ಇಂದಿನ ಟಾಪ್ 10 ತಾಜಾ ನ್ಯೂಸ್ : 10-06-2017

#ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಮಾರಾಟವಾಗುತ್ತಿದೆ ಎನ್ನುವುದು ಸುಳ್ಳು ಸುದ್ದಿ
ರಾಜ್ಯದ ಕೆಲವೆಡೆ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಮಾರಾಟವಾಗುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಸ್ಯಾಂಪಲ್ ಅಕ್ಕಿ, ಸಕ್ಕರೆ, ಮೊಟ್ಟೆಯನ್ನು ಸರ್ಕಾರಿ ಲ್ಯಾಬ್ ಹಾಗೂ ಖಾಸಗಿ ಲ್ಯಾಬ್ನಲ್ಲಿ ಪರೀಕ್ಷಿಸಲಾಗಿತ್ತು. ಸದ್ಯ ಈ ಸ್ಯಾಂಪಲ್ ಟೆಸ್ಟ್ ವರದಿ ಅಧಿಕಾರಿಗಳ ಕೈ ಸೇರಿದೆ. ಬೆಂಗಳೂರಿನಲ್ಲಿ ಯಾವುದೇ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ ಇಲ್ಲ ಅಂತ ಆಹಾರ ಸುರಕ್ಷತಾ ಇಲಾಖೆ ಉಪ ಆಯುಕ್ತ ಡಾ. ಹರ್ಷವರ್ಧನ್ ಸ್ಪಷ್ಟಪಡಿಸಿದ್ದಾರೆ.


#ಬೆಂಗಳೂರಿನಲ್ಲೂ ವಾದ್ರಾ ಭೂಕಬಳಿಕೆ : ಬಿಜೆಪಿಯ ಎನ್ ಆರ್ ರಮೇಶ್ ಆರೋಪ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್ಎಪಫ್ ಸಂಸ್ಥೆಯಿಂದ ಭೂ ಸ್ವಾಧೀನವಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 19.37 ಗುಂಡು ತೋಪು, ಅರಣ್ಯ ಮತ್ತು ಸ್ಮಶಾನ ಜಾಗವನ್ನು ರಾಬರ್ಟ್ ವಾದ್ರ ಭೂ ಕಬಳಿಕೆ ಮಾಡಿದ್ದಾರೆ. ಖಾತೆ, ಕಂದಾಯ ಮಾಡಿ, ಬಿ.ಬಿ.ಎಂ.ಪಿಗೆ ಅಪರಾಧ ಮಾಡಿದ್ದಾರೆ. ಅಲ್ಲದೇ ಇವರು ರಾಜಕಾಲುವೆ ಸಹ ಒತ್ತುವರಿ ಮಾಡಿದ್ದಾರೆ. ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿ.ಬಿ.ಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.


#ಮೀನಿನ ಬಲೆಗೆ ಬಿದ್ದ 22 ಮೊಸಳೆ ಮರಿಗಳು ; ರಕ್ಷಿಸಿ ಮಾನವೀಯತೆ ಮೆರೆದ ಮೀನುಗಾರರು!
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನುಗಾರರ ಬಲೆಗೆ 22 ಮೊಸಳೆ ಮರಿಗಳು ಬಿದ್ದಿವೆ. ಜೊತೆಗೆ 6 ಮೊಸಳೆ ಮೊಟ್ಟೆಗಳು ಪತ್ತೆಯಾಗಿವೆ. ಇದು ನದಿ ತೀರದ ಜನರಲ್ಲಿ ಆತಂಕ ಮೂಡಿಸಿದೆ. ಇಬ್ಬರು ಮೀನುಗಾರರು ತಮ್ಮ ಬಲೆಗೆ ಬಿದ್ದ ಮೊಸಳೆ ಮರಿಗಳನ್ನು ರಕ್ಷಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.


#ನಮ್ಮ-100′: ಮೊದಲ ಕರೆ ಸ್ವೀಕರಿಸಿದ ಸಿಎಂ
ಬೆಂಗಳೂರು ನಗರ ಕಮಿಷನರೇಟ್ನ ಮಹತ್ವಾಕಾಂಕ್ಷೆಯ ‘ನಮ್ಮ-100’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಕಮಾಂಡ್ ಸೆಂಟರ್ನಲ್ಲಿ ಸ್ವತಹ ಕರೆ ಸ್ವೀಕರಿಸಿದ ಸಿಎಂ,ರಾಜ್ಯದ ಇತರ ಕಮೀಷನರೇಟ್ ವ್ಯಾಪ್ತಿಯಲ್ಲೂ ನಮ್ಮ 100 ಆರಂಭಿಸಲಾಗುವುದು ಎಂದರು. ಕಲಾಸಿಪಾಳ್ಯದಿಂದ ಮಹಿಳೆಯೊಬ್ಬರು ಕರೆ ಮಾಡಿ ಪಾಸ್ಪೋರ್ಟ್ ಕಳೆದು ಹೋಗಿದೆ ಎಂದು ದೂರಿದರು. ನಮ್ಮ ಪೋಲಿಸರು ಅದನ್ನು ಹುಡುಕಿ ಕೊಡುತ್ತಾರೆ ಎಂದು ಸಿಎಂ ಭರವಸೆ ನೀಡಿದರು.


#ಸ್ವಚ್ಛ ಭಾರತ ಅಭಿಯಾನದಲ್ಲಿ ಯಶ್, ದರ್ಶನ್?
ಸ್ವಚ್ಛ ನಗರ ಎಂಬ ಮನ್ನಣೆ ಪಡೆದಿರುವ ಮೈಸೂರು ನಗರ ಪಾಲಿಕೆ(ಎಂಸಿಸಿ) 2018ರ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿಯಲು ಅಗತ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಸ್ವಚ್ಛ ಭಾರತ ಅಭಿಯಾನಕ್ಕೆ ಬ್ರಾಂಡ್ ಅಂಬಾಸಿಡರ್ ಆಗುವಂತೆ ಮಾಜಿ ಕ್ರಿಕೆಟರ್ ಜವಗಲ್ ಶ್ರೀನಾಥ್ ಅವರಿಗೆ ಗಾಳ ಹಾಕಿರುವ ಎಂಸಿಸಿ, ಮೈಸೂರು ಮೂಲದ ಚಂದನವನದ ಸಿನಿಮಾ ತಾರೆಯರಾದ ಯಶ್ ಮತ್ತು ದರ್ಶನ್ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡಲು ಮುಂದಾಗಿದ್ದಾರೆ.


#ಪ್ರಾಣಾಪಾಯದಿಂದ ಪಾರಾದ ‘ದಂಗಲ್’ ಸ್ಟಾರ್ ಝೈರಾ
ಜನಪ್ರಿಯ ಹಿಂದಿ ಚಿತ್ರ ‘ದಂಗಲ್’ನಲ್ಲಿ ಅಮೀರ್ ಖಾನ್ ಮಗಳ ಪಾತ್ರ ವಹಿಸಿದ್ದ ಜೈರಾ ವಾಸೀಂ ಅವರೀಗ ಕಾರು ಅಪಘಾತದಿಂದ ಅನುಭವಿಸಿದ್ದ ಶಾಕ್ ನಿಂದ ಹೊರಬಂದಿದ್ದಾರೆಂದು ವರದಿಯಾಗಿದೆ. ಗುರುವಾರ (ಜೂನ್ 8) , ಅವರು ಚಲಿಸುತ್ತಿದ್ದ ಕಾರು ಪ್ರಸಿದ್ಧ ದಾಲ್ ಸರೋವರದಲ್ಲಿ ಬಿದ್ದಿತ್ತು. ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದನ್ನು ನೋಡಿದ ಸ್ಥಳೀಯರಲ್ಲಿ ಕೆಲವರು ಕೆರೆಯೊಳಗೆ ಧುಮುಕಿ ಚಾಲಕ ಹಾಗೂ ಝೈರಾ ಅವರನ್ನು ಅಪಯಾದಿಂದ ಪಾರು ಮಾಡಿದ್ದರು.


#ಕಾಶ್ಮೀರಿ ಯುವಕರ ತಪ್ಪು ದಾರಿಗೆಳೆವ ಸಾಮಾಜಿಕ ಜಾಲತಾಣಗಳು: ಜ. ಬಿಪಿನ್ ರಾವತ್
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಡುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಯುವಕರನ್ನುತಪ್ಪು ದಾರಿಗೆಳೆಯಲಾಗುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ‘ಇದನ್ನು ತಡೆಯಲು ಭದ್ರತಾ ಪಡೆಗಳು ಸೂಕ್ತ ಮಾರ್ಗವನ್ನು ಕಂಡುಕೊಂಡಿವೆ’ ಎಂದು ಡೆಹ್ರಾಡೂನ್ನಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದ ಸೈನಿಕ ವಿದ್ಯಾರ್ಥಿಗಳ ‘ಪಾಸಿಂಗ್ ಔಟ್ ಪರೇಡ್’ ಉದ್ದೇಶಿಸಿ ಅವರು ನುಡಿದರು


#ನೋ ಪಾರ್ಕಿಂಗ್ನಲ್ಲಿ ಶೂಟಿಂಗ್….ಸೈಫ್ ಅಲಿಖಾನ್ಗೆ ಎಷ್ಟು ದಂಡ?
ನೋ ಪಾರ್ಕಿಂಗ್ ಸ್ಥಳದಲ್ಲಿ ವ್ಯಾನಿಟಿ ವ್ಯಾನ್ ( ಚಿತ್ರೀಕರಣಕ್ಕೆ ಬಳಸುವ ವಾಹನ ) ನಿಲ್ಲಿಸಿದ್ದಕ್ಕೆ ಹಾಗೂ ಚಿತ್ರೀಕರಣ ನಡೆಸಿದ್ದಕ್ಕೆ ಬಾಲಿವುಡ್ ನಟ ಸೈಫ್ ಅಲಿಖಾನ್ ವಿರುದ್ಧ ಮುಂಬೈ ಮಹಾನಗರ ಪಾಲಿಕೆ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ.


#ಪತ್ನಿಯೊಂದಿಗೆ ಉಪವಾಸ ಕುಳಿತ ಸಿಎಂ
ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.


#ಒಡಿಶಾದಲ್ಲಿ ಭೀಕರ ಅಪಘಾತ: 8 ಮಂದಿ ದುರ್ಮರಣ
ಜಗತ್‌ಸಿಂಗ್‌ಪುರ: ಲಾರಿ ಮತ್ತು ಆಟೋರಿಕ್ಷಾ ನಡುವೆ ಅಪಘಾತ ಸಂಭವಿಸಿ 8 ಜನ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಒಡಿಶಾದ ಜಗತ್‌ಸಿಂಗ್‌ಪುರ-ಮಚ್ಚಗಾಂ ರಸ್ತೆಯ ಚಾಂದೊಲ್‌ ಸ್ಕ್ವೇರ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ


Click Here To Download Kannada AP2TG App From PlayStore!