ಡೊಳ್ಳು ಹೊಟ್ಟೆಗೆ ಬ್ರಹ್ಮಾಸ್ತ್ರವಾದ ಈ ಪದಾರ್ಥವನ್ನು ತಿಂದರೆ ನಿಮ್ಮ ತೂಕ ಕಡಿಮೆಯಾಗುತ್ತದೆ!!

ಇಂದಿನ ದಿನಗಳಲ್ಲಿ ಕಿರಿಯ ಹಿರಿಯ ಎಂಬ ವ್ಯತ್ಯಾಸವಿಲ್ಲದೆೆ ಎಲ್ಲರಿಗೂ ಬೊಜ್ಜು ಬರುತ್ತಿದೆ. ವಯಸ್ಸಿನ ಜೊತೆ ಸಂಬಂಧವಿಲ್ಲದೆ ಸ್ಥೂಲಕಾಯದಿಂದ ನರಳುತ್ತಿದ್ದಾರೆ. ಕಷ್ಟಪಟ್ಟು ಬೆಳಸಿಕೊಂಡ ಆ ಬೊಜ್ಜನ್ನು ಹಾಗೂ ಸ್ಥೂಲಕಾಯವನ್ನು ತಡೆಯಲು ಎಷ್ಟೋ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಏಕೆಂದರೆ ಅದನ್ನು ಹಾಗೆಯೇ ಮುಂದುವರಿಸಿದರೆ ಅನೇಕ ಅನಾರೋಗ್ಯ ಸಮಸ್ಯೆಗಳು ಬರುತ್ತವೆ. ಆದರೆ ಸಹಜವಾದ ಪದ್ದತಿಗಳನ್ನು ಉಪಯೋಗಿಸಿಕೊಂಡು ಇವುಗಳನ್ನು ಹೇಗೆ ನಿಯಂತ್ರಿಸುವುದೆಂದು ತಿಳಿಯೋಣ. ಶೇಂಗಾ,ಬೆಲ್ಲ, ಎಳ್ಳು ಪ್ರತಿನಿತ್ಯ ಸೇವಿಸಿದರೆ ಬೊಜ್ಜು ಹೊಟ್ಟೆಯನ್ನು ಕಡಿಮೆಮಾಡಬಹುದೆಂದು ನಿಪುಣರು ಹೆಳುತ್ತಾರೆ. ಎಳ್ಳೆಣ್ಣೆಯು ಒಳ್ಳೆಯ ಕೊಲೆಸ್ಟ್ರಾಲನ್ನು ಹೆಚ್ಚಿಸುತ್ತದೆ . ಅಷ್ಟೇ ಅಲ್ಲದೆ ಶರೀರಕ್ಕೆ ಎಂತಹದ್ದೇ ಹಾನಿ ಉಂಟು ಮಾಡುವುದಿಲ್ಲ. ಆದರೆ ಅದನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ನೋಡೋಣ ಬನ್ನಿ..

ಊಟ ಮಾಡಿದ ತಕ್ಷಣವೆ ಎಳ್ಳನ್ನು ಮೆತ್ತಗೆ ಅಗಿದು ನುಂಗಬೇಕು. ಹೀಗೆ ಮೂರ ರಿಂದ ನಾಲ್ಕು ತಿಂಗಳವರೆಗೆ ತಿನ್ನುವುದರಿಂದ ಏಳರಿಂದ ಎಂಟು ಕೆ.ಜಿ.ಗಳ ತೂಕ ಕಡಿಮೆಯಾಗಬಹುದೆಂದು ನಿಪುಣರು ಹೇಳುತ್ತಿದ್ದಾರೆ. ಆದರೆ ಈ ಎಳ್ಳನ್ನು ಚಳಿ ಹಾಗೂ ಮಳೆಗಾಲಗಳಲ್ಲಿ ಮಾತ್ರ ತಿನ್ನಬೇಕು. ಹಾಗೆ ಮಾಡುವುದರಿಂದ ಎಳ್ಳಿನಲ್ಲಿರುವ ಗುಣದಿಂದ ಬೊಜ್ಜು ಕಡಿಮೆಯಾಗುವುದಲ್ಲದೆ ತೂಕವು ಕೂಡ ಕಡಿಮೆಯಾಗಲು ಸುಲಭವಾಗುತ್ತದೆ.

ಹಾಗೆಯೇ ವಾರಕ್ಕೆ ಒಂದು ದಿನ ಮೂರು ಹೊತ್ತು ಊಟದ ಬದಲಿಗೆ ತರಕಾರಿಗಳಿಂದ ಹಾಗೂ ಸೊಪ್ಪಿನಿಂದ ಮಾಡಿದ ಸಲಾಡ್ ಗಳನ್ನು ತಿನ್ನುತ್ತಿರಬೇಕು. ಇದರಿಂದ ಹೊಟ್ಟೆಯ ಜೊತೆಗೆ ತೂಕವೂ ಕಡಿಮೆಯಾಗುವುದಲ್ಲದೆ ಶರೀರಕ್ಕೆ ಬೇಕಾದ ಪೋಶಕಾಂಶಗಳು ಸಹ  ಲಭಿಸುತ್ತವೆ. ಹಾಗೆಯೇ ಆಹಾರವನ್ನು ಚೆನ್ನಾಗಿ ಅಗಿದು ನುಂಗಬೇಕು. ಚಿಕ್ಕ ತಟ್ಟೆಯಲ್ಲಿ ಅನ್ನ ತಿನ್ನುವುದರಿಂದ ನಮಗೇ ತಿಳಿಯದಂತೆ ದಿನಕ್ಕೆ ಕನಿಷ್ಟ 250 ಕ್ಯಾಲರಿಗಳು ಕಡಿಮೆ ತಿನ್ನುತ್ತೇವೆ. ಪ್ರತಿನಿತ್ಯ ನಿದ್ದೆಯಿಂದ ಎದ್ದ ಒಂದು  ಗಂಟೆಯ ಒಳಗೆ ಬ್ರೇಕ್ ಫಾಸ್ಟ್ ಮಾಡಬೇಕು. ತಡವಾಗಿ ತಿನ್ನುವುದರಿಂದ ಎರಡು ಹೊತ್ತಿನ ಮಧ್ಯದ ಸಮಯದ ವ್ಯತ್ಯಾಸದಿಂದಾಗಿ ಕೊಬ್ಬು ಹೆಚ್ಚಾಗುವ ಸಾಧ್ಯವಿದೆ . ಪ್ರತಿನಿತ್ಯವೂ ಹಾಲಿನ ಉತ್ಪನ್ನಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ ಇವುಗಳಲ್ಲಿನ ಕ್ಯಾಲ್ಷಿಯಂ ಕೊಬ್ಬನ್ನು ಕರಗಿಸುತ್ತದೆಯಂತೆ. ವ್ಯಾಯಾಮ ಮಾಡಿದ ಒಂದು ಗಂಟೆಯೊಳಗೆ ಊಟ ಮಾಡಬೇಕು. ಊಟಕ್ಕೆ ಮೊದಲು ಕಿತ್ತಳೆಯಂತಹ ನಿಂಬೆ ಜಾತಿಗೆ ಸೇರಿದ ಹಣ್ಣುಗಳನ್ನು ತಿನ್ನುವುದರಿಂದ ಬೊಜ್ಜು ಮತ್ತು ತೂಕ ಕಡಿಮೆಯಾಗುತ್ತದೆ. ಹಾಗೆಯೇ ವಾರದಲ್ಲಿ ಮೂರುದಿನ ಮೊಟ್ಟೆಯನ್ನು ಮಾತ್ರ ಒಂದು ಹೊತ್ತಿನ ಆಹಾರವಾಗಿ ತೆಗೆದುಕೊಳ್ಳಬೇಕು, ಅದರಲ್ಲೂ ಬೆಳಿಗ್ಗೆ ಉಪಾಹಾರ ದಂತೆ  ತಿಂದರೆ ಒಳ್ಳೆಯದು. ವಾರದಲ್ಲಿ ಒಂದು ಹೊತ್ತು ಮೀನು ಸೇವಿಸಬೇಕು. ಹೀಗೆ ಮಾಡುವುದರಿಂದ ಬೊಜ್ಜು ಮತ್ತು ಸ್ಥೂಲಕಾಯ ದೇಹವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಶೇಂಗಾ, ಬೆಲ್ಲ ಸೇರಿಸಿ  ತಿನ್ನುತ್ತಿರಬೇಕು. ಇವು ಶರೀರಕ್ಕೆ ತಕ್ಕ ಪೋಷಕಾಂಶಗಳನ್ನು ನೀಡಿ ಕೊಬ್ಬನ್ನು ಕರಗಿಸುತ್ತವೆ. ಈ ನಿಯಮಗಳನ್ನು ಆಚರಿಸಿದರೆ  ಬೇಕಾದ ಕೊಬ್ಬನ್ನು ಎಳ್ಲು, ಶೇಂಗಾದ ಮೂಲಕ ದೊರೆಯುತ್ತವೆ ಆದ್ದರಿಂದ ಆಯುಲ್ ಫುಡ್ ಸೇವಿಸುವುದನ್ನು ಕಡಿಮೆ ಮಾಡಬೇಕು. ಇನ್ನು ಆಯುಲ್ ಫುಡ್ ಸೇವಿಸುವುದನ್ನು ತಪ್ಪಿಸಿದರೆ ಊಹಿಸಲಾರದ ಫಲಿತಾಂಶ ಬೇಗ ಕಾಣಬಹುದು.


Click Here To Download Kannada AP2TG App From PlayStore!