ಪರಮಶಿವನಿಗೆ ಮೀನಿನ ನೈವೇದ್ಯ ಅಲ್ಲಿನ ವಿಶೇಷತೆ…ಎಲ್ಲಿದೆ ಈ ದೇವಾಲಯ?

ಸಾಮಾನ್ಯವಾಗಿ ಯಾವುದೇ ಆಲಯದಲ್ಲಿ ದೇವರಿಗೆ ನೈವೇದ್ಯವಾಗಿ ಹಣ್ಣು, ಸಿಹಿ, ಪಾಯಸದಂತಹ ನೈವೇದ್ಯವನ್ನು ಸಮರ್ಪಿಸುತ್ತಾರೆ. ಆಲಯವನ್ನು ಅವಲಂಭಿಸಿ ಪರಮಾನ್ನ, ಸಕ್ಕರೆ ಪೊಂಗಲ್, ಪುಳಿಯೋಗರೆಯಂತಹ ನೈವೇದ್ಯವನ್ನು ಇಟ್ಟು ಭಕ್ತಿಯಿಂದ ಅರ್ಪಿಸುತ್ತಾರೆ. ಒದೊಂದು ದೇವಾಲಯದಲ್ಲಿ ಒಂದೊಂದು ರೀತಿಯ ನೈವೇದ್ಯ ಸಮರ್ಪಿಸುತ್ತಿದ್ದಾರೆ. ಆಲಯ ಪ್ರಾಂಗಣದಲ್ಲಿ ಆಚಾರಗಳು, ಸಂಪ್ರದಾಯಕ್ಕೆ ಅನುಗುಣವಾಗಿ ಅಲ್ಲಿನ ದೇವರಿಗೆ ನೈವೇದ್ಯ ಸಮರ್ಪಿಸುತ್ತಾರೆ. ಅಲ್ಲಲ್ಲಿ ದೇವರಿಗೆ ಮಾಂಸಾಹಾರವನ್ನೂ ನೈವೇದ್ಯವಾಗಿ ಸಮರ್ಪಿಸುತ್ತಾರಂತೆ. ಕೆಲವು ಆಲಯಗಳ ಹೊರಗೆ ಪ್ರಾಣಿಬಲಿ ಕೊಡುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಈ ರೀತಿ ಆಲಯದ ಒಳಗೆ ಮಾಂಸಾಹಾರವನ್ನು ನೈವೇದ್ಯವಾಗಿ ಇಟ್ಟಿರುವುದನ್ನು ಎಂದೂ ಕೇಳಿಲ್ಲ ಅಲ್ಲವೇ?

ಆಂಧ್ರಪ್ರದೇಶದ ವಿಜಯನಗರ ಜಿಲ್ಲೆ ಕೋಮರಾಡ ಗುಂಪ ಎಂಬಲ್ಲಿನ ಸೋಮೇಶ್ವರ ಆಲಯದಲ್ಲಿ ಪರಮಶಿವನಿಗೆ ಮೀನಿನ ಸಾರು ನೈವೇದ್ಯವಾಗಿ ಸಮರ್ಪಿಸುತ್ತಾರೆ. ಶಿವನಿಗೆ ಮೀನು?…ಈ ರೀತಿಯ ವಿಚಿತ್ರ ಆಚರಣೆಗಳೇನು ಎಂದುಕೊಳ್ಳುತ್ತಿದ್ದೀರಾ..? ಬೇಡರ ಕಣ್ಣಪ್ಪ ಶಿವನಿಗೆ ಕಾಡಿನಲ್ಲಿ ಸಿಕ್ಕ ಮಾಂಸಾಹಾರವನ್ನು ಪ್ರಸಾದವಾಗಿ ಸಮರ್ಪಿಸಿದಂತೆ ಪುರಾಣಗಳಲ್ಲಿ ಹೇಳಿದೆ…ಅದೇ ರೀತಿ ಇಲ್ಲಿಯೂ ವಿಶೇಷವಾದ ಆಚರಣೆ ಅಷ್ಟೇ.

ಮಹಾಶಿವರಾತ್ರಿ ಸಂದರ್ಭದಲ್ಲಿ ಈ ಆಲಯದಲ್ಲಿ ಉತ್ಸವಗಳು ಅತ್ಯಂತ ವೈಭವದಿಂದ ನಿರ್ವಹಿಸುತ್ತಾರೆ. ಮೂರು ದಿನಗಳ ಕಾಲ ಅದ್ದೂರಿಯಾಗಿ…ಕಣ್ಣಿಗೆ ಹಬ್ಬದಂತೆ ನಡೆಯುತ್ತವೆ ಈ ಉತ್ಸವಗಳು. ಇದೇ ಸಂದರ್ಭದಲ್ಲಿ ಶಿವನಿಗೆ ನೈವೇದ್ಯವಾಗಿ ಮೀನಿನ ಸಾರನ್ನು ಸಮರ್ಪಿಸಲಾಗುತ್ತದೆ. ರುಚಿಯಾಗಿರುವ ಮೀನಿನ ಸಾರನ್ನು ಶಿವನಿಗೆ ನೈವೇದ್ಯವಾಗಿ ಸಮರ್ಪಿಸಿದರೆ ಮನಸ್ಸಿನ ಬೇಡಿಕೆಗಳು ಈಡೇರುತ್ತವಂತೆ ಎಂಬುದು ಇಲ್ಲಿನ ನಂಬಿಕೆ. ಮಹಾಶಿವರಾತ್ರಿ ಸಮಯದಲ್ಲಿ ಇಲ್ಲಿ ಈ ವಿಶೇಷ ಆಚರಣೆಯನ್ನು ಪಾಲಿಸುತ್ತಾರೆ. ದಶಕಗಳಿಂದ ಪೂರ್ವಿಕರು ಪಾಲಿಸುತ್ತಿರುವ ಈ ಸಂಪ್ರದಾಯವನ್ನು ತಾವೂ ಆಚರಿಸುತ್ತಿದ್ದೇವೆಂದು, ಆ ಭೋಳಾ ಶಂಕರನನ್ನು ಪ್ರಸನ್ನಗೊಳಿಸಲು ಆಚರಿಸುತ್ತಿರುವುದಾಗಿ ಭಕ್ತರು ಹೇಳುತ್ತಿದ್ದಾರೆ. ಆಚಾರ, ಪದ್ಧತಿಗಳು ಏನೇ ಇರಲಿ, ಬೇಡಿಕೊಳ್ಳುವುದು, ಒಲಿಸಿಕೊಳ್ಳುವುದೇ ಅಲ್ಲವೇ ಅಂತಿಮ…ದೇವರ ತಣ್ಣಗಿನ ದೃಷ್ಟಿ ತಾಕಿದರೆ ಸಾಕು ಅದೇ ದೊಡ್ಡದು ಎನ್ನುತ್ತಿದ್ದಾರೆ ಭಕ್ತರು.

ಪಂಚಲಿಂಗಗಳಲ್ಲಿ ಒಂದಾಗಿರುವ ಗುಂಪ ಸೋಮೇಶ್ವರ ಆಲಯ ಪವಿತ್ರ ನಾಗಾವಳಿ ನದಿ ತೀರದಲ್ಲಿ ನೆಲೆಸಿದೆ. ಈ ಆಲಯವನ್ನು ದ್ವಾಪರ ಯುಗದಲ್ಲಿ ಬಲರಾಮನು ಪ್ರತಿಷ್ಠಾಪಿಸಿದ ಎಂದು ಸ್ಥಳ ಪುರಾಣ ಹೇಳುತ್ತದೆ. ಬಲರಾಮ ತನ್ನ ನೇಗಿಲಿನ ಸಹಾಯದಿಂದ ಗಂಗೆಯನ್ನು ಇಲ್ಲಿಗೆ ತರಿಸಿದನಂತೆ. ಹಾಗಾಗಿ ಈ ನದಿಗೆ ನಾಗಾವಳಿ (ನೇಗಿಲು) ಎಂದು ಪ್ರಸಿದ್ಧವಾಗಿದೆ.

 


Click Here To Download Kannada AP2TG App From PlayStore!