ಇಂದಿನ ಟಾಪ್ 10 ತಾಜಾ ನ್ಯೂಸ್ : 19-06-2017

#ಗುಜರಾತ್ ಸಿಎಂ ಆಗಮನ: ಗರ್ಭಿಣಿ ಇದ್ದ ಆಂಬ್ಯುಲೆನ್ಸ್ ತಡೆದ ಪೊಲೀಸರು!
ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ರೂಪಾನಿ ಅವರು ಮಾಗಾವಿ ಕಲ್ಯಾಣ ಮಂಟಪಕ್ಕೆ ಆಗಮಿಸುವ 10 ನಿಮಿಷಗಳ ಮುಂಚೆಯೇ ಪೊಲೀಸರು ಸಾರ್ವಜನಿಕರ ವಾಹನಗಳನ್ನು ತಡೆದ ಘಟನೆ ನಡೆದಿದೆ. ಇದರ ಜೊತೆಗೆ ರೂಪಾನಿ ಆಗಮನ ಹಿನ್ನೆಲೆಯಲ್ಲಿ ಉಂಟಾದ ಟ್ರಾಫಿಕ್ ಜಾಮ್ನಲ್ಲಿ 5 ನಿಮಿಷಗಳ ಕಾಲ ಆಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡ ಘಟನೆ ಹಾವೇರಿಯ ಎಪಿಎಂಸಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.ಈ ಆಂಬ್ಯುಲೆನ್ಸ್ನಲ್ಲಿ ಕರ್ಜಗಿ ಗ್ರಾಮದ ಆಫ್ರೀನ್ ಎಂಬ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆತರಲಾಗುತ್ತಿತ್ತು ಎನ್ನಲಾಗಿದೆ.


#ಶಾಲೆಯಲ್ಲಿ ಮೊಬೈಲ್ ಕಳವು: ಪೋಷಕರಿಗೆ ಹೆದರಿ ರೈಲಿಗೆ ತಲೆಕೊಟ್ಟ ವಿದ್ಯಾರ್ಥಿ
ಮೊಬೈಲ್ ಕಳುವಾಗಿದಕ್ಕೆ ಮನೆಯವರು ಬೈಯುತ್ತಾರೆ ಎಂದು ಹೆದರಿ ವಿದ್ಯಾರ್ಥಿಯೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. ಮಣಿಕಂಠ ಗುತ್ತಕಲ್ ಮೃತ ವಿದ್ಯಾರ್ಥಿ. ನಗರದ ಕಬೀರಾನಂದ ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಈತ ಶನಿವಾರ 15 ಸಾವಿರ ಬೆಲೆ ಬಾಳುವ ಮೊಬೈಲ್ನ್ನು ಶಾಲೆಯಲ್ಲಿ ಕಳೆದುಕೊಂಡಿದ್ದ . ಈ ವಿಷಯ ಗೊತ್ತಾದರೆ ಮನೆಯಲ್ಲಿ ಬೈಯುತ್ತಾರೆ ಎಂಬ ಆತಂಕದಿಂದ ಬೆಳಗ್ಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.


#ಜನಸಂಪರ್ಕ ಅಭಿಯಾನ : ಚಿಕ್ಕಮಗಳೂರಲ್ಲಿ ಅಕ್ಕಿ ರೊಟ್ಟಿ ಸವಿದ ಬಿಎಸ್ವೈ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಅವರ ಜನಸಂಪರ್ಕ ಅಭಿಯಾನ ಇಂದು ಚಿಕ್ಕಮಗಳೂರು ಜಿಲ್ಲೆ ತಲುಪಿದೆ. ಜಿಲ್ಲೆಯ ಮರ್ಲೆ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ದಲಿತ ಸಣ್ಣತಮ್ಮಯ್ಯ ಎಂಬುವರ ಮನೆಯಲ್ಲಿ ಉಪಹಾರ ಸೇವಿಸಿದರು. ಬಿಎಸ್ವೈ ಜೊತೆಗೆ ಸಂಸದೆ ಶೋಭ ಕರಂದ್ಲಾಜೆ, ಶಾಸಕರಾದ ಸಿ.ಟಿ. ರವಿ, ಡಿ.ಎನ್. ಜೀವರಾಜ್ ಸಾಥ್ ನೀಡಿದ್ದು, ಸಣ್ಣತಮ್ಮಯ್ಯ ಅವರ ಮನೆಯಲ್ಲಿ ಅಕ್ಕಿ ರೊಟ್ಟಿ, ಉಪ್ಪಿಟ್ಟು, ಚಟ್ನಿ ಸವಿದರು.


#ವೆಂಕಟ್ ಜತೆ ಲವ್: ರಚನಾ ಬಾಯ್ಬಿಟ್ಟ ಸತ್ಯ
ನಟ, ನಿರ್ದೇಶಕ ಹಾಗೂ ನಿರ್ಮಾಪಕ ಹುಚ್ಚ ವೆಂಕಟ್ ಆತ್ಮಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ನಟಿ ರಚನಾ ಪ್ರತಿಕ್ರಿಯಿಸಿದ್ದಾರೆ. ನನ್ನ ಹಾಗೂ ವೆಂಕಟ್ ಮಧ್ಯೆ ಪ್ರೇಮ ಸಂಬಂಧ ಇರಲಿಲ್ಲ. ‘ಸೂಪರ್ ಜೋಡಿ 2′ ಕಾರ್ಯಕ್ರಮವನ್ನು ಒಪ್ಪಿಕೊಳ್ಳಲು ಕಾರಣವಿದೆ. ಈ ರಿಯಾಲಿಟಿ ಶೋನಲ್ಲಿ ಮಹಿಳಾ ಪರವಾದ ಕಾಳಜಿ ಇತ್ತು. ಹಾಗಾಗಿ ಈ ಶೋನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದೆ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ’ ಎಂದು ರಚನಾ ಸ್ಪಷ್ಟಪಡಿಸಿದ್ದಾರೆ.


#ಕಾಜಲ್ ಬರ್ತ್ಡೇಗೆ ರಾನಾ ಸ್ಪೆಶಲ್ ಗಿಫ್ಟ್ ಏನು ಗೊತ್ತಾ ?
ಟಾಲಿವುಡ್ ನಟಿ ಕಾಜಲ್‌ ಅಗರ್‌ವಾಲ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಾಜಲ್‌ ಇಂದು ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕಾಜಲ್‌ ಬರ್ತ್‌ಡೇಗೆ ರಾನಾ ದಗ್ಗುಬಾಟಿ ಏನ್‌ ಗಿಫ್ಟ್‌ ಕೊಟ್ಟಿದ್ದಾರೆ ಗೊತ್ತಾ? ರಾನಾ ಕಾಜಲ್ ಜೊತೆ ‘ನೇನೆ ರಾಜ ನೇನೆ ಮಂತ್ರಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ರಾಣಾ ಕಾಜಲ್ಗೆ ಗಿಫ್ಟ್ ಆಗಿ ಸಿನಿಮಾದ 2ನೇ ಟ್ರೇಲರ್ನ್ನು ಬಿಡುಗಡೆ ಮಾಡಿದ್ದಾರೆ.


#ನಮ್ಮವರಿಂದಲೇ ನಮ್ಮ ಸೋಲು.. ಚಾ ಟ್ರೋ ಸೋಲಿನ ಬಗ್ಗೆ ಹಾರ್ದಿಕ್ ವಿವಾದಿತ ಟ್ವೀಟ್!
ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಏಕದಿನ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡ ಪಾಕ್‌ ವಿರುದ್ಧ ಹಾಲಿ ಚಾಂಪಿಯನ್‌ ಭಾರತ ಹೀನಾಯ ಸೋಲು ಕಂಡಿದೆ. ಇದರ ಮಧ್ಯೆ ಟೀಂ ಇಂಡಿಯಾ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಮಾಡಿರುವ ಟ್ವೀಟ್ವೊಂದು ಬಾರೀ ಸಂಚಲನಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ಸುಮಾರು 10.15ರ ವೇಳೆ ಟ್ವೀಟ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ, ”ನಮ್ಮವರೇ ನಮ್ಮನ್ನು ಲೂಟಿ ಮಾಡಿದರು, ಬೇರೆಯವರನ್ನು ಯಾಕೆ ದೂರಬೇಕು’ ಎಂದು ನಿಗೂಢರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಿದ್ದಾರೆ.


#ಮಸೀದಿ ಬಳಿ ಪಾದಚಾರಿಗಳ ಮೇಲೆ ಹರಿದ ವ್ಯಾನ್: ಲಂಡನ್ನಲ್ಲಿ ಓರ್ವನ ಸಾವು
ಮೇಲೆ ಹಾದು ಹೋಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ರಾತ್ರಿ ಮುಸ್ಲಿಮರ ಪ್ರಾರ್ಥನೆ ನಂತರ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಭಾವಿಸಿದ್ದಾರೆ. ಸದ್ಯ ಸೆವನ್ ಸಿಸ್ಟರ್ಸ್ ರಸ್ತೆಯನ್ನು ಮುಚ್ಚಿದ್ದು, ಪೊಲೀಸರು ತನಿಖೆ, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.


#ದಲಿತ ಮುಖಂಡ ಕೋವಿಂದ್ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ
ರಾಷ್ಟ್ರದ ಪ್ರಥಮ ಪ್ರಜೆಯ ಆಯ್ಕೆಗೆ ಅಖಾಡ ಸಜ್ಜಾಗತೊಡಗಿದೆ. ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ಕಸರತ್ತು ಬಿರುಸುಗೊಂಡಿರುವ ನಡುವೆಯೂ ಆಡಳಿತಾರೂಢ ಬಿಜೆಪಿ ತನ್ನ ಮರ್ಜಿಯ ಅಭ್ಯರ್ಥಿಯನ್ನೇ ಗೌರವಾನ್ವಿತ ಹುದ್ದೆಯಲ್ಲಿ ಕೂರಿಸುವ ಉತ್ಸುಕತೆ ತೋರಿದ್ದು, ದಲಿತ ಮುಖಂಡ, ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.


#ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ ಬಿಡುಗಡೆ
ಬಹಳಷ್ಟು ವಿವಾದಕ್ಕೆ ಕಾರಣವಾದ ‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ’ ಸಿನಿಮಾದ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ಆರು ತಿಂಗಳ ಕಾಲ ಸೆನ್ಸಾರ್‌ ಬೋರ್ಡ್ ನೊಂದಿಗೆ ಸೆಣಸಾಡಿ ಕೊನೆಗೂ ಭಾರತೀಯ ಸಿನಿಮಾ ಮಂದಿರಗಳಲ್ಲಿ ತೆರೆಕಾಣಲಿದೆ. 10 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿದ ನಂತರ ‘ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾ’ ಭಾರತಕ್ಕೆ ಕಾಲಿಟ್ಟಿದೆ. ಅಲಂಕೃತ ಶ್ರೀವಾಸ್ತವ ನಿರ್ದೇಶನದಲ್ಲಿ ಪ್ರಕಾಶ್ ಜಾ ನಿರ್ಮಿಸಿರುವ ಈ ಸಿನಿಮಾದಲ್ಲಿ ಕೊಂಕಣ ಸೇನ್, ರತ್ನಾ ಪಾಟಕ್ ಶಾ, ಅಹಾನ , ಪ್ಲ್ಯಾಬಿಟಾ ಬೋರ್ಥಕೂರ್ ನಟಿಸಿದ್ದಾರೆ.


#120ಕೆಜಿಯಿಂದ 70ಕೆಜಿಗೆ ಇಳಿದ ಅಮೀರ್ ಖಾನ್
ದಂಗಾಲ್ ನಂತರ ಇದೀಗ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾಕ್ಕಾಗಿ ಅಮೀರ್ ತಮ್ಮ ತೂಕವನ್ನು ಇಳಿಸಿದ್ದಾರೆ. 120 ಕೆ.ಜಿಯಿಂದ 70 ಕೆಜಿ ಇಳಿದಿದ್ದಾರೆ. ಫ್ಯಾಟ್ ಕೂಡಾ ಪಿಕೆ ಹಾಗೂ ಧೂಮ್ 3 ಸಿನಿಮಾದಲ್ಲಿದ್ದಕ್ಕಿಂತಲೂ ಕಡಿಮೆ ಆಗಿದೆಯಂತೆ. ಕೇವಲ ತೂಕ ಮಾತ್ರ ಇಳಿಸಿಕೊಂಡಿಲ್ಲ. ಜೊತೆಗೆ ಬಾಡಿ ಟೈಪ್ನ್ನೇ ಬದಲಿಸಿದ್ದಾರೆ. ಭುಜವನ್ನು ನೋಡಿದ್ರೆ ತಿಳಿಯುತ್ತೆ. ಈ ಹಿಂದೆಂದೂ ನೋಡಿರದ ಗೆಟಪ್ನಲ್ಲಿ ಅಮೀರ್ ಇದ್ದಾರೆ.


Click Here To Download Kannada AP2TG App From PlayStore!