ಇತರರನ್ನು ನಮ್ಮ ದಾರಿಗೆ ತಂದುಕೊಳ್ಳಬೇಕೆಂದರೆ ಹೀಗೆ ಮಾಡಿ..! ಚಾಣಕ್ಯನು ಹೇಳಿದ ಹಿಪ್ನೋಟಿಸಂ ಟ್ರಿಕ್ಸ್.

ಆಚಾರ್ಯ ಚಾಣಕ್ಯನು ಹೇಳಿದ ಈ ವಿಷಯಗಳನ್ನು ಆಚರಿಸಿದರೆ, ಎಂತಹ ವ್ಯಕ್ತಿಯಾದರೂ ಹಾಗೆಯೇ ನಮ್ಮ ದಾರಿಗೆ ಬರುತ್ತಾನಂತೆ..! ಪ್ರಪಂಚದಲ್ಲಿ ಯಾವ ಇಬ್ಬರು ಮನುಷ್ಯರ ಮನಃಸ್ಥಿತಿಗಳು ಒಂದೇ ತರ ಇರುವುದಿಲ್ಲ. ಒಬ್ಬೊಬ್ಬರಿಗೂ ಒಂದೊಂದು ರೀತಿಯಾದ ಲಕ್ಷಣಗಳನ್ನು, ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ. ಈ ರೀತಿಯಾದ ಯಾವ ವ್ಯಕ್ತಿಯನ್ನಾದರೂ ನಮ್ಮ ದಾರಿಗೆ ತಂದುಕೊಳ್ಳಬೇಕೆಂದರೆ, ಅದು ತುಂಬಾ ಕಷ್ಟದಿಂದ ಕೂಡಿದ ಕೆಲಸವಾಗಿರುತ್ತದೆ. ಏಕೆಂದರೆ ಒಬ್ಬರ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡು ಅವರನ್ನು ನಮ್ಮ ದಾರಿಗೆ ತರಬೇಕಾದರೆ, ಅದಕ್ಕೆ ತುಂಭಾ ಶ್ರಮ ಪಡಬೇಕಾಗುತ್ತದೆ. ಆದರೆ ಒಂದು ನಿರ್ಧಿಷ್ಟವಾದ ವ್ಯಕ್ತಿತ್ವವಿರುವವರನ್ನು ಮಾತ್ರ ಬಹುಬೇಗ ನಮ್ಮ ದಾರಿಗೆ ತಂದುಕೊಳ್ಳಬಹುದಂತೆ… ಅದಕ್ಕಾಗಿ ಆಚಾರ್ಯ ಚಾಣಕ್ಯನು ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಅವುಗಳೇನೆಂದರೆ….

ಕೋಪದಿಂದ ಇರುವವರನ್ನು….

ಇಂತಹ ಮನಃಸ್ಥಿತಿಯನ್ನು ಹೊಂದಿರುವವರ ಮುಂದೆ ತುಂಬಾ ಗೌರವದಿಂದ, ಮರ್ಯಾದೆಯಿಂದ, ಪ್ರಶಾಂತವಾಗಿ ವರ್ತಿಸಬೇಕು. ಯಾವಾಗಲೂ ಕೋಪವನ್ನು ಪ್ರದರ್ಶಿಸಬಾರದು. ಇದರಿಂದ ಅವರು ಸಹಜವಾಗಿ ಕೂಲ್ ಆಗಿ ಸ್ವಲ್ಪ ಶಾಂತರಾಗುತ್ತಾರೆ. ಈ ರೀತಿಯಾಗಿ ನಮ್ಮ ದಾರಿಗೆ ಬರುತ್ತಾರೆ.

ಮೂರ್ಖರನ್ನಾದರೆ…..

ಮೂರ್ಖಸ್ವಭಾವವುಳ್ಳವರನ್ನು ಯಾವಾಗಲೂ ಹೊಗಳುತ್ತಾ ಇರಬೇಕು. ಅವರನ್ನೇ ಯಾವಾಗಲು ಅನುಸರಿಸಬೇಕು. ಇದರಿಂದ ಅವರು ಅವರಾಗಿಯೇ ನಮ್ಮ ದಾರಿಗೆ, ನಮ್ಮ ಕಂಟ್ರೋಲ್’ಗೆ ಬರುತ್ತಾರೆ.

ಪ್ರತಿಭಾವಂತರಾದರೆ…

ಒಂದು ವೇಳೆ ನಮ್ಮ ಮುಂದೆ ಇರುವಂತಹವರು ನಮಗಿಂತ ಪ್ರತಿಭಾವಂತರಾದ ವ್ಯಕ್ತಿಗಳಾದರೆ ಅವರೊಂದಿಗೆ ಯಾವಾಗಲೂ ನಿಜವನ್ನೇ ಮಾತನಾಡಬೇಕು. ಇದರಿಂದ ಅವರು ನಮ್ಮ ಬಗ್ಗೆ ಆಸಕ್ತಿಯನ್ನು ಪ್ರದರ್ಶಿಸುತ್ತಾ, ನಮ್ಮ ದಾರಿಗೆ ಬರುತ್ತಾರೆ.

ಈಗೋ(ಅಹಂಕಾರ) ಇರುವವರಾದರೆ…

ತುಂಬಾ ಅಹಂಕಾರ ಮನಃಸ್ಥಿತಿಯುಳ್ಳವರಾದರೆ, ನಮ್ಮ ದಾರಿಗೆ ತಂದುಕೊಳ್ಳಬೇಕೆಂದರೆ, ಅವರೊಂದಿಗೆ ಯಾವಾಗಲೂ, ಮರ್ಯಾದೆಯಿಂದ ಇದ್ದು, ಅದೇ ರೀತಿ ವರ್ತಿಸಬೇಕು. ಇದರಿಂದ ಅವರು ಸಹಜವಾಗಿಯೇ, ನಮ್ಮ ಮಾತು ಕೇಳುತ್ತಾರೆ.

ಸ್ವಾರ್ಥವಿರುವವರು ಅತಿ ಆಸೆಯುಳ್ಳವರು…

ಇಂತಹವರನ್ನೂ ಸುಲಭವಾಗಿ ನಮ್ಮ ಬುಟ್ಟಿಗೆ ಬೀಳಿಸಿಕೊಳ್ಳಬಹುದು. ಅವರಿಗೆ ಸ್ವಲ್ಪ ಹಣದ ಆಸೆ ತೋರಿಸಿದರೆ ಸಾಕು ನಮ್ಮ ದಾರಿಗೆ ಬರುತ್ತಾರೆ.

ಮಕ್ಕಳಿಗಾದರೆ…

ಚಿಕ್ಕಮಕ್ಕಳನ್ನಾದರೆ, ತಂದೆ-ತಾಯಿಯರು ಪ್ರೀತಿ, ವಾತ್ಸಲ್ಯದಿಂದ ತಮ್ಮ ದಾರಿಗೆ ತಂದುಕೊಳ್ಳುತ್ತಾರೆ. 5 ವರ್ಷಗಳ ವಯಸ್ಸಿನವರೆಗೂ ಅವರನ್ನು ತುಂಬಾ ಮುದ್ದು ಮುದ್ದಾಗಿ ಪ್ರೀತಿಯಿಂದ ಬೆಳೆಸಬೇಕು. ಅದೇ 10 ವರ್ಷ ವಯಸ್ಸಿನೊಳಗಿನವರಿಗೆ ಯಾವುದೇ ಕಠಿಣ ಪದಗಳಿಂದಾಗಲಿ,  ಕಠಿಣವಾಗಿ ವರ್ತಿಸಬಾರದು. 16ವರ್ಷ ವಯಸ್ಸಿನೊಳಗಿರುವವರನ್ನು ಇನ್ನೂ ಮುಂದುವರೆದ ವಯಸ್ಸಿನವರಿಗಾದರೆ ತಂದೆ- ತಾಯಿಯರು ಸ್ನೇಹಿತರಂತೆ ಇರಬೇಕು.

ಕ್ಲಿಷ್ಟಕರವಾದ ಪರಿಸ್ಥಿತಿ ಬಂದಾಗ….

ಮೇಲೆ ಹೇಳಿದ ಮನಃ ಸ್ಥಿತಿಗಳಿರುವ ವ್ಯಕ್ತಿಗಳ ಜೊತೆಗೆ ಮಾತ್ರವಲ್ಲ. ಆಯಾ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕೆಂಬುದು ಸಹಾ ಚಾಣಕ್ಯನು ಹೇಳಿದ್ದಾನೆ. ಪ್ರಮುಖವಾದ, ತುಂಬಾ ಕ್ಲಿಷ್ಟಕರವಾದ ಪರಿಸ್ಥಿಗಳಿದ್ದಾಗ, ಸಾಧ್ಯವಾದಷ್ಟು ತಾಳ್ಮೆಯಿಂದರಬೇಕು. ಅದು ಒಳ್ಳೆಯ ಫಲಿತಾಂಶಗಳನ್ನು ನೀಡುತ್ತದೆ.

ಒಬ್ಬ ವ್ಯಕ್ತಿಯ ಸಹಜವಾದ ಸ್ವಭಾವವನ್ನು ತಿಳಿಯಬೇಕಾದರೆ…

ಒಬ್ಬ ವ್ಯಕ್ತಿ ಇದ್ದಂತಹ ಸಹಜ ಸಿದ್ದವಾದ ಆತನ ಸ್ವಭಾವವನ್ನು ತಿಳಿದುಕೊಳ್ಳಬೇಕಾದರೆ ಆತನ ಮಾತುಗಳ ಪ್ರವರ್ತನೆಯನ್ನು ಆಧಾರಿಸಿ ಅದನ್ನು ನಿರ್ಧರಿಸಬಹುದು.

ಆಚಾರ್ಯ ಚಾಣಕ್ಯನು ಮಾನವರಿಗೆ ತಿಳಿಸಿದ ಕೆಲವು ಮುಖ್ಯವಾದ, ಆಚರಿಸಲು ಯೋಗ್ಯವಾದ ನೀತಿ ಸೂತ್ರಗಳಿವೆ….”

  • ಆಚಾರ್ಯ ಚಾಣಕ್ಯನು ಹೇಳಿದ ಪ್ರಕಾರ ಅತಿ ಆಸೆ, ದುರಾಸೆ ಸ್ವಾರ್ಥಗಳಂತಹ ಅಂಶಗಳನ್ನು ಹೊಂದಿರುವವರನ್ನು ಎಂದಿಗೂ ಪರಿವರ್ತನೆ ಮಾಡಲಾಗುವುದಿಲ್ಲ.
  • ಎಲ್ಲಿ ನಮಗೆ ಗೌರವ ಇರುವುದಿಲ್ಲವೋ ಅಲ್ಲಿ ಒಂದು ಕ್ಷಣವೂ ಸಹ ಇರಬಾರದು. ಹಾಗೆಯೇ ನಮ್ಮನ್ನು ಗೌರವಿಸದವರ ಹತ್ತಿರವೂ ಸಹ ಇರಬಾರದು. ಹಣವು ಬಾರದ ಹತ್ತಿರವೂ ಸಹ ಇರಬಾರದು.
  • ನದಿಗಳು, ವೈದ್ಯರು ಇರುವ ಸ್ಥಳಗಳಲ್ಲಿ ಮಾತ್ರ ವಾಸವಿರಬೇಕಂತೆ. ಅದೇ ವಾಸಿಸುವುದಕ್ಕೆ ಸರಿಯಾದ ಸ್ಥಳಗಳಾಗಿರುತ್ತದೆಯಂತೆ.
  • ಯಾವುದೇ ತರಹದ ಗಲಾಟೆ ಇರದ, ಹೆಚ್ಚು ಆಹಾರ, ನೀರು ಇರುವ ಪ್ರದೇಶಗಳಲ್ಲಿ ಮಾತ್ರವೇ ಹಣ ಹೆಚ್ಚಾಗಿ ಇರುತ್ತದೆಯಂತೆ.
  • ಸರೋವರಗಳಲ್ಲಿ ನೀರು ಇರುವಾಗ ಮಾತ್ರವೇ ಅವುಗಳಲ್ಲಿದ್ದು, ನೀರು ಇಲ್ಲದಿದ್ದಾಗ ಅವುಗಳನ್ನು ಬಿಟ್ಟುಹೋಗುವ ಹಂಸಗಳಂತೆ ಮನುಷ್ಯರು ಜೀವಿಸಬೇಕಂತೆ.
  • ಒಬ್ಬ ವ್ಯಕ್ತಿಯನ್ನು ಹತ್ತು ಜನರು ಹೊಗಳಿದರೆ ನಾವು ಸಹ ಹೊಗಳಬೇಕಂತೆ. ಆದರೆ ಸ್ವತಃ ಯಾರೂ ಅವರಿಗವರೇ  ಹೊಗಳಿಕೊಳ್ಳಬಾರದು.
  • ನಮಗೆ ಇರುವುದರಲ್ಲಿ ತೃಪ್ತಿಯಾಗಿ ಜೀವಿಸಿದರೆ. ನಿಜವಾದ ಆನಂದ ಸಿಗುತ್ತದೆ. *ಮನುಷ್ಯರು ಸಹ  ಅಕ್ಕ ಪಕ್ಕದ ಮನುಷ್ಯನಿಗೆ ಸಹಾಯ ಮಾಡದೆ ಇರುವವರು ಅವರು ಬದುಕಿದ್ದರೂ ಸತ್ತವರಿಗೆ ಸಮಾನ.
  • ಜಯವನ್ನು ಯಾವಾಗಲೂ ಹಿಂದೆ ಇಟ್ಟುಕೊಂಡಿರುವವರನ್ನು ಆದರ್ಶವಾಗಿ ಇಟ್ಟುಕೊಂಡರೆ, ಅಂತಹವರ ಕಥೆಗಳನ್ನು ಓದಿದರೂ, ಅದರಿಂದ ನಾವು ಸ್ಪೂರ್ತಿಯಾಗಿ ಜಯವನ್ನು ಸಾಧಿಸಬಹುದು.
  • ಜೀವನದಲ್ಲಿ ಬರುವ ಎಲ್ಲಾ ಅವಕಾಶಗಳನ್ನು ಕೈ ಜಾರಿಬಿಡಬಾರದು. ಯಾರ ಜೀವನ ಹೇಗೆ ಬದಲಾಗುತ್ತದೆಯೋ, ಯಾರೂ ಹೇಳಲಾಗುವುದಿಲ್ಲ ಅಲ್ವಾ….!

Click Here To Download Kannada AP2TG App From PlayStore!

Share this post

scroll to top