ಆ ಗ್ರಾಮದಲ್ಲಿರುವ ಮಕ್ಕಳಿಗೆ ಇಂಗ್ಲೀಷ್ ಎಂದರೆ ಭಯವಿಲ್ಲದಂತೆ ಮಾಡಿದ ಯುವತಿ.!

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲೆಲ್ಲೂ ಪೈಪೋಟಿ. ಅದು ಸಂಸ್ಥೆಗಳ ನಡುವೆ ಆಗಿರಬಹುದು ಅಥವಾ ವ್ಯಕ್ತಿಗಳ ನಡುವೆ ಆಗಿರಬಹುದು ಹೀಗೆ ಪ್ರತೀ ಕ್ಷೇತ್ರವೂ ಪೈಪೋಟಿಯಿಂದ ಸಾಗುತ್ತಿದೆ. ಹಾಗೆಯೇ ಎಲ್ಲರಿಗೂ ತಿಳಿದಂತೆ ವಿದ್ಯಾಕ್ಷೇತ್ರದಲ್ಲೂ ಪೈಪೋಟಿ ಹೆಚ್ಚಾಗಿದೆ. ನಮ್ಮಲ್ಲಿ ವಿದ್ಯಾರ್ಹತೆ, ನೈಪುಣ್ಯತೆಗಳಿದ್ದರೂ ಇಂಗ್ಲೀಷ್ ಗೊತ್ತಿಲ್ಲದಿದ್ದಲ್ಲಿ ಇತರರೊಂದಿಗೆ ಸ್ಪರ್ಧಿಸಲಾಗದೆ ಹಿಂದುಳಿಯಬೇಕಾಗುತ್ತದೆ. ದೊಡ್ಡ ದೊಡ್ಡ ನಗರಗಳಲ್ಲಿ, ಪಟ್ಟಣಗಳಲ್ಲಿ ಖಾಸಗಿ, ಕಾರ್ಪೊರೇಟ್ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಇಂಗ್ಲೀಷ್ ನ ಬಗ್ಗೆ ತಿಳುವಳಿಕೆ ಇರುವಷ್ಟು ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ವಿದ್ಯಾಭ್ಯಾಸ ಮಾಡಿದವವರಲ್ಲಿ ಇರುವುದಿಲ್ಲ. ಆದ್ದರಿಂದ ಇವರು ಇತರರೊಂದಿಗೆ ಸ್ಪರ್ಧಿಸಲಾಗದೆೆ ಎಲ್ಲಾ ವಿಧದಲ್ಲೂ ಹಿಂದೆ ಬೀಳುತ್ತಿದ್ದಾರೆ. ಇವರಲ್ಲಿ ಪ್ರತಿಭೆ ಇದ್ದರೂ ಕೂಡಾ ಇಂಗ್ಲೀಷ್ ಕಡ್ಡಾಯವಾದ್ದರಿಂದ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರತಿಭೆ ಇದ್ದೂ ನಿರುದ್ಯೋಗವನ್ನು ಎದುರಿಸುತ್ತಿರುವವರನ್ನು ಮೇಲಕ್ಕೆತ್ತಲು ಶ್ರಮ ಪಡುತ್ತಿರುವ ಆ ಯುವತಿ ಯಾರೆಂದು ತಿಳಿದುಕೊಳ್ಳೋಣ ಬನ್ನಿ…!!

english-teaching-diya

ಮುಂಬೈನಲ್ಲಿ ವಾಸವಿರುವ ಆಕೆಯ ಹೆಸರು ದಿಯಾ ಷಾ. ಈ ಮಧ್ಯೆಯೇ ಐಸಿಎಸ್ಇ ಬೋರ್ಡ್ ಪರೀಕ್ಷೆ ಬರೆದು ಇಂಟರ್ನ್ ಷಿಪ್ ಗಾಗಿ ಸ್ವದೇಶ್ ಎಂಬ ಸ್ವಯಂಪ್ರೇರಿತ ಸಂಸ್ಥೆಯೊಂದರಲ್ಲಿ ಸೇರಿಕೊಂಡಿದ್ದಾಳೆ. ಅವರು ಆಕೆಗೆ ಒಂದು ಗ್ರಾಮದಲ್ಲಿರುವ ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿರುವ ವಿಧಾನದ ಕುರಿತು ಇಂಟರ್ನ್ ಷಿಪ್ ನಿರ್ವಹಿಸಲು ಸೂಚಿಸಿದ್ದಾರೆ. ಆದರೆ ಆಕೆ ಆ ಕೆಲಸದಲ್ಲಿ ಬೇಸರವೆನಿಸಿ, ಒಮ್ಮೆ ವಾರಾಂತ್ಯದಲ್ಲಿ ಹತ್ತಿರದಲ್ಲಿರುವ ಖಾಮ್ ಗಾವ್ ಗ್ರಾಮಕ್ಕೆ ಹೋದಳು. ಅಲ್ಲಿ ಅಧಿಕ ಪ್ರತಿಭೆ, ನೈಪುಣ್ಯವಿರುವಂತಹ ಹಲವು ವಿದ್ಯಾರ್ಥಿಗಳನ್ನು ನೋಡಿ ಅವರಲ್ಲಿ ಆತ್ಮ ಸ್ಥೈರ್ಯ ಇಲ್ಲದಿರುವುದನ್ನು ಗಮನಸಿದಳು. ಇಂಗ್ಲೀಷ್ ಬರುವುದಿಲ್ಲವೆಂಬ ಕಾರಣದಿಂದ ಆ ವಿದ್ಯಾರ್ಥಿಗಳು ತಮ್ಮನ್ನು ತಾವೇ ಕೀಳಾಗಿ ಭಾವಿಸುತ್ತಿದ್ದರು. ಹೀಗೇ ಇದ್ದಲ್ಲಿ ಅವರು ಬೆಳೆದ ಮೇಲೆ ನಿರುದ್ಯೋಗಿಗಳಾಗಿ ಬದಲಾಗುವರೆಂದು ಅರಿತು, ತಕ್ಷಣವೇ ಅವರಿಗೆ ಇಂಗ್ಲೀಷ್ ಬೋಧಿಸಬೇಕೆಂಬ ನಿರ್ಣಯವನ್ನು ತೆಗೆದುಕೊಂಡಳು.diya-shah

ಇದಕ್ಕೆ ಆಕೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಸಿಇಓ ರವರ ಅನುಮತಿ ಪಡೆಯಬೇಕಾಯಿತು. ಅನುಮತಿ ದೊರೆತ ನಂತರ ತನ್ನ ನಿವಾಸವನ್ನು ಇಂಟರ್ನ್ ಷಿಪ್ ನಿಂದ ಆ ಗ್ರಾಮಕ್ಕೆ ವರ್ಗಾಯಿಸಿದಳು. ಪ್ರತಿದಿನ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ಗ್ರಾಮದಲ್ಲಿರುವ ಮಕ್ಕಳಿಗೆ ಇಂಗ್ಲೀಷ್ ಪಾಠಗಳನ್ನು ಕಲಿಸುತ್ತಿದ್ದಳು. ಮೊದಮೊದಲು ಕೇವಲ ಒಬ್ಬರಿಬ್ಬರು ಮಕ್ಕಳು ಬರುತ್ತಿದ್ದು, ಸ್ವಲ್ಪ ದಿನಗಳ ನಂತರ ಇಂಗ್ಲಿಷ್ ಕಲಿಯಲು ಬರುವ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಹೀಗೆ ಎರಡು ತಿಂಗಳುಗಳಲ್ಲೇ ಬದಲಾವಣೆ ಕಂಡು ಬಂದಿತು. ಸ್ವತಃ ಅವರೇ ಇಂಗ್ಲೀಷ್ ನಲ್ಲಿ ಪದಗಳನ್ನು, ವಾಕ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಆಕೆಯೊಂದಿಗೆ ಇಂಗ್ಲೀಷ್ ನಲ್ಲಿ ಸರಾಗವಾಗಿ ಮಾತನಾಡಲು ಪ್ರಾರಂಭಿಸಿದರು. ಇದನ್ನು ಕಂಡ ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಆಕೆ ಇಂಟರ್ನ್ ಷಿಪ್ ಮುಗಿಸಿದ ನಂತರವೂ ಟ್ಯೂಷನ್ ಮೂಲಕ ಇಂಗ್ಲೀಷ್ ಬೋಧಿಸುತ್ತೇನೆ ಎನ್ನುತ್ತಿದ್ದಾಳೆ. ಆಕೆ ತೆಗೆದುಕೊಂಡ ಈ ನಿರ್ಧಾರಕ್ಕೆ ಆಕೆಯನ್ನು ಅಭಿನಂದಿಸಲೇಬೇಕಲ್ಲವೆ…?

 


Click Here To Download Kannada AP2TG App From PlayStore!