ಸೊಳ್ಳೆಗಳ ನಿರ್ಮೂಲನೆಗೊಂದು ಪರಿಣಾಮಕಾರಿ ತಂತ್ರ…!

ಸೊಳ್ಳೆಗಳು ಕಚ್ಚುವುದರಿಂದ ಉಂಟಾಗುವ ಅನಾರೋಗ್ಯಗಳ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ.ಮಲೇರಿಯ,ಟೈಫಾಯಿಡ್,ಡೆಂಗ್ಯೂ ಮೊದಲಾದ ಮಾರಣಾಂತಿಕ ಜ್ವರಗಳು ಯಾವಾಗ ಬರುತ್ತವೆಂದು ಹೇಳಲಾಗದು.ಮುಖ್ಯವಾಗಿ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿರುತ್ತದೆ. ಅತ್ತ ಮಳೆಯೂ ಸುರಿದು,ಕರೆಂಟ್ ಕೈಕೊಟ್ಟರೆ ಅಂದು ಸೊಳ್ಳೆಗಳಿಗೆ ಹಬ್ಬ.ಸೊಳ್ಳೆಗಳ ಕಾಟದಿಂದ ರಾತ್ರಿ ಇಡೀ ನಿದ್ರಾ ಭಂಗ ಉಂಟಾಗಿ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ. ಕರೆಂಟ್ ಇದ್ದಾಗ ಗುಡ್ ನೈಟ್,ಆಲೌಟ್ ಇಲ್ಲವೆ ಸೊಳ್ಳೆ ಬತ್ತಿಗಳನ್ನು ಉಪಯೋಗಿಸುತ್ತೇವೆ.ಇವುಗಳಿಂದ ನಮಗಾಗುವ ಲಾಭಕ್ಕಿಂತಾ ದೇಹದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳೇ ಹೆಚ್ಚು.ಇವೆಲ್ಲದರ ಮಧ್ಯೆ, ನಮ್ಮ ದೇಹಕ್ಕೆ ಹಾನಿಯುಂಟುಮಾಡದ,ಸಹಜವಾಗಿ ದೊರೆಯುವ ಪದಾರ್ಥಗಳಿಂದ ತಯಾರಿಸಲಾದ ಒಂದು ದ್ರವ ವನ್ನು ಉಪಯೋಗಿಸಿ ಸೊಳ್ಳೆಗಳನ್ನು ಸಾಯಿಸುವ ವಿಧಾನವನ್ನು ತಿಳಿದುಕೊಳ್ಳೋಣ.

ಸ್ವಲ್ಪ ನೀರನ್ನು ಕಾಯಿಸಿ ತಣ್ಣಗಾಗಲು ಬಿಡಿ. ಒಂದು ಪ್ಲಾಸ್ಟಿಕ್ ಬಾಟಲನ್ನು ಎರಡು ಭಾಗಗಳಾಗಿ ಕತ್ತರಿಸಿ.ಕೆಳಗಿನ ಭಾಗಕ್ಕೆ ಮೊದಲೇ ಕುದಿಸಿ ಆರಿಸಿದ ನೀರನ್ನು ಹಾಕಿ.ಈ ನೀರಿಗೆ ಸ್ವಲ್ಪ ಸಕ್ಕರೆ ಹಾಗು ಈಸ್ಟ್ ಬೆರೆಸಿ (‘ಈಸ್ಟ್’ ಸೂಪರ್ ಮಾರ್ಕೆಟ್ ಗಳಲ್ಲಿ ಹಾಗು ದಿನಸಿ ಅಂಗಡಿಗಳಲ್ಲಿ ದೊರೆಯುತ್ತದೆ).ಈ ಮಿಶ್ರಣಕ್ಕೆ ಸ್ವಲ್ಪ ಜೇನು ಸೇರಿಸಿ.ಕತ್ತರಿಸಿದ ಪ್ಲಾಸ್ಟಿಕ್ ಬಾಟಲಿನ ಮೇಲ್ಭಾಗವನ್ನು ,ಈಗಾಗಲೇ ಮಿಶ್ರಣ ತಯಾರಿಸಿಕೊಂಡಿರುವ ಭಾಗಕ್ಕೆ ‘ಲಾಳಿಕೆ (Funnel)ನಂತೆ ಇಟ್ಟು,ಎರಡು ಭಾಗಗಳು ಕೂಡುವ ಜಾಗವನ್ನುFevicol ನಿಂದ ಅಂಟಿಸಿ. ಈ ದ್ರವದಿಂದ ಬಿಡುಗಡೆಗೊಳ್ಳುವ ಕಾರ್ಬನ್ ಡೈ ಆಕ್ಸೈಡ್ ಸೊಳ್ಳೆಗಳನ್ನು ಆಕರ್ಷಿಸುತ್ತದೆ.ಇದರಿಂದಾಗಿ ಸೊಳ್ಳೆಗಳು ಅಂಟಾದ ದ್ರವದಲ್ಲಿ ಬಿದ್ದು ಸಾಯುತ್ತವೆ.ಹೀಗೆ ಸೊಳ್ಳೆಗಳನ್ನು ಬಹಳ ಸುಲಭವಾಗಿ ಸಾಯಿಸಬಹುದು. ಈ ಸಾಧನವನ್ನು ಕೋಣೆಯ ಒಂದು ಮೂಲೆಯಲ್ಲಿರಿಸಿದರೆ ಸಾಕು.ಆ ಕೋಣೆಯಲ್ಲಿರುವ ಎಲ್ಲಾ ಸೊಳ್ಳೆಗಳು ಇದರಲ್ಲಿ ಸತ್ತು ಬೀಳುತ್ತವೆ. ಬಾಟಲ್ ಸೊಳ್ಳೆಗಳಿಂದ ತುಂಬಿದ ನಂತರ,ಇದೇ ರೀತಿ ತಯಾರಿಸಲಾದ ಮತ್ತೊಂದು ಸಾಧನವನ್ನಿಡಬೇಕು.ಇದರಿಂದ ನಿಮ್ಮ ಮನೆಯಲ್ಲಿರುವ ಸೊಳ್ಳೆಗಳು ಸಂಪೂರ್ಣವಾಗಿ ನಾಶವಾಗುತ್ತವೆ.


Click Here To Download Kannada AP2TG App From PlayStore!

Share this post

scroll to top