ತನ್ನ 22ನೇ ವಯಸ್ಸಿನಲ್ಲಿ 136 ಕೆ.ಜಿ. ತೂಕ ಇದ್ದ ಆಕೆ….26ನೇ ವಯಸ್ಸಿಗೆ 58 ಕೆ.ಜಿ ಆಗಿದ್ದ್ದು…ಅದಕ್ಕೆ ಆಕೆ ಮಾಡಿದ್ದೇನು ಗೊತ್ತಾ…?

ಕಷ್ಟೇ ಫಲಿ ಎಂದಿದ್ದಾರೆ ಹಿರಿಯರು…. ಹಲವರು ಯಾವುದೇ ಶ್ರಮ ವಹಿಸದೆ ಸುಲಭವಾಗಿ ಫಲಿತಾಂಶವನ್ನು ಆಶಿಸುತ್ತಾರೆ… ಪಾಸಿಟಿವ್ ಆಗಿ ತೆಗೆದುಕೊಂಡು ಶ್ರಮಪಟ್ಟರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ನಾನು ಹೇಳುತ್ತೇನೆ. ನಮ್ಮಲ್ಲಿ ಹಲವರು ಎದುರಿಸುತ್ತಿರುವ ಸಮಸ್ಯೆ ಸ್ಥೂಲಕಾಯ..ಮಕ್ಕಳು-ದೊಡ್ಡವರು ಎಂಬ ವ್ಯತ್ಯಾಸವಿಲ್ಲದೆ, ಯಾವ ಅಡ್ಡಿ ಇಲ್ಲವೆಂಬಂತೆ ತೂಕ ಬೆಳೆಸಿಕೊಂಡು ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ತೂಕವನ್ನು ಇಳಿಸಿಕೊಳ್ಳಲು ಗಂಟೆಗಟ್ಟಲೆ ಪಾರ್ಕುಗಳಲ್ಲಿ ವಾಕಿಂಗ್, ಜಿಮ್ ನಲ್ಲಿ ವರ್ಕ್ ಔಟ್ ಮಾಡಿದರೂ ಯಾವುದೇ ಪ್ರಯೋಜನವಿಲ್ಲ. ಆದರೆ ಇಲ್ಲಿ ಒಬ್ಬ ಯುವತಿ 4 ವರ್ಷಗಳು ಶ್ರಮವಹಿಸಿ ತೂಕ ಇಳಿಸಿಕೊಂಡು ತಾನು ಬಯಸಿದ್ದನ್ನು ಸಾಧಿಸಿದ್ದಾಳೆ…136 ರಿಂದ 58 ಕೆ.ಜಿ.ಗೆ ತೂಕ ಇಳಿಸಿಕೊಂಡು ಎಲ್ಲರನ್ನೂ ಆಶ್ಚರ್ಯಗೊಳಿಸಿರುವ ಲಾರಾ ಮಿಟೆಚ್…

ಆಕೆಗೆ ಪ್ರೀಡಯಾಬೆಟಿಸ್ ಇದೆ ಹಾಗೂ ಬ್ಲೆಡ್ ಪ್ರೆಷರ್ ಸಹಾ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದು ತಕ್ಷಣ ಜೀವನ ವಿಧಾನವನ್ನು ಬದಲಾಯಿಸಿಕೊಳ್ಳದೆ ಇದ್ದಲ್ಲಿ ಅತ್ಯಂತ ಅಪಾಯ ಕಾದಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಆಕೆಗೆ ಆತಂಕ ಶುರುವಾಯಿತು. 22 ವರ್ಷದ ವಯಸ್ಸಿನಲ್ಲಿಯೇ 136 ಕೆ.ಜಿ. ತೂಕದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಆಕೆಗೆ ತನ್ನ ಗೆಳೆಯರು ಸರ್ಜರಿ ಮೂಲಕ ತೂಕ ಇಳಿಸಿಕೊಳ್ಳಲು ಸಲಹೆ ನೀಡಿದರು. ಸರ್ಜರಿ ಮೂಲಕ ತೂಕ ಇಳಿಸಿಕೊಳ್ಳಲು ಇಚ್ಚಿಸಿದವರು ಸರ್ಜರಿ ಮಾಡಿಸಿಕೊಂಡು ಚಿಕಿತ್ಸೆ ಫಲಕಾರಿಯಾಗದೆೆ, ಹೊಸ ಸಮಸ್ಯೆಗಳನ್ನು ಎದುರಿಸುತ್ತಿರುವ ಹಲವರನ್ನು ನೋಡಿದ್ದೇವೆ. ಆದ್ದರಿಂದ ಯಾವುದೇ ಸರ್ಜರಿಯನ್ನು ಮಾಡಿಸಿಕೊಳ್ಳುವುದಿಲ್ಲ ಎಂದು ಖಚಿತವಾಗಿ ಹೇಳಿದ್ದಾಳೆ. ಹಾಗಿದ್ದಲ್ಲಿ ತೂಕ ಇಳಿಸಿಕೊಳ್ಳುವುದು ಕಷ್ಟವೆಂದು, ಎಕ್ಸರ್ ಸೈಜ್ ಮಾಡಿ ತೂಕ ಇಳಿಸಿಕೊಳ್ಳುವುದು ಅಸಾಧ್ಯ ಎಂದು, ಎಂದಿಗೂ ನಿನ್ನ ತೂಕ ಇಳಿಯುವುದಿಲ್ಲ ಎಂದು ಅವರು ಆಕೆಯನ್ನು ಅವಹೇಳ ಮಾಡಿದರು.
ಈ ಮಾತುಗಳಿಗೆ ಹಿಂಜರಿಯದೆ ಲಾರಾ ಖಂಡಿತವಾಗಿ ತೂಕ ಇಳಿಸಿ ತೋರಿಸುತ್ತೇನೆ ಎಂಬ ನಿರ್ಣಯಕ್ಕೆ ಬಂದಳು. 22ನೇ ವಯಸ್ಸಿನಲ್ಲಿ ಜಿಮ್ ಗೆ ಹೋಗಲು ಪ್ರಾರಂಭಿಸಿದ ಸುಮಾರು 1 ವರ್ಷದ ನಂತರ ತೂಕ ಇಳಿಯಲು ಶುರುವಾಯಿತು. ಹೀಗೆಯೇ 4 ವರ್ಷ ಕ್ರಮ ತಪ್ಪದೆ ಜಿಮ್ ಮಾಡಿ 136 ಕೆ.ಜಿ. ತೂಕವಿದ್ದ ಆಕೆ 26ನೇ ವರ್ಷದ ವಯಸ್ಸಿನಲ್ಲಿ 58 ಕೆ.ಜಿ ಆಗಿದ್ದು, ಆಕೆಯನ್ನು ಅವಹೇಳನ ಮಾಡಿದವರು ಈಗ ಆಕೆಯನ್ನು ಆದರ್ಶವಾಗಿಟ್ಟುಕೊಂಡಿದ್ದಾರೆ.


Click Here To Download Kannada AP2TG App From PlayStore!