ಬ್ಲೂ ವೇಲ್ ಗೇಮ್ ಬಗ್ಗೆ ತಿಳಿದುಕೊಳ್ಳಿ… ನಿಮ್ಮ ಮಕ್ಕಳ ಬಗ್ಗೆ ಎಚ್ಚರಿಕೆಯಿಂದಿರಿ…!

ರೈಸ್ ಬಕೆಟ್ ಚಾಲೆಂಜ್ ಬಗ್ಗೆ ಕೇಳಿದ್ದೀವಿ… ಅದಕ್ಕೂ ಮುಂಚೆ ಐಸ್ ಬಕೆಟ್ ಚಾಲೆಂಜ್…ಈಗ ಬ್ಲೂ ವೇಲ್ ಚಾಲೆಂಜ್ ಏನೆಂದು ಅಚ್ಚರಿ ಪಡುತ್ತಿದ್ದೀರಾ..? ಬ್ಲೂ ವೇಲ್ ಎನ್ನುವುದು ಆನ್ ಲೈನ್ ಸೂಯಿಸೈಡ್ ಗೇಮ್. ಈಗ ನಾವು ಈ ಗೇಮ್ ಬಗ್ಗೆ ಮಾತನಾಡಲು ಒಂದು ಕಾರಣವಿದೆ. ಒಂದು ವೇಳೆ ನೀವು ಈ ಗೇಮ್ ಬಗ್ಗೆ ತಿಳಿದುಕೊಳ್ಳದೇ ಹೋದರೆ, ಮುಂದೆ ಎಂತಹ ಅನಾಹುತ ಆಗುತ್ತೋ ತಿಳಿಯದು. ಈ ಗೇಮ್ ನ ಹುಚ್ಚಿನಲ್ಲಿ ಹಲವು ಮಕ್ಕಳು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ…

ಆಟವಾಡುವುದೆಂದರೆ…ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ.. ಒಂದು ಕಾಲದಲ್ಲಿ ಬಯಲಲ್ಲಿ ಆಟವಾಡುತ್ತಿದ್ದ ಮಕ್ಕಳು ಈಗ ನಾಲಕ್ಕು ಗೋಡೆಗಳ ಮಧ್ಯೆ, ಆನ್ ಲೈನ್ ಆಟಗಳನ್ನು ಆಡುತ್ತಿದ್ದಾರೆ. ಬೆಳಗಾದರೆ ಸಾಕು ನಮ್ಮ ಮಕ್ಕಳು ಫೋನನ್ನು ಕೈಯಲ್ಲಿ ಹಿಡಿದು ಕುಳಿತುಕೊಳ್ಳುತ್ತಾರೆಂದು ಹೆಮ್ಮೆ ಪಡುವ ಪೋಷಕರು… ತಮ್ಮ ಮಕ್ಕಳು ಆ ಫೋನ್ನಲ್ಲಿ ಏನು ಮಾಡುತ್ತಿದ್ದಾರೆಂಬ ಗೋಜಿಗೆ ಹೋಗುವುದಿಲ್ಲ. ಇನ್ನು ಮುಂದಾದರೂ ಒಮ್ಮೆ ನೋಡುವುದು ಒಳ್ಳೆಯದು. ಸ್ಮಾರ್ಟ್ ಫೋನ್ ಇದ್ದರೆ, ಅಂಗೈಯಲ್ಲೇ ಪ್ರಪಂಚವಿದ್ದಂತೆ. ಇವುಗಳಲ್ಲಿ ನಮ್ಮ ಮಕ್ಕಳ ಭವಿಷ್ಯವನ್ನು ನಾಶಮಾಡುವ ಅವಕಾಶಗಳಿವೆ.


ಮೊದಲಿಗೆ ರಷ್ಯಾದಲ್ಲಿ ಪ್ರಾರಂಭವಾದ ಈ ಅಟ ಮೆಲ್ಲನೆ ಭಾರತವನ್ನೂ ಪ್ರವೇಶಿಸಿತು. ಒಂದು ಸಾಮಾಜಿಕ ತಾಣ ಇದನ್ನು ನಿರ್ವಹಿಸುತ್ತಿದೆ. ಈ ಆಟದಲ್ಲಿ ಪಾಲ್ಗೊಳ್ಳ ಬೇಕಾದವರು… ನಿರ್ವಾಹಕರು ಹೇಳಿದಂತೆ ಮಾಡಬೇಕು. 50 ದಿನಗಳ ಕಾಲ ಅವರು ನೀಡುವ ಟಾಸ್ಕ್ ಗಳನ್ನು ಮಾಡುತ್ತಿರಬೇಕು. ಮೊದಲು ಒಂದು ಪೇಪರಲ್ಲಿ ತಿಮಿಂಗಲ ಚಿತ್ರವನ್ನು ರಚಿಸಬೇಕು. ನಂತರ ಶರೀರದಮೆಲೆ ಬರೆಸಿಕೊಳ್ಳಬೇಕು. ನಂತರ ಹಾರರ್ ಸಿನಿಮಾಗಳನ್ನು ನೋಡುತ್ತಾ, ಮಧ್ಯರಾತ್ರಿ ಎದ್ದೇಳುವುದು… ನಡೆಯುವುದು ಮೊದಲಾದ ಟಾಸ್ಕ್ ಗಳನ್ನು ಪೂರೈಸಬೇಕು. ಈ ರೀತಿ 50 ಟಾಸ್ಕ್ ಗಳನ್ನು 50 ದಿನಗಳಲ್ಲಿ ಪೂರ್ಣಗೊಳಿಸಿದನಂತರ ಆತ್ಮಹತ್ಯೆ ಮಾಡಿಕೊಳ್ಳಬೇಕು. ಇದನ್ನೇ ಎನ್ನುತ್ತಾರೆಸೆಲ್ಫ್ ಡೆಸ್ಟ್ರಾಯಿಂಗ್ ಎನ್ನುತ್ತಾರೆ. ಆಟದಲ್ಲಿ ಗೆಲ್ಲಬೇಕಾದರೆ, ತಪ್ಪದೆ ಆತ್ಮಹತ್ಯೆ ಮಡಿಕೊಳ್ಳಲೇಬೇಕು ಎಂದು ನಿರ್ವಾಹಕರು ಆಟಗಾರರ ಮೇಲೆ ಒತ್ತಡ ಹೇರುತ್ತಾರೆ. ಹೀಗಾಗಿ… ಆಟವನ್ನು ಗೆಲ್ಲಲೇ ಬೇಕೆಂಬ ಹಠದಿಂದ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ನಿರ್ವಾಹಕರು ಹೇಳಿದಂತೆ ಮಾಡಬೇಕು. 50 ದಿನಗಳ ಕಾಲ ಅವರು ನೀಡುವ ಟಾಸ್ಕ್ ಗಳನ್ನು ಈಗ ನಾವು ಈ ಗೇಮ್ ಬಗ್ಗೆ ಮಾತನಾಡಲು ಒಂದು ಕಾರಣವಿದೆ.

ಇತ್ತೀಚೆಗೆ ಮುಂಬೈಯಲ್ಲಿ 14 ವರ್ಷದ ಒಬ್ಬ ಹುಡುಗ ಅತ್ಮಹತ್ಯೆ ಮಾಡಿಕೊಂಡ. ಅಂಧೇರಿ ವೆಸ್ಟ್ ನಲ್ಲಿರುವ ಈ ಬಾಲಕ ಸೋಷಿಯಲ್ ಮೀಡಿಯಾದಲ್ಲಿ ಈ ಆಟದ ಕುರಿತು ತಿಳಿದುಕೊಂಡ. ಹೇಗಾದರೂ ಈ ಆಟದಲ್ಲಿ ಗೆಲ್ಲಬೇಕೆಂದು ಪಣತೊಟ್ಟು ತನ್ನ ಮನೆಯ ಕಟ್ಟಡದ ಐದನೇ ಅಂತಸ್ತಿನಿಂದ ಹಾರಿ ಪ್ರಾನ ಕಳೆದುಕೊಂಡ. ವಿಚಾರಣೆ ನಡೆಸಿದ ಪೊಲೀಸರು, ಸೋಷಿಯಲ್ ಮೀಡಿಯಾದ ಖಾತೆಯನ್ನು ಪರಿಶೀಲಿಸಲಾಗಿ ಬ್ಲೂ ವೇಲ್ ಆಟಕ್ಕೆ ಸಂಬಂಧವಿದ್ದಂತೆ ತಿಳಿದು ಬಂದಿತು. ಈ ಆಟಕ್ಕೆ ದಾಸರಾಗಿರುವ ರಷ್ಯಾ,ಯುಕೆ ಗಳಲ್ಲಿ ಇಲ್ಲಿಯವರೆಗೆ ಸುಮಾರು 130 ಮಂದಿ ಮಕ್ಕಳು ತಮ್ಮಪ್ರಾಣ ಕಳೆದುಕೊಂಡಿದ್ದಾರೆ.


Click Here To Download Kannada AP2TG App From PlayStore!