1ಲೀ COKE ತಯಾರಿಸಲು 9 ಲೀ.ನೀರು ಬೇಕು!?ಕುಸಿಯುತ್ತಿರುವ ಅಂತರ್ಜಲ, ಗ್ರಾಮಗಳಿಗೆ ತೀರದ ಜಲ ಕ್ಷಾಮ.

ಕೋಕಾ ಕೋಲಾ ಕಂಪೆನಿಯಿಂದ  …ಹಲವು ಗ್ರಾಮಗಳು ಜಲ ಕ್ಷಾಮ ಪೀಡಿತರಾಗಿದ್ದಾರೆ. ಒಂದು ಗ್ರಾಮದಲ್ಲಿ ಕೋಕಾ ಕೋಲಾ ಕಂಪೆನಿ ತಂಪು ಪಾನೀಯಗಳನ್ನು ತಯಾರಿಸಲು ಪ್ರಾರಂಭಿಸಿದರೆ ಆ ಗ್ರಾಮದಲ್ಲಿರುವ ಅಂಜರ್ಜಲದ ಅರ್ಧ ಭಾಗವನ್ನು ತಂಪು ಪಾನಿಯಗಳ ತಯಾರಿಕೆಗೆ ಉಪಯೋಗಿಸುತ್ತದಂತೆ.ಇದರಿಂದಾಗಿ ಸುತ್ತ ಮುತ್ತಲಿನ ಗ್ರಾಮಗಳು ತೀವ್ರ ಜಲ ಕ್ಷಾಮವನ್ನು ಎದುರಿಸಬೇಕಾಗುತ್ತದಂತೆ. ಮುಖ್ಯ ಪರಿಸರವಾದಿ ವಂದನ ಶಿವ ಆರೋಪದ ಪ್ರಕಾರ, ಒಂದು ಲೀಟರ್ ಕೋಕ್ ತಯಾರಿಸಲು ಸುಮಾರು 9 ಲೀಟರ್ ನೀರು ಬೇಕಾಗುತ್ತದಂತೆ.ಇದೇ ಕಾರಣದಿಂದಾಗಿ ಆ ಗ್ರಾಮದ ಅಂಜರ್ಜಲ ಕುಸಿದು ತೀವ್ರ ಜಲಕ್ಷಾಮ ಉಂಟಾಗುತ್ತದಂತೆ.

ಇದಕ್ಕೆ ಈ ಕೆಳಗಿನ ಘಟನೆಗಳೇ ಸಾಕ್ಷಿ:

  • ರಾಜಸ್ಥಾನದ ‘ಕಲದೆರಾ’ ಪ್ರದೇಶದಲ್ಲಿ 1999 ರಲ್ಲಿ ಕೋಕಾ ಕೋಲಾ ತನ್ನ ಉದ್ಯಮವನ್ನು ಪ್ರಾರಂಭಿಸಿತು.ಆ ವೇಳೆಗಾಗಲೇ ಆ ಗ್ರಾಮದಲ್ಲಿ ಇದ್ದ ನೀರಿನ ಮೂಲಗಳು ಅರ್ಧಕ್ಕರ್ಧ ಬರಿದಾಗಿದ್ದವು. ಕಂಪೆನಿ ಬಂದಮೇಲಂತೂ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ,ಜನರು ಕಷ್ಟಪಡುವಂತಾಯಿತು. 5 ವರ್ಷಗಳ ನಂತರ ಅಂತರ್ಜಲ 10 ಮೀಟರ್ಗಳಿಗೆ ಕುಸಿಯಿತು.ಸ್ಥಳಿಯರ ಕೋರಿಕೆಯ ಮೇರೆಗೆ ಸರಕಾರ ಆ ಕಂಪೆನಿಯನ್ನು ಮುಚ್ಚಿಸಿತು.
  • ಕೇರಳದಲ್ಲಿ ಮಾರ್ಚ್ 2000 ಇಸವಿಯಲ್ಲಿ’ಪ್ಲಚಿಮದ’ ಎಂಬ ಗ್ರಾಮದಲ್ಲಿ,ಕೋಕಾ ಕೋಲಾ ಕಂಪೆನಿ ಸ್ಥಾಪಿಸಿತು.ಆದರೆ,ಆ ಕಂಪೆನಿಯಿಂದ ಹೊರಬರುವ ಕಲುಷಿತ ಪದಾರ್ಥಗಳಿಂದಾಗಿ ಅಂ ತರ್ಜಲದಕಲುಷಿತಗೊಂಡು ನೀರಿನ ಮಟ್ಟ ಕುಸಿಯಿತು. ಕೇರಳ ಸರಕಾರವೂ ಈ ಕಂಪೆನಿಯನ್ನು ಮುಚ್ಚಿಸಿತು.
    ಉತ್ತರ ಪ್ರದೇಶದ ‘ಮೆಹದೀ ಗಂಜ್’ ಪ್ರಾಂತ್ಯದಲ್ಲಿ,ಕೋಕಾ ಕೋಲಾ ಕಂಪೆನಿಯಿಂದಾಗಿ ,ಅಂತರ್ಜಲ ಮಟ್ಟ ಕುಸಿದು,ಜನರಿಗೆ ಕುಡಿಯಲು ಹಾಗು ಕೃಷಿ ಮಾಡಲು ನೀರಿಲ್ಲದೆ ತೊಂದರೆಯನ್ನು ಅನುಭವಿಸಿದರು.2013 ರಲ್ಲಿ ಕಂಪೆನಿಯನ್ನು ಮುಚ್ಚಿದರು.
  • ಇದೇ ರೀತಿ ಉತ್ತರಾ ಖಂಡ್,ತಮಿಳುನಾಡು,ವಾರಣಾಸಿ ಗಳಲ್ಲೂ ಕೋಕಾ ಕೋಲಾ ಕಂಪೆನಿ ಅಕ್ರಮವಾಗಿ ನೀರನ್ನು ಉಪಯೋಗಿಸುತ್ತಿರುವುದನ್ನು ಅರಿತು,ಮಧ್ಯದಲ್ಲೇ ಕಂಪೆನಿಯನ್ನು ಮುಚ್ಚಿಸಿದರು.
  • ಇದೆಲ್ಲವನ್ನೂ ನೋಡಿದರೆ,ಕೋಕಾ ಕೋಲಾ ಕಂಪೆನಿಯು,ತಂಪು ಪಾನಿಯಗಳನ್ನು ಉತ್ಪಾಧಿಸಲು, ಅಕ್ರಮವಾಗಿ ಉಪಯೋಗಿಸುತ್ತಿರುವ ನೀರಿನ ಪ್ರಮಾಣವೆಷ್ಟೆಂದು ತಿಳಿಯುತ್ತದೆ.
  • ನೈಸರ್ಗಿಕ ಸಂಪತ್ತುಗಳಲ್ಲಿ ಮುಖ್ಯವಾದ ನೀರನ್ನು ಈ ರೀತಿಯಾಗಿ ಉಪಯೋಗಿಸುತ್ತಿರುವುದಕ್ಕೆ ನೇರವಾಗಿ ನಾವೂ ಸಹ ಹೋಣೆಗಾರರು.ತಂಪು ಪಾನಿಯಗಳನ್ನು ಉಪಯೋಗಿಸುವುದರಿಂದ ನಿಸರ್ಗ ಹಾಗೂ ನಮ್ಮ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಅರಿತು ತಂಪು ಪಾನೀಯಗಳಿಗೆ ವಿದಾಯ ಹೇಳೋಣ.


Click Here To Download Kannada AP2TG App From PlayStore!