ಆ ಮದುವೆಯಲ್ಲಿ ಎಲ್ಲವೂ ಬಂಗಾರವೇ…!

ಬಂಗಾರದಿಂದ ತಯಾರಿಸಿದ ಉಡುಪುಗಳು… ವಜ್ರಗಳನ್ನು ಅಳವಡಿಸಿ ಮಾಡಿದ ಬೂಟುಗಳು… ಮುತ್ತು, ಹವಳಗಳನ್ನು ಹೊಂದಿದ ಪುಷ್ಪಗುಚ್ಚಗಳು, ಕಣ್ಣು ಹಾಯಿಸಿದ ಕಡೆ ಎಲ್ಲವೂ ಬಂಗಾರವೇ……ಹೆಜ್ಜೆ ಹೆಜ್ಜೆಯಲ್ಲೂ ಎದ್ದುಕಾಣುವ ರಾಜವೈಭೋಗ ….ಅದಕ್ಕೂ ಮೀರಿದ ವೈಭವ…..ಆ ಮದುವೆಯ ಬಗ್ಗೆ ಹೇಳಲು ಮಾತು ಸಾಲದು. ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ರಾಜರಲ್ಲಿ ಒಬ್ಬರಾದ ಬ್ರೂನೈ ಸುಲ್ತಾನ್ ಹಾಸನಲ್ ಬೊಲ್ಕಿಯಾ ನೆನೆಸಿಕೊಂಡರೆ ಖರ್ಚು ಮಾಡಲು ಬರವೇನಿಲ್ಲ. ಅಂದರೆ ಖರ್ಚಿನ ಬಗ್ಗೆ ಲೆಕ್ಕ ಹಾಕುವಂತೆಯೇ ಇಲ್ಲ. ಅದರಲ್ಲೂ ರಾಜನ ಚಿಕ್ಕ ಮಗನಾದ ಅಬ್ದುಲ್ ಮಾಲಿಕ್ ಹಾಗೂ ಸಿಸ್ಟಮ್ ಡೇಟಾ ಅನಲಿಸ್ಟ್, ಐಟಿ ಇನ್ ಸ್ಟ್ರಕ್ಟರ್ ಆಗಿ ಕಾರ್ಯನಿವರ್ವಹಿಸುತ್ತಿರುವ ಮದುಮಗಳು ರಾಬಿಯಾತುಲ್ ರ ಮದುವೆಯ ಸಂಭ್ರಮವಿದು. ಬ್ರೂನೈ ರಾಜಧಾನಿಯಾದ ನುರಾಲ್ ಇಮಾನ್ ನಲ್ಲಿರುವ ಮೊನಾರ್ಕ್ ಪ್ಯಾಲೆಸ್ ಮದುವೆ ಮಂಟಪವಾಗಿ ಅಲಂಕರಿಸಲ್ಪಟ್ಟಿದೆ. ಇದು ಪ್ರಪಂಚದಲ್ಲೇ ಅತಿ ದೊಡ್ಡದಾದ ರೆಸಿಡೆನ್ಸಿಯಲ್ ಪ್ಯಾಲೆಸ್ ಆಗಿದ್ದು, 1788 ಕೊಠಡಿಗಳನ್ನೊಳಗೊಂಡಿದೆ.

ಚಿನ್ನ ಮತ್ತು ವಜ್ರಗಳನ್ನು ಹೊಂದಿದ ಉಡುಪುಗಳನ್ನು ಧರಿಸಿದ ಆ ನವಜೋಡಿಯು ಹೂಗಳಿಗೆ ಬದಲಾಗಿ ರತ್ನಗಳು, ಹವಳಗಳನ್ನು ಅಳವಡಿಸಿ ತಯಾರಿಸಿದ ಪುಷ್ಪಗುಚ್ಛವನ್ನು ಕೈಯಲ್ಲಿ ಹಿಡಿದು, ಬಂಧುಗಳ, ಸ್ನೇಹಿತರ, ವಿದೇಶಿ ಆಹ್ವಾನಿತರ ಮುಂದೆ ಇಬ್ಬರೂ ಪ್ರಮಾಣ ಮಾಡಿ ಮದುವೆಯಾದರು. ಈ ತಿಂಗಳ 5 ರಂದು ಆರಂಭಗೊಂಡ ಈ ಮದುವೆ ಸಂಭ್ರಮ 15 ರಂದು ಅಂದರೆ ಒಟ್ಟು 11 ದಿನಗಳಕಾಲ ನಡೆಯಲಿದೆ . ಈ ಮದುವೆ ಸಂಭ್ರಮದಲ್ಲಿ ಪ್ರಪಂಚದ ವಿವಿಧ ದೇಶಗಳಿಂದ ಬರುವ 5000 ಮಂದಿ ಪಾಲ್ಗೊಳ್ಳಲಿದ್ದಾರೆ. ಸಾಂಪ್ರದಾಯಿಕ ರೀತಿಯಲ್ಲ್ಲಿ ಅಲಂಕರಿಸಿ ಕೊಂಡಿರುವ ಹಲವಾರು ರಾಯಲ್ ಗಾರ್ಡ್ಸ್ ಈ ವೈಭವದ ಮದುವೆಗೆ ವಿಶೇಷ ಆಕರ್ಷಣೆಯಾಗಲಿದ್ದಾರೆ.

 


Click Here To Download Kannada AP2TG App From PlayStore!