯೆಗಳು ಬರುತ್ತವಂತೆ.


Click Here To Download Kannada AP2TG App From PlayStore!