ದೇಶದ ಮುಖಂಡರು ಯಾವ್ಯಾವ ಫೋನ್ ಬಳಸುತ್ತಿದ್ದಾರೆ..? ಮೊಟ್ಟ ಮೊದಲ ಸಲ iPhone ಬಳಸಿದ್ದು ಯಾರು??

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಫೋನ್‌ಗಳು, ಡಿಫರೆಂಟ್ ಫೀಚರ್ಸ್, ಡಿಫರೆಂಟ್ ಸ್ಟೈಲ್ಸ್‌ನಿಂದ ಕೂಡಿರುವ ಆಕರ್ಷಕ ಫೋನ್‌ಗಳು ಅದೆಷ್ಟೋ ಇವೆ. ಆದರೆ ದೇಶದ ರಾಜಕೀಯ ಮುಖಂಡರು ಯಾವ್ಯಾವ ಫೋನ್ ಬಳಸುತ್ತಿದ್ದಾರೆ, ಅವರು ಯಾಕೆ ಅದನ್ನೇ ಬಳಸುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಸೆಕ್ಯುರಿಟಿ ಪರವಾಗಿ ದಿ ಬೆಸ್ಟ್ ಅನ್ನಿಸಿಕೊಂಡಿರುವ ಫೋನ್‌ಗಳನ್ನೇ ಇವರು ಬಳಸುತ್ತಿದ್ದಾರೆ.

ಅಮೆರಿಕ ಅಧ್ಯಕ್ಷ: ಟ್ರಂಪ್
ಟೆಕ್ನಾಲಜಿ ಎಂದರೆ ಅಷ್ಟಾಗಿ ಇಷ್ಟಪಡದ ಟ್ರಂಪ್ ಮೊನ್ನೆವರೆಗೂ ಸ್ಯಾಂಸಂಗ್ ಫೋನ್ ಬಳಸುತ್ತಿದ್ದರು. ಅಮೆರಿಕ ಅಧ್ಯಕ್ಷರಾದ ಬಳಿಕ…ಭದ್ರತೆಯ ಕಾರಣ ಐಫೋನ್‌ಗೆ ಶಿಫ್ಟ್ ಆಗಿದ್ದಾರೆ.

ರಷ್ಯಾ ಅಧ್ಯಕ್ಷ: ಪುತಿನ್
ಇಂಟರ್ನೆಟ್ ಎಂದರೆ ಅಷ್ಟಾಗಿ ಆಸಕ್ತಿ ತೋರದ ಪುತಿನ್‌ಗೆ ಐಫೋನ್ ಎಂದರೆ ತುಂಬಾ ಇಷ್ಟ…ಮಾರುಕಟ್ಟೆಗೆ ಆಪಲ್‌ಗೆ ಸಂಬಂಧಪಟ್ಟ ಯಾವುದೇ ಪ್ರಾಡಕ್ಟ್ ಬಂದರೂ ಕೂಡಲೆ ಅದು ಪುತಿನ್ ಕೈಯಲ್ಲಿ ಇರಬೇಕಾದದ್ದೇ.!

ದಕ್ಷಿಣ ಕೊರಿಯಾ ಅಧ್ಯಕ್ಷ: ಕಿಮ್ ಜಾಂಗ್ ಉನ್
ತೈವಾನ್‌ ಮೂಲದ HTC ಫೋನ್ ಬಳಸುತ್ತಾರೆ. ಐಫೋನ್ ಬಳಸಲು ಬದ್ಧ ಶತ್ರು ಈತ.

ಜರ್ಮನಿ ಚಾನ್ಸಲರ್: ಏಂಜಲಾ ಮಾರ್ಕೆಲ್
ಮಾರುಕಟ್ಟೆಗೆ ಹೊಸದಾಗಿ ಯಾವುದೇ ಬ್ರಾಂಡ್ಸ್ ಬಂದರೂ…ಆಕೆಗೆ ಇಷ್ಟವಾದ ಬ್ರಾಂಡ್ ಮಾತ್ರ ನೋಕಿಯಾ. ಸದ್ಯಕ್ಕೆ ಆಕೆ ಎರಡು ಫೋನ್‌ಗಳನ್ನು ಬಳಸುತ್ತಿದ್ದಾರೆ. ಅವು 1)Nokia 6260 Slide, 2) BlackBerry Z10. ನೋಕಿಯಾ ಫೋನ್ ಮಾತನಾಡಿಕೊಳ್ಳಲು ಬಳಸಿದರೆ…ಬ್ಲಾಕ್ ಬೆರ್ರಿ ಇಂಟರ್‌‍ನೆಟ್ ಬ್ರೌಸ್ ಮಾಡಲು ಬಳಸುತ್ತಿದ್ದಾರೆ.

ಪಾಕಿಸ್ತಾನ್ ಪ್ರಧಾನಿ: ನವಾಜ್ ಷರೀಫ್
ಒಟ್ಟು 3 ಫೋನ್‌ಗಳನ್ನು ಬಳಸುತ್ತಿದ್ದಾರೆ. 1) iPhone 2)Samsung 3)BlackBerry
BlackBerry ಯಿಂದ ಮನೆಯವರಿಗೆ, ಬಂಧುಗಳಿಗೆ ಕರೆ ಮಾಡುತ್ತಾರೆ. iPhone ನಿಂದ ಸರಕಾರಿ ಅಧಿಕಾರಿಗಳಿಗೆ, ಪಕ್ಷದ ನಾಯಕರಿಗೆ ಕರೆ ಮಾಡುತ್ತಿರುತ್ತಾರೆ.

ಭಾರತದ ಪ್ರಧಾನಿ: ಮೋದಿ
ಸೆಲ್ಫಿಗಳೆಂದರೆ ತುಂಬಾ ಇಷ್ಟಪಡುವ ಮೋದಿ iPhone ಬಳಸುತ್ತಾರೆ. ವಿದೇಶಿ ಪ್ರವಾಸಲ್ಲಿ BlackBerry ಫೋನ್ ಸಹ ಅವರು ಜತೆಗೆ ಕೊಂಡೊಯ್ಯುತ್ತಾರೆ.

iPhone ನನ್ನು ಮೊಟ್ಟ ಮೊದಲ ಸಲ ಉಪಯೋಗಿಸಿದ್ದು ಮಾತ್ರ…ರಷ್ಯಾದ ಮಾಜಿ ಅಧ್ಯಕ್ಷ – ಮೆಡ್ವದೇವ್. 2006ರಲ್ಲಿ iPhone 4 ಬಿಡುಗಡೆಯಾದ ಕೂಡಲೇ… ಅದನ್ನು ಆಪಲ್ ವ್ಯವಸ್ಥಾಪನಾದ ಸ್ಟೀವ್ ಜಾಬ್ಸ್ ಉಡುಗೊರೆಯಾಗಿ ನೀಡಿದ್ದ.

 


Click Here To Download Kannada AP2TG App From PlayStore!