ಹುಡುಗಿಯರ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಿ… ಅವರ ಪ್ರೀತಿಯನ್ನು ಪಡೆಯಿರಿ..

ಈ ಜಗತ್ತಿನಲ್ಲಿ ಯಾವುದೇ ವಿಷಯವನ್ನು ತಿಳಿದುಕೊಳ್ಳುವುದು ಸುಲಭ. ಆದರೆ ಹುಡುಗಿಯರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವುದು ಮಾತ್ರ ಕಷ್ಟ. ಅಷ್ಟೇ ಅಲ್ಲ ಅವರ ಮಾತುಗಳಿಗೆ ಅರ್ಥ ಹುಡುಕುವಷ್ಟು ಕಷ್ಟಕರವಾದ ಕೆಲಸ ಇನ್ನೊಂದು ಇರಲ್ಲ. ಇನ್ನು ಅವರ ಮನಸ್ಸಿನಲ್ಲಿ ಇರುವುದನ್ನು ತಿಳಿದುಕೊಳ್ಳುವುದು ಪುರುಷರಿಂದ ಆಗಲ್ಲ ಎಂದು ಅಧ್ಯಯನಗಳೇ ಹೇಳುತ್ತಿವೆ. ಹುಡುಗಿಯರ ಕಣ್ಣಲ್ಲಿ ನೇರವಾಗಿ ನೋಡಿದಾಗ ಹುಡುಗರ ಮಿದುಳಿನಲ್ಲಿ ಕೆಲವು ಭಾಗಗಳು ಅಷ್ಟು ಚುರುಕಾಗಿ ಕೆಲಸ ಮಾಡದೆ ಇರುವುದೇ ಇದಕ್ಕೆ ಕಾರಣ. ಹುಡುಗಿಯರು ಹೊರಗೆ ಹೇಳಿಕೊಳ್ಳಲಾರದ ಕೆಲವು ವಿಷಯಗಳು…

  • ಹುಡುಗನ ಬಳಿ ಹಣ ಇದ್ದರೆ ಬಹಳಷ್ಟು ಹುಡುಗರು ಸುಲಭವಾಗಿ ಬೀಳುತ್ತಾರೆ ಎಂದುಕೊಳ್ಳುತ್ತಾರೆ. ಹುಡುಗಿಯರು ಹಣ ಇರುವ ಹುಡುಗನಿಗಿಂತ..ಚೆನ್ನಾಗಿ ಮಾತನಾಡುವ ಹುಡುಗರನ್ನು ಇಷ್ಟಪಡುತ್ತಾರೆ. ಆದಕಾರಣ ಬೈಕಿದ್ದರೆ ಸಾಕು, ಶಾಪಿಂಗ್‌ಗಳಿಗೆ ಸುತ್ತಾಡಿದರೆ ಸಾಕು ಎಂಬ ಆಲೋಚನೆ ಬಿಟ್ಟು ಹುಡುಗಿಯರ ಬಳಿ ಹೇಗೆ ಮಾತನಾಡಬೇಕೋ ತಿಳಿದುಕೊಳ್ಳಿ.
  • ತಮ್ಮ ಗರ್ಲ್ ಫ್ರೆಂಡ್ ಇನ್ನೊಬ್ಬ ಹುಡುಗನ ಜತೆ ಮಾತನಾಡಿದರೆ ಹುಡುಗರಿಗೆ ಆಗಲ್ಲ. ಜೆಲಸಿ ಫೀಲ್ ಆಗುತ್ತಾರೆ. ಆ ಫೀಲಿಂಗನ್ನು ಎಂಜಾಯ್ ಮಾಡುತ್ತಾರೆ ಹುಡುಗಿಯರು. ಅದು ಅವರ ಮೇಲೆ ತಮ್ಮ ಪ್ರೀತಿಗೆ ನಿದರ್ಶನವಾಗಿ ಭಾವಿಸುತ್ತಾರೆ. ಆದಕಾರಣ ಹುಡುಗಿ ಮತ್ತೊಬ್ಬರ ಜತೆ ಮಾತನಾಡಿದರೆ ಇಲ್ಲಸಲ್ಲದ ಅನುಮಾನಗಳಿಗೆ ಒಳಗಾಗದೆ ಆಕೆಗೆ ಇನ್ನಷ್ಟು ಹತ್ತರವಾಗಿ.
  • ಕ್ಲೀನ್ ಶೇವ್ ಮಾಡಿಕೊಂಡ ಹುಡುಗರಿಗಿಂತ ಗಡ್ಡ ಇರುವ ಹುಡುಗನನ್ನೇ ಹುಡುಗಿಯರು ಹೆಚ್ಚು ಇಷ್ಟಪಡುತ್ತಾರಂತೆ. ಅಷ್ಟೇ ಅಲ್ಲ ತಮ್ಮ ಖಾಸಗಿ ಭಾಗಗಳನ್ನು ಕ್ಲೀನ್ ಮಾಡಿಕೊಳ್ಳಿ ಎನ್ನುವ ಹುಡುಗರನ್ನು ಹುಡುಗಿಯರು ಇಷ್ಟಪಡಲ್ಲ.
  • ಪ್ರೀತಿಸಿದವನನ್ನು ದೂರ ಮಾಡಿಕೊಳ್ಳುವ ಪರಿಸ್ಥಿತಿ ಬಂದರೆ ಅವರಿಗೆ ಗೊತ್ತಿಲ್ಲದಂತೆ ಅವರಿಗೆ ಏನು ಬೇಕು ಎಂದು ತಿಳಿದುಕೊಳ್ಳುತ್ತಾರೆ. ಈಗ ಸಾಮಾಜಿಕ ಮಾಧ್ಯಮ ಅದಕ್ಕೆ ಚೆನ್ನಾಗಿ ಉಪಯೋಗಕ್ಕೆ ಬರುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಅವನ ಆಕ್ಟಿವಿಟೀಸ್ ಗಮನಿಸುತ್ತಿರುತ್ತಾರೆ.
  • ಗಂಡ ಹೆಂಡತಿ ಬೆರೆಯುವ ಏಕೈಕ ತಾಣ ಬೆಡ್ ರೂಮ್. ಅಲ್ಲಿ ಅವರು ಬೇರೆ ಏನೋ ಆಲೋಚಿಸುತ್ತಿರುವಂತೆ ಕಾಣಿಸಿದರೆ ಖಚಿತವಾಗಿ ನಿಮ್ಮ ಬಗ್ಗೆ ಅಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಪಾಡಿಗೆ ನೀವಿರದೆ, ಆಕೆಯ ಸಮಸ್ಯೆ ತಿಳಿದುಕೊಳ್ಳಲು ಪ್ರಯತ್ನಿಸಿ, ಪರಿಹರಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದರೆ ಅದೇ ನಿಮ್ಮ ಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ.
  • ಹೆಂಗಸರು ಗಂಡಸರ ನೋಟವನ್ನು ಭರಿಸಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾದ ಸತ್ಯ. ಆದರೆ ಯಾರೆಂದರೆ ಅವರು ನೋಡಿದರೆ ಒಪ್ಪಿಕೊಳ್ಳಲ್ಲ, ಆದರೆ ಅವರಿಗಿಷ್ಟವಾದವರು ತನ್ನನ್ನು ನೋಡಬೇಕೆಂದು ಬಯಸುತ್ತಾರೆ.
  • ಹಣಕ್ಕಿಂತ ಹೆಚ್ಚಾಗಿ ಒಳ್ಳೆಯತನಕ್ಕೆ ಪ್ರಾಮುಖ್ಯತೆ ನೀಡುತ್ತಾರೆ ಹುಡುಗಿಯರು. ಹಾಗಾಗಿ ಒಳ್ಳೆಯವರಾಗಿ, ತಪ್ಪು ಮಾಡದಂತೆ ಇರಿ. ಆಗ ಪಂಚಭಕ್ಷ್ಯಗಳನ್ನು ಇಟ್ಟರೂ, ಗಂಜಿ ಕೊಟ್ಟರೂ ತುಂಬಾ ಪ್ರೀತಿಯಿಂದ ಇರುತ್ತಾರೆ.
  • ಒಬ್ಬ ಹುಡುಗಿ ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡಿದರೆ ತುಂಬಾ ತಪ್ಪಾಗಿ ನೋಡುವ ಸಮಾಜ ನಮ್ಮದು. ಆಕೆ ಆ ರೀತಿ ಮಾತನಾಡುತ್ತಿದ್ದರೆ, ಆ ಮಾತುಗಳನ್ನು ಸಪೋರ್ಟ್ ಮಾಡುವವರಿಗಿಂತ, ಕೇಳಿ ಲೈಟ್ ಆಗಿ ತೆಗೆದುಕೊಳ್ಳುವವರನ್ನು ಇಷ್ಟಪಡುತ್ತಾರೆ. ಅಷ್ಟೇ ಹೊರತು ಹುಡುಗಿಯರು ಸ್ವಲ್ಪ ಕಂಟ್ರೋಲ್‍ನಲ್ಲಿ ಇರಬೇಕು ಎಂದುಕೊಳ್ಳುವವರನ್ನು ಹುಡುಗಿಯರು ಇಷ್ಟಪಡಲ್ಲ.

 


Click Here To Download Kannada AP2TG App From PlayStore!