ಈಕೆ ಲೇಡಿ ಅಬ್ದುಲ್ ಕಲಾಂ…. ಅಗ್ನಿ-5 ಕ್ಷಿಪಣಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ…

ಮಿಸೈಲ್ ಮ್ಯಾನ್ ಆಫ್ ಇಂಡಿಯಾ ….. ಅದೇ ಕಣ್ರೀ , ನಮ್ಮ ಮಾಜಿ ರಾಷ್ಟ್ರಪತಿ ಡಾಕ್ಟರ್ ಅಬ್ದುಲ್ ಕಲಾಂ ಇದ್ದಾರಲ್ವಾ, ಅವರನ್ನೇ ನಾವು ಹಾಗೆ ಕರೆಯುತ್ತೇವೆ. ಆದರೆ ಪುರುಷರ ವಿಭಾಗದಲ್ಲಿ ಅವರನ್ನು ನಾವು ಮಿಸೈಲ್ ಮ್ಯಾನ್ ಆಪ್ ಇಂಡಿಯಾ ಎಂದು ಕರೆದುಕೊಳ್ಳುತ್ತೇವೆ. ಮತ್ತೆ ಅದೇ ಮಹಿಳೆಯರ ವಿಭಾಗಕ್ಕೆ ಬಂದ್ರೆ ಹೌದು , ನೀವು ಕೇಳುತ್ತಿರುವುದು ಸರಿ… ಮಹಿಳಾ ವಿಜ್ಞಾನಿಗಳಲ್ಲೂ ಮಿಸೈಲ್ ವುಮೆನ್ ಆಫ್ ಇಂಡಿಯಾ ಎಂದು ಕರೆಯಿಸಿಕೊಳ್ಳುತ್ತಿರುವ ಒಬ್ಬ ಮಹಿಳೆ ಇದ್ದಾರೆ. ಆಕೆ ಟೆಸ್ಸೀ ಥಾಮಸ್. ನಾವು ಈಗ ತಿಳಿದುಕೊಳ್ಳಲಿರುವುದು ಆಕೆಯ ಬಗ್ಗೆ…..!

1963 ಏಪ್ರಿಲ್ ತಿಂಗಳಿನಲ್ಲಿ ಕೇರಳದಲ್ಲಿನ ಅಲಪ್ಪುಜಲೊ ಟೆಸ್ಸೀ ಥಾಮಸ್ ಜನಿಸಿದರು. ಮದರ್ ಥೆರೆಸ್ಸಾ ನ ಹೆಸರು ಬರುವ ಹಾಗೆ ತಂದೆ ತಾಯಿಯರು ಆಕೆಗೆ ಹೆಸರಿಟ್ಟಿದ್ದಾರೆ. ತ್ರಿಸೂರ್ ನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಆಕೆ ಇಂಜನಿಯರಿಂಗ್ ಅಭ್ಯಾಸಮಾಡಿದರು. ಪುಣೆಯಲ್ಲಿ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಡ್ ಟೆಕ್ನಾಲಜಿಯಲ್ಲಿ ಆರ್ನಮೆಂಟ್ ಟೆಕ್ನಾಲಜಿ ಕೋರ್ಸ್ ನಲ್ಲಿ ಎಂ.ಟೆಕ್ ಪೂರ್ತಿಮಾಡಿದ್ದಾರೆ. ಆದ್ರೆ ಟೆಸ್ಸಿ ಥಾಮಸ್ ಗೆ ಚಿಕ್ಕ ವಯಸ್ಸಿನಿಂದ ಒಂದು ಕೋರಿಕೆ ಇತ್ತು. ಹೇಗಾದರೂ ಮಿಸೈಲ್ಸ್, ರಾಕೆಟ್’ಗಳನ್ನು ತಯಾರಿಸುವ ವಿಭಾಗದಲ್ಲಿ ಅಧಿಕಾರಿಯ ಉದ್ಯೋಗ ಮಾಡಬೇಕೆಂದಿದ್ದಳು. ಏಕೆಂದರೆ ಆಕೆಯ ಮನೆ ಇದ್ದದ್ದು, ರಾಕೆಟ್ ಲಾಂಚಿಂಗ್ ಸ್ಟೇಷನ್ ಪಕ್ಕದಲ್ಲೇ. ಆದ್ದರಿಂದ ಅದೇ ಸ್ಟೇಷನ್’ನಲ್ಲಿಯೇ ಕೆಲಸ ಮಾಡಬೇಕೆಂದು ಕನಸು ಕಂಡಳು. ಕೊನಗೆ ಅದನ್ನು ನನಸು ಮಾಡಿಕೊಂಡಳು. ಪದವಿ ಪೂರ್ಣಗೊಳಿಸಿದ ಮೇಲೆ ಉದ್ಯೋಗವನ್ನು ಪಡೆದುಕೊಂಡಳು.

ಈ ರೀತಿಯಾಗಿ ಟೆಸ್ಸೀ ಥಾಮಸ್ ಹಂತಹಂತವಾಗಿ ಬೆಳೆದು ಅಗ್ನಿ-3 ಮಿಸೈಲ್ ಪ್ರಾಜೆಕ್ಟ್ ಗೆ ಡೈರೆಕ್ಟರ್ ಆದಳು. ಆ ಮಿಸೈಲ್ ‘ನ ಪರಿಧಿ ಮೂರು ಸಾವಿರ ಕಿಲೋ ಮೀಟರ್ ಗಳು. ಆದರೆ ಆಕೆ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಮಿಸೈಲ್ ಟೆಕ್ನಾಲಜಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹಾಕಿದಳು. ಆ ರೀತಿಯಾಗಿ 2009 ನಲ್ಲಿ ಅಗ್ನಿ -4 ಮಿಸೈಲ್ ಪ್ರಾಜೆಕ್ಟ್’ಗೆ ಡೈರೆಕ್ಟರ ಆದಳು. ಆ ಮಿಸೈಲ್’ಗಳನ್ನು 2011 ರಲ್ಲಿ ಪರೀಕ್ಷಿಸಿದಾಗ ಅದು ಯಶಸ್ವಿಯಾಯಿತು ಜೊತೆಗೆ 2012 ಏಪ್ರಿಲ್ 19 ರಂದು ಬೇರೆ ಮಿಸೈಲ್’ಗಳನ್ನು ತಯಾರಿಕೆ ಮಾಡುವುದರಲ್ಲೂ ಆಕೆ ಮಹತ್ತರ ಪಾತ್ರ ವಹಿಸಿದ್ದಳು. ಅಗ್ನಿ-5 ಹೆಸರಿನ ಒಂದು ಹೊಸ ಮಿಸೈಲ್’ಗಳನ್ನು DRDO ತಯಾರಿಸಿತು. ಆ ಪ್ರಾಜೆಕ್ಟ್ ಗೆ ಸಹ ಆಕೆಯೇ ಡೈರೆಕ್ಟರ್ ಆಗಿರುವು ವಿಶೇಷ. ಅದರ ಪರೀಕ್ಷೆ ಸಹ ಯಶಸ್ವಿಯಾಯಿತು. ಪ್ರಸ್ತುತ ನಮ್ಮ ಬಳಿಯಿರುವ ಅತ್ಯಂತ ಆಧುನಿಕ ಮಿಸೈಲ್ ಅದು. ಅಗ್ನಿ -5 ಪರಿಧಿಯು ಐದು ಸಾವಿರ ಕಿಲೋ ಮೀಟರ್’ಗಳು.

ಈ ರೀತಿಯಾಗಿ ಆಕೆ ಮಿಸೈಲ್ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳಾ ವಿಜ್ಞಾನಿಯಾಗಿ ಹೆಸರು ಗಳಿಸಿ ಕೊಂಡಿದರು. ಆಕೆಯ ಪತಿ ನೌಕಾಯಾನದಲ್ಲಿ ಕಮಾಂಡರಾಗಿ ಕೆಲಸಮಾಡುತ್ತಿದ್ದಾಗ, ಮಗ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಒಂದು ಕಡೆ ಕೆಲಸ, ಮತ್ತೊಂದೆಡೆ ಮನೆಯನ್ನು ನೋಡಿಕೊಳ್ಳುವುದು, ದೇಶಕ್ಕೆ ಸೇವೆಯನ್ನು ನೀಡಿರುವ ಆಕೆ ನಿಜವಾಗಿಯೂ ಒಬ್ಬ ಸ್ಟಾರ್ ಅಲ್ಲವೇ….! ಹಾಗೆಯೇ ಇನ್ನೊಂದು ವಿಷಯ, ಟೆಸ್ಸೀ ಥಾಮಸ್ ಗೆ ಲಾಲ್ ಬಹುದ್ದೂರ್ ಶಾಸ್ತ್ರಿ ನ್ಯಾಷನಲ್ ಅವಾರ್ಡ್ ಸಹ ಬಂದಿದೆ…..!


Click Here To Download Kannada AP2TG App From PlayStore!