ಈ 5 ಚಿತ್ರಗಳಲ್ಲಿ ಮೊದಲು ನಿಮಗೆ ಏನು ಕಾಣಿಸುತ್ತದೆ ಎಂಬುದರ ಪ್ರಕಾರ… ನಿಮ್ಮ ಇನ್ನರ್ ಮೈಂಡ್ ಏನು ಆಲೋಚಿಸುತ್ತಿದೆ ಎಂದು ಹೇಳಬಹುದು.!

ನಿತ್ಯ ಜೀವನದಲ್ಲಿ ನಾವು ಅನೇಕ ಫೋಟೋಗಳನ್ನು ನೋಡುತ್ತಿರುತ್ತೇವೆ. ಅವು ನಮ್ಮ ವೈಯಕ್ತಿಕವಾದಂತಹವು ಆಗಿರಬಹುದು, ಅಥವಾ ಇತರೆ ಇರಬಹುದು, ಅಥವಾ ಪ್ರಾಣಿಗಳಾಗಿರಬಹುದು. ಪಕ್ಷಿಗಳು, ಹೂವುಗಳು… ಹೀಗೆ ಅನೇಕ ವಿಧದ ಫೋಟೋಗಳನ್ನು ನೋಡುತ್ತಿರುತ್ತೇವೆ. ಇಂದು ಸ್ಮಾರ್ಟ್‌ಫೋನ್‌ಗಳಲ್ಲಾದರೆ ಅನೇಕ ಆಪ್ಸ್, ಸೈಟ್‌ಗಳಲ್ಲಿ ಅನೇಕ ಫೊಟೋಗಳನ್ನು ನೋಡುತ್ತಿರುತ್ತೇವೆ. ಯಾವುದೇ ಫೋಟೋ ನೋಡಿದರೂ ನಮಗೆ ಅನೇಕ ನೆನಪುಗಳು ಬರುತ್ತವೆ. ಇನ್ನೂ ಕೆಲವು ಫೋಟೋಗಳು ಆಹ್ಲಾದವನ್ನು ಉಂಟು ಮಾಡುತ್ತವೆ. ಆದರೆ ನಾವೀಗ ಕೆಳಗೆ ಕೊಟ್ಟಿರುವ ಫೋಟೋಗಳನ್ನು ನೀವು ನೋಡಿದರೆ ಅವುಗಳಲ್ಲಿ ಎರಡು ವಿಧದ ಅಂಶಗಳು, ವ್ಯತ್ಯಾಸಗಳು ಕಾಣಿಸುತ್ತವೆ. ಮೊದಲು ನೀವು ಗುರುತಿಸುವ ಅಂಶಗಳ ಆಧಾರವಾಗಿ ನೀವು ಎಂಥಹವರು ಎಂದು ಕೆಳಗೆ ತಿಳಿದುಕೊಳ್ಳಿ..!

ಮೇಲಿನ ಫೋಟೋದಲ್ಲಿ ನಿಮಗೆ ಏನು ಕಾಣಿಸುತ್ತಿದೆ? ಮನುಷ್ಯನ ಮುಖ, ಮೀನು ಇದೆ. ಈ ಎರಡರಲ್ಲಿ ಮೊದಲು ನಿಮಗೆ ಏನು ಕಾಣಿಸಿತು? ಮೊದಲು ಮನುಷ್ಯನ ಮುಖ ಕಾಣಿಸಿದ್ದರೆ ನೀವು ಸಾಮಾಜಿಕ ತಜ್ಞರಾಗಿರುತ್ತೀರಿ. ಇತರರ ಜತೆ ಚೆನ್ನಾಗಿ ಮಾತನಾಡುತ್ತೀರ. ಇತರರ ಜೀವನದ ಬಗ್ಗೆ ನಿಮಗೆ ಆಸಕ್ತಿ ಇರುತ್ತದೆ. ನೀವು ಪ್ರತಿಭಾವಂತರಾಗಿರುತ್ತೀರ, ಯಾವುದೇ ಸಮಸ್ಯೆ ಬಂದರೂ ಪರಿಹರಿಸಿಕೊಳ್ಳುತ್ತೀರಿ. ಅದೇ ಮೇಲಿನ ಚಿತ್ರದಲ್ಲಿ ಮೊದಲು ನೀವು ಮೀನಿನ ಚಿತ್ರ ನೋಡಿದ್ದರೆ ನೀವು ಜೀವನದಲ್ಲಿ ತುಂಬಾ ಸಂತೋಷದಿಂದ ಇರುವಂತೆ ಲೆಕ್ಕ. ಅದೃಷ್ಟ ನಿಮ್ಮ ಬೆನ್ನಿಗೇ ಇರುತ್ತದೆ. ನೀವು ಅಂದುಕೊಂಡಂತೆ ನಡೆಯದಿದ್ದದರೂ ಆ ಘಟನೆಗೆ ತಕ್ಕಂತೆ ನೀವು ವರ್ತಿಸುತ್ತೀರ.

ಮೇಲಿನ ಚಿತ್ರದಲ್ಲಿ ಮೊದಲು ನಿಮಗೆ ಕೀ ಹೋಲ್ ಕಾಣಿಸಿದರೆ ನಿಮಗೆ ಜೀವನದ ಕಡೆಗೆ ಆಸಕ್ತಿ ಇರುತ್ತದೆ. ಹೊಸ ಹೊಸ ವ್ಯಕ್ತಿಗಳನ್ನು ಭೇಟಿಯಾಗುತ್ತಿದ್ದೇನೆ ಎಂಬ ಉತ್ಸಾಹ ನಿಮ್ಮಲ್ಲಿ ಇರುತ್ತದೆ. ಅದೇ ಮೇಲಿನ ಚಿತ್ರದಲ್ಲಿ ನಿಮಗೆ ಮೊದಲು ಮನುಷ್ಯ ಕಾಣಿಸಿದರೆ ನಿಮ್ಮ ಮಾನಸಿಕ ಸ್ಥಿತಿಯನ್ನು ನೀವು ಸರಿಯಾಗಿ ಗ್ರಹಿಸುತ್ತಿಲ್ಲ ಎಂದು ಅರ್ಥ. ನೀವು ನಿಮ್ಮ ಎಮೋಷನ್ಸ್ ಕಡೆಗೆ ಇನ್ನೂ ಸ್ವಲ್ಪ ಕೇರ್ ತೆಗೆದುಕೊಳ್ಳಬೇಕು.

ಮೇಲಿನ ಚಿತ್ರದಲ್ಲಿ ಓಪನ್ ಮಾಡಿದ ಬಾಗಿಲು ಕಾಣಿಸಿದರೆ ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ಆಹ್ವಾನಿಸುತ್ತಿದ್ದಂತೆ ತಿಳಿದುಕೊಳ್ಳಬೇಕು. ನೀವು ಜೀವನ ಪಯಣದಲ್ಲಿ ಸರಿಯಾಗಿಯೇ ಪ್ರಯಾಣಿಸುತ್ತಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ನಡೆಯಲಿರುವುದನ್ನು ಎದುರು ನೋಡುತ್ತಿರುವುದಾಗಿ ತಿಳಿದುಕೊಳ್ಳಬೇಕೆಂದು ಭಾವಿಸಬೇಕು. ಮೇಲಿನ ಚಿತ್ರದಲ್ಲಿ ನಿಮಗೆ ಮೊದಲು ಮ್ಯೂಸಿಕಲ್ ನೋಟ್ ಸಿಂಬಲ್ ಕಾಣಿಸಿದರೆ ನೀವು ನಿಮ್ಮ ಕ್ರಿಯೇಟಿವಿಟಿಯನ್ನು ಪ್ರದರ್ಶಿಸಲು ಸೂಕ್ತ ಸಮಯ ಬಂದಿದೆ ಎಂದು ತಿಳಿಯಬೇಕು. ಈ ಜಗತ್ತಿಗೆ ಏನೋ ಒಂದು ಮಾಡಿ ತೋರಿಸಬೇಕೆಂದು ಅರ್ಥ ಮಾಡಿಕೊಳ್ಳಬೇಕು. ಚೆನ್ನಾಗಿ ಕಷ್ಟಪಟ್ಟರೆ ಅದನ್ನು ನೀವು ಸಾಧಿಸುತ್ತೀರ.

ಮೇಲಿನ ಚಿತ್ರದಲ್ಲಿ ಮೊದಲು ನೀವು ನೇರವಾದ ಕಾಲಮ್ಸ್ ನೋಡಿದರೆ ನೀವು ಕಂಫರ್ಟ್ ಆಗಿ ಬದುಕುತ್ತಿಲ್ಲ ಎಂದರ್ಥ. ಅದಕ್ಕಾಗಿ ನೀವು ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕು. ನೀವು ರೊಮ್ಯಾಂಟಿಕ್ ವ್ಯಕ್ತಿಯಾಗಿರುತ್ತಾರೆಂದು ತಿಳಿದುಕೊಳ್ಳಬೇಕು. ಮೇಲಿನ ಫೋಟೋದಲ್ಲಿ ಮೊದಲು ನೀವು ಮನುಷ್ಯನನ್ನು ನೋಡಿದರೆ ಜೀವನದಲ್ಲಿ ನಿರ್ದಿಷ್ಟ ಗುರಿಗಳೇನು ಇಲ್ಲ ಎಂದರ್ಥ. ನೀವು ಏನೇ ಆಗಲಿ ಸುಲಭವಾಗಿ ಸಾಧಿಸುತ್ತೀರ. ಇತರ ಬಗ್ಗೆ ಕರುಣೆ, ದಯೆ ಇರುತ್ತದೆ.

ಮೇಲಿನ ಫೋಟೋದಲ್ಲಿ ನೀವು ಪುರುಷನನ್ನು ನೋಡಿದರೆ ನೀವು ಜೀವನ ಸಂಗಾತಿಗಾಗಿ ಎದುರು ನೋಡುತ್ತಿದ್ದೀರಿ ಎಂದರ್ಥ. ಅದೇ ವಿವಾಹ ಆಗಿದ್ದರೆ ಒಳ್ಳೆಯ ರೊಮ್ಯಾಂಟಿಕ್ ಲೈಫನ್ನು ಬಯಸುತ್ತಿದ್ದೀರೆಂದು ಅರ್ಥ. ಇನ್ನು ಮೇಲಿನ ಫೋಟೋದಲ್ಲಿ ಮಹಿಳೆ ಕಾಣಿಸಿದರೆ ನೀವು ತುಂಬಾ ಪಾಸಿಟೀವ್ ಅಟಿಟ್ಯೂಡ್ ಇರುವವರು ಎಂದರ್ಥ. ನೀವು ಅನುಭವಿಸುವ ವಿಷಯಗಳನ್ನು ನಿಮ್ಮ ಸಂಗಾತಿ ಸಹ ಅನುಭವಿಸಬೇಕೆಂದು ನೋಡುತ್ತೀರಿ.


Click Here To Download Kannada AP2TG App From PlayStore!